ರೆಸಿಪಿ

ಎಲೆಕೋಸು ಮಂಚೂರಿ ಮನೆಯಲ್ಲೇ ಮಾಡುವುದು ಹೇಗೆ ಗೊತ್ತಾ?

428

ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಬಟ್ಟಲು ಎಲೆಕೋಸು,
ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮೀಡಿಯಂ ಸೈಜು ಈರುಳ್ಳಿ, ಕಾನ್೯ ಫ್ಲೋರ್ ಎರಡು ಟೀ ಸ್ಪೂನ್, ಮೈದಾಹಿಟ್ಟು ಎರಡು ಟೀ ಸ್ಪೂನ್, ಅಜಿನ ಮೋಟು ಕಾಲು ಚಮಚ, ಅಚ್ಚ ಕಾರದ ಪುಡಿ 1 ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು.


ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎಲೆಕೋಸನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ಕಾನ್೯ ಫ್ಲೋರ್, ಎರಡು ಟೀ ಸ್ಪೂನ್ ಮೈದಾ ಹಿಟ್ಟು,ಕಾಲು ಚಮಚ ಅಜಿನ ಮೋಟು,ಅಚ್ಚ ಕಾರದ ಪುಡಿ ಒಂದು ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ. ಕಲಸಿದ ತಕ್ಷಣವೇ ಮಾಡಿಬಿಡಬೇಕು .ಇಲ್ಲವಾದರೆ ನೀರು ಬಿಟ್ಟಿಕೊಳ್ಳುತ್ತದೆ. ಕಲಸಲು ಸಹ ನೀರು ಉಪಯೋಗಿಸಬಾರದು.

ನಂತರ ಒಲೆಯ ಮೇಲೆ ಎಣ್ಣೆಯನ್ನು ಇಟ್ಟು ಸಣ್ಣ ಸಣ್ಣ ಉಂಡೆ ಆಕಾರ ಮಾಡಿಕೊಂಡು ಚಿಕ್ಕ ಉರಿಯಲ್ಲಿ ಕರೆದುಕೊಳ್ಳಿ, ಕರೆದಾದ ಮೇಲೆ ಒಲೆಯ ಮೇಲೆ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಕಾಯಿಸಿ ಅದಕ್ಕೆ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ದಪ್ಪ ಮೆಣಸಿನಕಾಯಿ, ಹಾಗೂ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ, ಒಲೆಯ ಫ್ಲೇಮ್ ದೊಡ್ಡ ದಾಗಿ ಇರಬೇಕು, ಈರುಳ್ಳಿ ಕೆಂಪಗೆ ಆದ ನಂತರ ದಪ್ಪ ಮೆಣಸಿನಕಾಯಿ ಹಾಕಿ ಅದಾದ ನಂತರ ಕರಿದಿಟ್ಟುಕೊಂಡ ಎಲೆಕೋಸು ಬೋಂಡ ಸೇರಿಸಿ, ಅಮೇಲೆ ಚಿಲ್ಲಿಸಾಸ್ ಹಾಗೂ ವಿನಿಗರ್ ಹಾಕಿ , ನಂತರ ಟೊಮ್ಯಾಟೊ ಸಾಸ್ ಸೇರಿಸಿ ಕೈಯಾಡಿಸಿ, ಪ್ಲೇಟ್ ಗೆ ಹಾಕಿ ಸಾಸ್ ಜೊತೆಯಲ್ಲಿ ತಿನ್ನಲು ಕೊಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಟ ಯಶ್ ಕುಟುಂಬದ ವಿರುದ್ಧ ದೂರು ದಾಕಲೆ…ಕಾರಣ?

    ನಟ ರಾಕಿಂಗ್ ಸ್ಟಾರ್ ಯಶ್ 9 ವರ್ಷಗಳಿಂದ ಇದ್ದ ಬಾಡಿಗೆ ಮನೆಯನ್ನು ಖಾಲಿ ಮಾಡುವ ಸಂದರ್ಭದಲ್ಲಿ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಮೋಡ್, ಲೈಟಿಂಗ್ಸ್ ವೈರಿಂಗ್, ಡೋರ್ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಲಾಗಿದೆ ಎಂದು ಹೇಳಲಾಗಿದ್ದು, ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮನೆ ಮಾಲೀಕರು ಮುಂದಾಗಿದ್ದಾರೆ. ಬಾಡಿಗೆ ಮನೆ ಡ್ಯಾಮೇಜ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ಗಿರಿನಗರ ಪೊಲೀಸ್…

  • ಗ್ಯಾಜೆಟ್

    ಟ್ರೂ ಕಾಲರ್ ಆ್ಯಪ್‍’ನ ಹಿಂದಿನ ಕರಾಳ ಸತ್ಯ ಗೊತ್ತಾ ನಿಮ್ಗೆ?

    ಕೆಲವು ಅನಾಮಿಕ ವ್ಯಕ್ತಿಗಳು ನಮ್ಮ ಮೊಬೈಲ್’ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಾರೆ.ಅವರು ಯಾರೂ ಎಂದು ನಮಗೆ ತಿಳಿಯುವುದಿಲ್ಲ.ಹಾಗಾಗಿ ನಾವು ಹೆಚ್ಚಾಗಿ ಈಗ ನಮ್ಮ ಮೊಬೈಲ್’ಗಳಲ್ಲಿ ಟ್ರೂ ಕಾಲರ್ ಆ್ಯಪ್‍’ನ್ನು ಬಳಸುವುದು ಹೆಚ್ಚು.ನಮ್ಮ ಮೊಬೈಲ್‍ನಲ್ಲಿ ನಂಬರ್ ಸೇವ್‍ ಆಗದೇ ಇದ್ದರೂ ಅಪರಿಚತರು ಕರೆ ಮಾಡಿದಾಗ ಅವರ ಹೆಸರು ನಮ್ಮ ಮೊಬೈಲ್‍ನಲ್ಲಿ ಕಾಣುತ್ತದೆ. ಹಾಗಾಗಿ ಅನಾಮಿಕ ಕರೆಗಳಿಂದ ಪಾರಾಗಬಹುದು ಎಂದು ನಾವು ಟ್ರೂ ಕಾಲರ್ ಆ್ಯಪ್‍ ಅನ್ನು ಮೊಬೈಲ್‍ಗೆ ಡೌನ್‍ಲೋಡ್ ಮಾಡಿಕೊಂಡಿರುತ್ತೇವೆ.

  • ಆರೋಗ್ಯ

    ಹಲವು ಸಮಸ್ಯೆಗಳಿಗೆ ರಾಮಭಾಣ ಖರಬೂಜ ಹಣ್ಣು. ಈ ಹಣ್ಣಿನ

    ಈ ಕೆಳಕಂಡ ಸಮಸ್ಯೆಯಿಂದ ಬಳಲುತ್ತಿರುವವರು ಕರಬೂಜ ಸೇವನೆ ಮಾಡುವುದು ಉತ್ತಮ. ಕರಬೂಜ ಹಲವು ಸಮಸ್ಯೆಗಳಿಗೆ ನಿವಾರಣಾ ಗುಣ ಹೊಂದಿದೆ. ನಾವು ಇದರ ಸೇವನೆಯನ್ನು ಮಾಡುವುದು ಉತ್ತಮ ಇದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸಲಿವೆ. ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಹೂನವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯಬಹುದು. ಕರಬೂಜದಲ್ಲಿ ರೋಗ ನೀರೋದಕ ಶಕ್ತಿ…

  • ಆರೋಗ್ಯ

    ಅತಿ ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಆಗುವ ತೊಂದರೆಗಳು ನಿಮಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ…

    ದೇಹದ ತೂಕವನ್ನು ಇಳಿಸುವುದು ಇತ್ತೀಚಿನ ದಿನಗಳಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ದೇಹಕ್ಕೆ ಶ್ರಮ ನೀಡದಿರುವುದು, ಅನಾರೋಗ್ಯಕರ ಆಹಾರ ಶೈಲಿ, ಅನಿಯಂತ್ರಿತ ಬೊಜ್ಜು ಪದಾರ್ಥಗಳ ಸೇವನೆ, ಒತ್ತಡ ಈ ಎಲ್ಲವೂ ಸೇರಿ ದೇಹದ ತೂಕವನ್ನು ಹೆಚ್ಚಿಸುತ್ತವೆ.

  • ಸುದ್ದಿ

    ಬಿಹಾರ ರೈತರ ನಿದ್ದೆಗೆಡಿಸಿದ ಬಾನುಗಲ್ಲು….! ಕಾರಣ ಏನು?

    ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಆಕಾಶದಿಂದ ಫುಟ್‌ಬಾಲ್ ಗಾತ್ರದ ಬಾನುಗಲ್ಲು ಬಿದ್ದ ಅಪರೂಪದ ಘಟನೆ ವರದಿಯಾಗಿದೆ.ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. “ರೈತರು…