ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಸಿಎಂ ಕುಮಾರಸ್ವಾಮಿ ಕಲಾಪದಲ್ಲಿ ಮಾಡಿದ ಭಾಷಣದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ. ಆಕೆ ಪ್ರತಿ ಹಂತದಲ್ಲೂ ನನ್ನ ಜತೆಯಲ್ಲಿದ್ದಾಳೆ ಎಂದು ಹೇಳಿದರು. ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಉಸ್ತುವಾರಿ ಸಿಎಂ ಸದನದಲ್ಲಿ ಕೊಂಡಾಡಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.

ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆಗೆ ಉತ್ತರಿಸುವ ವೇಳೆ, ನಾನು ಉದ್ದೇಶ ಪೂರ್ವಕವಾಗಿ ರಾಜಕೀಯಕ್ಕೆ ಬಂದವನಲ್ಲ. ರಾಜಕೀಯದಲ್ಲಿ ಇರುವವರನ್ನು ನಾನು ಮದುವೆಯಾಗುವುದಿಲ್ಲ ಎಂದಿದ್ದಳು ನನ್ನ ಪತ್ನಿ. ಆದರೆ ಈಗ ಅವರೂ ನನ್ನ ಜತೆಯಲ್ಲಿದ್ದಾರೆ. ನನ್ನ ಎಲ್ಲ ತಪ್ಪುಗಳನ್ನು ಅವಳು ಕ್ಷಮಿಸಿದ್ದಾಳೆ ಎಂದು ಪತ್ನಿಯನ್ನು ಹೊಗಳಿದರು.
ಇಂದಿನ ಕಲಾಪ ಇತಿಹಾಸದಲ್ಲಿ ದಾಖಲಾಗುವಂತಹದ್ದಾಗಿದೆ. ನಾನು ಸಂತೋಷವಾಗಿ ಮುಖ್ಯಮಂತ್ರಿ ಹುದ್ದೆ ತೊರೆಯುಯಲು ನಾನು ಸಿದ್ಧವಾಗಿದ್ದೇನೆ ಎಂದರು.

ಸಾಮಾಜಿಕ ತಾಣಗಳ ಮೇಲೆ ಕೆಂಡಾಮಂಡಲ
ಸಮಾಜಿಕ ತಾಣಗಳೇ ಇಂದು ಎಲ್ಲವನ್ನೂ ಹಾಳು ಮಾಡುತ್ತಿದೆ. ಯುವಕರು ಕುಲಗೆಡುತ್ತಿದ್ದಾರೆ. ದೇಶದ ಸಂಸ್ಕೃತಿಯನ್ನು ಹಾಳಳು ಮಾಡಲು ಸೋಷಿಯಲ್ ಮೀಡಿಯಾಗಳು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಕಲಾಪ ಆರಂಭವಾದರೂ ನಾನು ಹೋಟೆಲ್ ನಲ್ಲಿ ಕುಳಿತು ಆರಾಮವಾಗಿ ಕುಳಿತಿದ್ದೇನೆ ಎಂದು ಹೇಳಲಾಗುತ್ತಿತ್ತು. ಅಲ್ಲಿ ನಾನು ಸುಮ್ಮನೆ ಕುಳಿತಿಲ್ಲ. ನಾನು ಸಿದ್ಧತೆ ನಡೆಸುತ್ತಿದ್ದೆ. ಜನರ ತೆರಿಗೆ ಹಣವನ್ನು ಹೋಟೆಲ್‌ನಲ್ಲಿ ಕುಳಿತು ಪೋಲು ಮಾಡಲಾಗುತ್ತಿದೆ ಎಂದೆಲ್ಲ ಹೇಳಲಾಗಿದೆ. ಈ ಎಲ್ಲ ವಿಚಾರಗಳು ಸಾಕಷ್ಟು ಬೇಸರ ಉಂಟು ಮಾಡಿದೆ.

ರಾಜ್ಯ ರಾಜಕಾರಣ ಟ್ರೋಲಿಗರಿಗೆ ಬಾಡೂಟ…. ಏನೆಲ್ಲ ಮಾಡಿದಾರೆ ನೋಡಿ!
ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿಂದಲೂ ಅಪಪ್ರಾಚಾರ ಮಾಡಲಾಗುತ್ತುದೆ. ಸೋಷಿಯಲ್ ಮೀಡಿಯಾದಲ್ಲಿ ಮನಬಂದಂತೆ ಪೋಸ್ಟ್ ಹಾಕಲಾಗಿದೆ. ರೈತರ ವಿಚಾರದಲ್ಲಿ ಸುಳ್ಳು ಹೇಳಲು ನಾನು ಹೋಗುವುದಿಲ್ಲ. ಈ ಹಿಂದಿನ ಬಿಜೆಪಿ ಜತೆಗಿನ ಮೈತ್ರಿ ಸರಕಾರದ ಪತನದ ಬಳಿಕ ನನ್ನನ್ನು ವಚನ ಭ್ರಷ್ಟ ಎನ್ನಲಾಗುತ್ತಿದೆ. ವಿಶ್ವಾಸಮತ ಯಾಚಿಸದೇ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದರು. ನಾನು ಅಧಿಕಾರ ಅವರಿಗೆ ಹಸ್ತಾಂತರಿಸಿದ್ದೆ. ನನ್ನಿಂದ ಯಾವುದೇ ತಪ್ಪಾಗಿಲ್ಲ. ಪದೇ ಪದೇ ನನ್ನನ್ನು ವಚನ ಭ್ರಷ್ಟ ಅನ್ನಬೇಡಿ. ಈ ಬಗ್ಗೆ ನಿಮ್ಮ ಕಾರ್ಯಕರ್ತರಿಗೆ ತಿಳಿಸಿ ಹೇಳುವಂತೆ ಹೇಳಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ಹಲವಾರು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದು, ಅವರ ಬೆಂಬಲಕ್ಕೆ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಮಂದಿ ನಿಂತಿದ್ದಾರೆ. ಅದರಲ್ಲೂ ದರ್ಶನ್ ಹಾಗೂ ಯಶ್ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದು, ಇದು ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಗೆಲುವಿಗೆ ಇದು ಅಡ್ಡಗಾಲಾಗಬಹುದೆಂಬ ಆತಂಕ…
ರೇಶನ್ ಕಾರ್ಡ್ ಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರು ಹಾಗೂ ಈಗಾಗಲೇ ರೇಶನ್ ಕಾರ್ಡ್ ಹೊಂದಿದವರು ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರ ಹಾಗೂ ಪಡಿತರ ಚೀಟಿ ಹೊಂದಿದವರ ಹೆಸರು ತೆಗೆಯಲಾಗಿದೆಯೇ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ರೇಶನ್ ಕಾರ್ಡ್ ಹೊಂದಿದವರು ಈಗ ಬೇರೆ ಬೇರೆ ನಗರಗಳಿಗೆ ವಲಸೆ ಹೊಗಿರುತ್ತಾರೆ. ಹಾಗೂ ಕೆಲಸ ಅರಸಿ ಬೇರೆ ನಗರ,…
ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಹೆಚ್ ಎನ್ ಅನಂತ್ ಕುಮಾರ್ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರು ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅನಂತ್ ಕುಮಾರ್ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು…
‘ಕುಣಿಯಕ್ಕೆ ಬಾರ್ದೊರು, ನೆಲ ಡೊಂಕು ಅಂದ್ರಂತೆ’ ಅನ್ನೋ ಗಾದೆ ಮಾತಿದೆ. ಇದು ನಿಜಾ ಕೂಡ.ಯಾಕಂದ್ರೆ ಜೀವನದಲ್ಲಿ ಏನು ಮಾಡಲಿಕ್ಕೆ ಆದೋರು, ಈ ರೀತಿ ಕುಂಟು ನೆಪಗಳನ್ನು ಸಾಮಾನ್ಯ.
ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆದರೆ ಮನೆಯ ಸದಸ್ಯರು ತಮಾಷೆಗೆ ಭೂಮಿಯನ್ನು ಎತ್ತಿಕೊಂಡು ಹೋಗಿ ಬಿಗ್ಬಾಸ್ ಗೇಟ್ ಬಳಿ ಬಿಟ್ಟಿದ್ದಾರೆ. ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಮನೆಯ ಸದಸ್ಯರು ಎದ್ದೇಳುವ ಮೊದಲೇ ಗಾಯಕ ರಘು ದೀಕ್ಷಿತ್ ಬಿಗ್ಮನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ರಘು ದೀಕ್ಷಿತ್ ಹಾಡುವ ಹೇಳುವ ಮೂಲಕ ಸ್ಪರ್ಧಿಗಳನ್ನು ಎದ್ದೇಳಿಸಿದ್ದಾರೆ. ಸ್ಪರ್ಧಿಗಳು ರಘು ದೀಕ್ಷಿತ್ ನೋಡಿ ಅಚ್ಚರಿ ಪಟ್ಟಿದ್ದು, ಅವರು ಹಾಡಿದ ಹಾಡಿಗೆ ಹೆಜ್ಜೆ…