ಆರೋಗ್ಯ, ಉಪಯುಕ್ತ ಮಾಹಿತಿ

ದಿನ ನಿತ್ಯ ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..!ತಿಳಿಯಲು ಈ ಮಾಹಿತಿಯನ್ನು ನೋಡಿ…

810

ಎಲ್ಲಾ ಕಾಲದಲ್ಲೂ ಸುಲಭವಾಗಿ ದೊರೆಯುವ ಖರ್ಜೂರ ವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.ಡ್ರೈಫ್ರುಟ್‌ಗಳು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು.
ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ.

ಅಸಿಡಿಟಿ ಮತ್ತು ಎದೆ ಉರಿ ಇದ್ದರೆ ಒಂದು ಖರ್ಜೂರ ತಿಂದರೆ ಸಾಕು ಕಡಿಮೆಯಾಗುತ್ತದೆ. ಇದರಲ್ಲಿ ವಿಟಮಿನ್, ಖನಿಜಾಂಶಗಳು ಹೇರಳವಾಗಿರುವುದರಿಂದ ಕೆಲವು ಪ್ರಮುಖ ಕಾಯಿಲೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಬೆಸ್ಟ್ : ಖರ್ಜೂರದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಇದೆ. ಖರ್ಜೂರ ತಿಂದ್ರೆ ನಿಮ್ಮ ಚರ್ಮದಲ್ಲಿನ ಪುನಶ್ಚೈತನ್ಯ ಶಕ್ತಿಯನ್ನು ಕಾಪಾಡಿಕೊಳ್ಳಬಹುದು, ನಿಮ್ಮ ಚರ್ಮವನ್ನು ಮೃದುವಾಗಿಡಲು ಕೂಡ ಅದು ಸಹಕಾರಿ. ಚರ್ಮದ ಸಮಸ್ಯೆಗಳು ಬರದಂತೆ ತಡೆಗಟ್ಟುತ್ತದೆ. ಆ್ಯಂಟಿ ಏಜಿಂಗ್ ಕೂಡ ಹೌದು.

ಜೀರ್ಣಶಕ್ತಿ ಹೆಚ್ಚಿಸುತ್ತದೆ : ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಿ. ಅದರಿಂದ ನಿಮ್ಮ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ನರಮಂಡಲವನ್ನು ಬಲಪಡಿಸುತ್ತದೆ

ಖರ್ಜೂರ ನಿಮ್ಮ ನರಗಳನ್ನು ಸುವ್ಯವಸ್ಥೆಯಲ್ಲಿಡಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಪೋಷಕಾಂಶಗಳು ಆರೋಗ್ಯ ವೃದ್ಧಿಸುವುದಲ್ಲದೆ ನರಗಳ ಕಾರ್ಯನಿರ್ವಹಣೆಯನ್ನೂ ಸರಿ ಮಾಡುತ್ತವೆ. ಅಷ್ಟೇ ಅಲ್ಲ ಅದರಲ್ಲಿರುವ ಪೊಟ್ಯಾಶಿಯಂ ಮೆದುಳಿನ ಚುರುಕುತನವನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಮೋದಿ ಅಭಿಮಾನಿಗಳಿಗೆ ಸವಾಲು ಹಾಕಿದ, ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು!ಏನದು ಸವಾಲು ಗೊತ್ತಾ?

    ಸೋಲಿಲ್ಲದ ಸರದಾರ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಪ್ರಧಾನಿ ಮೋದಿ ಅವರ ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ. ‘ಬಿಜೆಪಿಯ ನಕಲಿ, ಮೋದಿಯ ಫೇಕ್ ಅಕೌಂಟ್ ಭಕ್ತರೇ’ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಲೇವಡಿ ಮಾಡಿದ್ರಿ ಈಗ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿದೆ. ಈ ಬಗ್ಗೆ ಯಾರೊಬ್ಬರು ಚಕಾರವೆತ್ತುತ್ತಿಲ್ಲ. ಈಗ ಸ್ವಾಭಿಮಾನಿ ಮೋದಿ…

  • ಆಧ್ಯಾತ್ಮ

    ಆಂಜನೇಯ ಸ್ವಾಮಿಯ ಮೊದಲ ಅವತಾರ, ವೃಶ ಕಪಿ ಅವತಾರದ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಮುಂದೆ ಓದಿ…

    ನಮಗೆ ಗೊತ್ತಿರುವ ಹಾಗೆ ಶ್ರೀ ರಾಮ ಭಕ್ತ ಹನುಮಂತನ ಜನ್ಮ ವೃತ್ತಾಂತ, ಹನುಮಂತ ದೇವರು, ಭಗವಾನ್ ಶಿವನ ಅಂಶದ ಅವತಾರ ಇವೆಲ್ಲವೂ ನಮಗೆ ಗೊತ್ತಿದೆ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಹನುಮಂತನ ಈ ಅವತಾರಕ್ಕೆ ಮುಂಚೆ, ಎಷ್ಟೋ ಯುಗಗಳ ಹಿಂದಯೇ ಹನುಮಂತನ ಮತ್ತೊಂದು ಅವತಾರವಾಗಿತ್ತು. ಆ ಅವತಾರವೇ ವೃಶ ಕಪಿ ಅವತಾರ.

  • ಸುದ್ದಿ

    ಗದ್ದೆಯಲ್ಲಿ ಮಕ್ಕಳ ಹೆಜ್ಜೆ , “ನಮ್ಮ ನಡಿಗೆ ಕೃಷಿಯ ಕಡೆಗೆ”…!

    ಶಂಕರಪುರ ಸೈಂಟ್ ಜೋನ್ಸ್ ಫ್ರೌಢ ಶಾಲಾ ಭಾರತ ಸೇವಾದಳ, ಸ್ಕೌಟ್, ಗೈಡ್ಸ್, ನೇಸರ ಹಸಿರುಪಡೆಯ 134 ವಿದ್ಯಾರ್ಥಿಗಳು ಶಂಕರಪುರ ಸಮೀಪದ ಕುರ್ಕಾಲು ಗರಡಿಮನೆ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರ ಗದ್ದೆಗೆ ಭೇಟಿ ನೀಡಿದರು. ಟಿಲ್ಲರ್‍ನಲ್ಲಿ ಉಳುಮೆ ಮಾಡಿದ ಗದ್ದೆಗೆ ಇಳಿದರು. ಭಾರತ ಸೇವಾದಳದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ “ಸಾರೇ ಜಾಹಾಂಸೆ ಅಚ್ಚಾ,,,, ಹಿಂದೂಸ್ತಾನ್ ಹಮಾರಾ..! ಗೀತೆಯನ್ನು ಸಾಮೂಹಿವಾಗಿ ಅಭಿನಯದ ಮೂಲಕ ಹಾಡಿದರು. ಗದ್ದೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ, ಸಂಭ್ರಮಿಸಿದರು. ಕೆಸರುಗದ್ದೆಯಲ್ಲಿ ಇಳಿದ ಪ್ರಥಮ ಅನುಭವದ ವಿದ್ಯಾರ್ಥಿಗಳು…

  • ಆರೋಗ್ಯ

    ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಮನೆ ಮದ್ದುಗಳು. ಈ ಉಪಯುಕ್ತ ಮಾಹಿತಿ ನೋಡಿ.!

    ಗ್ಯಾಸ್ಟ್ರಿಕ್ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಈಗ ತಾನೇ ಹುಟ್ಟಿದ ಮಗುವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು, ಏಕೆಂದರೆ ಈಗ ನಾವು ಬಳಸುತ್ತಿರುವ ಆಹಾರದಲ್ಲಿ ಪೋಷಕಾಂಶ ಕಡಿಮೆ, ಕೆಮಿಕಲ್ ಹೆಚ್ಚು. ಇದನ್ನು ಸ್ವತಃ ಆಹಾರ ತಜ್ಞರೇ ಒಪ್ಪಿಕೊಳ್ಳುತ್ತಾರೆ. ಆದರೇನು ಮಾಡುವುದು ದಿನನಿತ್ಯ ಲಭ್ಯವಿರುವ ತಾಜಾ ತರಕಾರಿ, ಆಹಾರವನ್ನು ಸೇವಿಸಿ ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆಂದು ಇಲ್ಲಿ ಪರಿಹಾರ ಕೊಡಲಾಗಿದೆ. ಓದಿ. ಸದುಪಯೋಗಪಡಿಸಿಕೊಳ್ಳಿ. ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ…

  • ಉಪಯುಕ್ತ ಮಾಹಿತಿ

    ನೀವು ರಸ್ತೆ ಪಕ್ಕದ ಈ ಕಲ್ಲುಗಳನ್ನು ದಿನಾಲು ನೋಡುತ್ತೀರಿ..!ಆದ್ರೆ ಆ ಕಲ್ಲುಗಳ ಬಣ್ಣಗಳು ಹೇಳುವ ಮಾಹಿತಿ ನಿಮ್ಗೆ ಗೊತ್ತೇ ಇರಲ್ಲ…ತಿಳಿಯಲು ಈ ಲೇಖನ ಓದಿ…

    ನಾವೆಲ್ಲರೂ ರಸ್ತೆಯಲ್ಲಿ ಹೋಗುವಾಗ ಕಿಲೋಮೀಟರ್ ಸೂಚಕಗಳನ್ನು ಕಾಣುವುದು ಸಾಮಾನ್ಯ. ಈ ಮೈಲಿಗಲ್ಲುಗಳನ್ನು ಕೇವಲ ಕಿಲೋಮೀಟರ್ ಬಗ್ಗೆ ಅರಿತುಕೊಳ್ಳಲು ಮಾತ್ರ ಉಪಯೋಗಿಸುತ್ತೇವೆ ಎನ್ನವುದು ಸತ್ಯ ಸಂಗತಿ.

  • ಸುದ್ದಿ

    ಇನ್ಮುಂದೆ ಹೊಸ ಅಂಕಪಟ್ಟಿ ಪಡೆಯಬೇಕೆಂದರೆ ಆಧಾರ್‌ ಕಡ್ಡಾಯ,.!

    ನೀವು ಎಸೆಸೆಲ್ಸಿ ಅಂಕಪಟ್ಟಿ ಕಳೆದುಕೊಂಡಿದ್ದರೆ ಹೊಸತಾಗಿ ಪಡೆಯಲು ಇನ್ನು ಆಧಾರ್‌ ಕಡ್ಡಾಯ. ಇಷ್ಟು ಮಾತ್ರವಲ್ಲ ಅಂಕಪಟ್ಟಿಯಲ್ಲಿ ಏನಾದರೂ ಲೋಪಗಳು ಇದ್ದರೆ ಅದನ್ನು ಸರಿಪಡಿಸಿ ಹೊಸತನ್ನು ಪಡೆಯಲೂ ಅದು ಬೇಕು. ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ…