ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ:- ರಾಮನ ಪೂಜೆ ಎಲ್ಲಾ ಕಡೆ ನಡೆಯುತ್ತದೆ ಅದರಲ್ಲಿ ವಿಶಿಷ್ಟತೆ ಏನೂ ಇಲ್ಲ ಆದರೆ, ತಾಲ್ಲೂಕಿನ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ನಂತರ ಶಿವ ಭಕ್ತನಾದ ರಾವಣನಿಗೂ ಪ್ರಾಧಾನ್ಯತೆ ನೀಡಿ ಪೂಜಿಸುವ ವಿಶಿಷ್ಟ ಪದ್ದತಿ ರೂಢಿಯಲ್ಲಿದೆ.
ವಕ್ಕಲೇರಿ ಗ್ರಾಮದಲ್ಲಿ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವ ಮುಗಿದಿದ್ದು, ಫೆ.7ರ ಮಂಗಳವಾರ ರಾತ್ರಿ 10 ತಲೆಗಳನ್ನೊತ್ತ ರಾವಣನ ಮೂರ್ತಿ ಮತ್ತು ಮೇಲೆ ಮಾರ್ಕಂಡೇಶ್ವರ ಸ್ವಾಮಿಯ ಮೂರ್ತಿಗಳನ್ನಿಟ್ಟು ವೈಭವದಿಂದ ರಾವಣೋತ್ಸವ ನಡೆಸಲಾಯಿತು.
ಅದೇ ರೀತಿ ತಾಲ್ಲೂಕಿನ ಸುಗಟೂರು ಗ್ರಾಮದಲ್ಲೂ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆದ ನಂತರ ವೈಭವದಿಂದ ರಾವಣೋತ್ಸವವನ್ನು ಆಚರಿಸಲಾಗುತ್ತದೆ.
ಶ್ರೀರಾಮ, ಹನುಮ ಈ ನಾಡಿನ ಪ್ರಮುಖ ದೈವವಾಗಿದ್ದು, ಹನುಮನಿಲ್ಲದ ಊರೇ ಇಲ್ಲ ಎಂಬ ಪ್ರತೀತಿಯೂ ಇದೆ. ಆದರೆ ರಾಮನಿಗೆ ವೈರಿಯಾಗಿ ಸೀತಾಮಾತೆಯನ್ನು ಹೊತ್ತೊಯ್ದು ಕಿರುಕುಳ ನೀಡಿ ಕೊನೆಗೆ ರಾಮನಿಂದಲೇ ಹತನಾಗುವ ರಕ್ಕಸ ರಾವಣನಿಗೂ ಪೂಜೆ ನಡೆಯುತ್ತದೆ ಎಂದರೆ ವಿಶಿಷ್ಟವೇ ಅಲ್ಲವೇ?

ಶಿವಭಕ್ತ ರಾವಣನಿಗೂ
ವಿಶೇಷ ಪೂಜೆ
ಇಂತಹದೊAದು ಅಪರೂಪದ, ವೈಭವದ ಪೂಜೆ ಶಿವಭಕ್ತ ರಾವಣನಿಗೂ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ಅನಾದಿ ಕಾಲದಿಂದಲೂ ಜನತೆ ಸಲ್ಲಿಸುತ್ತಾ ಬಂದಿದ್ದಾರೆ.
ಸುಗಟೂರು, ವಕ್ಕಲೇರಿ ಗ್ರಾಮದಲ್ಲಿ ರಾವಣೋತ್ಸವಕ್ಕೆ ವಿಶಿಷ್ಟ ಪ್ರಧಾನ್ಯತೆ ನೀಡಲಾಗುತ್ತದೆ, ಇಡೀ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ಬೃಹತ್ ಪುಷ್ಪ ಪಲ್ಲಕ್ಕಿಯಲ್ಲಿ 10 ತಲೆಗಳನ್ನೊತ್ತ ಬೃಹತ್ ಗಾತ್ರದ ರಾವಣನನ್ನು ಪ್ರತಿಷ್ಟಾಪಿಸಲಾಗುತ್ತದೆ.

ಈ ಬೃಹತ್ ಪುಷ್ಪಪಲ್ಲಕ್ಕಿಯಲ್ಲಿ ಕೆಳಭಾಗದಲ್ಲಿ ರಾವಣ ಮತ್ತು ಮೇಲೆ ಶಿವನನ್ನು ಇಟ್ಟು ಪೂಜಿಸುವ ವೈಭವದ ಉತ್ಸವ ಇಲ್ಲಿ ನಡೆಯುತ್ತಾ ಬಂದಿದೆ.
ಗ್ರಾಮದ ಜನತೆ ಮಾತ್ರ ಮೊದಲು ಮಾರ್ಕಂಡೇಶ್ವರಸ್ವಾಮಿಯ ಭವ್ಯ ರಥೋತ್ಸವ, ಪೂಜಾ ಕಾರ್ಯಗಳನ್ನು ಮುಗಿಸಿದ ನಂತರ ರಥೋತ್ಸವ ಜಾತ್ರೆಯ ಅಂತಿಮ ದಿನ ಶಿವ ಭಕ್ತ ರಾವಣನನ್ನು ಸಹಾ ಅಷ್ಟೇ ಭಕ್ತಿಯಿಂದ ಪೂಜಿಸಿ, ಆರಾಧಿಸುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೇಂದ್ರ ಸಚಿವ ಬಿಜೆಪಿಯ ಹಿರಿಯ ಮುಖಂಡ ಅನಂತಕುಮಾರ್ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಬೆಳಗಿನ ಜಾವ ಮೂರು ಗಂಟೆಗೆ ವಿಧಿವಶವರಾಗಿದ್ದಾರೆ. ಅಗಲಿದ ರಾಜಕೀಯ ನಾಯಕನಿಗೆ ಎಲ್ಲಾ ಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ.ಹಾಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ಎಚ್.ಎನ್. ಅನಂತಕುಮಾರ್ ರವರಿಗೆ ಸಂತಾಪ ಸೂಚಿಸಿದ್ದಾರೆ. ಎಚ್.ಎನ್. ಅನಂತಕುಮಾರ್ ರವರು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೆಲವು ದಿನಗಳಿಂದ ಚಿಕಿತ್ಸೆ ಪೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ, ೫೯ ವರ್ಷದ ಅನಂತಕುಮಾರ್…
ಕಿರಿಕ್ ಪಾರ್ಟಿಯ ನಟಿ ರಶ್ಮಿಕಾ ಮಂದಣ್ಣರ ಹವಾ ಈಗ ಟಾಲಿವುಡ್ ನಲ್ಲಿ ತುಂಬಾ ಜೋರಾಗಿದೆ.ಗೀತಾ ಗೋವಿಂದಂ ಚಿತ್ರದ ಯಶಸ್ವಿ ನಂತರ ಯುವನಟರಿಂದ ಹಿಡಿದು ಸ್ಟಾರ್ ಹೀರೋಗಳ ಸಿನಿಮಾಗಳಿವರೆಗೂ ರಷ್ಮಿಕಾರವರೆ ಬೇಕು ಎನ್ನುವಷ್ಟರ ಮಟ್ಟಿಗೆ ಇವರ ಹವಾ ಕ್ರಿಯೇಟ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಖಂಡಿಸುವ ಬರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಮೋದಿಯವರೇ ನಿಮಗೆ ಸೌಟ್ನಿಂದ ಹೊಡಿಬೇಕಾ? ಅಥವಾ ಗ್ಯಾಸ್ನಿಂದ ಹೊಡಿಬೇಕಾ? ಐದು ವರ್ಷಗಳಲ್ಲಿ ಏನು ಮಾಡಿದ್ದೀರಿ? ಗ್ಯಾಸ್ ಬೆಲೆ ಏರಿಕೆಯಾಯಿತು. ಕೇಂದ್ರ ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪಿಲ್ಲ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರ…
ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾಗ ಪೋಷಕಾಂಶಗಳು ಇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಕಾಳುಗಳನ್ನ ಮೊಳಕೆ ಕಟ್ಟಿ ತಿಂದರೆ ಇನ್ನು ಉತ್ತಮ. ಬನ್ನಿ ಹಾಗಾದರೆ ಮೊಳಕೆ ಕಾಳುಗಳಿಂದ ಏನೆಲ್ಲಾ ಪ್ರಯೋಜನಗಳು ನಮಗೆ ಲಭ್ಯ ಎಂಬುದನ್ನ ತಿಳಿದು ಕೊಳ್ಳೋಣ.
ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಹಾಗೂ ಮಕ್ಕಳು ಭೇಟಿ ನೀಡಿದರು. ಈ ವೇಳೆ ಪ್ರತಾಪ್ ಅವರ ಪತ್ನಿ ಸರಿತಾ ಸ್ಪರ್ಧಿ ಪ್ರಿಯಾಂಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸೋಮವಾರ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಸರಿತಾ ಆಗಮಿಸಿದ್ದರು. ಈ ವೇಳೆ ಸರಿತಾ ಅವರು ಮನೆ ಮಂದಿ ಜೊತೆ ಆತ್ಮೀಯವಾಗಿ ಮಾತನಾಡಿಸಿ ತಾವು ತಂದಿದ್ದ ತಿಂಡಿಯನ್ನು ಪ್ರತಾಪ್ ಅವರಿಗೆ ನೀಡದೇ ವಾಸುಕಿ ಅವರಿಗೆ ಕೊಟ್ಟಿದ್ದಾರೆ. ಸರಿತಾ, ಪ್ರತಾಪ್ ಜೊತೆ ಮಾತನಾಡಿದ ಬಳಿಕ…