ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ.
ಭಾರತ ಇದುವರೆಗೂ ಅಭಿವೃದ್ಧಿಪಡಿಸಿದ ರಾಕೆಟ್ಗಳಲ್ಲೇ ಅತ್ಯಂತ ದೈತ್ಯ ಗಾತ್ರ (200 ಆನೆ ತೂಕದ) ಮತ್ತು ಸೂಪರ್ ಪವರ್ ಹೊಂದಿರುವ ಜಿಎಸ್ಎಲ್ವಿ ಮಾರ್ಕ್-3 ಉಡ್ಡಯನ ವಾಹಕವನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆ ಮೂಲಕ, ಇಂಥ ಭಾರೀ ತೂಕದ ರಾಕೆಟ್ ಹಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಅಮೆರಿಕ, ರಷ್ಯಾ, ಯುರೋಪ್, ಚೀನಾ ಹಾಗೂ ಜಪಾನ್ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.
ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್, ತನ್ನೊಂದಿಗೆ ಜಿಸ್ಯಾಟ್ 19 ಉಪಗ್ರಹ ಕೂಡಾ ಹೊತ್ತೊಯ್ಯಲಿದೆ. ಜಿಸ್ಯಾಟ್ 19 ಉಪಗ್ರಹವು, ಅತ್ಯಾಧುನಿಕವಾಗಿದ್ದು, ಡಿಜಿಟಲ್ ಇಂಡಿಯಾದ ಕನಸು ನನಸು ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಭಾರತ ಇದುವರೆಗೆ 41 ಉಪಗ್ರಹಗಳನ್ನು ಹಾರಿಬಿಟ್ಟಿದ್ದು, ಅದರಲ್ಲಿ 13 ಸಂಪರ್ಕ ಉಪಗ್ರಹಗಳಾಗಿವೆ.
ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ ಮಹತ್ವ :-
ಸದ್ಯ ಇಸ್ರೋ ಬತ್ತಳಿಕೆಯಲ್ಲಿ ಪಿಎಸ್ಎಲ್ವಿ ಹಾಗೂ ಜಿಎಸ್ಎಲ್ವಿ ಮಾರ್ಕ್-2 ರಾಕೆಟ್ಗಳು 2 ಟನ್ ಭಾರ ಹೊತ್ತೊ ಯ್ಯ ಬಲ್ಲದು. ಅದಕ್ಕೂ ಮೇಲ್ಪಟ್ಟಭಾರದ ಉಪಗ್ರಹ ಒಯ್ಯುವ ಸಾಮರ್ಥ್ಯ ಜಿಎಸ್ಎಲ್ವಿ ಮಾರ್ಕ್ 3ಗೆ ಇದೆ. ಈ ರಾಕೆಟ್ ಬಳಕೆಯಿಂದ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಲು ಬೇರೆ ದೇಶಗಳ ಮೇಲೆ ಅವಲಂಬಿಸುವುದು ತಪ್ಪುತ್ತದೆ.
ಜಿಎಸ್ಎಲ್ವಿ ವಿಶೇಷತೆ:-
ದ್ರವರೂಪದ ಆಮ್ಲಜನಕ ಹಾಗೂ ದ್ರವರೂಪದ ಜಲಜನಕವನ್ನು ಇಂಧನವಾಗಿ ಬಳಸಿ ಕಾರ್ಯನಿರ್ವಹಿಸುವ ಕ್ರಯೋಜೆನಿಕ್ ಎಂಜಿನ್ ಮೂಲಕ ಪೂರ್ಣಪ್ರಮಾಣದ ರಾಕೆಟ್ ಉಡಾವಣೆ ಮಾಡುತ್ತಿರುವುದು ಇದೇ ಮೊದಲು.
ಜಿಎಸ್ಎಲ್ವಿ ಮಾರ್ಕ್ 3 ದೇಶದ ಅತ್ಯಂತ ದೈತ್ಯ ರಾಕೆಟ್ ಆಗಿದೆ. ಜತೆಗೆ ಅತ್ಯಂತ ಕುಬ್ಜ ರಾಕೆಟ್ ಕೂಡ ಹೌದು. ಎತ್ತರ 43 ಮೀಟರ್. (ಪಿಎಸ್ಎಲ್ವಿ ರಾಕೆಟ್ 44.4 ಮೀಟರ್ ಎತ್ತರವಿದೆ).
ಭೂಸ್ಥಿರ ವರ್ಗಾವಣೆ ಕಕ್ಷೆಗೆ 4 ಟನ್, ಕೆಳ ಭೂ ಕಕ್ಷೆಗೆ 8 ಟನ್ ತೂಕದ ಉಪಗ್ರಹ ಒಯ್ಯುವ ಸಾಮರ್ಥ್ಯ ಹೊಂದಿದೆ.
ಜಿಸ್ಯಾಟ್ 19 ವಿಶೇಷತೆ:-ಜಿಸ್ಯಾಟ್-19, ಉಪಗ್ರಹ ಆಧರಿತ ಧ್ವನಿ, ವೇಗದ ಇಂಟರ್ನೆಟ್ ಹಾಗೂ ವಿಡಿಯೋದಂತಹ ಅತ್ಯಂತ ಸುರಕ್ಷಿತ ಸೇವೆ ಆರಂಭಿಸುವ ನಿಟ್ಟಿನಲ್ಲಿ ಮೊದಲ ಉಪಗ್ರಹ . ಈ ಹಿಂದೆ ಉಡಾವಣೆ ಮಾಡಲಾದ 6-7 ಉಪಗ್ರಹಗಳಿಗೆ ಒಂದು ಜಿಸ್ಯಾಟ್- 19 ಸಮ. ಜಿಸ್ಯಾಟ್ 19ರಲ್ಲಿ ಟ್ರಾನ್ಸ್ಫಾಂಡರ್ಗಳು ಇರುವುದಿಲ್ಲ. ಈ ಹಿಂದಿನ ಉಪಗ್ರಹಗಳಲ್ಲಿ 1 ರೇಡಿಯೋ ಸಂಕೇತ ಕಳುಹಿಸುವ ವ್ಯವಸ್ಥೆ ಇದ್ದರೆ ಈ ಉಪಗ್ರಹದಲ್ಲಿ ಒಮ್ಮೆಗೆ 8 ರೇಡಿಯೋ ಸಂಕೇತ ಕಳುಹಿಸುವ ವ್ಯವಸ್ಥೆ ಇದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ನವೆಂಬರ್ 18 : ಮೂಡೀಸ್ ರೇಟಿಂಗ್ ಕೇಂದ್ರಕ್ಕೆ ಹೊಸ ಚೈತನ್ಯ ತುಂಬಿದಂತಿದೆ. ನೋಟ್ ಬ್ಯಾನ್, ಜಿ.ಎಸ್.ಟಿ ಅನ್ನು ವಿಷಯವಾಗಿರಿಸಿಕೊಂಡು ಕೇಂದ್ರವನ್ನು ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದೆ ಮೂಡೀಸ್ ರೇಟಿಂಗ್.
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದು ಎಲ್ಲಾ ಭಾಷೆಯ ಚಿತ್ರಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮತ್ತು ತಂಡ ಸುಮಾರು ಮೂರು ವರ್ಷಗಳಿಂದ ಪಟ್ಟ ಶ್ರಮ ಈ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಒಂದು ವಿಭಿನ್ನ ರೀತಿಯ ಸಿನಿಮಾ ಇದಾಗಿದ್ದು ಚಿತ್ರಾಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಮೆಚ್ಚಿಕೊಂಡಿದ್ದಾರೆ….
ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಎಂತಹ ಒಳ್ಳೆಯ ಉದಾಹರಣೆಯಾಗಿರುವ ಈ ಯುವತಿ ಕುರಿ ಕಾಯುವವಳು. ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ – ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇಂತಹ ಒಳ್ಳೆಯ ಉದಾಹರಣೆ. ಇವಳ ಹೆಸರು ನಜತ್ ವಲ್ಲದ್-ಬೆಲ್ಕಾಸೆಮ್. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ನಜತ್ ವಲ್ಲದ್-ಬೆಲ್ಕಾಸೆಮ್(4…
ಶಂಕರ್ ನಾಗ್ ನಟಿಸಿದ್ದ ಬಹುತೇಕ ಸಿನಿಮಾಗಳು ಕಮರ್ಷಿಯಲ್ ಮಾದರಿಯಲ್ಲೇ ಇದ್ದವು. ಆದರೆ, ಅವರು ನಿರ್ದೇಶನಕ್ಕೆ ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮಾತ್ರ ಭಿನ್ನವಾಗಿರುತ್ತಿದ್ದವು. ಜತೆಗೆ ಆ ಸಿನಿಮಾಗಳಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದ್ದವು. ಶಂಕರ್ ನಾಗ್ ಬದುಕಿದ್ದರೆ, ಇಂದು ಅವರಿಗೆ 65 ವರ್ಷ ತುಂಬುತ್ತಿತ್ತು. 1954ರ ನವೆಂಬರ್ 9 ರಂದು ಹೊನ್ನಾವರದಲ್ಲಿ ಜನಿಸಿದ ಶಂಕರ್, ತಮ್ಮ 36ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣ ಹೊಂದಿದರು. ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಎರಡೇ ವರ್ಷಗಳಲ್ಲಿ ‘ಮಿಂಚಿನ ಓಟ’ ಸಿನಿಮಾ ಮೂಲಕ ನಿರ್ದೇಶಕರಾದರು. ಮೊದಲ…
ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ [81]ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಗಿರೀಶ್ ಕಾರ್ನಾಡ್ 1938 ಮೇ 19 ರಂದು ಮಹಾರಾಷ್ಟ್ರದ ಮಥೇರಾನ್ ನಲ್ಲಿ ಜನಿಸಿದ್ದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿ ಪರ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು…
ತಾಯಿ ಹೊಟ್ಟೆಯಲ್ಲಿದ್ದಾಗ ಮಗು 9 ತಿಂಗಳು ಲಯಬದ್ಧವಾಗಿ ತಾಯಿಯ ಹೃದಯದ ಬಡಿತವನ್ನು ಕೇಳುತ್ತಾ, ಅದರಲ್ಲೇ ತನ್ಮಯವಾಗಿರುತ್ತದೆ. ತಾಯಿಯ ಎದೆಬಡಿತದ ಶಬ್ಧ ತನಗೆ ರಕ್ಷಣೆ ಎಂದೇ ಮಗು ಭಾವಿಸಿರುತ್ತದೆ.