ಸುದ್ದಿ

ಶಾಕಿಂಗ್ ಸುದ್ದಿ..!ಪ್ರೀತಿಸಿದ ಯುವಕನೊಂದಿಗೆ ತನ್ನ ಪತ್ನಿಯನ್ನು ಮದ್ವೆ ಮಾಡಿದ್ದಲ್ಲದೇ ತನ್ನ ಮಗುವನ್ನು ಧಾರೆ ಎರೆದ ಪತಿಮಹಾರಾಯ..!

237

ಪ್ರೀತಿ ಅನ್ನೋದು ನಿಸ್ವಾರ್ಥವಾಗಿರಬೇಕು. ಈ ವಾಕ್ಯಕ್ಕೆ ತಕ್ಕಂತಹ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಲಿ ಅಂತಾ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಇದರ ಜೊತೆಗೆ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಮಗುವನ್ನು ಉಡುಗೊರೆಯಾಗಿ ನೀಡಿದ್ದಾನೆ.

ಬಿಹಾರದ ಭಗಲ್ಪುರ ಜಿಲ್ಲೆಯ ನಿವಾಸಿ ನಾಲ್ಕು ವರ್ಷಗಳ ಹಿಂದೆ, ಜಾರ್ಖಂಡನ ಗೊಡ್ಡಾ ಜಿಲ್ಲೆಯ ಗ್ರಾಮವೊಂದರ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಒಂದು ಮಗುವಿತ್ತು. ಆದ್ರೆ ಕೆಲ ದಿನಗಳ ಹಿಂದೆ ಪ್ರಕರಣವೊಂದರಲ್ಲಿ ಸಿಲುಕಿ ಪತಿ ಜೈಲಿಗೆ ಹೋಗಿದ್ದನು.

ಈ ಸಂದರ್ಭದಲ್ಲಿ ಆತನ ಪತ್ನಿ ಮತ್ತು ಮನೆ ಮಾಲೀಕನ ಮಗ ಮನು ಕುಮಾರ್ ಸಿಂಗ್ ಜೊತೆ ಸ್ನೇಹ ಬೆಳೆದು, ಪ್ರೀತಿ ಹುಟ್ಟಿತ್ತು. ಬಳಿಕ ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧರಿಸಿದ್ರು.

ಆದ್ರೆ ಜೈಲಿನಲ್ಲಿದ್ದ ಪತಿ ಬಿಡುಗಡೆಗೊಂಡು ಮನೆಗೆ ಹಿಂದಿರುಗಿದಾಗ, ಪತ್ನಿ ಹಾಗು ಮಾಲೀಕನ ಮಗ ಮನು ಕುಮಾರ್ ಜೊತೆಗಿನ ಪ್ರೀತಿಯ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದಾನೆ. ಆದ್ರೂ ಪತ್ನಿಯನ್ನು ತನ್ನ ಜೊತೆಗಿರಲು ಮನವೊಲಿಸಲು ಪ್ರಯತ್ನಿಸಿದ್ದಾನೆ.

ಆದ್ರೆ ಆಕೆ ಒಪ್ಪಲಿಲ್ಲ. ಕೊನೆಗೆ ಪತಿ ಇಬ್ಬರು ಕುಟುಂಬದ ಒಪ್ಪಿಗೆಯೊಂದಿಗೆ ಸ್ಥಳೀಯ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮನು ಕುಮಾರ್ ಸಿಂಗ್ ಜೊತೆ ತನ್ನ ಪತ್ನಿಯನ್ನು ಧಾರೆ ಎರೆದು ಕೊಟ್ಟಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ