ಸುದ್ದಿ

ಎನ್​ಆರ್​ಸಿ ಪಟ್ಟಿಯಿಂದ 19.06 ಲಕ್ಷ ಜನ ಹೊರಕ್ಕೆ ಇವರೆಲ್ಲರ ಪರಿಸ್ಥಿತಿ ಏನು, ಇದನ್ನೊಮ್ಮೆ ಓದಿ..?

40

ಅಸ್ಸಾಂ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್​ಆರ್​ಸಿ) ಅಂತಿಮ ಪಟ್ಟಿಯ ಪ್ರಕಾರ 19.06 ಲಕ್ಷ ಜನರು ಭಾರತೀಯ ಪೌರರಲ್ಲ ಎಂದು ಹೇಳಲಾಗಿದೆ. ಹಾಗೆಂದು ತಕ್ಷಣವೇ ಇವರನ್ನು ಬಂಧಿಸದಿರಲು ಹಾಗೂ ಅಕ್ರಮ ನಿವಾಸಿಗಳು ಎಂದು ಘೋಷಿಸದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

ಇದೇ ವೇಳೆ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿದ್ದರೆ, ಅವುಗಳನ್ನು ಒದಗಿಸಿ ತಮ್ಮ ಪೌರತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಇವರೆಲ್ಲರಿಗೂ ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಇವರೆಲ್ಲರ ನೆರವಿಗಾಗಿ 400 ವಿದೇಶಿಗರ ನ್ಯಾಯಾಧಿಕರಣ ಸ್ಥಾಪಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

ಇದುವರೆಗೆ 200 ವಿದೇಶಿಗರ ನ್ಯಾಯಾಧಿಕರಣ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ಇನ್ನೂ 200 ನ್ಯಾಯಾಧಿಕರಣ ಸ್ಥಾಪಿಸಲು ನಿರ್ಧರಿಸಲಾಗಿದೆ. ಭಾರತೀಯ ಪೌರರಲ್ಲ ಎಂದು ಹೇಳಲಾಗಿರುವ 19.06 ಲಕ್ಷ ಜನರಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡುವ ಸಲುವಾಗಿ ಅವರೆಲ್ಲರು ಇರುವ ಪ್ರದೇಶಗಳಿಗೆ ಹತ್ತಿರವಾಗಿ ಇವುಗಳನ್ನು ಸ್ಥಾಪಿಸಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ರಾಜಕೀಯ) ಕುಮಾರ್​ ಸಂಜಯ್​ ಕೃಷ್ಣ ತಿಳಿಸಿದ್ದಾರೆ.

ಎನ್​ಆರ್​ಸಿಯಿಂದ ಕೈಬಿಡಲಾಗಿರುವವರನ್ನು ತಕ್ಷಣವೇ ಅಕ್ರಮ ನಿವಾಸಿಗಳು ಎಂದು ಘೋಷಿಸುವುದಿಲ್ಲ. ಬದಲಿಗೆ ಮೊದಲು ವಿದೇಶಿಗರ ನ್ಯಾಯಾಧಿಕರಣದ ಎದುರು ಅವರು ಹಾಜರಾಗಿ ತಮ್ಮ ಅಹವಾಲು ಸಲ್ಲಿಸಬೇಕು. ಹಾಗೂ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳಿದ್ದರೆ ಒದಗಿಸಬೇಕು. ಇಲ್ಲವಾದಲ್ಲಿ ನ್ಯಾಯಾಧಿಕರಣ 1946ರ ವಿದೇಶಿಗರ ಕಾಯ್ದೆ ಮತ್ತು 1964ರ ವಿದೇಶಿಗರ ನ್ಯಾಯಾಧಿಕರಣದ ಆದೇಶದನ್ವಯ ಅವರನ್ನು ಅಕ್ರಮ ನಿವಾಸಿಗಳು ಎಂದು ಘೋಷಿಸುವುದು. ಬಳಿಕ ಅವರು ಸುಪ್ರೀಂಕೋರ್ಟ್​ವರೆಗೂ ಕಾನೂನು ಹೋರಾಟ ಮಾಡಿ, ತಮ್ಮ ಪೌರತ್ವ ಸಾಬೀತುಪಡಿಸಲು ಅವಕಾಶವಿದೆ. ಅದನ್ನೂ ಅವರು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂ7ದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ.

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

  • ಜ್ಯೋತಿಷ್ಯ, ಭವಿಷ್ಯ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪ್ಪಲಿ ಸೇರಿದಂತೆ ಬೇರೆಯವರ ಈ ನಾಲ್ಕು ವಸ್ತುಗಳನ್ನು ಎಂದೂ ಬಳಸಬೇಡಿ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ..

    ದಿನ ನಿತ್ಯದ ಜೀವನದಲ್ಲಿ ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ  ಅನೇಕ ವಸ್ತುಗಳನ್ನು ನಾವು ಬಳಸುತ್ತಿರುತ್ತೇವೆ.ನಾವು ಹೀಗೆ ಬಳಸುವ ವಸ್ತುಗಳು ನಮ್ಮ ಜೀವನದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪ್ರಭಾವವನ್ನು ಬೀರುತ್ತವೆ. ನಾವು ಸಾಮಾನ್ಯವಾಗಿ ನಮ್ಮ ಸ್ನೇಹಿತರ,ಸಂಭಂದಿಕರ ವಸ್ತುಗಳನ್ನು ಅದಲು ಬದಲು ಮಾಡಿಕೊಂಡು ಉಪಯೋಗಿಸುತ್ತಿರುತ್ತೇವೆ.ಆದರೆ ಜ್ಯೋತಿಷ್ಯದಲ್ಲಿ ಹೇಳಿರುವ ಪ್ರಖಾರ ಬೇರೆಯವರ ಕೆಲವೊಂದು ವಸ್ತುಗಳನ್ನು ಉಪಯೋಗಿಸುವುದರಿಂದ ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಹೇಳಲಾಗಿದೆ. ಹಾಗಾದ್ರೆ ಬೇರೆಯವರ ಯಾವ ವಸ್ತುಗಳನ್ನು ಉಪಯೋಗಿಸುವುದರಿಂದ ನಮ್ಮ ಮೇಲೆ ಕೆಟ್ಟ…

  • ಸಿನಿಮಾ

    ಕೊನೆಗೂ ಎಲ್ಲರ ಮುಂದೆ ಕ್ಷಮೆ ಯಾಚಿಸಿದ ಗಂಡ ಹೆಂಡತಿ ನಟಿ ಸಂಜನಾ..!ಏಕೆ ಗೊತ್ತಾ..?

    ಗಂಡ ಹೆಂಡತಿ” ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ತಣ್ಣಗಾಗಿದ್ದಾರೆ.ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಸಂಜನಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಗಂಡ-ಹೆಂಡತಿ ಚಿತ್ರದಲ್ಲಿ ಪದೇ ಪದೇ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಆರೋಪಿಸಿದ್ದ ಸಂಜನಾ ತಮ್ಮ ಆರೋಪದ ಕುರಿತು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಸಂಜನಾ ಕಲಾವಿದರ ಸಂಘ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ…

  • ಸ್ಪೂರ್ತಿ

    ಈಕೆಯ ಅತೀ ಉದ್ದವಾದ ಕೂದಲು ಗಿನ್ನಿಸ್ ದಾಖಲೆಗೆ ಸೇರಿದೆ..!ತಿಳಿಯಲು ಈ ಲೇಖನ ಓದಿ..

    ಗಿನ್ನಿಸ್ ಬುಕ್ ಸೇರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಿ ಗಿನ್ನಿಸ್ ಬುಕ್ ಸೇರ್ತಾರೆ. ಚೀನಾದ ಕ್ಸೀ ಕ್ಯುಪಿಂಗ್ ಜಗತ್ತಿನ ಅತೀ ಉದ್ದ ಕೂದಲು ಉಳ್ಳ ಮಹಿಳೆ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾಳೆ.

  • ಉದ್ಯೋಗ

    ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿಗಳ ವರೆಗೆ ಸಂಪಾದಿಸಬಹುದು..! ತಿಳಿಯಲು ಈ ಲೇಖನ ಓದಿ …

    ನಗರ ಮತ್ತು ಪಟ್ಟಣಗಳಲ್ಲಿ ನೀರಿನ ಅವಶ್ಯಕತೆಯೇ ನೀರಿನ ಒಂದು ದೊಡ್ಡ ಬಿಜನೆಸ್ ನ ಮೂಲವಾಗಿದೆ. ಜನರಿಗೆ ಸ್ವಚ್ಛವಾದ ಶುದ್ಧ ನೀರಿನ ಉಪಲಬ್ಧವನ್ನು ಮಾಡಿ ಕೊಡುವ ಒಳ್ಳೆಯ ವ್ಯವಸಾಯ ಮಾಡಬಹುದು ಜೊತೆಗೆ ತಿಂಗಳಿಗೆ ಸಮಾಧಾನವೆನ್ನುವದಕ್ಕಿಂತ ಹೆಚ್ಚಿಗೆ ಆದಾಯ ಗಳಿಸಬಹುದು.

  • ಸುದ್ದಿ

    ಮಕ್ಕಳನ್ನು ಪಬ್ಜಿ ಗೇಮ್ ನಿಂದ ಹೊರತರಲು ಈ ಉಪಾಯ ಬಳಸಿ…!

    ಮಕ್ಕಳು ಮೊಬೈಲ್ ನೋಡ್ತಾರೆ, ಟಿವಿ ನೋಡ್ತಾರೆಂಬ ಪಾಲಕರ ಆರೋಪ ಈಗ ಸಾಮಾನ್ಯವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪಾಲಕರ ಆತಂಕಕ್ಕೆ ಕಾರಣವಾಗಿರುವುದು ಪಬ್ಜಿ ಗೇಮ್. ಮಕ್ಕಳ ಪ್ರಾಣವನ್ನೇ ಪಡೆಯುತ್ತಿರುವ ಈ ಪಬ್ಜಿ ಆಟಕ್ಕೆ ಮಕ್ಕಳು ದಾಸರಾಗುತ್ತಿದ್ದಾರೆ. ಇದು ಮಕ್ಕಳ ತಪ್ಪಲ್ಲ. ಈಗಿನ ವಾತಾವರಣ, ಆಟವಾಡಲು ಜಾಗವಿಲ್ಲದ ಪರಿಸ್ಥಿತಿ ಮಕ್ಕಳನ್ನು ಆನ್ಲೈನ್ ಗೇಮ್ ಗೆ ಪ್ರೋತ್ಸಾಹಿಸುತ್ತಿದೆ. ಮಕ್ಕಳು ಅತಿ ಹೆಚ್ಚಿನ ಮಟ್ಟದಲ್ಲಿ ಆನ್ಲೈನ್ ಗೇಮ್ ಗಳನ್ನು ಆಡಿದ್ರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ನಿದ್ರೆ ಕೊರತೆ, ಶಕ್ತಿ ಕಡಿಮೆಯಾಗುವುದು, ದಣಿವು, ಸುಸ್ತು,…