ಆರೋಗ್ಯ

ನೀವು ಬಸ್ಸಿನಲ್ಲಿ ಪ್ರಯಾಣಿಸುವಾಗ ವಾಕರಿಕೆ ಬರುತ್ತಿದಿಯಾ..? ಹಾಗದ್ರೆ ಇಲ್ಲಿದೆ ಸುಲಭವಾದ ಮನೆ ಮದ್ದು ..!

706

ಒಬ್ಬೊಬ್ಬರಿಗೆ ಒಂದು ರೀತಿಯ ಕಾಯಿಲೆ ಇರುತ್ತದೆ. ಹೆಚ್ಚಿನ ಮಹಿಳೆಯರಿಗೆ ಬಸ್‌ನಲ್ಲಿ ಪ್ರಯಾಣ ಮಾಡಿದರೆ ವಾಕರಿಕೆ ಬರುತ್ತದೆ. ಬಸ್ಸಿನ ಏರಿಳಿತ ಅಥವಾ ಸರಿಯಾಗಿ ಗಾಳಿಯಾಡದೆ ಇರುವಂತಹ ಸ್ಥಿತಿ. ಇದೆಲ್ಲದರ ಪರಿಣಾಮವಾಗಿ ವಾಕರಿಕೆ ಬಂದು ಮುಜುಗರ ತರಿಸುತ್ತದೆ.

ನಿಮಗೂ ಸಹ ಇದೆ ರೀತಿಯ ಕಾಯಿಲೆ ಇದೆಯೇ. ಇನ್ನು ಮುಂದೆ ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಮುಂದೆ ಮುಜುಗರಕ್ಕೆ ಒಳಗಾಗುವ ಬದಲು ಈ ಮನೆ ಮದ್ದು  ಸೇವಿಸಿ ವಾಕರಿಕೆ ಬರುವುದನ್ನು ತಡೆಗಟ್ಟಬಹುದು.

ಶುಂಠಿ ಚಾಹ  :-

ಶುಂಠಿ ವಾಂತಿ ನಿರೋಧಕವಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಜೀರ್ಣಕ್ರಿಯೆಗೂ ಒಳ್ಳೆಯದು. ವಾಂತಿ ಮಾಡಿಕೊಳ್ಳುವ ಲಕ್ಷಣವಿದ್ದರೆ ಪ್ರಯಾಣಕ್ಕೆ ಮೊದಲು ಶುಂಠಿ ಚಾಹ ಕುಡಿಯಿರಿ.

ಪುದೀನಾ : –

ಘಂ ಎಂದು ಪರಿಮಳ ನೀಡುವ ಪುದೀನಾ ಸಹ ವಾಂತಿ ನಿವಾರಕವಾಗಿ ಕೆಲಸ ಮಾಡುತ್ತದೆ. ವಾಂತಿಯಾಗುವುದನ್ನು ತಡೆಯಲು ಪುದೀನಾ ಚಾಹ ತುಂಬಾ ಸಹಾಯಕಾರಿ.

ಹಸಿ ಅಥವಾ ಒಣಗಿಸಿದ ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಜೇನಿನ ಹನಿಯನ್ನು ಹಾಕಿ ಕುಡಿಯಿರಿ. ಪ್ರಯಾಣದ ವೇಳೆ ಪುದೀನಾ ಎಲೆಗಳನ್ನು ಜಗಿಯಬಹುದು. ಇದರ ಸುವಾಸನೆಯಿಂದಲೂ ವಾಂತಿಯನ್ನು ತಡೆಯಬಹುದು.

ಈರುಳ್ಳಿ ರಸ :-

 ಇದು ವಾಂತಿ ಮತ್ತು ಪಿತ್ತೋದ್ರೇಕವನ್ನು ಕ್ಷಣಮಾತ್ರದಲ್ಲಿ ನಿಲ್ಲಿಸುತ್ತದೆ. ಮಿಕ್ಸಿಗೆ ಹಾಕಿ ಕೆಲವು ಈರುಳ್ಳಿಗಳನ್ನು ಪುಡಿಮಾಡಿ ಮತ್ತು ಅದರಿಂದ ರಸ ತೆಗೆಯಿರಿ.

ಇದಕ್ಕೆ ನೀವು ಪುದೀನಾ ಸಾರವನ್ನು ಸೇರಿಸಬಹುದು. ಈ ಮಿಶ್ರಣ ಪಿತ್ತೋದ್ರೇಕ ಮತ್ತು ವಾಂತಿಯನ್ನು ನಿಲ್ಲಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡಲಿದೆ.

ಕಾಳುಮೆಣಸು ಮತ್ತು ಲಿಂಬೆ ರಸ :-

 ನಿಂಬೆ ಹಣ್ಣು ವಾಂತಿ ನಿವಾರಣೆಗೆ ಉತ್ತಮ ಎಂಬುದು ನಿಮಗೆ ಗೊತ್ತಿದೆ. ಅದೇ ರೀತಿ ಕಾಳುಮೆಣಸು ಮತ್ತು ಲಿಂಬೆ ರಸ ಬೆರೆಸಿ ಸೇವಿಸಿದರೆ ತಲೆನೋವು, ಪಿತ್ತೋದ್ರೇಕ ಮತ್ತು ತಲೆತಿರುಗುವಿಕೆಯನ್ನು ತಡೆಯುತ್ತದೆ.

ಉಪ್ಪು ಅಥವಾ ಕರಿಮೆಣಸನ್ನು ಬಿಸಿಯಾದ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ ಮತ್ತು ಪ್ರಯಾಣಕ್ಕೆ ಮೊದಲು ಇದನ್ನು ಕುಡಿಯಿರಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ