ಸುದ್ದಿ

ಬರೋಬ್ಬರಿ 40 ಕೋಟಿ ಆಫರ್ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ…!

47

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೆಡ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಮಧ್ಯೆ ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡಲು ವಿಜಯ್ ದೇವರಕೊಂಡ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ವಿಜಯ್ ತಮಗೆ ಬಂದಿದ್ದ ಆಫರ್ ರನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ಸಿನಿಮಾವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡುತ್ತಿದ್ದಾರೆ. ಹೀಗಾಗಿ ಹಿಂದಿಯಲ್ಲಿ ದೇವರಕೊಂಡ ಅವರನ್ನ ಪರಿಚಯಿಸಲು ಇಷ್ಟಪಟ್ಟಿದ್ದರು. ಅದರಂತೆಯೇ ರೀಮೇಕ್ ಸಿನಿಮಾಗಾಗಿ ಸ್ವತಃ ದೇವರಕೊಂಡ ಅವರನ್ನೇ ಕರೆತರುವ ಪ್ಲ್ಯಾನ್ ಮಾಡಿದ್ದರು.

ಅದಕ್ಕಾಗಿ ಕರಣ್ ಜೋಹರ್ ಅವರು ವಿಜಯ್‍ಗೆ ಬರೋಬ್ಬರಿ 40 ಕೋಟಿ ರೂ. ಆಫರ್ ನೀಡಿದ್ದರು. ಆದರೆ ನಟ ವಿಜಯ್ ದೇವರಕೊಂಡ 40 ಕೋಟಿ ರೂ. ಆಫರ್ ರನ್ನು ಬೇಡ ಎಂದು ನಿರಾಕರಿಸಿದ್ದಾರೆ. ಈ ಹಿಂದೆ ಕೂಡ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಕರಣ್ ಜೋಹರ್ ಹಿಂದಿಗೆ ರೀಮೇಕ್ ಮಾಡಲು ಪ್ರಯತ್ನ ಮಾಡಿದ್ದರು. ಆಗಲೂ ವಿಜಯ್‍ಗೆ ಮುಂಬೈನಲ್ಲಿ ದುಬಾರಿ ಅಪಾರ್ಟ್ ಮೆಂಟ್ ಆಫರ್ ನೀಡಲಾಗಿತ್ತು. ಆದರೆ ಅಂದು ಕೂಡ ಕರಣ್ ಅವರ ಆಫರ್ ರನ್ನು ನಿರಾಕರಿಸಿದ್ದರು.

ನಟ ವಿಜಯ್ ಸಂದರ್ಶನವೊಂದರಲ್ಲಿ “ಒಂದೇ ಸಿನಿಮಾವನ್ನು ಮತ್ತೆ ಮಾಡುವುದು ಕಷ್ಟದ ಕೆಲಸ. ಏಕಕಾಲದಲ್ಲಿ ಎರಡು ಭಾಷೆಯಲ್ಲಿ ಅಭಿನಯಸುತ್ತೇನೆ. ಆದರೆ ತೆಲುಗಿನಲ್ಲಿ ಮಾಡಿದ ಸಿನಿಮಾವನ್ನೇ ಹಿಂದಿಯಲ್ಲಿ ನಾನೇ ಮಾಡುವುದು ನನಗೆ ಸರಿ ಎನ್ನಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • India, Place, tourism

    ವ್ಯಾಲಿ ಆಫ್ ಫ್ಲಾವರ್ಸ್ ರಾಷ್ಟ್ರೀಯ ಉದ್ಯಾನವನ

    ವ್ಯಾಲಿ ಆಫ್ ಫ್ಲವರ್ಸ್ ರಾಷ್ಟ್ರೀಯ ಉದ್ಯಾನವನವು ಭಾರತೀಯ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇದು ಉತ್ತರಾಖಂಡ ರಾಜ್ಯದ ಉತ್ತರ ಚಮೋಲಿ ಮತ್ತು ಪಿಥೋರಗ h ದಲ್ಲಿದೆ ಮತ್ತು ಇದು ಸ್ಥಳೀಯ ಆಲ್ಪೈನ್ ಹೂವುಗಳ ಹುಲ್ಲುಗಾವಲುಗಳು ಮತ್ತು ವಿವಿಧ ಸಸ್ಯವರ್ಗಗಳಿಗೆ ಹೆಸರುವಾಸಿಯಾಗಿದೆ. ಏಷ್ಯಾಟಿಕ್ ಕಪ್ಪು ಕರಡಿ ಹಿಮ ಚಿರತೆ,  ಕಸ್ತೂರಿ ಜಿಂಕೆ, ಕಂದು ಕರಡಿ, ಕೆಂಪು ನರಿ   ಮತ್ತು ನೀಲಿ ಕುರಿಗಳು ಸೇರಿದಂತೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಈ ಸಮೃದ್ಧ ವೈವಿಧ್ಯಮಯ ಪ್ರದೇಶವಿದೆ. ಉದ್ಯಾನದಲ್ಲಿ ಕಂಡುಬರುವ ಪಕ್ಷಿಗಳಲ್ಲಿ ಹಿಮಾಲಯನ್ ಮೋನಾಲ್…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ದೇವರ ಕೃಪೆಯಿಂದ ಈ ರಾಶಿಗಳಿಗೆ ಇಂದು ವಿಪರೀತ ಧನಲಾಭವಿದೆ..!ನಿಮ್ಮ ರಾಶಿಗೂ ಧನ ಲಾಭ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892.ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(17 ನವೆಂಬರ್, 2018) ಹೆಚ್ಚು ಖರೀದಿಸಲು ಧಾವಿಸುವ ಮೊದಲು ನೀವು ಈಗಾಗಲೇ ಹೊಂದಿರುವುದನ್ನು ಬಳಸಿ. ಸ್ನೇಹಿತರು ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬೆಂಬಲ ನೀಡಬಹುದು. ಈದಿನ…

  • Uncategorized

    ಮಾಲೂರಿನ ಯಶವಂತಪುರ ರಾಜ್ಯದ ಮೊದಲ ಡಿಜಿಟಲ್ ಹಳ್ಳಿ

    ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.

  • ಸುದ್ದಿ

    ಪತ್ನಿ ಕೇಳಿದಳೆಂದು ಮಾವಿನ ಮರವೇರಿದ ಜನಾರ್ದನ ರೆಡ್ಡಿ…..!

    ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರಿಗಾಗಿ ಮಾವಿನ ಮರ ಏರಿದ ವಿಡಿಯೋವೊಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿರುವ ತಮ್ಮ ಮಾವನ ಮನೆಗೆ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಡನೆ ತೆರೆಳಿದ್ದರು. ಈ ವೇಳೆ ಪತ್ನಿ ಜೊತೆಗೆ ಮಾವನವರ ತೋಟಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿದ್ದ ಮಾವಿನ ಮರವನ್ನು ಹತ್ತಿ ಪತ್ನಿಗಾಗಿ ಮಾವಿನ ಕಾಯಿಯನ್ನು ಕಿತ್ತುಕೊಟ್ಟಿದ್ದಾರೆ. ಜೊತೆಗೆ ತಮ್ಮ…

  • ದೇಗುಲ ದರ್ಶನ

    ಮಾಯವಾಗುವ ಶಿವಾಲಯ, ಈ ವಿಸ್ಮಯ ದೇವಾಲಯ ಬಗ್ಗೆ ತಿಳಿಯಿರಿ.

    ನಮ್ಮ ಭಾರತ ದೇಶ ಚಾರಿತ್ರಿಕ ಪುರಾತನ ದೇವಾಲಯಗಳ ನಿಲಯ. ಹೀಗಾಗಿ ಅರಬ್ಬಿ ಸಮುದ್ರದಲ್ಲಿ ಇರುವ ಈ ಶಿವಾಲಯ ದಿನವೂ ಮಾಯವಾಗುತ್ತೆ ಮತ್ತೆ ಪ್ರತ್ಯಕ್ಷವಾಗುತ್ತದೆ. ಹಲವಾರು ಶತಮಾನಗಳ ಹಿಂದೆ ನಿರ್ಮಿಸಿದರೂ ಇಂದಿಗೂ ಸುಸ್ಥಿತಿಯಲ್ಲಿರುವ ದೇವಾಲಯಗಳು ಕೆಲವಾದರೆ, ಪುರಾಣಗಳ ಹಿನ್ನೆಲೆಯಲ್ಲಿ ವಿಶಿಷ್ಠ ದೇವಾಲಯಗಳು ಕೂಡ ಸಾಕಷ್ಟು ನಾವು ನೋಡಬಹುದು.ಕೆಲವು ದೇವಾಲಯಗಳು ಅವುಗಳ ನಿರ್ಮಾಣ ಶೈಲಿ, ಆಕಾರ, ಪ್ರಾಚೀನತೆ ಮೊದಲಾದ ಅಂಶಗಳಿಂದ ಪ್ರಚಾರಕ್ಕೆ ಬಂದಿವೆ. ಆದರೆ ಗುಜರಾತ್ ರಾಜ್ಯದಲ್ಲಿರುವ ಒಂದು ಶಿವಾಲಯ ಮಾತ್ರ ಇವೆಲ್ಲಕ್ಕೂ ಭಿನ್ನವಾಗಿವೆ. ಏಕೆಂದರೆ ಈ ದೇವಾಲಯ ಪ್ರತಿದಿನ…

  • ಸುದ್ದಿ

    ಸಿಎಂ ಯಡಿಯೂರಪ್ಪ ಮುಂದಿವೆ 2 ಸವಾಲುಗಳು…!

    ಬೆಂಗಳೂರು:  ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ…