ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಧನೆ ಮಾಡುವವರಿಗೆ ವಯಸ್ಸು ಮುಖ್ಯ ಅಲ್ಲ ಅನ್ನೋದನ್ನ ಈ ಬಾಲಕ ತೋರಿಸಿ ಕೊಟ್ಟಿದ್ದಾನೆ. ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿರುವ ಈತನ ಹೆಸರು ಮನ್ಸೂರ್ ಅನೀಸ್ ಎಂಬುದಾಗಿ.

ಈತನ ಸಾಧನೆಯ ವೈಖರಿ.!
ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ವಿಮಾನವನ್ನು ರನ್ವೇಗೆ ತಂದು ಹಾರಾಟ ಮಾಡಲು 10 ನಿಮಿಷ ತೆಗೆದುಕೊಂಡ ಮನ್ಸೂರ್, ಐದು ನಿಮಿಷ ಕಾಲ ಹಾರಾಟ ನಡೆಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.

‘ಸೆಸ್ನಾ152’ ವಿಮಾನದಲ್ಲಿ ಹಾರಾಟ ನಡೆಸಿದ ಬಾಲಕ ಸದ್ಯ ವಿದ್ಯಾರ್ಥಿ ವಿಮಾನ ಚಾಲನೆ ಪರವಾನಗಿ ಪಡೆದುಕೊಂಡಿದ್ದಾನೆ. ತರಬೇತಿ ಅಕಾಡೆಮಿ ನಡೆಸಿದ ಪರೀಕ್ಷೆ ವೇಳೆ ರೇಡಿಯೊ ಸಂವಹನ ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಿರುವ ಮನ್ಸೂರ್, ಶೇ 96 ಅಂಕ ಗಳಿಸಿದ್ದಾನೆ.

ಈ ಹಿಂದೆ ವಿಶ್ವದ ಕಿರಿಯ ವಿಮಾನ ಚಾಲಕ ಎಂಬ ದಾಖಲೆ ಜರ್ಮನಿಯ 15 ವರ್ಷದ ಬಾಲಕನ ಹೆಸರಿನಲ್ಲಿತ್ತು. ಈಗ ಆ ದಾಖಲೆಯನ್ನು ಮೀರಿಸಿದ್ದಾನೆ.ಜರ್ಮನಿಯ ಬಾಲಕ ಒಟ್ಟು 34 ಗಂಟೆಗಳ ತರಬೇತಿ ಪಡೆದಿದ್ದ. ಆದರೆ ಭಾರತೀಯ ಮನ್ಸೂರ್ 25 ಗಂಟೆಗಳ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾನೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಸ್ಸಾಂ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್ಆರ್ಸಿ) ಅಂತಿಮ ಪಟ್ಟಿಯ ಪ್ರಕಾರ 19.06 ಲಕ್ಷ ಜನರು ಭಾರತೀಯ ಪೌರರಲ್ಲ ಎಂದು ಹೇಳಲಾಗಿದೆ. ಹಾಗೆಂದು ತಕ್ಷಣವೇ ಇವರನ್ನು ಬಂಧಿಸದಿರಲು ಹಾಗೂ ಅಕ್ರಮ ನಿವಾಸಿಗಳು ಎಂದು ಘೋಷಿಸದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿದ್ದರೆ, ಅವುಗಳನ್ನು ಒದಗಿಸಿ ತಮ್ಮ ಪೌರತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಇವರೆಲ್ಲರಿಗೂ ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ….
ಪಾಲಕರಾದ ಬಳಿಕ ಮಗುವಿನ ಲಾಲನೆ ಪಾಲನೆಯ ಕರ್ತವ್ಯಗಳಲ್ಲಿ ಮಗುವನ್ನು ಮಲಗಿಸುವುದೇ ಬಹಳ ಕಷ್ಟಕರವಾದ ಕೆಲಸವಾಗಿದೆ. ಈ ಬಗ್ಗೆ ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಇನ್ನೂ ಶಾಲೆಗೆ ಹೋಗಲು ಪ್ರಾರಂಭಿಸಿಲ್ಲದ ಮಕ್ಕಳಿಗೆ ದಿನಕ್ಕೆ ಹತ್ತರಿಂದ ಹದಿಮೂರು ಘಂಟೆ ನಿದ್ದೆಯ ಅಗತ್ಯವಿದೆ. ಮಕ್ಕಳು ಬೆಳೆಯುತ್ತಾ ಹೋದಂತೆಯೇ ಈ ಅವಧಿಯೂ ಕಡಿಮೆಯಾಗುತ್ತಾ ಬರುತ್ತದೆ. 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು ಒಂಭತ್ತು ಘಂಟೆ ನಿದ್ದೆ ಅವಶ್ಯವಾಗಿದೆ. ನೈಸರ್ಗಿಕ ಬೆಳಕಿಗೆ ಒಡ್ಡುವಂತೆ ಮಾಡುವುದು ನಿಮ್ಮ ಮಕ್ಕಳನ್ನು ಆದಷ್ಟೂ ಹಗಲಿನ ವೇಳೆಯಲ್ಲಿ…
ಚೀನಾ ವಿರುದ್ಧದ ಜನಸಾಮಾನ್ಯರ ಆಕ್ರೋಶ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಸ್ತುತ ಚೀನಾದ ಆ್ಯಪ್ಗಳು, ಚೀನಾ ಮೂಲದ ಕಂಪನಿ ಒಡೆತನ ಹೊಂದಿರುವ ಮತ್ತು ಚೀನಾ ಮೂಲದ ಡೆವಲಪರ್ಗಳು ಅಭಿವೃಧಿಪಡಿಸಿರುವ ಆ್ಯಪ್ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಚೀನಾ ಆ್ಯಪ್ ಬ್ಯಾನ್ ಮಾಡಿ ಎನ್ನುವ ಸಂದೇಶ ವ್ಯಾಪಕವಾಗಿ ಹರಿದಾಡಿದೆ. ಅದರ ಜತೆಗೆ ರಿಮೋವ್ ಚೀನಾ ಆ್ಯಪ್ಸ್ ಎನ್ನುವ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಈ ಆ್ಯಪ್ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಇರುವ ಚೀನಾ ಮೂಲದ ಆ್ಯಪ್ಗಳನ್ನು…
ಒಂದು ಸಲ ಹಾವು ಕಚ್ಚಿದರೂ ಇಹ ಲೋಕ ಸೇರುವವರ ಮಧ್ಯೆ ಇಲ್ಲೊಬ್ಬಳು ಹುಡುಗಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಅದೆಷ್ಟು ಬಾರಿ ಹಾವು ಕಚ್ಚಿದ್ದರೂ ಈಕೆ ಸಾವನ್ನಪ್ಪಿಲ್ಲ. ಹಿಮಾಚಲ ಪ್ರದೇಶದ 18ರ ಕಿಶೋರಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಈಕೆಗೆ ಏನೂ ಆಗಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೀಷಾ ಅಪ್ಪ ಸುಮೀರ್ ವರ್ಮಾ ಇದೆಲ್ಲಾ ಆಕೆಗೆ ಮಾಮೂಲಿ ಎನ್ನುತ್ತಾರೆ.
ಇದು ನಮ್ಮ ದೇಶದ ವಿರುದ್ದ ನಡೆಯುತ್ತಿರುವ ದೊಡ್ಡ ಷಡ್ಯಂತ್ರ. ಚೀನಾ ದೇಶವು ನಮ್ಮ ದೇಶದ ಗಡಿಯಲ್ಲಿ ಕೊಡುತ್ತಿರುವ ಉಪಟಳದ ಬಗ್ಗೆ ನಿವು ಮಾಧ್ಯಮಗಳಲ್ಲಿ ನೋಡಿರುತ್ತೀರಿ.
ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.