ದೇವರು

ಕೋಲಾರದಲ್ಲಿ ರಾಕ್ಷಸ ರಾವಣನಿಗೂ ಪೂಜೆ!

93

ಕೋಲಾರ:- ರಾಮನ ಪೂಜೆ ಎಲ್ಲಾ ಕಡೆ ನಡೆಯುತ್ತದೆ ಅದರಲ್ಲಿ ವಿಶಿಷ್ಟತೆ ಏನೂ ಇಲ್ಲ ಆದರೆ, ತಾಲ್ಲೂಕಿನ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ನಂತರ ಶಿವ ಭಕ್ತನಾದ ರಾವಣನಿಗೂ ಪ್ರಾಧಾನ್ಯತೆ ನೀಡಿ ಪೂಜಿಸುವ ವಿಶಿಷ್ಟ ಪದ್ದತಿ ರೂಢಿಯಲ್ಲಿದೆ.
ವಕ್ಕಲೇರಿ ಗ್ರಾಮದಲ್ಲಿ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವ ಮುಗಿದಿದ್ದು, ಫೆ.7ರ ಮಂಗಳವಾರ ರಾತ್ರಿ 10 ತಲೆಗಳನ್ನೊತ್ತ ರಾವಣನ ಮೂರ್ತಿ ಮತ್ತು ಮೇಲೆ ಮಾರ್ಕಂಡೇಶ್ವರ ಸ್ವಾಮಿಯ ಮೂರ್ತಿಗಳನ್ನಿಟ್ಟು ವೈಭವದಿಂದ ರಾವಣೋತ್ಸವ ನಡೆಸಲಾಯಿತು.
ಅದೇ ರೀತಿ ತಾಲ್ಲೂಕಿನ ಸುಗಟೂರು ಗ್ರಾಮದಲ್ಲೂ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆದ ನಂತರ ವೈಭವದಿಂದ ರಾವಣೋತ್ಸವವನ್ನು ಆಚರಿಸಲಾಗುತ್ತದೆ.
ಶ್ರೀರಾಮ, ಹನುಮ ಈ ನಾಡಿನ ಪ್ರಮುಖ ದೈವವಾಗಿದ್ದು, ಹನುಮನಿಲ್ಲದ ಊರೇ ಇಲ್ಲ ಎಂಬ ಪ್ರತೀತಿಯೂ ಇದೆ. ಆದರೆ ರಾಮನಿಗೆ ವೈರಿಯಾಗಿ ಸೀತಾಮಾತೆಯನ್ನು ಹೊತ್ತೊಯ್ದು ಕಿರುಕುಳ ನೀಡಿ ಕೊನೆಗೆ ರಾಮನಿಂದಲೇ ಹತನಾಗುವ ರಕ್ಕಸ ರಾವಣನಿಗೂ ಪೂಜೆ ನಡೆಯುತ್ತದೆ ಎಂದರೆ ವಿಶಿಷ್ಟವೇ ಅಲ್ಲವೇ?


ಶಿವಭಕ್ತ ರಾವಣನಿಗೂ
ವಿಶೇಷ ಪೂಜೆ
ಇಂತಹದೊAದು ಅಪರೂಪದ, ವೈಭವದ ಪೂಜೆ ಶಿವಭಕ್ತ ರಾವಣನಿಗೂ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ಅನಾದಿ ಕಾಲದಿಂದಲೂ ಜನತೆ ಸಲ್ಲಿಸುತ್ತಾ ಬಂದಿದ್ದಾರೆ.
ಸುಗಟೂರು, ವಕ್ಕಲೇರಿ ಗ್ರಾಮದಲ್ಲಿ ರಾವಣೋತ್ಸವಕ್ಕೆ ವಿಶಿಷ್ಟ ಪ್ರಧಾನ್ಯತೆ ನೀಡಲಾಗುತ್ತದೆ, ಇಡೀ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ಬೃಹತ್ ಪುಷ್ಪ ಪಲ್ಲಕ್ಕಿಯಲ್ಲಿ 10 ತಲೆಗಳನ್ನೊತ್ತ ಬೃಹತ್ ಗಾತ್ರದ ರಾವಣನನ್ನು ಪ್ರತಿಷ್ಟಾಪಿಸಲಾಗುತ್ತದೆ.


ಈ ಬೃಹತ್ ಪುಷ್ಪಪಲ್ಲಕ್ಕಿಯಲ್ಲಿ ಕೆಳಭಾಗದಲ್ಲಿ ರಾವಣ ಮತ್ತು ಮೇಲೆ ಶಿವನನ್ನು ಇಟ್ಟು ಪೂಜಿಸುವ ವೈಭವದ ಉತ್ಸವ ಇಲ್ಲಿ ನಡೆಯುತ್ತಾ ಬಂದಿದೆ.
ಗ್ರಾಮದ ಜನತೆ ಮಾತ್ರ ಮೊದಲು ಮಾರ್ಕಂಡೇಶ್ವರಸ್ವಾಮಿಯ ಭವ್ಯ ರಥೋತ್ಸವ, ಪೂಜಾ ಕಾರ್ಯಗಳನ್ನು ಮುಗಿಸಿದ ನಂತರ ರಥೋತ್ಸವ ಜಾತ್ರೆಯ ಅಂತಿಮ ದಿನ ಶಿವ ಭಕ್ತ ರಾವಣನನ್ನು ಸಹಾ ಅಷ್ಟೇ ಭಕ್ತಿಯಿಂದ ಪೂಜಿಸಿ, ಆರಾಧಿಸುತ್ತಾರೆ.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(3 ಏಪ್ರಿಲ್, 2019) ಧ್ಯಾನ ಪರಿಹಾರ ತರುತ್ತದೆ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ –…

  • ರಾಜಕೀಯ

    ಮೋದಿ ರಾಜ್ಯಕ್ಕೆ ಬಂದರೆ ದವಡೆಗೆ ಒಡೆಯಿರಿ ಎಂದು ವಿವಾಧಾತ್ಮಕ ಹೇಳಿಕೆ ಕೊಟ್ಟ ಶಾಸಕ..!

    ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಕೆಲ ನಾಯಕರು ಪಕ್ಷದ ಪರ ಭಾಷಣ ಮಾಡುವ ವೇಳೆ ನಾಲಿಗೆ ಹರಿಬಿಡ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಎತ್ತಿ ದವಡೆಗೆ ಹೊಡೆಯಿರಿ ಅಂತಾ ಜೆಡಿಎಸ್‍ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್‍ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಜನರಿಗೆ ಹಾಗೂ ರೈತರಿಗೆ ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆ ಏನಾಯ್ತು ಅಂತಾ ಪ್ರಶ್ನಿಸಿ, ಎಲ್ಲರೂ ದವಡೆಗೆ ಹೊಡೆಯಿರಿ ಅಂತಾ ಭಾಷಣ…

  • ಸುದ್ದಿ, ಸ್ಪೂರ್ತಿ

    ಒಬ್ಬ ಹುಡುಗನ ನಿಯತ್ತು ಮೆಚ್ಚಿ ಈ ಪೋಲಿಸ್ ಆಫೀಸರ್ ಮಾಡಿದ್ದೇನು ಗೊತ್ತಾ.

    ಕೆಲವು ಸಮಯಗಳ ಹಿಂದೆ ರಾತ್ರಿ ಸುಮಾರು 10 ಘಂಟೆ ಸುಮಾರಿಗೆ ನೈಟ್ ಡ್ಯೂಟಿ ಮಾಡುವ ಸಲುವಾಗಿ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ನಾಗಮಲ್ಲು ಅವರು ಸಿಂಗಲ್ ಬಳಿ ಬಂದರು, ಇನ್ನು ಈ ಸಮಯದಲ್ಲಿ 11 ವರ್ಷದ ಒಬ್ಬ ಹುಡುಗ ಅಳುತ್ತ ರೋಡ ನಲ್ಲಿ ತಿರುಗಾಡುತ್ತಿದ್ದ. ಹಾಗಾದರೆ ಆ ಹುಡುಗ ಅಲ್ಲಿ ಯಾಕೆ ತಿರುಗಾಡುತ್ತಿದ್ದ ಮತ್ತು ಆತನಿಗೆ ಆದ ತೊಂದರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ…

  • ಸುದ್ದಿ

    ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಒಂದೇ ವರ್ಷದೊಳಗೆ ಕಳೆದುಕೊಂಡ ದೆಹಲಿ……!

    ಸುಶ್ಮಾ ಸ್ವರಾಜ್ ಮಂಗಳವಾರ ರಾತ್ರಿ ನಿಧನರಾಗುವುದರೊಂದಿಗೆ ರಾಷ್ಟ್ರೀಯ ರಾಜಧಾನಿ ದಿಲ್ಲಿ ಒಂದು ವರ್ಷದೊಳಗೆ ತನ್ನ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಂತಾಗಿದೆ. 1998ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ಅಲ್ಪ ಅವಧಿಗೆ ದಿಲ್ಲಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸುಶ್ಮಾ ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ಮೃತಪಟ್ಟರು.  ಮೂರು ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಈ ವರ್ಷದ ಜುಲೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ದೀಕ್ಷಿತ್ ಹಾಗೂ ಸುಶ್ಮಾ ಸ್ವರಾಜ್ ಒಂದು ತಿಂಗಳ ಅಂತರದಲ್ಲಿ ವಿಧಿವಶರಾಗಿದ್ದಾರೆ. 1993ರಿಂದ 96ರ ತನಕ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ…

  • govt, modi

    ಗೋ ಮಾತೆ ರಕ್ಷಿಸಿವ ಪ್ರಯತ್ನ ಮಾಡಿದ ಭಾರತದ ಮೊದಲ ಧೈರ್ಯವಂತ ಪ್ರಧಾನಿ – ನಮೋ- ನಮೋ

    ದೇಶಾದ್ಯಂತ ಗೋ ಹತ್ಯೆ ನಿಷೇಧ, ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ, ಬಲಿಕೊಡಲು ಅಥವಾ ಕೊಲ್ಲಲು ಕೊಡುವಂತಿಲ್ಲ, ಕೇವಲ ರೈತರಿಗಷ್ಟೇ ಮಾರಾಟ ಮಾಡಬಹುದು ಯಾರಿಗೆ ಮಾರಾಟ ಮಾಡಿದೆ ಅನ್ನೋ ದಾಖಲೆ ಹೊಂದಿರಬೇಕು, ಮಾರಾಟ ಮಾಡಿದ ಮತ್ತು ಖರೀದಿ ಮಾಡಿದ ವ್ಯಕ್ತಿಗಳು ರಸೀದಿ ಹೊಂದಿರಬೇಕು.

  • ರಾಜಕೀಯ

    ಚಾಮರಾಜ ಕ್ಷೇತ್ರದಿಂದ ಈ ಬಾರಿ ಹರೀಶ್ ಗೌಡರು!ಇದುವರೆಗೂ ನಡೆದ ಚುನಾವಣೆಯಲ್ಲಿ ಗೆದ್ದವರು,ಸೋತವರ ವಿವರ ಇಲ್ಲಿದೆ ನೋಡಿ…

    ಇತ್ತೀಚೆಗೆ #CHS ಸಮೀಕ್ಷೆ ಹೊರಬಂದಿದ್ದು ಈ ಸಮೀಕ್ಷೆಯಲ್ಲಿ ಮೈಸೂರಿನ #11_ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಾಗಿದೆ.