News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಜ್ಯೋತಿಷ್ಯ

ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

629

ಇಂದು ಬುಧವಾರ, 21/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಯಾರೊಂದಿಗೂ ಈ ವಾರ ಜಗಳ ಬೇಡ. ಇದರಿಂದ ನಿಮಗೆ ಹೆಚ್ಚು ತೊಂದರೆಯಾಗಲಿದೆ. ಹಣದ ಹರಿವು ಹೆಚ್ಚಾಗುತ್ತದೆ. ನಿಮ್ಮ ಮುಂಗೋಪದಿಂದಾಗಿ ಇಂದು ಕೆಲಸದಲ್ಲಿ ನಿಮ್ಮ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮವಾಗಬಹುದು, ತಾಳ್ಮೆ ಕಳೆದುಕೊಳ್ಳಬೇಡಿ. ಅತಿ ವೇಗದ ಚಾಲನೆ ಮತ್ತು ಅಪಾಯ ರಸ್ತೆ ಸಂದರ್ಭದಲ್ಲಿ ಸೇವಿಸಬಾರದು. ಪ್ರಯಾಣ ಕಾಲದಲ್ಲಿ ಆದಷ್ಟು ಜಾಗ್ರತೆ ವಹಿಸಿ. ಹಣಕಾಸಿನ ವಿಷಯದಲ್ಲಿ ತುಸು ನೆಮ್ಮದಿ ಕಾಣುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವರು. ನಿಮ್ಮ ಮನದ ಇಚ್ಛೆಯಂತೆ ನಿಮ್ಮ ಕಾರ್ಯಗಳು ಸರಾಗವಾಗಿ ನಡೆಯುವವು.

ವೃಷಭ:-

ಮಾನಸಿಕ ಯೋಚನೆಗಳು ಅನುಷ್ಠಾನಕ್ಕೆ ಅನುಕೂಲಕರವಾಗಿದ್ದರೆ ಕ್ಷೇಮ. ಈ ದಿನ ನಿಮ್ಮ ವೈವಾಹಿಕ ಜೀವನದಲ್ಲಿ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ನಿಯಂತ್ರಣ ಕಾಯ್ದುಕೊಳ್ಳಲು ಶಾಂತವಾಗಿರಿ. ನಿರೀಕ್ಷಿತ ಮೂಲದಿಂದ ಧನಾದಾಯ. ತಂದೆಯಿಂದ ನಿಮಗೆ ನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಒಡಹುಟ್ಟಿದವರು ಹಾಗೂ ಬಂಧುಗಳ ನಡುವೆ ಸ್ವಲ್ಪ ಮುಸುಕಿನ ಗುದ್ದಾಟ. ಪಿತ್ರಾಜಿತ ಆಸ್ತಿಗಳು ಒದಗಿಬರುತ್ತವೆ. ಈ ರಾಶಿಯ ಮಕ್ಕಳ ಅಭಿವೃದ್ಧಿ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ.

ಮಿಥುನ:

ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಧನಾತ್ಮಕ ಚಿಂತನೆ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ. ಶತ್ರುಗಳು ನಿಮ್ಮನ್ನು ಹೊಗಳಲಿದ್ದಾರೆ. ಎಚ್ಚರಿಕೆವಹಿಸುವುದು ಒಳಿತು. ಮದ್ಯಪಾನ ಮಾಡಬೇಡಿ ಇದು ನಿಮ್ಮ ನಿದ್ರೆ ಅಸಮಾಧಾನ ಮತ್ತು ಆಳವಾದ ವಿಶ್ರಾಂತಿ ಇದನ್ನು ತಡೆಗಟ್ಟಬಹುದು ಎಲ್ಲಾ ಕೆಲಸಗಳು ವಿಳಂಬವಿಲ್ಲದೆ ಪೂರ್ಣಗೊಳ್ಳುವುದು. ಇದಕ್ಕೆಲ್ಲ ಗುರು, ಹಿರಿಯರ ಆಶೀರ್ವಾದವೇ ಕಾರಣವಾಗುವುದು. ಕೆಲಸ ಮುಗಿಯುವವರೆಗೂ ಸ್ವಲ್ಪ ತಾಳ್ಮೆಯಿಂದ ಇರುವುದು ಒಳ್ಳೆಯದು. ಸತ್ಯ ನಿಮಗೆ ಮನವರಿಕೆ ಆಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ಹಾಗಾಗಿ ಅಗತ್ಯಕ್ಕೆ ತಕ್ಕಷ್ಟು ಮಾತನಾಡುವುದು ಒಳ್ಳೆಯದು.

ಕಟಕ :-

ಉನ್ನತ ವಿದ್ಯೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ. ಅವರ ವಿದ್ಯೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ನೌಕರಿ ದೊರೆಯಲಿದೆ. ಸಂಸಾರದಲ್ಲಿ ಸುಖಮಯ ವಾತಾವರಣ ಮೂಡಿ ಬರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಜನಗಳೊಡನೆ ಹೆಚ್ಚಾಗಿ ಬೆರೆತರೆ ಗೌರವ ಹೆಚ್ಚುತ್ತದೆ. ನೊರೆಹೊರೆಯವರ ಜೊತೆಗೆ ನಿಷ್ಠುರತೆ ಬೇಡ. ಮನೆಯ ಹಿರಿಯರ ಆರೋಗ್ಯದಲ್ಲೂ ಚೇತರಿಕೆ ಕಂಡು ಬರುವುದು.

 

 ಸಿಂಹ:

ನಿಮ್ಮಿಂದ ಜನರು ಸಹಾಯವನ್ನು ಬಯಸುವರು. ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂಬಂತೆ ನೀವು ದುಡಿದ ಹಣದಲ್ಲಿ ಸ್ವಲ್ಪ ದಾನ ಮಾಡಿ. ನೀವು ಆಲೋಚಿಸಿದ ಕಾರ್ಯಗಳಲ್ಲಿ ಜಯ ಲಭಿಸಲಿದೆ. ಮುಂದಿನ ಯೋಜನೆಗಳಲ್ಲಿ ಕ್ರಿಯಾಶೀಲರಾಗಲು ಸಹಕಾರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಡನೆ ನಿಷ್ಠೂರತೆ ಬೇಡ. ಈ ರಾಶಿಯ ಹಲವರಿಗೆ ನಾಯಕತ್ವದ ಗುಣ ಒಲಿದು ಜನಗಳ ನಡುವೆ ಗುರುತಿಸಲ್ಪಡುತ್ತಾರೆ. ಕಣ್ಣಲ್ಲಿ ನೋವು ಅಥವಾ ತಲೆನೋವು ಕಾಡಬಹುದು.

ಕನ್ಯಾ :-

ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಧನದ ಒಳಹರಿವು ಹೆಚ್ಚಲಿದೆ. ಈ ವಾರ ಚುರುಕಾಗಿ ಕೆಲಸ ಮಾಡುವಿರಿ. ಈ ರಾಶಿಯ ಸ್ತ್ರೀಯರು ತಾಳ್ಮೆಯಿಂದ ಇರುವುದು ಉತ್ತಮ. ಇದರಿಂದ ನಿಮಗೆ ಬರಬೇಕಾಗಿದ್ದ ಆದಾಯ ಬರಲಿದೆ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ ಮತ್ತು ನಿಮ್ಮ ಸಹಾಯವನ್ನು ಯಾಚಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ತುಲಾ:

ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷ ್ಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಸಿಗುವುದು. ಒಳ್ಳೆಯ ಗೆಳೆಯರು ನಿಮಗೆ ದೊರೆಯುತ್ತಾರೆ. ಆದರೆ ವ್ಯರ್ಥ ಮಾತುಕತೆಗಳಲ್ಲೇ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವವರಾದ್ದರಿಂದ ಅವರನ್ನು ನಯವಾದ ಮಾತುಗಳಿಂದ ದೂರ ಇಡುವುದು ಒಳ್ಳೆಯದು. ಗಾಳಿಯಲ್ಲಿ ಮನೆ ಕಟ್ಟುವುದು ನಿಮಗೆ ಸಹಾಯ ಮಾಡಲಾರದು. ನೀವು ಕುಟುಂಬದ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಏನಾದರೂ ಮಾಡಬೇಕು. ಶಿಶುವಿನ ಆರೋಗ್ಯ ಸ್ವಲ್ಪ ಚಿಂತೆಗೆ ಕಾರಣವಾಗಬಹುದು

ವೃಶ್ಚಿಕ :-

ಶ್ರಮಪಟ್ಟು ಕೃಷಿ ಮಾಡುವಿರಿ. ಕುಟುಂಬದ ಹಿರಿಯರ ಸಂಪರ್ಕ ಸಾಧಿಸಿ ಎಲ್ಲರನ್ನೂ ಒಟ್ಟು ಮಾಡಿ ಸೈ ಎನ್ನಿಸಿಕೊಳ್ಳುವಿರಿ. ಸ್ವಲ್ಪ ಪರಾಕ್ರಮ ಪ್ರದರ್ಶಿಸಿ ನಿಮ್ಮವರ ಸಹಾಯಕ್ಕೆ ಹೋಗುವಿರಿ. ಆರ್ಥಿಕ ಸ್ಥಿತಿ ಭದ್ರಗೊಳಿಸಿಕೊಳ್ಳಲು ಒತ್ತು. ನಿಮ್ಮ ಮಾತಿನಿಂದ ಎಲ್ಲರನ್ನೂ ಗೆಲ್ಲುತ್ತೀರಿ. ಆದರೆ, ಅತಿಮಾತು ಸಮಸ್ಯೆಯನ್ನು ತರಬಹುದು. ಇಂದು ನಿಮ್ಮ ಅದೃಷ್ಟ ಖುಲಾಯಿಸುತ್ತದೆ. ನಿಮ್ಮ ಸುತ್ತಮುತ್ತಲ ಜನರೇ ನಿಮ್ಮನ್ನು ಅಡ್ಡಹಾದಿಗೆ ಎಳೆಯುತ್ತಿರುವರು. ಹಾಗಾಗಿ ನಿಮ್ಮ ಬಳಿ ಬರುವ ಜನರ ಬಗ್ಗೆ ಎಚ್ಚರದಿಂದಿರಿ.

ಧನಸ್ಸು:

ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುವುದು. ಮನೋವೇಗವುಳ್ಳ ಆಂಜನೇಯನನ್ನು ಸ್ಮರಿಸಿ ಆಲಸ್ಯತನದಿಂದ ಹೊರಬನ್ನಿ. ಮಕ್ಕಳು ಮತ್ತು ದಾಯಾದಿಗಳ ನಡುವೆ ಸಂಬಂಧ ವೃದ್ಧಿಯಾಗುತ್ತದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿ ಲಭಿಸಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಮತ್ತೊಂದು ಗಳಿಕೆಯತ್ತ ಆಲೋಚನೆ ಮಾಡುತ್ತಾ ಅಲ್ಪಕಾಲದ ಸಂಪಾದನೆಗೆ ತೊಡಗುವಿರಿ. ಅಗತ್ಯ ವಸ್ತುಗಳ ಖರೀದಿ.  ನಿಮ್ಮ ಕಾರ್ಯ ಯೋಜನೆಗಳು ಗುರುವಿನ ಕೃಪೆಯಿಂದ ಎಂದೂ ಸೋಲನ್ನು ಕಾಣುವುದಿಲ್ಲ. ಆದರೆ ಜನ್ಮಸ್ಥ ಶನಿಯು ಅಲ್ಪ ಕಾರ್ಯ ವಿಳಂಬವನ್ನುಂಟು ಮಾಡಬಹುದು. ಅದಕ್ಕಾಗಿ ಆಂಜನೇಯ ಮಂತ್ರವನ್ನು ಜಪಿಸಿ.

ಮಕರ :-

ದೇವರ ಕೃಪೆಯಿಂದ ನಿಮ್ಮ ಕಾರ್ಯಗಳು ಸುಗಮವಾಗುತ್ತವೆ. ಈ ವಾರ ಹಣದ ಕೊರತೆ ಅಷ್ಟಾಗಿ ಬಾಧಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹಿರಿಯರ ಸಹಾಯದಿಂದ ಅಧಿಕಾರದಲ್ಲಿ ಅಭಿವೃದ್ಧಿ.  ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ಮಗಳ ಅನಾರೋಗ್ಯ ನಿಮ್ಮ ಮನಸ್ಸಿಗೆ ಅಸಮಾಧಾನ ತರುತ್ತದೆ. ಕತ್ತಲು ಕಳೆದು ಬೆಳಕು ಹರಿವಂತೆ ಸದ್ಯದ ಕಷ್ಟಗಳು ಕರಗಿ ಬೆಳಕೆಂಬ ಸುಖದ ಜೀವನವು ನಿಮ್ಮ ಪಾಲಿಗಿದೆ. ಚಿಂತಿಸದಿರಿ.

ಕುಂಭ:-

ಮನೆಯಿಂದ ಹೊರಗಡೆ ಹೊರಡುವ ಮುನ್ನ ಮನೆಯಲ್ಲಿನ ಹಿರಿಯರಿಗೆ ನಮಸ್ಕರಿಸಿ ಹೋದಲ್ಲಿ ಕೆಲಸ ಸಿದ್ಧಿಸುವುದು. ಯುವಕರಲ್ಲಿ ಮೂಡುವ ಅನರ್ಥ ಕೋಪದಿಂದ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ. ಇವರ ನಡುವಳಿಕೆಯಿಂದ ಹಿರಿಯರಿಗೆ ಬೇಸರವಾಗಲಿದೆ. ಹಿರಿಯರ ದೈವ ನಂಬಿಕೆಗಳು ದೃಢವಾಗಿರುತ್ತವೆ. ವ್ಯಾಪಾರದಲ್ಲಿ ಎಂದಿನಂತೆ ಲಾಭ ಬರುತ್ತವೆ. ಹಿರಿಯರಿಗೆ ನವಚೈತನ್ಯ ಬಂದು ಚುರುಕಾಗಿ ಕೆಲಸದಲ್ಲಿ ತೊಡಗುವರು. ಸಾಲ ತೆಗೆದುಕೊಂಡಿದ್ದವರಿಗೆ ಎಲ್ಲವನ್ನೂ ತೀರಿಸುವ ಅವಕಾಶ ಒದಗುತ್ತದೆ. ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಮಕ್ಕಳ ಮೇಲೆ ನಿಮ್ಮ ಅಭಿಪ್ರಾಯ ಹೇರುವುದು ಅವರಿಗೆ ಕೋಪ ತರಿಸಬಹುದು.

 

ಮೀನ:-

ಬುದ್ಧಿವಂತಿಕೆಯಿಂದ ವ್ಯವಹಾರ ವಿಸ್ತರಣೆ. ಹೊಸ ವ್ಯವಹಾರಗಳು ನಿಮ್ಮ ವ್ಯಕ್ತಿತ್ವವನ್ನು ಎತ್ತರದ ಶ್ರೇಣಿಗೆ ಒಯ್ಯುತ್ತವೆ. ಕಬ್ಬಿಣದ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ ಬರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚಲಿದೆ. ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕೆಲವೇ ಕೆಲವು ಒಳ್ಳೆಯ ಪ್ರಯತ್ನಗಳ ಮೂಲಕ ಈ ದಿನದ ಅಂತ್ಯಭಾಗದಲ್ಲಿ ಶುಭ ಫಲವನ್ನು ನಿರೀಕ್ಷಿಸಬಹುದು. ದೈಹಿಕ ಆರೋಗ್ಯದ ಕಡೆ ಗಮನ ನೀಡಿ. ಸಾಧ್ಯವಾದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ರಾಜಕಾರಣದ ಕುರಿತು ಪತ್ರ ಬರೆದ ಅಪ್ಪು.! ಆ ಪತ್ರದಲ್ಲಿ ಏನಿದೆ ಗೊತ್ತಾ..?

    ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳುತ್ತೇನೆ ಹೊರತು ರಾಜಕಾರಣದ ಜೊತೆಗಲ್ಲ. ದೇವೇಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ ಆಗಿದ್ದು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ನಟ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ. ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಜೊತೆಯಾಗಿ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಕನ್ನಡ ಚಿತ್ರರಂಗ ಸುಮಲತಾಗೆ ಬೆಂಬಲ ಕೊಡುತ್ತಿದೆ ಎಂಬ ಸುದ್ದಿ…

  • ವಿಜ್ಞಾನ

    ಪ್ರಪಂಚದಲ್ಲೆ ಶಬ್ದದ ವೇಗಕ್ಕಿಂತ ಎರಡು ಪಟ್ಟು ಸ್ಪೀಡ್ ಹೋಗುತ್ತಿದ್ದ ಸೂಪರ್ ಸೋನಿಕ್ ವಿಮಾನ ಬ್ಯಾನ್ ಆಗಿದ್ದು ಯಾಕೆ ಗೊತ್ತಾ?

    ಶಬ್ದದ ವೇಗಕ್ಕಿಂತ 2ಪಟ್ಟು ಸ್ಪೀಡಾಗಿ ಚಲಿಸುವ ಈ ವಿಮಾನ 1969 ರಿಂದ 2003 ರವರೆಗೆ ನಿರಂತರವಾಗಿ ಲಕ್ಷಾಂತರ ಜನ ಪ್ರಯಾಣಿಕರನ್ನ ಸುರಕ್ಷಿತವಾಗಿ ಅತಿ ಬೇಗನೆ ತಲುಪಿಸುವಂತಹ ಕೆಲಸವನ್ನು ಮಾಡಿದ ಈ ವಿಮಾನ ಈಗ ಮ್ಯೂಸಿಯಂಯೊಂದರಲ್ಲಿ ಕೇವಲ ಒಂದು ಬೊಂಬೆಯಾಗಿ ನೋಡುವುದಕ್ಕೆ ಕಾಣಲು ಸಿಗುತ್ತದೆ. 1969ರಲ್ಲಿ ರಾಯಲ್ ಏರ್ಕ್ರಾಫ್ಟ್ ಎಸ್ಟಾಬ್ಲಿಷ್ಮೆಂಟ್ ಅಂದರೆ RAE ಡೈರೆಕ್ಟರ್ ಆದ ಅರ್ನಾಲ್ಡ್ ಎಂಬ ವ್ಯಕ್ತಿ ಕಾನ್ ಕಾರ್ಡ್ ಸೂಪರ್ ಸೋನಿಕ್ ಅನ್ನುವ ಒಂದು ಕಾನ್ಸೆಪ್ಟ್ ನನ್ನು ತನ್ನ ತಂಡದ ಮುಂದೆ ಇಡುತ್ತಾರೆ. ಅವರ…

  • ಸುದ್ದಿ

    ಆಹಾರಗಳನ್ನು ಫ್ರಿಜ್ಜಿನಲ್ಲಿ ಇಟ್ಟ ಮಾತ್ರಕ್ಕೆ ಅದು ಸುರಕ್ಷಿತವೇ…?

    ಆಹಾರಗಳನ್ನು ತಾಜಾರೂಪದಲ್ಲಿ ಸೇವಿಸಿದಷ್ಟೂಉತ್ತಮ. ಏಕೆಂದರೆ ಒಮ್ಮೆ ತಯಾರಿಸಿದ ಆಹಾರ ಕೊಂಚಹೊತ್ತಿನ ಬಳಿಕ ಹಳಸಲು ತೊಡಗುತ್ತದೆ. ಈ ಹಳಸುವಿಕೆಯನ್ನುತಡವಾಗಿಸಲು ಈಗ ನಮ್ಮೆಲ್ಲರ ಮನೆಗಳಲ್ಲಿ ಫ್ರಿಜ್ಜುಗಳಿವೆ. ಆದ್ದರಿಂದ ನಾವೆಲ್ಲಾ ಕೊಂಚ ಹೆಚ್ಚಿನ ಪ್ರಮಾಣವನ್ನುತಯಾರಿಸಿ ಫ್ರಿಜ್ಜಿನಲ್ಲಿಟ್ಟು ಮುಂದಿನ ಒಂದೆರಡು ದಿನಗಳವರೆಗೆ ಸೇವಿಸುತ್ತೇವೆ. ಆದರೆ ಫ್ರಿಜ್ಜಿನಲ್ಲಿಟ್ಟಆಹಾರವನ್ನೇ ಪ್ರತಿ ಬಾರಿ ಸೇವಿಸಲು ಮೂರು ಅಥವಾ ನಾಲ್ಕು ಬಾರಿ ಬಿಸಿ ಮಾಡಿ ಮತ್ತೆ ತಣಿಸಿ ಇಡುವುದುಖಂಡಿತಾ ಆರೋಗ್ಯಕರವಲ್ಲ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ! ಫ್ರಿಜ್ಜಿನಲ್ಲಿಟ್ಟರೂಪ್ರತಿ ಆಹಾರವಸ್ತು ತಾಜಾ ಇರುವ ಅವಧಿ ಬೇರೆಬೇರೆಯಾಗಿರುತ್ತದೆ. ಕೆಲವು ಒಂದೆರಡು…

  • ತಂತ್ರಜ್ಞಾನ

    ಕರ್ನಾಟಕ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಕೇವಲ ಅರ್ಧಗಂಟೆಯ ದಾರಿಯಾಗಿಬಿಡುತ್ತದೆ…!ತಿಳಿಯಲು ಈ ಲೇಖನ ಓದಿ ..

    ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎಂದೇ ಪರಿಚಿತವಾಗಿರುವ ವರ್ಜಿನ್‌ ಹೈಪರ್‌ಲೂಪ್‌ ಕಂಪನಿ ಜತೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಟೆಕ್‌ ಸಮ್ಮಿಟ್‌ನಲ್ಲಿ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ವರ್ಜಿನ್‌ ಹೈಪರ್‌ಲೂಪ್‌ ಒನ್‌ ಜತೆ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.

  • ಆರೋಗ್ಯ

    ಬೆಳ್ಳುಳ್ಳಿಯನ್ನು ತಿಂದರೆ ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಈ ಮಾಹಿತಿ ನೋಡಿ.

    ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ. 1….

  • ಸುದ್ದಿ

    ವಿಚಿತ್ರವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ – ಆಶ್ಚರ್ಯಕ್ಕೆ ಒಳಗಾದ ಶೋರೂಂ ಸಿಬ್ಬಂದಿ,!ಕಾರಣವೇನು ಎಂದು ತಿಳಿದರೆ ಶಾಕ್,.!

    ದೀಪಾವಳಿಯ ಹಿನ್ನೆಲೆಯಲ್ಲಿ ಕಂಪನಿಗಳ ಮಾರಾಟವು ಮತ್ತೆ ಚೇತರಿಸಿಕೊಂಡಿದೆ. ದೀಪಾವಳಿಗೆ ಜನರು ಹೊಸ ವಾಹನಗಳನ್ನು ಕೊಳ್ಳುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯವಾಗಿರುವ ಕಾರಣಕ್ಕೆ ವಾಹನಗಳ ಮಾರಾಟವು ಹೆಚ್ಚಾಗಿದೆ.ಇದೇ ರೀತಿ ಮಧ್ಯ ಪ್ರದೇಶದಲ್ಲಿರುವ ಸಾತ್ನಾ ಜಿಲ್ಲೆಯ ರಾಕೇಶ್ ಕುಮಾರ್ ಗುಪ್ತಾರವರು ಸಹ ಹೊಸ ಸ್ಕೂಟರ್ ಖರೀದಿಸಲು ಬಯಸಿದ್ದಾರೆ. ಅದರಂತೆ ಇತ್ತೀಚಿನ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿಸಲು ಡೀಲರ್ ಬಳಿ ಹೋಗಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇರೋದು ಇದರಲ್ಲೆ. ಎಲ್ಲರಂತೆ ರಾಕೇಶ್ ಕುಮಾರ್‍‍ರವರು ಚೆಕ್‍‍ನಲ್ಲೋ, ಡಿಡಿಯಲ್ಲೋ, ಇ‍ಎಂ‍ಐನಲ್ಲೊ…