ಸ್ಪೂರ್ತಿ

ಈ ಅಟೋಚಾಲಕ ತಮ್ಮ ಆಟೋವನ್ನು ಆಂಬುಲೆನ್ಸ್ ಆಗಿ ಮಾಡಿಕೊಂಡು ರೋಗಿಗಳಿಗೆ ದೇವರಾಗಿದ್ದಾನೆ..!ತಿಳಿಯಲು ಈ ಲೇಖನ ಓದಿ..

132

ನಮ್ಮ ಜಗತ್ತಿನಲ್ಲಿ ಅವರ ಬೇಳೆ ಬೇಯಿಸಿಕೊಳ್ಳಲು ಜನ ಯೋಚಿಸುತ್ತಾರೆ ಹೊರತು ಮತ್ತೊಬ್ಬರಿಗೆ ಯಾವ ವಿಷಯದಲ್ಲೂ ಸಹಾಯಮಾಡುವುದಿಲ್ಲ, ಇನ್ನೊಬ್ಬರ ಕಷ್ಟ ಕಣ್ಣಿಗೆ ಕಂಡರೂ ಕಾಣದಂತೆ ಓಡಾಡುವ ಜನರೇ ಹೆಚ್ಚು ಅಂತದರಲ್ಲಿ ಇಲ್ಲೊಬ್ಬ ವ್ಯಕ್ತಿ ಉಚಿತವಾಗಿ ರೋಗಿಗಳಿಗೆ ಸಹಾಯ ಮಾಡುತ್ತಾರೆ ಎಂದರೆ ಇವರು ನಿಜವಾಗಲೂ ಗ್ರೇಟ್.

ಮಂಜುನಾಥ್ ನಿಂಗಪ್ಪ ಪೂಜಾರಿ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡ್ತಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಕಚೇರಿಯಲ್ಲಿ ಡ್ಯೂಟಿ, ಸಂಜೆ 6ರ ನಂತರ ಓಲಾ ಆಟೋ ಆಂಬ್ಯುಲೆನ್ಸ್ ಓಡಿಸ್ತಾರೆ. ಮಂಜುನಾಥ, ಪ್ರತಿದಿನ ಸಂಜೆ 6 ರಿಂದ ಬೆಳಗ್ಗೆ 9 ಗಂಟೆಯವರೆಗೂ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆ ತಲುಪಿಸುವ ಕೆಲಸ ಮಾಡ್ತಿದ್ದಾರೆ.

ತುರ್ತು ಸಂದರ್ಭದಲ್ಲಿ ರೋಗಿಗಳ ಕರೆಗೆ ಓಡುತ್ತಾರೆ. ಇವರು ರಾತ್ರಿ ಎಷ್ಟೊತ್ತಿಗೆ ಕರೆದ್ರೂ ಆಟೋ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ತಲುಪಿಸಲು ನಿರಾಕರಿಸುವುದಿಲ್ಲ. ಅದು ಕೂಡ ಉಚಿತವಾಗಿ ಅನ್ನೋದು ವಿಶೇಷ. ಅಷ್ಟೇ ಅಲ್ಲ ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಆಶ್ರಯ ಫೌಂಡೇಶನ್ ಗೆ ದೇಣಿಗೆಯಾಗಿ ನೀಡುತ್ತಾರೆ.

ಈ ಮೂಲಕ ಸಮಾಜಕ್ಕೆ ಅಲ್ಪ ಕೊಡುಗೆಯನ್ನಾದ್ರೂ ಕೊಡುತ್ತಿದ್ದೇನಲ್ಲ ಎಂಬ ಸಮಾಧಾನ ಅವರಿಗೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಕನಿಷ್ಟ ಸಹಾಯ ಮಾಡಲು ಅವಕಾಶ ಸಿಕ್ಕಿದ್ದು ತಮ್ಮ ಪುಣ ಎಂದುಕೊಳ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಹಾರದ ರಣಬಿಸಿಲಿಗೆ 117 ಜನ ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ……!

    ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್…

  • ಆರೋಗ್ಯ, ಉಪಯುಕ್ತ ಮಾಹಿತಿ

    ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ..?

    ಆಹಾರವಿಲ್ಲದೆ ಕೆಲ ಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲು ಸಾಧ್ಯವಿಲ್ಲ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದ್ರೆ ಬೆಳಗ್ಗೆ ತಣ್ಣನೆಯ ನೀರು ಕುಡಿಯೋ ಬದಲು ಬಿಸಿ ನೀರನ್ನು ಕುಡಿಯುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದು. * ಬೆಳಗಿನ ಸಮಯ ಬಿಸಿ ನೀರನ್ನು ಕುಡಿಯುವುದರಿಂದ ದೇಹದ ಹೆಚ್ಚುವರಿ ತೂಕ ಕಡಿಮೆಯಾಗುತ್ತದೆ. * ದೇಹದಲ್ಲಿ ಉಷ್ಣಾಂಶವು ಹೆಚ್ಚಾಗಿ ವಿಷಕಾರಿ ಅಂಶಗಳನ್ನು ಹೊರ ಹಾಕಲು ಬಿಸಿ ನೀರು ಸಹಾಯ ಮಾಡುತ್ತದೆ. * ರಕ್ತವನ್ನು ಶುದ್ಧೀಕರಿಸಲು ಬಿಸಿ ನೀರಿನ ಸೇವನೆ ಅತ್ಯುತ್ತಮವಾಗಿದೆ….

  • ಸಿನಿಮಾ

    ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ದೀಪಿಕಾ ಜೊತೆ ಇಲ್ಲಿವರೆಗೂ ಸಿನಿಮಾ ಮಾಡಿಲ್ಲ ಯಾಕೆ.?ಸಲ್ಮಾನ್ ಕೊಟ್ಟ ಉತ್ತರ ಏನ್ ಗೊತ್ತಾ?

    ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಭಾರತದ ಅನೇಕ ನಾಯಕಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಅವರೊಂದಿಗೆ ಮೂವಿ ಮಾಡಿಲ್ಲ. ಯಾಕೆ? ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು, ನನಗೂ ನಿಜಕ್ಕೂ ಅಚ್ಚರಿ ಆಗುತ್ತಿದೆ.. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ…

  • budget

    2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ

    ಪಾರ್ಲಿಮೆಂಟ್​​ನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಅವರು ಕೇಂದ್ರ ಬಜೆಟ್(Union Budget)​ ಮಂಡಿಸುತ್ತಿದ್ದಾರೆ. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಇದರ ಜೊತೆಗೆ ಮಧ್ಯಮ ವರ್ಗಕ್ಕೆ ಬಂಪರ್​ ನ್ಯೂಸ್​…