ಹಿಂದೂ ದೇವಾಲಯಗಳ ಸುತ್ತ, ಮನೆಯ ಮುಂಭಾಗದಲ್ಲಿ ತುಳಸಿ ಗಿಡಗಳು ಇರುವುದನ್ನು ಕಾಣಬಹುದು. ಇದು ಪುಟ್ಟ ಸಸ್ಯವಾದರೂ ಇದರ ಎಲೆಗಳು ಅಥವಾ ದಳಗಳು ಭಗವಾನ್ ವಿಷ್ಣುವಿಗೆ ಅತ್ಯಂತ ಶ್ರೇಷ್ಠವಾದದ್ದು. ಹಾಗಾಗಿ ದೇವತೆಗಳ ಆರಾಧನೆಯ ಸಂದರ್ಭದಲ್ಲಿ ತುಳಸಿ ಎಲೆಯನ್ನು ಕಡ್ಡಾಯವಾಗಿ ಬಳಸುತ್ತಾರೆ. ಇದು ಧಾರ್ಮಿಕವಾಗಿ ಪವಿತ್ರ ಸ್ಥಾನವನ್ನು ಪಡೆದುಕೊಂಡಂತೆಯೇ ವೈಜ್ಞಾನಿಕ ವಾಗಿಯು ಅತ್ಯುತ್ತಮ ಗಿಡ ಮೂಲಿಕೆಯ ಸಸ್ಯ.
ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಆರಾಧನೆ ಮಾಡಿದಾಗ ಮಾತ್ರ ಮನೆಯಲ್ಲಿ ಸಕಲ ದೇವತೆಗಳು ಆಗಮಿಸುತ್ತಾರೆ. ದುಷ್ಟ ಶಕ್ತಿಗಳು ಮನೆಯಿಂದ ದೂರ ನಿಲ್ಲುತ್ತವೆ. ಮನೆಯಲ್ಲಿ ಇರುವ ವ್ಯಕ್ತಿಗಳು ಉತ್ತಮ ಆರೋಗ್ಯದಿಂದ ಸಕಲ ಸಮೃದ್ಧಿಯನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು. ಅಂತೆಯೇ ತುಳಸಿ ಗಿಡವನ್ನು ಗೌರವಿಸದೇ ಇರುವುದು, ಮನೆಯಲ್ಲಿ ತುಳಸಿಯ ಗಿಡವನ್ನು ನೆಟ್ಟು, ಅದಕ್ಕೆ ಸರಿಯಾಗಿ ನೀರು ಮತ್ತು ಮಣ್ಣನ್ನು ನೀಡದೆ ಇರುವುದು ಅತ್ಯಂತ ಪಾಪಕೃತ್ಯ ಎಂದು ಪರಿಗಣಿಸಲಾಗುತ್ತದೆ.
ತುಳಸಿ ಗಿಡಕ್ಕೆ ಅವಮಾನ ಮಾಡುವುದು ಅಥವಾ ಅನುಪಯುಕ್ತ ಕೆಲಸಗಳಿಗೆ ತುಳಸಿಯನ್ನು ಬಳಸಿಕೊಳ್ಳುವುದು ಮಾಡಿದರೆ ಜೀವನದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುವುದು. ಹಿಂದೂ ಧರ್ಮ ಹಾಗೂ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಪವಿತ್ರ ತುಳಸಿ ಎಲೆಯೊಂದಿಗೆ ಕೆಲವು ಅಸಂಬದ್ಧ ಕೆಲಸವನ್ನು ಮಾಡಬಾರದು. ಅವು ನಿಮಗೆ ತೊಂದರೆಯನ್ನುಂಟುಮಾಡುತ್ತವೆ. ಹಾಗಾದರೆ ಆ ಪಾಪ ಕೃತ್ಯಗಳು ಯಾವುವು? ಎನ್ನುವುದನ್ನು ತಿಳಿಯೋಣ.
ಹಿಂದೂ ಪಂಚಾಂಗದ ಪ್ರಕಾರ ಏಕಾದಶಿ, ಭಾನುವಾರ, ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಎಲೆಯನ್ನು ಕೀಳುವುದು, ಗಿಡವನ್ನು ಕತ್ತರಿಸುವುದು ಅಥವಾ ಬಿಸಾಡುವ ಕೆಲಸವನ್ನುಮಾಡಬಾರದು. ಅದು ಅತ್ಯಂತ ಪಾಪಕೃತ್ಯ. ಅದರಿಂದ ಶಾಪ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ. ವಿಶೇಷ ದಿನಗಳಲ್ಲಿ ತುಳಸಿಎಲೆಯನ್ನು ಕೀಳುವುದು ಪರಿಶುದ್ಧತೆಯನ್ನು ಮುರಿದಂತಾಗುವುದು. ತುಳಸಿಯನ್ನು ನಾಶ ಮಾಡಿದರೆ ಜೀವನದಲ್ಲಿ ಶಾಪವನ್ನು ಪಡೆಯುವುದಲ್ಲದೆ ಶೀಘ್ರದಲ್ಲಿಯೇ ಅಪಘಾತ ಅಥವಾ ಸಾವನ್ನು ಎದುರಿಸಬೇಕಾಗುತ್ತದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಸೋಮವಾರ, 26/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಹೆಚ್ಚಿನ ಆದಾಯ ಬರಲಿದೆ. ಶುಭಮಂಗಲ ಕಾರ್ಯಗಳು ನಡೆದಾವು. ವಾಹನ ಮಾರಾಟದಿಂದ ಲಾಭ. ದೇಹಾರೋಗ್ಯದಲ್ಲಿ ಸಮಸ್ಯೆ ಇದ್ದು ಆರೋಗ್ಯದ ಭಾಗ್ಯ ಕಾಳಜಿ ಇರಲಿ. ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ವೃಷಭ:- ಆರ್ಥಿಕ ಸ್ಥಿತಿಯಲ್ಲಿ ಸಮತೋಲನ.ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ. ಬಂಧುಗಳ ಸಹಕಾರ ದೊರೆಯಲಿದೆ. ಪರಿಶ್ರಮದ ಬಲದಿಂದಲೇ ಉದ್ಯೋಗ ಲಾಭ. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ದೇಹಾರೋಗ್ಯ ಸುಧಾರಿಸಲಿದ್ದು ಕಾಳಜಿ ಇರಲಿ. ಮಿಥುನ:–…
ಪ್ರಜಾಪತಿ ಬ್ರಹ್ಮನಿಗೆ ಕದ್ರು, ವಿನತೆ ಇತ್ಯಾದಿ ಅನೇಕ ಹಣ್ಣು ಮಕ್ಕಳಿದ್ದರು. ಇವರು ವಯಸ್ಸಿಗೆ ಬಂದ ಮೇಲೆ ಪ್ರಜಾವತಿ ಇವರಲ್ಲಿ ಕೆಲವರನ್ನು ಕಶ್ಯಪರೆಂಬ ತಪಸ್ವಿಗಳಿಗೆ ಕೊಟ್ಟು ಮದುವೆ ಮಾಡಿದನು. ಕಾಲಕ್ರಮದಲ್ಲಿ ಕದ್ರುವಿಗೆ ಅನೇಕ ಮಕ್ಕಳಾದುವು. ಇವುಗಳೆ ಸರ್ಪಗಳು. ಇವುಗಳಲ್ಲಿ ಮೊದಲನೆಯವನಾದ ಅದಿಶೇಷನೇ ಭೂಮಿಯನ್ನು ಹೊತ್ತಿರುವವನು.
ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್ ಎ, ಬಿ1, ಬಿ6, ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ ಹಣ್ಣಿನ ತಿರುಳನ್ನು ಸೇವಿಸಿ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿಯೂ ಆರೋಗ್ಯಕರ ಅಂಶಗಳಿವೆ. * ಕಲ್ಲಂಗಡಿ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. *ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ. *ಮುಖದ ಮೇಲೆ ಮೂಡುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ…
ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ. ಹಲ್ಲು ಕೊಳೆಯಾಗಲ್ಲ :-ಕಡು ಬಣ್ಣದ ಕಾಫಿ, ಟೀ ಕುಡಿಯುವುದರಿಂದ ಬಿಳಿ ಹಲ್ಲು ಹಳದಿಗಟ್ಟುವ ಸಾಧ್ಯತೆಯಿದೆ. ಹೀಗಾಗಿ ಮೊದಲು ನೀರು ಕುಡಿದು ಬಳಿಕ ಕಾಫಿ-ಟೀ ಕುಡಿದರೆ ಈ ಸಮಸ್ಯೆಯಿರದು. ಅಸಿಡಿಟಿ:-ಏನೇ ಸೇವಿಸುವ ಮೊದಲು ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಬರದು. ಕಾಫಿ ಅಥವಾ ಟೀ ಸೇವನೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು. ಇಂತಹ…
ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ ಉಳಿಯುತ್ತಿದ್ದಾರೆ. ಅವರ ಪ್ರಕಾರ ತುಪ್ಪ ಹಾಗೂ ಎಣ್ಣೆಯಿಂದ ಮಾಡಿದ ಪ್ರತಿಯೊಂದು ಆಹಾರವೂ ಹಾನಿಕಾರ. ನೀವು ಹೀಗೆ ಯೋಚನೆ ಮಾಡುವವರಾಗಿದ್ದರೆ ನಿಮ್ಮ ಕಲ್ಪನೆ ತಪ್ಪು. ಸ್ವಲ್ಪ ಪ್ರಮಾಣದ ತುಪ್ಪ ದೇಹಕ್ಕೆ ಬೇಕು. ಹಾಗಂತ ಅತಿಯಾಗಿ ಸೇವನೆ ಮಾಡಬಾರದು. ಅಧ್ಯಯನವೊಂದರ ಪ್ರಕಾರ ಹಾಲಿನಿಂದ ಮಾಡಿದ ಪದಾರ್ಥದಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿರುತ್ತದೆ. ಇದು…