ಸುದ್ದಿ

9ನೇ ತರಗತಿಗೆ ನೇರ ಪ್ರವೇಶ ಪಡೆದ 8 ವರ್ಷದ ಬಾಲಕ : ಕಾರಣವೇನು ಗೊತ್ತಾ ?

49

ಅಗಾಧ ಬುದ್ಧಿ ಮತ್ತೆಯ ಎಂಟು ವರ್ಷದ ಬಾಲಕ ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣನಿಗೆ 9ನೇ ತರಗತಿಗೆ ನೇರವಾಗಿ ದಾಖಲಾಗಲು ಉತ್ತರಪ್ರದೇಶ ಶಿಕ್ಷಣ ಮಂಡಳಿ ವಿಶೇಷ ಅನುಮತಿ ನೀಡಿದೆ. 2021ರಲ್ಲಿ ತನ್ನ 10ನೇ ವಯಸ್ಸಿನಲ್ಲಿ ಲಕ್ನೊದ ನಖಾಸ್ ಪ್ರದೇಶದಲ್ಲಿರುವ ಎಂ.ಡಿ. ಶುಕ್ಲಾ ಇಂಟರ್ ಕಾಲೇಜಿನಿಂದ 10ನೇ ತರಗತಿ ಪರೀಕ್ಷೆ ಎದುರಿಸಲು ಆತ ಸಿದ್ಧತೆ ನಡೆಸುತ್ತಿದ್ದಾನೆ.ನಿಯಮದ ಪ್ರಕಾರ ಉತ್ತರಪ್ರದೇಶ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಕನಿಷ್ಠ 14 ವರ್ಷ ಆಗಿರಬೇಕು.

ಆದರೆ, ರಾಷ್ಟ್ರಂಗೆ 10ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆಯಲು ಶಿಕ್ಷಣ ಮಂಡಳಿ ಅನುಮತಿ ನೀಡಲಾಗಿದೆ.ಈ ಆದೇಶದ ಬಗ್ಗೆ ರಾಷ್ಟ್ರಂನ ತಂದೆಗೆ ಮಾಹಿತಿ ನೀಡಲಾಗಿದೆ ಎಂದು ಶಿಕ್ಷಣ ಮಂಡಳಿ ಕಾರ್ಯದರ್ಶಿ ನೀನಾ ಶ್ರೀವಾತ್ಸವ ತಿಳಿಸಿದ್ದಾರೆ. ಈಗ ಆತ (ರಾಷ್ಟ್ರಂ) ಅಧ್ಯಯನದಲ್ಲಿ ಗಮನ ಕೇಂದ್ರೀಕರಿಸಿದ್ದಾನೆ. ಆತ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದ. ಆತನಿಗೆ ಗಣಿತ, ಸಮಾಜ ವಿಜ್ಞಾನದ ಬಗ್ಗೆ ಉತ್ತಮ ಜ್ಞಾನವಿದೆ. ಯೋಗ ಹಾಗೂ ಧ್ಯಾನದಲ್ಲಿ ಆತ ನಿಪುಣ. ಆತ ಹಿಂದಿ, ಇಂಗ್ಲೀಷ್ ಹಾಗೂ ಫ್ರೆಂಚ್ ಭಾಷೆ ಮಾತನಾಡಬಲ್ಲ.

ನಾವು ಉತ್ತರಪ್ರದೇಶದ ಶಿಕ್ಷಣ ಮಂಡಳಿಗೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದೆವು.’’ ಎಂದು ರಾಷ್ಟ್ರಂನ ತಂದೆ ಪವನ್ ಕುಮಾರ್ ಹೇಳಿದ್ದಾರೆ.9ನೇ ತರಗತಿಗೆ ಸೇರಿಸುವಂತೆ ಕೋರಿ ರಾಷ್ಟ್ರಂನ ತಂದೆ ತನ್ನನ್ನು ಸಂಪರ್ಕಿಸಿದ್ದರು. ಅಧ್ಯಾಪಕರು ಪ್ರವೇಶ ಪರೀಕ್ಷೆ ನಡೆಸಿದರು. ಆತ ತನ್ನ ಅತ್ಯದ್ಭುತ ಪ್ರತಿಭೆಯನ್ನು ಸಾಬೀತುಪಡಿಸಿದ.

 9ನೇ ತರಗತಿಗೆ ಪ್ರವೇಶ ನೀಡುವಂತೆ ಕೋರಿ ಉತ್ತರಪ್ರದೇಶ ಶಿಕ್ಷಣ ಮಂಡಳಿಗೆ ನಾವು ಪತ್ರ ಬರೆದೆವು. ಅನುಮತಿಯ ಬಳಿಕ ಔಪಚಾರಿಕತೆಯನ್ನು ಮುಗಿಸಿದೆವು ಎಂದು ಶಾಲೆಯ ಪ್ರಾಂಶುಪಾಲ ಎಚ್.ಎನ್. ಉಪಾಧ್ಯಾಯ ಹೇಳಿದ್ದಾರೆ.ರಾಷ್ಟ್ರಂ ನೇರವಾಗಿ 9ನೇ ತರಗತಿಗೆ ದಾಖಲಾಗಲು ಶಿಕ್ಷಣ ಮಂಡಳಿ ವಿಶೇಷ ಅನುಮತಿ ನೀಡಿದೆ ಎಂದು ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ ಮುಖೇಶ್ ಕುಮಾರ್ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports

    Multiple Layout Options

    A number of such two-sided contests may be arranged in a tournament producing a champion. Many sports leagues make an annual champion by arranging games in a regular sports season, followed in some cases by playoffs. Hundreds of sports exist, from those between single contestants, through to those with hundreds of simultaneous participants, either in…

  • ಜೀವನಶೈಲಿ

    ಭಗವಾನ್ ಶ್ರೀ ಕೃಷ್ಣನ ಈ 8 ಉಪದೇಶಗಳನ್ನು ಅನುಸರಿಸಿದ್ರೆ, ಜೀವನ ತುಂಬಾ ಸರಳ..!

    ಮಹಾಭಾರತದ ಒಂದು ಯುದ್ದದ ಸನ್ನಿವೇಶದಲ್ಲಿ ಅರ್ಜುನನು, ನಾನು ಯುದ್ಧ ಮಾಡೋದಿಲ್ಲ ಎಂದಾಗ ಭಗವಾನ್ ಶ್ರೀ ಕೃಷ್ಣನು, ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸುತ್ತಾನೆ.

  • ಸುದ್ದಿ

    ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಅಭಿವೃದ್ಧಿಗೆ ಮುಂದಾದ ಡಿಬಾಸ್ ಫ್ಯಾನ್ಸ್,.!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ…

  • ಉಪಯುಕ್ತ ಮಾಹಿತಿ

    ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ..

    KA-01 ಬೆಂಗಳೂರು ಕೇಂದ್ರ , ಕೋರಮಂಗಲ KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ KA-03 ಬೆಂಗಳೂರು ಪೂರ್ವ, ಇಂದಿರಾನಗರ KA-04 ಬೆಂಗಳೂರು ಉತ್ತರ, ಯಶವಂತಪುರ KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್ KA-06 ತುಮಕೂರು KA-07 ಕೋಲಾರ KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF) KA-09 ಮೈಸೂರು ಪಶ್ಚಿಮ KA-10 ಚಾಮರಾಜ್ನಗರ KA-11 ಮಂಡ್ಯ KA-12 ಮಡಿಕೇರಿ KA-13 ಹಾಸನ KA-14 ಶಿವಮೊಗ್ಗ KA-15 ಸಾಗರ KA-16 ಚಿತ್ರದುರ್ಗ KA-17 ದಾವಣಗೆರೆ KA-18 ಚಿಕ್ಕಮಗಳೂರು KA-19 ಮಂಗಳೂರು…

  • Cinema, ಸಿನಿಮಾ

    ಕೋನೆಗೂ ಬರಲೇ ಇಲ್ಲ BBC earth ಕಾರಣ ಕೇಳಿದರೆ ಶಾಕ್ ಆಗ್ತೀರಾ

    ನಮಗೆ ಬೇಕಾಗಿರೋದು ಕನ್ನಡ, ಎಲ್ಲವನ್ನೂ ಕನ್ನಡದಲ್ಲೇ ಪಡೆಯುವುದು, ಆದರೆ ಕೆಲವರ ಪ್ರಕಾರ ಕನ್ನಡಕ್ಕೆ ಅನ್ಯ ಭಾಷೆಯಿಂದ ಬರುವುದು ತಪ್ಪಂತೆ, ಡಬ್ಬಿಂಗ್ ಭೂತವಂತೆ.

  • ಸಂಬಂಧ

    ಈ ಲೇಖನವನ್ನು ವಿಶೇಷವಾಗಿ ಗಂಡು ಮಕ್ಕಳು ಓದಲೇಬೇಕು..!ನಿಮಗೆ ಈ ಲೇಖನ ಇಷ್ಟ ಆದ್ರೆ ಮರೆಯದೇ ಶೇರ್ ಮಾಡಿ..

    ಒಂದು ದಿನ ರಾತ್ರಿ ಗಂಡ ಮತ್ತು ಹೆಂಡತಿಯರಲ್ಲಿ ಒಂದು ಪಂದ್ಯವನ್ನ ಹಾಕಿಕೊಂಡರು. ಅದು ಏನೆಂದರೆ ಇವತ್ತು ಯಾರೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯ ಬಾರದು ಎಂದು. ಮೂಲ ಪಂದ್ಯಕ್ಕೆ ಹೆಂಡತಿ ಒಪ್ಪಿಕೊಂಡಳು. ಅದರಂತೆಯೆ ಕೋಣೆಯ ಬಾಗಿಲು ಮುಚ್ಚಿಟ್ಟು ಇಬ್ಬರು ನಿಶ್ಯಬ್ದವಾಗಿ ಕುಳಿತಿದ್ದರು. ಮೂಲ ಮೊದಲು ಗಂಡನ ಅಪ್ಪ ಮತ್ತು ಅಮ್ಮ ಬಂದು ಬಾಗಿಲನ್ನು ತಟ್ಟಿದರು.ಗಂಡ ಬಾಗಿಲನ್ನ ತೆಗೆಯಲು ಎದ್ದನು, ಅಷ್ಟರಲ್ಲಿ ಪಂದ್ಯ ನೆನಪಿಗೆ ಬಂದು ಕುಳಿತು ಬಿಟ್ಟ.ಅವರು ಸ್ವಲ್ಪ ಸಮಯ ಬಾಗಿಲನ್ನ ತಟ್ಟಿ ಶಬ್ದ ಕೇಳಿಸದೆ ಹೋದಾಗ…