ಸುದ್ದಿ

ಎನ್​ಆರ್​ಸಿ ಪಟ್ಟಿಯಿಂದ 19.06 ಲಕ್ಷ ಜನ ಹೊರಕ್ಕೆ ಇವರೆಲ್ಲರ ಪರಿಸ್ಥಿತಿ ಏನು, ಇದನ್ನೊಮ್ಮೆ ಓದಿ..?

30

ಅಸ್ಸಾಂ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್​ಆರ್​ಸಿ) ಅಂತಿಮ ಪಟ್ಟಿಯ ಪ್ರಕಾರ 19.06 ಲಕ್ಷ ಜನರು ಭಾರತೀಯ ಪೌರರಲ್ಲ ಎಂದು ಹೇಳಲಾಗಿದೆ. ಹಾಗೆಂದು ತಕ್ಷಣವೇ ಇವರನ್ನು ಬಂಧಿಸದಿರಲು ಹಾಗೂ ಅಕ್ರಮ ನಿವಾಸಿಗಳು ಎಂದು ಘೋಷಿಸದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

ಇದೇ ವೇಳೆ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿದ್ದರೆ, ಅವುಗಳನ್ನು ಒದಗಿಸಿ ತಮ್ಮ ಪೌರತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಇವರೆಲ್ಲರಿಗೂ ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಇವರೆಲ್ಲರ ನೆರವಿಗಾಗಿ 400 ವಿದೇಶಿಗರ ನ್ಯಾಯಾಧಿಕರಣ ಸ್ಥಾಪಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

ಇದುವರೆಗೆ 200 ವಿದೇಶಿಗರ ನ್ಯಾಯಾಧಿಕರಣ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ಇನ್ನೂ 200 ನ್ಯಾಯಾಧಿಕರಣ ಸ್ಥಾಪಿಸಲು ನಿರ್ಧರಿಸಲಾಗಿದೆ. ಭಾರತೀಯ ಪೌರರಲ್ಲ ಎಂದು ಹೇಳಲಾಗಿರುವ 19.06 ಲಕ್ಷ ಜನರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡುವ ಸಲುವಾಗಿ ಅವರೆಲ್ಲರು ಇರುವ ಪ್ರದೇಶಗಳಿಗೆ ಹತ್ತಿರವಾಗಿ ಇವುಗಳನ್ನು ಸ್ಥಾಪಿಸಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ರಾಜಕೀಯ) ಕುಮಾರ್​ ಸಂಜಯ್​ ಕೃಷ್ಣ ತಿಳಿಸಿದ್ದಾರೆ.

ಎನ್​ಆರ್​ಸಿಯಿಂದ ಕೈಬಿಡಲಾಗಿರುವವರನ್ನು ತಕ್ಷಣವೇ ಅಕ್ರಮ ನಿವಾಸಿಗಳು ಎಂದು ಘೋಷಿಸುವುದಿಲ್ಲ. ಬದಲಿಗೆ ಮೊದಲು ವಿದೇಶಿಗರ ನ್ಯಾಯಾಧಿಕರಣದ ಎದುರು ಅವರು ಹಾಜರಾಗಿ ತಮ್ಮ ಅಹವಾಲು ಸಲ್ಲಿಸಬೇಕು. ಹಾಗೂ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳಿದ್ದರೆ ಒದಗಿಸಬೇಕು. ಇಲ್ಲವಾದಲ್ಲಿ ನ್ಯಾಯಾಧಿಕರಣ 1946ರ ವಿದೇಶಿಗರ ಕಾಯ್ದೆ ಮತ್ತು 1964ರ ವಿದೇಶಿಗರ ನ್ಯಾಯಾಧಿಕರಣದ ಆದೇಶದನ್ವಯ ಅವರನ್ನು ಅಕ್ರಮ ನಿವಾಸಿಗಳು ಎಂದು ಘೋಷಿಸುವುದು. ಬಳಿಕ ಅವರು ಸುಪ್ರೀಂಕೋರ್ಟ್​ವರೆಗೂ ಕಾನೂನು ಹೋರಾಟ ಮಾಡಿ, ತಮ್ಮ ಪೌರತ್ವ ಸಾಬೀತುಪಡಿಸಲು ಅವಕಾಶವಿದೆ. ಅದನ್ನೂ ಅವರು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ..

    KA-01 ಬೆಂಗಳೂರು ಕೇಂದ್ರ , ಕೋರಮಂಗಲ KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ KA-03 ಬೆಂಗಳೂರು ಪೂರ್ವ, ಇಂದಿರಾನಗರ KA-04 ಬೆಂಗಳೂರು ಉತ್ತರ, ಯಶವಂತಪುರ KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್ KA-06 ತುಮಕೂರು KA-07 ಕೋಲಾರ KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF) KA-09 ಮೈಸೂರು ಪಶ್ಚಿಮ KA-10 ಚಾಮರಾಜ್ನಗರ KA-11 ಮಂಡ್ಯ KA-12 ಮಡಿಕೇರಿ KA-13 ಹಾಸನ KA-14 ಶಿವಮೊಗ್ಗ KA-15 ಸಾಗರ KA-16 ಚಿತ್ರದುರ್ಗ KA-17 ದಾವಣಗೆರೆ KA-18 ಚಿಕ್ಕಮಗಳೂರು KA-19 ಮಂಗಳೂರು…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ,ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(22 ನವೆಂಬರ್, 2018) ಆರೋಗ್ಯಕರ ಮನಸ್ಸು ಯಾವಾಗಲೂ ಆರೋಗ್ಯಕರ ದೇಹದಲ್ಲಿ ಪರ್ಯವಸಾನವಾಗುತ್ತದೆಂದು ನೆನಪಿಡಿ. ಎಲ್ಲಾ ಬದ್ಧತೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು….

  • ತಂತ್ರಜ್ಞಾನ

    10ನೇ ತರಗತಿ ಬಾಲಕನ 5 ಕೋಟಿ ಒಪ್ಪಂದ !ಈ ಲೇಖನಿ ಓದಿ ಶಾಕ್ ಆಗ್ತೀರಾ…

    ವಯಸ್ಸಿಗೂ ಬುದ್ದಿವನ್ತಿಕೆಗೂ ಏನೂ ಸಂಭಂದವಿಲ್ಲ ಅಂತಾರೆ. ಇಂತಹವರನ್ನೂ ನೋಡಿಯೇ ಇಂತಹ ಮಾತು ಹೇಳಿದ್ದಾರೆ ಅನಿಸುತ್ತದೆ. ಏಕೆಂದರೆ, ನೀವು ಶಾಕ್ ಆಗ್ತೀರ, ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ.

  • ಸುದ್ದಿ

    ನೀರಿಗಾಗಿ ಕಾದು ಕುಳಿತಿದ್ದವರು ನಲ್ಲಿ ತಿರುವಿದ ತಕ್ಷಣ ಬಂತು ರಕ್ತ…ಕಾರಣ?

    ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ. ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ. ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ…

  • ಸುದ್ದಿ

    ತಪ್ಪಿನ ಅರಿವಾಗಿ ಜೈ ಜಗದೀಶ್ ಅವರ ಬಳಿ ಕ್ಷಮೆ ಯಾಚಿಸಿದ ಕಿಶನ್…!

    ಬಿಗ್ ಬಾಸ್ ಸೀಸನ್-7ನ ಸ್ಪರ್ಧಿ ಡ್ಯಾನ್ಸರ್ ಕಿಶನ್ ಹಿರಿಯ ನಟ ಜೈ ಜಗದೀಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಕಿಶನ್ ಸೋಮವಾರ ಜೈ ಜಗದೀಶ್ ಅವರ ಜೊತೆ ಜಗಳವಾಡಿದ್ದರು. ಇದಾದ ಬಳಿಕ ಮನೆಯ ಸದಸ್ಯರು ಹಿರಿಯರನ್ನು ಎಲ್ಲರ ಮುಂದೆ ಈ ರೀತಿ ಪ್ರಶ್ನಿಸಬಾರದು ಇದು ಅವರನ್ನು ಅವಮಾನ ಮಾಡಿದಂತೆ ಎಂದು ಕಿಶನ್ ಬಳಿ ಹೇಳಿದ್ದರು. ಹೀಗಾಗಿ ಕಿಶನ್ ಮಂಗಳವಾರ ಜೈ ಜಗದೀಶ್ ಅವರ ಬಳಿ ಹೋಗಿ ಕ್ಷಮೆ ಕೇಳಿದ್ದಾರೆ. ಜೈ ಜಗದೀಶ್ ಅಡುಗೆ ಮನೆಯಲ್ಲಿದ್ದ ವೇಳೆ  ನಾನು…

  • ಉಪಯುಕ್ತ ಮಾಹಿತಿ

    ಬೆಂಗಳೂರಿನಲ್ಲಿ ಬಡವರಿಗಾಗಿ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ!ಎಲ್ಲಿ,ಯಾವಾಗ ಮಾಹಿತಿಗೆ ಈ ಲೇಖನ ಓದಿ,ಮತ್ತು ಸಾವಿರಾರು ಜನರಿಗೆ ಶೇರ್ ಮಾಡಿ, ಅವರ ಬಾಳು ಬೆಳುಗುವಂತೆ ಮಾಡಿ…

    ಕಳೆದ 21 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ನಡೆಸುವ ಮೂಲಕ ಸಾವಿರಾರು ಬಡ ಜನರ ಬಾಳಿನ್ನು ಹಸನುಗೊಳಿಸಿವ,ಸಮಾಜದ ಬಡ ವರ್ಗಗಳ ರೋಗಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ.