ಆಧ್ಯಾತ್ಮ, ಉಪಯುಕ್ತ ಮಾಹಿತಿ, ಜ್ಯೋತಿಷ್ಯ

ದಾಂಪತ್ಯ ಜೀವನವೆಂದರೆ ಬರೀ ಅರ್ಥ ಧರ್ಮ ಕಾಮಾವೇ..?ಸುಖ ದಾಂಪತ್ಯ ಜೀವನವೆಂದರೆ ಹೇಗಿರಬೇಕು?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

2337

ಉತ್ತಮ ದಾಂಪತ್ಯ ಜೀವನವೆಂದರೆ ಹೇಗಿರಬೇಕು ಎಂಬುದನ್ನೂ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸನ್ಮಾರ್ಗ..


ಪಂಡಿತ್ ಸುದರ್ಶನ್ ಆಚಾರ್ಯ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು 9663542672

ಹಿಂದೂ ವಿವಾಹ ಪದ್ಧತಿಯಲ್ಲಿ ಗಂಡು-ಹೆಣ್ಣುಗಳು ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಮಾತೆಂದರೆ ಧರ್ಮೇಚ,ಅರ್ಥೇಚ, ಕಾಮೇಚ ನಾತಿಚರಿತಾಮಿ, ನಾತಿಚರಿತವ್ಯಂ. ಅಂದರೆ ದಾಂಪತ್ಯದ ಹೊಸಿಲಲ್ಲಿ ನಿಂತಿರುವವರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಈ ಭಾಷೆ ದಾಂಪತ್ಯದ ಪರೀಕ್ಷೆಗೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತದೆ. ಪರಸ್ಪರರು ಧರ್ಮವಾಗಿ ನಡೆದುಕೊಂಡರೆ, ಸಂಪತ್ತಿಗಾಗಿ ಪರಿತಪಿಸದೇ ಅತಿಯಾಸೆ ಪಡದಿದ್ದರೆ, ಕಾಮಾತುರತೆಯಲ್ಲಿ ಅನ್ಯರೊಂದಿಗೆ ಸಂಬಂಧವಿಟ್ಟುಕೊಳ್ಳದಿದ್ದರೆ ಅಂಥ ಜೋಡಿಗಳೆಂದಿಗೂ ಪರಸ್ಪರ ಅನುಮಾನ ಪಡದೇ ಬಾಳುತ್ತವೆನ್ನುವುದು ನಮ್ಮ ಹಿರಿಯರ ಅನುಭವದ ಮಾತು. ಹಾಗಾಗಿಯೇ ಮದುವೆ ಸಂದರ್ಭದಲ್ಲಿ ಈ ಪರಸ್ಪರ ಮಾತುಕೊಟ್ಟುಕೊಳ್ಳುವ ‘ಮಾತು’


ಪಂಡಿತ್ ಸುದರ್ಶನ್ ಆಚಾರ್ಯ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು 9663542672

ಆದರೆ ದಾಂಪತ್ಯದಾಚೆಗಿನ ಕೂಡಾವಳಿಯಂತಿರುವ ಇತ್ತೀಚಿನ ಲಿವಿಂಗ್ ಟುಗೆದರ್ ಅನ್ನುವ ಅಪಭ್ರಂಶ ಪರಸ್ಪರರನ್ನು ಯಾವ ಮಾತಿಗೂ, ಪ್ರಮಾಣಕ್ಕೂ, ನಂಬಿಕೆಗೂ ಕಟ್ಟುಹಾಕದ ಕಾರಣ ಬಹುತೇಕ ನಗರಗಳಲ್ಲಷ್ಟೇ ಚಾಲ್ತಿಯಲ್ಲಿರುವ ಇಂಥ ಸಂಬಂಧಗಳು ದೈಹಿಕ ಕಾಮನೆ ತೀರಿ, ಹಣದ ಪ್ರಶ್ನೆಯೇ ದೊಡ್ಡದಾದಾಗ ಕಡಿದು ಬೀಳುತ್ತವೆ. ವಿಚ್ಛೇದನವೆನ್ನುವುದು ಇಂಥವರಿಗೊಂದು ಆಟ.

ದಿವ್ಯ ಎನ್ನುವುದಕ್ಕೆ ಪವಿತ್ರ, ಸುಂದರ, ಶ್ರೇಷ್ಠ ಅನ್ನುವ ರ್ಥಗಳಿರುವಂತೆಯೇ ಪರೀಕ್ಷೆ ಅನ್ನುವ ಮತ್ತೊಂದು ಅರ್ಥವೂ ಇದೆ. ಆ ಕಾರಣಕ್ಕಾಗಿಯೇ ದಾಂಪತ್ಯವೆನ್ನುವುದೂ ದಿವ್ಯ ಅನುಸಂಧಾನವೇ. ಏಕೆಂದರೆ ಗಂಡು-ಹೆಣ್ಣುಗಳು ಪರಸ್ಪರ ಸಂಸಾರದಲ್ಲಿ ಪಾವಿತ್ರತೆಯನ್ನು ಕಾಪಾಡಿಕೊಳ್ಳುತ್ತಲೇ ಸಂಸಾರದ ಸುಂದರ ಮತ್ತು ಶ್ರೇಷ್ಠತೆಯನ್ನು ಮೆರಸಬಹುದು. ಅದರ ಜೊತೆಗೇ ಸದಾ ದಾಂಪತ್ಯ ಪರೀಕ್ಷೆಗೂ ಒಡ್ಡಿಕೊಳ್ಳುತ್ತಲೇ ಇರಬಹುದು. ಅಗ್ನಿ ದಿವ್ಯ, ಪಾಷಾಣ ದಿವ್ಯ, ತಪ್ತಮಾಲ ದಿವ್ಯ ಹೀಗೆ ಹಲವು ಹತ್ತು ಪರೀಕ್ಷೆಗಳನ್ನು ಆರೋಪಿಯ ಅಪರಾಧವನ್ನು ಪತ್ತೆಮಾಡಲು ನಮ್ಮ ಧರ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸಂಸಾರವೆಂಬ ಲೌಕಿಕದ ಜಗತ್ತಿನಲ್ಲೂ ಅಪರಾಧವೆಸಗುವವರಿದ್ದೇ ಇರುತ್ತಾರೆ. ಅಂಥವರ ಪರೀಕ್ಷೆಗೂ ‘ದಿವ್ಯ’ ಸಾಧನವಾಗಿದೆ.

ವೈವಾಹಿಕ ಬದುಕಿಗೆ ಕಾಲಿಟ್ಟ ಗಳಿಗೆಯಿಂದಲೇ ಈ ಅವಲಂಬನೆ ಮೊದಲಾಗುತ್ತದೆ. ದಾಂಪತ್ಯ ಜೀವನದ ದಿವ್ಯ ಕೂಡ ಜೊತೆಗೇ ಸುರುವಾಗುತ್ತದೆ. ಅರ್ಥಾತ್ ಬದುಕಿನ ಏರಿಳಿತಗಳು, ಕತ್ತಲು ಬೆಳಕುಗಳು, ಆಕರ್ಷಣ ವಿಕರ್ಷಣಗಳು ದಾಂಪತ್ಯದ ನಿಜದ ದಿವ್ಯಗಳು. ಅವನ್ನು ಹಾದೇ ಮುಂದಡಿಯಿಡಬೇಕಾದ ಅನಿವಾರ್ಯತೆ. ಒಂದು ಸುಳ್ಳು ಹಲವು ಗೊಂದಲಗಳನ್ನು ಸೃಷ್ಟಿಸಿದರೆ ಕಾಣಿಸಿದ ಸತ್ಯಗಳು ಅವಕುಂಠನಗೊಳಿಸಿದ ನಿಜಗಳು ಲೆಕ್ಕಕ್ಕೆ ಸಿಕ್ಕದವು, ಅನುಭವದ ಕಡಲಲ್ಲಿ ತೇಲಿಬಂದ ಬೆಣ್ಣೆಯ ಮುರುಕುಗಳು.

ದಾಂಪತ್ಯವೆನ್ನುವುದೇ ಒಂದು ಧರ್ಮ. ಅದಕ್ಕೆ ಬದ್ಧವಾಗಿ ಅದರ ಅನುಶಾಸನದಂತೆ ನಡೆದುಕೊಂಡವರಿಗೆ ಅದೊಂದು ಸ್ವರ್ಗ. ಧರ್ಮೇಚ ನಾತಿಚರಾಮಿ ಅನ್ನುವ ಮಾತು ಆಗಷ್ಟೇ ಅರ್ಥಗಳಿಸಿಕೊಳ್ಳುತ್ತದೆ. ಆದರೆ ಸುಳ್ಳುಗಳು ಸಂಸಾರಗಳನ್ನು ಒಡೆಯುತ್ತವೆ. ಇನ್ನು ಅರ್ಥೇಚ ಅನ್ನುವುದು ಶಬ್ದಾರ್ಥದಲ್ಲಲ್ಲದೇ ಕಾಂಚಾಣ ಸಿದ್ಧಿಯಲ್ಲೂ ಮನನಮಾಡಿಕೊಳ್ಳಬೇಕು. ಗಳಿಕೆಯೇ ಮುಖ್ಯವಾಗಿ ಇತರ ಸಹಜ ಬಯಕೆಗಳನ್ನು ಅದುಮಿಟ್ಟರೆ ಸಂಸಾರದ ಸುಖ ನಾಶವಾಗುತ್ತದೆ. ಕಾಮೇಚ ನಾತಿಚರಾಮಿ ಅನ್ನುವುದು ಕೇವಲ ದೈಹಿಕ ವಾಂಛೆಯ ನಿಗ್ರಹಣೆಯಲ್ಲ ಬದಲಿಗೆ ಅದು ಲೌಕಿಕದ ಇತರ ಆಕರ್ಷಣೆಗಳಿಂದಲೂ ಮುಕ್ತವಾಗುವ ಉಪಾಯ.

ದಾಂಪತ್ಯದಲ್ಲಿ ಪ್ರೀತಿ, ಪಾವಿತ್ರ್ಯ,ನಿಷ್ಠೆ, ಸಾಮರಸ್ಯಗಳನ್ನು ಉಳಿಸಿ ಬೆಳಸಿಕೊಳ್ಳುವುದು ನಿಜಕ್ಕೂ ದಿವ್ಯವೇ. ದಾಂಪತ್ಯದಿವ್ಯದಲ್ಲಿ ಮಿಂದು ಪವಿತ್ರವಾಗುವ ಜೋಡಿಗೆ ದಾಂಪತ್ಯವೆನ್ನುವುದು ಕೇವಲ ದೈಹಿಕ ಕಾಮನೆಯ ಅಥವ ವ್ಯಾವಹಾರಿಕತೆಯ ಕುರುಹಲ್ಲ. ಬದಲಿಗೆ ಅದು ಅವರ ವ್ಯಕ್ತಿ ಜೀವನದ ಉದಾತ್ತೀಕರಣ ಮತ್ತು ಸಮಷ್ಠಿಯ ಹಿತ ಸಾಧನ. ಪರಿಶುದ್ಧ ವೈವಾಹಿಕ ಜೀವನ ಹಾಗೂ ಹಿತವಾದ ಕೌಟುಂಬಿಕ ಬಾಂಧವ್ಯ ಧರ್ಮೇಚ ಅರ್ಥೇಚ, ಕಾಮೇಚ ಮಾತುಕೊಟ್ಟುಕೊಂಡಿರುವವರೆಲ್ಲರ ಮಂತ್ರವಾದರೆ ವಿಚ್ಛೇಧನೆಗಳ ಪ್ರಾಬಲ್ಯ ಕಡಿಮೆಯಾದೀತು..

ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗೆ ಪರಿಹಾರ ಸೂಚಿಸುವರು 9663542672

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಜವಾದ ಬಡವ, ಶ್ರೀಮಂತ ಎಂದ್ರೆ ಯಾರೂ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ? ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ. ಬಡವರು ಯಾರು? ಶ್ರೀಮಂತರು ಯಾರು? ಈ ಲೇಖನ ಓದಿ ನೀವೆ ನಿರ್ಧರಿಸಿ ಹೇಳಿ.

  • ಸುದ್ದಿ

    ಇವತ್ತಿಗೆ ನನಸಾಯ್ತು ನನ್ನ 30 ವರ್ಷಗಳ ಅರಣ್ಯದ ಕನಸು – ಸದಾಶಿವ ಮರಿಕೆ,.!

    ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ. ಪರಿಸರದ…

  • ಹಣ ಕಾಸು

    ಈ ಕಾನೂನು ಜಾರಿಗೆ ಬಂದ್ರೆ ಎಲ್ಲ ಕಾರ್ಮಿಕರಿಗೂ ಸಿಗಲಿದೆ, ಕನಿಷ್ಟ 18,000ರೂ ಸಂಬಳ !

    ಕಾರ್ಮಿಕ ಕಾಯ್ದೆಯನ್ವಯ ಎಲ್ಲಾ ವಯಗಳಲ್ಲೂ ಕನಿಷ್ಠ ವೇತನ ನೀಡುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕಾನೂನು ಜಾರಿಗೊಂಡರೆ ನಾಲ್ಕು ಕೋಟಿ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ

  • ಸುದ್ದಿ

    ಗುರುವಾರದಂದು ತಪ್ಪದೇ ಈ ನಿಯಮ ಪಾಲಿಸಿದರೆ ಸಾಕು ನೀವು ಶ್ರೀಮಂತರಾಗುವುದು ಖಚಿತ,..!!

    ಎಲ್ಲರು ಶ್ರೀಮಂತರಾಗಬೇಕು, ಇನ್ನಷ್ಟು ಹೆಚ್ಚು  ಹಣ ಗಳಿಸಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲರೂ ಹಣಕ್ಕಾಗಿಯೇ  ಶ್ರಮ ಪಡುವವರೇ, ಶ್ರಮದ ಹೊರತಾಗಿಯೂ, ಎಷ್ಟೇ ಕಷ್ಟಪಟ್ಟರೂ ಕೂಡ ಕೆಲವೊಮ್ಮೆ ನೀವು ಪಡೆದ ಹಣ ನೀರಿನಂತೆ ಕರಗಿ ಹೋಗಬಹುದು. ಹಿಂದಿನ ಜನ್ಮದ ಪಾಪಗಳು ಈ ಜನ್ಮದಲ್ಲಿಯೂ ಮನುಷ್ಯನನ್ನು ಆರ್ಥಿಕವಾಗಿ ಜರ್ಝರಿತಗೊಳಿಸಬಹುದು. ಇದನ್ನು ಜಗದ ನಿಯಮದಿಂದಲೂ ಬಗೆಹರಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಧರ್ಮಗ್ರಂಥಗಳಲ್ಲಿ ತಿಳಿಸಿರುವಂತೆ ಕೆಲವು ದೈವಿಕ ವಿಧಿಗಳ ಮೂಲಕ ಈ ಸಮಸ್ಯೆ ಬಗೆಹರಿಸಬಹುದು. ಗುರುವಾರವನ್ನು ದೇವಗುರುವಿನ ದಿನವೆಂದು ಕರೆಯಲಾಗಿದೆ. ಗುರುವು…

  • ಜ್ಯೋತಿಷ್ಯ

    ಶುಭ ಶುಕ್ರವಾರದ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಶುಕ್ರವಾರ, 16/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಉದ್ಯೋಗಿಗಳು ನೂತನ ವೃತ್ತಿಯನ್ನು ಕೈಗೊಳ್ಳಬಹುದು. ಹೊಸ ಮನೆಗೆ ಹೋಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರಾಗ ಬಹುದು. ಜಾಗ್ರತೆ ವಹಿಸಬೇಕು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆ ಜತೆ ಸಮಾಲೋಚಿಸಿ ತೀರ್ಮಾನ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸಕ್ಕೆ ಮಕ್ಕಳು ನಿಮಗೆ ನೆರವಾಗಲಿದ್ದಾರೆ. ವೃಷಭ:- ರಾಜಕೀಯ ಸ್ಥಿತ್ಯಂತರ ಸಾಧ್ಯತೆಯಿದೆ. ಮುಖ್ಯವಾದ ಕೆಲಸವೊಂದಕ್ಕೆ ಸಲಹೆ ಪಡೆಯಲು ಪ್ರಸಿದ್ಧ ವ್ಯಕ್ತಿಯೊಬ್ಬರನ್ನು ಬೇಟಿಯಾಗುವ  ಸಾದ್ಯತೆ ಇದೆ. ಕಾರ್ಯನಿಮಿತ್ತವಾಗಿ ಸಂಚಾರವಿರುತ್ತದೆ. ಆರ್ಥಿಕವಾಗಿ…

  • ಸುದ್ದಿ

    ಸಿಹಿ ಸುದ್ದಿ : 2022 ರ ವೇಳೆಗೆ ಎಲ್ಲಾ ಬಡವರಿಗೆ ‘ಮನೆ ಭಾಗ್ಯ’…!

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2022 ರ ವೇಳೆಗೆ ದೇಶದ ಎಲ್ಲ ಬಡವರಿಗೆ ಮನೆ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಗ್ರಾಮ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ನಿರ್ಮಾಣದ ಅವಧಿಯನ್ನು ಕಡಿಮೆ ಮಾಡಲಾಗಿದೆ. ಪ್ರತಿಯೊಂದು ಮನೆಗೂ ಶೌಚಾಲಯ, ವಿದ್ಯುತ್ ಹಾಗೂ ಎಲ್.ಪಿ.ಜಿ. ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. 2022 ರ ವೇಳೆಗೆ ಎಲ್ಲಾ ಬಡವರಿಗೂ ಕಂಡಿತವಾಗಿ ಸ್ವಂತ ಮನೆ ಸೌಲಬ್ಯ ಒದಗಿಸಿಕೊಡುತ್ತೆನೆಂದು ಹೇಳಿ…