ಶ್ರದ್ಧಾಂಜಲಿ

ಖ್ಯಾತ ನಟ ನಂದಮೂರಿ ತಾರಕರತ್ನ ನಿಧನ

95

ಬೆಂಗಳೂರು: ಟಾಲಿವುಡ್​ ಖ್ಯಾತ ನಟ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು(ಫೆ.18) ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ತಾರಕರತ್ನ(39) ಕೊನೆಯುಸಿರೆಳೆದಿದ್ದಾರೆ.  ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದರು. ಆ ವೇಳೆ ತಾರಕರತ್ನಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಶಿಫ್ಟ್​ ಮಾಡಲಾಗಿತ್ತು.  23 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ತಾರಕರತ್ನ ಅವರಿಗೆ, ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಇತ್ತ ತಾರಕರತ್ನ ಶೀಘ್ರ ಗುಣಮುಖರಾಗಿ ವಾಪಸ್‌ ಬರಲಿ ಎಂದು ತೆಲುಗು ದೇಶಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಂದಮೂರಿ ಕುಟುಂಬಸ್ಥರು ಹಾರೈಸಿದ್ದರು. ಆಸ್ಪತ್ರೆಗೆ ಆಂಧ್ರ ಪ್ರದೇಶ ಸಚಿವರು, ಮಾಜಿ ಸಚಿವರು ಸೇರಿದಂತೆ ಹಲವು ರಾಜಕೀಯ ಗಣ್ಯರು ಆಸ್ಪತ್ರೆಗ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯದ ಬಗ್ಗೆ ವೈದ್ಯರ ಜೊತೆ ಚರ್ಚಿಸಿದ್ದರು. ಆದ್ರೆ, ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.

1983ರ ಫೆಬ್ರವರಿ 22ರಂದು ಜನಿಸಿದ್ದ ತೆಲುಗು ನಟ ತಾರಕರತ್ನ, ಒಕಟೋ ನಂಬರ್ ಕುರ್ರಾಡು, ಭದ್ರಾದಿ ರಾಮುಡು, ಯುವರತ್ನ ಸೇರಿದಂತೆ 20 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ನಂದಮೂರಿ ಮೋಹನ್‌ಕೃಷ್ಣ, ನಂದಮೂರಿ ಶಾಂತಿ ಮೋಹನ್ ದಂಪತಿಯ ಪುತ್ರ, ಹೆಸರಾಂತ ನಟ, ಮಾಜಿ ಸಿಎಂ ಎನ್‌ಟಿಆರ್‌ ಮೊಮ್ಮಗ ತಾರಕರತ್ನ ಅವರು 2012ರಲ್ಲಿ ಅಲೇಖ್ಯಾ ರೆಡ್ಡಿ ಎನ್ನುವವರನ್ನು ಮದುವೆಯಾಗಿದ್ದರು.

39 ವರ್ಷ ವಯಸ್ಸಿನ ನಟ 2002 ರ ತೆಲುಗು ಸಿನಿಮಾ ಒಕಾಟೊ ನಂಬರ್ ಕುರ್ರಾಡು ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ತಾರಕ್, ಭದ್ರಿ ರಾಮುಡು, ಮನಮಂತ ಮತ್ತು ರಾಜಾ ಚೆಯ್ಯಿ ವೇಷದಂತಹ ಸಿನಿಮಾಗಳ ಮೂಲಕ ಫೇಮಸ್ ಆದರು. ಅವರು ಇತ್ತೀಚೆಗೆ ಡಿಸ್ನಿ+ ಹಾಟ್‌ಸ್ಟಾರ್‌ನ ತೆಲುಗು ವೆಬ್ ಸಿರೀಸ್ 9 ಅವರ್ಸ್‌ನಲ್ಲಿ ಕೂಡಾ ಅವರು ನಟಿಸಿದ್ದಾರೆ. ಇನ್ನು ಅಮರಾವತಿ ಚಿತ್ರಕ್ಕಾಗಿ ತಾರಕರತ್ನ ಅವರಿಗೆ 2009ರಲ್ಲಿ ಆಂಧ್ರದ ಪ್ರತಿಷ್ಠಿತ ನಂದಿ ಅವಾರ್ಡ್‌ (ಬೆಸ್ಟ್‌ ವಿಲನ್‌) ಪ್ರಶಸ್ತಿ ದೊರೆತಿದೆ.

 

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ನಿಮ್ಮ ರಾಶಿಯಲ್ಲೇನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(11 ಏಪ್ರಿಲ್, 2019) ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ಇಂದು…

  • ಸ್ಪೂರ್ತಿ

    ಫುಟ್ಪಾತ್ ಮೇಲೆ ಭಿಕ್ಷೆ ಬೇಡುತ್ತಿದ್ದ ಹುಡುಗನ ಇವತ್ತಿನ ಸಾಧನೆ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹಿಂದೊಂದು ದಿನ ಊಟ ಇಲ್ಲದೆ, ಮಲಗೋಕೆ ಜಾಗ ಇಲ್ಲದೆ ಚೆನ್ನೈನ ಫುಟ್ಪಾತ್ ಮೇಲೆ ಇದ್ದ ಈ ಹುಡುಗನ ಇವತ್ತಿನ ಸಾಧನೆ ಕೇಳಿದ್ರೆ ನೀವೆಲ್ಲ ಹುಬ್ಬೇರುಸ್ತೀರಾ. ಜೀವನ ಒಂದೇ ರೀತಿಯಲ್ಲಿ ಯಾವತ್ತೂ ಇರೋದಿಲ್ಲ ಅನ್ನೋದಕ್ಕೆ ಈ ಹುಡುಗನೇ ಸ್ಪಷ್ಟ ಉದಾಹರಣ..

  • inspirational

    ಇಲ್ಲೊಬ್ಬ ವಿಚಿತ್ರ ವ್ಯಕ್ತಿ, ಇವನ ದೇಹದಲ್ಲಿ ಯಾವ ಪಾರ್ಟೂ ಇರಬೇಕಾದ ಜಾಗದಲ್ಲಿ ಇಲ್ಲ! ಆದ್ರೂ ಇವನ ಜೀವಕ್ಕೆ ತೊಂದರೆ ಇಲ್ಲ,.!

    ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ದೇಹದ ವಿವಿಧ ಅಂಗಾಂಗಗಳು ವಿರುದ್ಧ ದಿಕ್ಕಿನಲ್ಲಿಇರುವ ವಿಚಾರ ಆತನ ದೇಹ ತಪಾಸಣೆಯಿಂದ ಬಯಲಾಗಿದೆ. ಇಲ್ಲಿನ ಖುಷಿನಗರದ ಜಮಾಲುದ್ದೀನ್‌ ಎಂಬುವವರು ಇತ್ತೀಚೆಗೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿಗೋರಖ್‌ಪುರ ಆಸ್ಪತ್ರೆಗೆ ತೆರಳಿದ್ದರು.  ವೈದ್ಯರು ರೋಗ ತಪಾಸಣೆಗಾಗಿ ಸ್ಕ್ಯಾ‌ನಿಂಗ್‌ ಮಾಡಿದಾಗ, ಅವರ ದೇಹದ ಎಲ್ಲಾ ಅಂಗಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲೇ ಇರಲಿಲ್ಲ. ಬದಲಿಗೆ ದೇಹದ ಮತ್ತೊಂದು ಬದಿಯಲ್ಲಿಇರುವುದು ಕಂಡು ವೈದ್ಯರೇ ಬೆರಗಾಗಿದ್ದಾರೆ. ಕನ್ನಡಿಯಲ್ಲಿ ನೋಡಿದರೆ ಕಾಣುವಂತೆ ಆತನ ದೇಹದ ಅಂಗಾಂಗಗಳು ‘ರಿವರ್ಸ್‌’ ಆಗಿ ಜೋಡಿಸಲ್ಪಟ್ಟಿದ್ದವು. ‘ಸೈಟಸ್‌ ಇನ್‌ವರ್ಸಸ್‌’ ಎಂದು ಕರೆಯಲಾಗುವ ಇದೊಂದು…

  • ರಾಜಕೀಯ

    ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ  ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು 24 ಗಂಟೆಗಳಲ್ಲಿಯೇ ಎರಡನೇ ಪಟ್ಬಿ ಬಿಡುಗಡೆ ಮಾಡಿದೆ. ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್‌, ಬಸವನ ಬಾಗೇವಾಡಿ- ಎಸ್‌.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್‌, ಗುರಮಿಠಕಲ್-‌ ಲಲಿತಾ ಅನಾಪುರ್‌, ಬೀದರ್-‌ ಈಶ್ವರ್‌ ಸಿಂಗ್‌ ಠಾಕೂರ್‌, ಭಾಲ್ಕಿ- ಪ್ರಕಾಶ್‌ ಖಂಡ್ರೆ, ಗಂಗಾವತಿ- ಪರಣ್ಣ ಮುನವಳ್ಳಿ, ಕಲಘಟಗಿ-…

  • ನೀತಿ ಕಥೆ

    ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ…!ತಿಳಿಯಲು ಈ ಲೇಖನ ಓದಿ …

    ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ.