ದೇಶ-ವಿದೇಶ

ಇತಿಹಾಸ ನಿರ್ಮಿಸಿದ ಇಸ್ರೋ…..

184

ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ.

ಭಾರತ ಇದುವರೆಗೂ ಅಭಿವೃದ್ಧಿಪಡಿಸಿದ ರಾಕೆಟ್‌ಗಳಲ್ಲೇ ಅತ್ಯಂತ ದೈತ್ಯ ಗಾತ್ರ (200 ಆನೆ ತೂಕದ) ಮತ್ತು ಸೂಪರ್‌ ಪವರ್‌ ಹೊಂದಿರುವ ಜಿಎಸ್‌ಎಲ್‌ವಿ ಮಾರ್ಕ್-3 ಉಡ್ಡಯನ ವಾಹಕವನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆ ಮೂಲಕ, ಇಂಥ ಭಾರೀ ತೂಕದ ರಾಕೆಟ್‌ ಹಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಅಮೆರಿಕ, ರಷ್ಯಾ, ಯುರೋಪ್‌, ಚೀನಾ ಹಾಗೂ ಜಪಾನ್‌ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.

ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್‌, ತನ್ನೊಂದಿಗೆ ಜಿಸ್ಯಾಟ್‌ 19 ಉಪಗ್ರಹ ಕೂಡಾ ಹೊತ್ತೊಯ್ಯಲಿದೆ. ಜಿಸ್ಯಾಟ್‌ 19 ಉಪಗ್ರಹವು, ಅತ್ಯಾಧುನಿಕವಾಗಿದ್ದು, ಡಿಜಿಟಲ್‌ ಇಂಡಿಯಾದ ಕನಸು ನನಸು ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಭಾರತ ಇದುವರೆಗೆ 41 ಉಪಗ್ರಹಗಳನ್ನು ಹಾರಿಬಿಟ್ಟಿದ್ದು, ಅದರಲ್ಲಿ 13 ಸಂಪರ್ಕ ಉಪಗ್ರಹಗಳಾಗಿವೆ.

ಜಿಎಸ್‏ಎಲ್‏ವಿ ಮಾರ್ಕ್ 3 ರಾಕೆಟ್ ಮಹತ್ವ :-

ಸದ್ಯ ಇಸ್ರೋ ಬತ್ತಳಿಕೆಯಲ್ಲಿ ಪಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ ಮಾರ್ಕ್-2 ರಾಕೆಟ್‌ಗಳು 2 ಟನ್‌ ಭಾರ ಹೊತ್ತೊ ಯ್ಯ ಬಲ್ಲದು. ಅದಕ್ಕೂ ಮೇಲ್ಪಟ್ಟಭಾರದ ಉಪಗ್ರಹ ಒಯ್ಯುವ ಸಾಮರ್ಥ್ಯ ಜಿಎಸ್‌ಎಲ್‌ವಿ ಮಾರ್ಕ್ 3ಗೆ ಇದೆ. ಈ ರಾಕೆಟ್‌ ಬಳಕೆಯಿಂದ ಸಂಪರ್ಕ ಉಪಗ್ರಹಗಳನ್ನು ಉಡಾವಣೆ ಮಾಡಲು ಬೇರೆ ದೇಶಗಳ ಮೇಲೆ ಅವಲಂಬಿಸುವುದು ತಪ್ಪುತ್ತದೆ.

ಜಿಎಸ್‌ಎಲ್‌ವಿ ವಿಶೇಷತೆ:-

ದ್ರವರೂಪದ ಆಮ್ಲಜನಕ ಹಾಗೂ ದ್ರವರೂಪದ ಜಲಜನಕವನ್ನು ಇಂಧನವಾಗಿ ಬಳಸಿ ಕಾರ್ಯನಿರ್ವಹಿಸುವ ಕ್ರಯೋಜೆನಿಕ್‌ ಎಂಜಿನ್‌ ಮೂಲಕ ಪೂರ್ಣಪ್ರಮಾಣದ ರಾಕೆಟ್‌ ಉಡಾವಣೆ ಮಾಡುತ್ತಿರುವುದು ಇದೇ ಮೊದಲು.

ಜಿಎಸ್‏ಎಲ್‏ವಿ ಮಾರ್ಕ್ 3 ದೇಶದ ಅತ್ಯಂತ ದೈತ್ಯ ರಾಕೆಟ್‌ ಆಗಿದೆ. ಜತೆಗೆ ಅತ್ಯಂತ ಕುಬ್ಜ ರಾಕೆಟ್‌ ಕೂಡ ಹೌದು. ಎತ್ತರ 43 ಮೀಟರ್‌. (ಪಿಎಸ್‌ಎಲ್‌ವಿ ರಾಕೆಟ್‌ 44.4 ಮೀಟರ್‌ ಎತ್ತರವಿದೆ).
ಭೂಸ್ಥಿರ ವರ್ಗಾವಣೆ ಕಕ್ಷೆಗೆ 4 ಟನ್‌, ಕೆಳ ಭೂ ಕಕ್ಷೆಗೆ 8 ಟನ್‌ ತೂಕದ ಉಪಗ್ರಹ ಒಯ್ಯುವ ಸಾಮರ್ಥ್ಯ ಹೊಂದಿದೆ.

ಜಿಸ್ಯಾಟ್‌ 19 ವಿಶೇಷತೆ:-ಜಿಸ್ಯಾಟ್‌-19, ಉಪಗ್ರಹ ಆಧರಿತ ಧ್ವನಿ, ವೇಗದ ಇಂಟರ್ನೆಟ್‌ ಹಾಗೂ ವಿಡಿಯೋದಂತಹ ಅತ್ಯಂತ ಸುರಕ್ಷಿತ ಸೇವೆ ಆರಂಭಿಸುವ ನಿಟ್ಟಿನಲ್ಲಿ ಮೊದಲ ಉಪಗ್ರಹ . ಈ ಹಿಂದೆ ಉಡಾವಣೆ ಮಾಡಲಾದ 6-7 ಉಪಗ್ರಹಗಳಿಗೆ ಒಂದು ಜಿಸ್ಯಾಟ್‌- 19 ಸಮ. ಜಿಸ್ಯಾಟ್‌ 19ರಲ್ಲಿ ಟ್ರಾನ್ಸ್‌ಫಾಂಡರ್‌ಗಳು ಇರುವುದಿಲ್ಲ. ಈ ಹಿಂದಿನ ಉಪಗ್ರಹಗಳಲ್ಲಿ 1 ರೇಡಿಯೋ ಸಂಕೇತ ಕಳುಹಿಸುವ ವ್ಯವಸ್ಥೆ ಇದ್ದರೆ ಈ ಉಪಗ್ರಹದಲ್ಲಿ ಒಮ್ಮೆಗೆ 8 ರೇಡಿಯೋ ಸಂಕೇತ ಕಳುಹಿಸುವ ವ್ಯವಸ್ಥೆ ಇದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಾಜ್ಯ ಸರ್ಕಾರದ ಹೊಸ ಟ್ರಾಫಿಕ್​ ರೂಲ್ಸ್ ಕಡಿತ ಬಗ್ಗೆ ಆದೇಶ ನೀಡಿದ ಮುಖ್ಯಮಂತ್ರಿ ಬಿಎಸ್​ವೈ,!ಇಷ್ಟಕ್ಕೂ ಏನು ಆ ಆದೇಶ ತಿಳಿಯಿರಿ,.?

    ಬೆಂಗಳೂರು,  ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಗೆ ಹಲವು ವಾಹನ ಸವಾರರು ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತಿದ್ದರು. ಇದರ ಬೆನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರ ಹೊಸ ಟ್ರಾಫಿಕ್​ ಫೈನ್ ಇಳಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್​ ಮಾದರಿಯಲ್ಲಿ ರಾಜ್ಯದಲ್ಲೂ ಟ್ರಾಫಿಕ್ ಫೈನ್ ಇಳಿಕೆ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂದ ಅವರು, ನಮ್ಮ ಅಧಿಕಾರಿಗಳ ಚರ್ಚೆ ನಡೆಸಿದ…

  • Sports

    2ನೇ ಟೆಸ್ಟ್ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

    2ನೇ ಟೆಸ್ಟ್ ಪಂದ್ಯ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ.  ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ ಅಂತಿಮ 11ರ ಬಳಗ  ಭಾರತ ಮಾಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್(ನಾಯಕ) ಚೇತೇಶ್ವರ ಪೂಜಾರಾ ಅಜಿಂಕ್ಯ ರಹಾನೆ ಹನುಮ ವಿಹಾರಿ ರಿಷಭ್ ಪಂತ್ (ವಿ.ಕೀ) ರವಿಚಂದ್ರನ್ ಅಶ್ವಿನ್ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್(ನಾಯಕ) ಐಡೆನ್…

    Loading

  • ಸುದ್ದಿ

    ರಷ್ಯಾ ಅಭಿಮಾನಿಯ ವಿಡಿಯೋ ನೋಡಿ ಬೆರಗಾದ ಕಿಚ್ಚ ಸುದೀಪ್,.!

    ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ರಷ್ಯಾದ ಅಭಿಮಾನಿಯೊಬ್ಬರು ವಿಡಿಯೋ ಮಾಡಿ ಅವರ  ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅವರು ರಷ್ಯಾದ ಅಭಿಮಾನಿಗೆ ಬೆರಗಾಗಿದ್ದಾರೆ  ಮರೀನಾ ಕಾರ್ಟಿಂಕಾ ಎಂಬವರು ಈ ವಿಡಿಯೋದಲ್ಲಿ ಸುದೀಪ್ ಅವರ ನಟನೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮರೀನಾ ವಿಡಿಯೋದಲ್ಲಿ ತಿಳಿಸಿದ್ದಾರೆ . ವಿಡಿಯೋದಲ್ಲಿ ಏನಿದೆ? :ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ..

    ಗುರುವಾರ, 05/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ… ಮೇಷ:– ಬಹುದಿನದ ನೀರಿಕ್ಷಿತ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉ  ನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು. ವೃಷಭ:- ಇವತ್ತಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ…

  • ವಿಶೇಷ ಲೇಖನ

    ಒಂದೇ ಒಂದು ಮೋದಿಯ ಫೋನ್ ಕಾಲ್’ಗೆ ಈ ದೇಶದ ಅಧ್ಯಕ್ಷ ಯೆಮನ್ ಮೇಲಿನ ಯುದ್ದ ನಿಲ್ಲಿಸಿದ..!

    ನರೇಂದ್ರ ಮೋದಿ ಭಾರತದ ನಾಯಕರಾದ ನಂತರ ಬೇರೆ ದೇಶಗಳು ಭಾರತವನ್ನು ನೋಡುವ ರೀತಿ ಈಗ ಬದಲಾಗಿದೆ. ಭಾರತವನ್ನು ತಿರುಕರ ದೇಶ, ಹಾವಾಡಿಗರ ದೇಶ ಎಂದೆಲ್ಲಾ ಹೀಯಾಳಿಸುತ್ತಿದ್ದ ಕಾಲವೊಂದಿತ್ತು. ಆದ್ರೆ ಈಗ ಹಾಗಿಲ್ಲ. ಏಕೆಂದ್ರೆ ಹಿಗಂತೂ ಭಾರತ ಅಭಿವೃದ್ದಿಯತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಭಾರತದ ನಾಯಕನ ಮಾತಿಗೆ ಬೇರೆ ದೇಶಗಳು ಕೇಳುವ ಹಾಗಿದೆ.