ದೇವರು-ಧರ್ಮ

ಇಸ್ಕಾನ್ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದ ಗೋವರ್ಧನ ಪೂಜೆ…!ಇದರ ಇನ್ನಳೆಯೇನು ಗೊತ್ತಾ?

28

ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು.

ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್​ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ ಆಚರಿಸಲಾಗಿದೆ.

ಹಣ್ಣು- ಡ್ರೈ ಫ್ರೂಟ್ಸ್​ನ 1000ಕೆಜಿ ತೂಕದ ಕೇಕ್​ ಅನ್ನ ಗೋವರ್ಧನಗಿರಿ  ಬೆಟ್ಟ ಮಾದರಿಯಲ್ಲಿ ತಯಾರಿಸಲಾಗಿತ್ತು. ಜೊತೆಗೆ ದೇವರ ನೈವೇದ್ಯಕ್ಕೆ 56 ತರದ ತಿಂಡಿ ತಿನಿಸುಗಳನ್ನ ಇಡಲಾಯಿತು. ಎರಡು ಹಸುಗಳನ್ನ ತರಿಸಿ ಸಂಪ್ರದಾಯಿಕವಾಗಿ ಪೂಜೆಯನ್ನ ಕೂಡ ಸಲ್ಲಿಸಲಾಯಿತು.

ಪೂಜೆ ಪುನಸ್ಕಾರಗಳ ನಂತರ, ನೆರೆದಿದ್ದ ಸಾವಿರಾರು ಭಕ್ತರಿಗೆ ಅದೇ ಕೇಕ್​ನ್ನ ಪ್ರಸಾದವಾಗಿ ನೀಡಲಾಯಿತು. ಒಟ್ಟಾರೆ, ಈ ಬಾರಿ ಇಸ್ಕಾನ್​ನಲ್ಲಿ ನಡೆದ ಗೋವರ್ಧನ ಪೂಜೆ ತುಂಬಾನೆ ವಿಶೇಷವಾಗಿದ್ದು, ದೇವರ ದರ್ಶನ ಪಡೆದ ಭಕ್ತರು ಕೂಡ ಖುಷಿ ಪಟ್ರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಹಿಳಾಮಣಿಗಳಿಗೆ ಬಂಪರ್ ಆಫರ್!ಹತ್ತು ಸಾವಿರ ಹಣದ ಜೊತೆಗೆ ಸಿಗಲಿದೆ ಒಂದು ಸ್ಮಾರ್ಟ್ ಮೊಬೈಲ್..!

    ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ತಯಾರಿ ಆಂಧ್ರಪ್ರದೇಶದಲ್ಲಿ ಜೋರಾಗಿ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಹತ್ವದ ಘೋಷಣೆ ಮಾಡಿದ್ದಾರೆ. ನಾಯ್ಡು ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ 10 ಸಾವಿರ ರೂಪಾಯಿ ಹಾಗೂ ಒಂದು ಮೊಬೈಲ್ ಫೋನ್ ನೀಡಲಿದ್ದಾರಂತೆ. ಅಮರಾವತಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಾಯ್ಡು ಈ ಘೋಷಣೆ ಮಾಡಿದ್ದಾರೆ. ಹಣ ಮಹಿಳೆಯರಿಗೆ ಮೂರು ಹಂತದಲ್ಲಿ ಸಿಗಲಿದೆ. ಫೆಬ್ರವರಿಯಲ್ಲಿ ಮೊದಲ ಚೆಕ್ ವಿತರಣೆಯಾಗಲಿದೆ.ಮಹಿಳೆಯರಿಗೆ ಫೆಬ್ರವರಿಯಲ್ಲಿ 2500 ರೂಪಾಯಿ ಚೆಕ್ ಸಿಗಲಿದೆ. ಶೀಘ್ರವೇ ಸ್ಮಾರ್ಟ್ಫೋನ್ ನೀಡುವುದಾಗಿ ಅವರು…

  • ಸ್ಪೂರ್ತಿ

    ಶಾಲೆಯ ಎಲ್ಲ ಮಕ್ಕಳಿಗೂ ಸೈಕಲ್ ಕೊಡಿಸಲು ಈ ಶಿಕ್ಷಕಿ ಮಾಡಿದ್ದೇನು ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ಗುರು ಅಂದರೆ ಬರಿ ಶಿಕ್ಷಣವನ್ನು ನೀಡುವವರು ಮಾತ್ರ ಅಲ್ಲ. ತಂದೆ ತಾಯಿಗಳ ರೀತಿಯಲ್ಲಿ ಸಹಕರಿಸುವವರು ಎನ್ನಲಾಗುತ್ತದೆ. ಪ್ರತಿಯೊಂದು ಹಂತಕ್ಕೂ ದಾರಿಯನ್ನು ತೋರಿಸುವವರು ಹಾಗು ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕ ಬೇಕು ಅನ್ನೋದನ್ನ ಕಲಿಸಿ ಕೊಡುವವರು. ಈ ಪ್ರಪಂಚದಲ್ಲಿ ಶಿಕ್ಷಕರಿಗೆ ಒಂದು ಸ್ಥಾನವಿದೆ.

  • ಆರೋಗ್ಯ

    ಬೆಂಡೆಕಾಯಿಯ ಆರೋಗ್ಯಕರ ಪ್ರಯೋಜನಗಳು ಏನೆಂದು ನಿಮಗೆ ಗೊತ್ತೇ? ಓದಿರಿ

    ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ….

  • ಜ್ಯೋತಿಷ್ಯ

    ಇದ್ದಕಿದ್ದಂತೆ ನಿಮ್ಮ ಜೇಬಿನಲ್ಲಿರುವ ನಾಣ್ಯ ಅಥ್ವಾ ನೋಟು ಕೆಳಗಡೆ ಬಿದ್ರೆ ಏನಾಗುತ್ತೆ ಗೊತ್ತಾ..?

    ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ. ನಿಮ್ಮ ಜೇಬಿನಿಂದ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವ ಮೊದಲು ಅದ್ರಿಂದಾಗುವ ಶುಭ…

  • ಜ್ಯೋತಿಷ್ಯ

    ದಿನ‌ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಸುಡು ಕೆಂಡಗಳನ್ನು ಕಟ್ಟಿಕೊಂಡು ತಿರುಗಾಡುವ ಮೊದಲು ನಿಧಾನವಾಗಿ ನಿರ್ಣಯ ತೆಗೆದುಕೊಂಡು ಮುನ್ನುಗ್ಗುವುದು ಒಳ್ಳೆಯದು. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ಉತ್ತಮ ಸ್ಥಾನದಲ್ಲಿ ಸಂಚರಿಸದೆ ಅನೇಕ ತೊಂದರೆಗಳು ಉಂಟಾಗುವವು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ…

  • ಸುದ್ದಿ

    ಹಾಸನದ ದೇವಾಲಯದಲ್ಲಿ ಪ್ರತಿ ಸೋಮವಾರ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪೂಜೆ ನಡೆಯುವದಕ್ಕೆ ಕಾರಣವೇನು ಗೊತ್ತಾ?

    ಪುರಾತನ ಮತ್ತು ಮುಜರಾಯಿ ಇಲಾಖೆಗೆ ಸೇರಿದ ಹಾಸನದ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.ಇದರ ಜೊತೆಗೆ ಅಧಿಕಾರಿಯ ಹೆಸರಿನಲ್ಲಿ ಮರ ಬೆಳೆಸಲಾಗುತ್ತಿದ್ದು ಪ್ರತಿದಿನ ಜಲಾಭಿಷೇಕ ಕೂಡ ನಡೆಯುತ್ತದೆ. ಈ ಪುರಾತನ ದೇವಾಲಯ ಶಿಥಿಲಾವಸ್ಥೆಗೆ ತೆರಳಿದ್ದರೂ ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿಸಲಿಲ್ಲ. ಆದರೆ ರೋಹಿಣಿ ಸಿಂಧೂರಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ ಮಾಡಿದ್ದರು. 2017ರಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ತಕ್ಷಣ 30 ಲಕ್ಷ ಹಣ…