ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಮೂಲಕ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸರ್ಕಾರಿ ಬಸ್ ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಲು ಕೆಎಸ್ಆರ್ ಟಿಸಿ ಅವಕಾಶ ಕಲ್ಪಿಸಿದೆ.
ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಗಳಲ್ಲದೆ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿರುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಕೆಎಸ್ಆರ್ ಟಿಸಿ ನಿಗಮದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಾರ್ಚ್ 1 ರಿಂದ 18 ರವೆಗೆ ಮಾತ್ರ ಈ ಸೌಲಭ್ಯವಿರುತ್ತದೆ ಎಂದು ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಹಾಗೂ ಪರೀಕ್ಷೆ ಮುಗಿದ ಬಳಿಕ ಮತ್ತೆ ಅಲ್ಲಿಂದ ವಾಸಸ್ಥಳಕ್ಕೆ ಹಿಂದಿರುಗಬಹುದು. ವಿದ್ಯಾರ್ಥಿಗಳು ಬಸ್ ಹತ್ತಿದ ಮೇಲೆ ಪರೀಕ್ಷೆಯ ಪ್ರವೇಶ ಪತ್ರವನ್ನು ತೋರಿಸಿದರೆ ಉಚಿತವಾಗಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರ ಮಗನ ಮದುವೆ ಡಿ. 2ರಂದು ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆಯಲಿದೆ. ಸುಧಾಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆ ಸರಳವಾಗಿ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಲಾಗಿದೆ. ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು. ಅರ್ಪಣಾ ನಿವೃತ್ತ ಎಸ್ಬಿಐ ಉದ್ಯೋಗಿ ಸಾವಿತ್ರಿ…
ಇಂದೋರ್ ನಲ್ಲಿ ಮಹಿಳೆಯೊಬ್ಬಳು 60 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬನನ್ನು ಮದುವೆಯಾಗಿ ಅರೇ ದಿನದಲ್ಲಿ ಮನೆಯಲ್ಲಿ ಚನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಆರೋಗ್ಯ ತಜ್ಞರ ಪ್ರಕಾರ ಸೇಬಿಗಿಂತಲೂ ದಿನಕ್ಕೊಂದು ಕ್ಯಾರೆಟ್ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಸಾಧ್ಯವಾದಷ್ಟು ತಮ್ಮ ಆಹಾರಕ್ರಮದಲ್ಲಿ ಕ್ಯಾರೆಟ್ನ್ನು ಸೇವಿಸಬೇಕಂತೆ. ಕ್ಯಾರೆಟ್ ಅನ್ನು ಹೆಚ್ಚಾಗಿ ಮಕ್ಕಳಿಗೆ ನೀಡಬೇಕು. ಇದರಿಂದ ಅವರ ಬೆಳವಣಿಗೆ ಚೆನ್ನಾಗಿ ಆಗುವುದರ ಜೊತೆಗೆ ಅವರುಗಳಲ್ಲಿ ಮೂಳೆಗಳು ಸದೃಢಗೊಳ್ಳುತ್ತವೆ. ನಿತ್ಯದಲ್ಲೂ ಅವರಿಗೆ ಲಂಚ್ ಬಾಕ್ಸ್ಗಳಿಗೆ ಪೀಸ್ಗಳನ್ನೂ ಹಾಕಬೇಕು, ಅವರಿಗೆ 2 ದಿನೊಕೊಮ್ಮೆ ಅದರಲ್ಲಿ ಪಾಯಸ ಮಾಡಿ ಕೊಡಬೇಕು. ಇಲ್ಲದೆ ಹೋದಲ್ಲಿ ಚಿಕ್ಕ ತುಂಡುಗಳನ್ನು ಮಾಡಿ ಅದರ ಮೇಲೆ ಸ್ವಲ್ಪ ಉಪ್ಪು ಪೆಪ್ಪರ್/ ಮೆಣಸಿನ ಪುಡಿ ಹಾಕಿ…
ಎಂಜಿನಿಯರಿಂಗ್ ಪದವಿ ಕೋರ್ಸ್ ಸೇರುವ ಸಂದರ್ಭದಲ್ಲಿ ಪ್ರಾಂಶುಪಾಲರು ನನಗೆ ಮೂರು ಷರತ್ತುಗಳನ್ನು ವಿಧಿಸಿದ್ದರು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ವಿಧಿಸುವ ಷರತ್ತುಗಳ ಕುರಿತು ವಿವರಿಸಿದ್ದಾರೆ. ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದವರಾಗಿದ್ದು, ತಮ್ಮ ಎಂಜಿನಿಯರಿಂಗ್ ಪದವಿಯನ್ನು ಹಾವೇರಿಯ ಬಿವಿಬಿ (ಈಗಿನ ಕೆಎಲ್ಇ) ಕಾಲೇಜಿನಲ್ಲಿ ಓದಿದ್ದಾರೆ. ಈ ಕುರಿತು ಹಿಂದಿಯ ಖಾಸಗಿ ವಾಹಿನಿಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ…
ಮಗಳಿಗೋ ಮಗನಿಗೋ ಮದುವೆ ಮಾಡಬೇಕಾದರೆ ಹಲವಾರು ಕಡೆ ವಿಚಾರಿಸಿ ಎರಡೂ ಕುಟುಂಬಗಳ ಕಡೆ ವಿಚಾರಿಸಿ ಮದುವೆ ಮಾಡುತ್ತಾರೆ. ಹೆಣ್ಣು ಗಂಡು ಚೆನ್ನಾಗಿ ಬಾಳಬೇಕೆಂಬ ಬಯಕೆಯಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲಿ ಮದುವೆಯೊಂದು ಮುರಿದು ಬಿದ್ದಿದೆ. ಮೊದಲ ರಾತ್ರಿ ಕಣ್ಣೀರಿನಲ್ಲಿ ಕೈತೊಳೆದ ವಧು ಬೆಳಿಗ್ಗೆ ಗಂಡನ ಮನೆ ತೊರೆದಿದ್ದಾಳೆ. ಎರಡು ದಿನ ರೂಮಿನಲ್ಲಿ ಬಂಧಿಯಾಗಿದ್ದ ವರ ಹಾಗೂ ಆತನ ತಂದೆ-ತಾಯಿ ಈಗ ಆಸ್ಪತ್ರೆ ಸೇರಿದ್ದಾರೆ. ಜನವರಿ 22ರಂದು ಧೀರಜ್ ಮದುವೆ ತನು ಜೊತೆ ನಡೆದಿತ್ತು. ಜನವರಿ 23ರಂದು ತನು ಗಂಡನ…
ಇವಾಗ ಸೆಲ್ಫಿ ಯುಗ.ನಮ್ಮ ಕೈನಲ್ಲಿ ಮೊಬೈಲ್ ಇದ್ದರೆ ಸಾಕು ಸೆಲ್ಫಿ ಪೋಟೋಗಳದ್ದೆ ಕಾರು ಬಾರು.ಈಗಂತೂ ಸೆಲ್ಫಿಗೆ ಇಂತದ್ದೇ ಸ್ಥಳ,ಜಾಗ,ಸಮಯ ಅಂತೇನೂ ಇಲ್ಲ. ಎಲ್ಲೆಂದರೆ ಅಲ್ಲೇ,ಹೇಗೆಂದರೆ ಹಾಗೆ ಸೆಲ್ಫಿ ಪೋಟೋ ತೆಗೆದುಕೊಳ್ಳುತ್ತಾರೆ.