ಜ್ಯೋತಿಷ್ಯ

ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆ- ಕೇರಳ ಫಸ್ಟ್, ಉತ್ತರ ಪ್ರದೇಶ ಲಾಸ್ಟ್ – ಕರ್ನಾಟಕ 8ನೇ ಸ್ಥಾನದಲ್ಲಿ……

29

ದೇಶದಲ್ಲಿ ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ ಕರ್ನಾಟಕ 8 ನೇ ಸ್ಥಾನದಲ್ಲಿದೆ.ಮಂಗಳವಾರ ನೀತಿ ಆಯೋಗವು ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳ ಟಾಪರ್ ಆದರೆ ಕರ್ನಾಟಕ 8ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಸಿಕ್ಕಿದೆ.

23 ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಆಧಾರದ ಮೇಲೆ ತಯಾರು ಮಾಡಿದ್ದ ‘ಆರೋಗ್ಯಕರ ರಾಜ್ಯಗಳು ಮತ್ತು ಪ್ರಗತಿಶೀಲ ಭಾರತ’ “Healthy States, Progressive India” ಎಂಬ ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಬಿಡುಗಡೆ ಮಾಡಿದರು. ಈ ವರದಿಯ ಪ್ರಕಾರ ಆರೋಗ್ಯ ಸೂಚ್ಯಂಕದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶ ತೀರಾ ಹಿಂದುಳಿದಿದೆ ಎಂದು ಹೇಳಿದೆ.

ಕೇರಳದ ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಉತ್ತಮ ಆರೋಗ್ಯ ಮಟ್ಟವನ್ನು ಕಾಪಾಡಿಕೊಂಡು ಬಂದಿವೆ. ಇವುಗಳನ್ನು ಬಿಟ್ಟರೆ ಹರಿಯಾಣ, ರಾಜಸ್ಥಾನ ಮತ್ತು ಜಾರ್ಖಂಡ್ ಆರೋಗ್ಯ ಗುಣಮಟ್ಟದಲ್ಲಿ ಸುಧಾರಣೆ ಆಗಿದೆ. ಆದರೆ ಛತ್ತೀಸ್‍ಗಢ ಅತಿ ಕಡಿಮೆ ಗುಣಮಟ್ಟ ಸಾಧಿಸಿರುವ ರಾಜ್ಯವಾಗಿದೆ.

2018ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಮೊದಲ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2014-15 ರಿಂದ 2015-16ರ ಅವಧಿಯ ನಿರ್ವಹಣೆಯನ್ನು ಪರಿಗಣಿಸಲಾಗಿತ್ತು. ಎರಡನೇ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2015-16 ರಿಂದ 2017-18ರ ಅವಧಿಯ ನಿರ್ವಹಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಮೊದಲ ಹತ್ತು ಆರೋಗ್ಯಕರ ರಾಜ್ಯಗಳು

  1. ಕೇರಳ
  2. ಆಂಧ್ರ ಪ್ರದೇಶ
  3. ಮಹಾರಾಷ್ಟ್ರ
  4. ಗುಜರಾತ್
  5. ಪಂಜಾಬ್
  6. ಹಿಮಾಚಲ ಪ್ರದೇಶ
  7. ಜಮ್ಮು -ಕಾಶ್ಮೀರ
  8. ಕರ್ನಾಟಕ
  9. ತಮಿಳುನಾಡು
  10. ತೆಲಂಗಾಣ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಜನರ ಮನ ಗೆದ್ದಿರುವ ಸರಿಗಪಮ ಲಕ್ಷ್ಮಿ ರಾಮಪ್ಪರವರ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸತ್ಯ ಏನು ಗೊತ್ತಾ..?

    ಬಡತನದಲ್ಲಿ ಅರಳಿದ ಪ್ರತಿಭೆಗಳು ನಮ್ಮ ರಾಜ್ಯದಲ್ಲಿ ಹಾಗು ದೇಶದಲ್ಲಿ ತುಂಬಾನೇ ಜನ ಇದ್ದಾರೆ ಅವರಲ್ಲಿ ಈ ಲಕ್ಷಿ ಕೂಡ ಒಬ್ಬರು ಅನ್ನಬಹುದು. ನಮ್ಮ ನೆಲದ ಸೊಗಡು ಅಥವಾ ನಮ್ಮ ನೆಲದ ಸಂಸ್ಕೃತಿಯ ಮೂಲ ಅಂದರೆ ಅದುವೇ ಜಾನಪದ ಎಂಬುದಾಗಿ ಹೇಳಲಾಗುತ್ತದೆ. ಅಂತಹ ಜಾನಪದ ಸೊಗಡು ಹೆಚ್ಚಿನದಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಗು ಹಳ್ಳಿಗಳಲ್ಲಿ ಕಾಣಬಹುದು.

  • ಸುದ್ದಿ

    ವಾಸನೆ ಗ್ರಹಿಸುತ್ತಿದ್ದ ಕುದುರೆ ಎಚ್ಚೆತ್ತ ಮಹಿಳೆ ವೈದ್ಯರ ಬಳಿ ತೆರಳಿದಾಗ ಕಾದಿತ್ತು ಶಾಕ್​.

    ತನಗೆ ಮೆದುಳಿನ ಕ್ಯಾನ್ಸರ್ ಗಡ್ದೆ ಇದೆ ಎಂಬುದನ್ನು ಅರಿಯದ ಮಹಿಳೆಯೊಬ್ಬಳಿಗೆ ಸಾಕಿದ ಕುದುರೆಯೇ ನೆರವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ತನ್ನ ಮಾಲಕಿಯ ಕ್ಯಾನ್ಸರ್​ ವಾಸನೆಯನ್ನು ಮೂಗಿನಿಂದಲೇ ಕಂಡುಹಿಡಿದು ಅವಳನ್ನು ಚಿಕಿತ್ಸೆಗೆ ಪ್ರೇರೇಪಿಸಿದ ಮನಕಲಕುವ ಸ್ಟೋರಿ ಇದು. ಇಂಗ್ಲೆಂಡ್​ ಲ್ಯಾಂಚ್​ಶೈರ್​ನ ಬ್ಲ್ಯಾಕ್​ಬರ್ನ್​ ಮೂಲದವರಾದ ಕೆಲ್ಲಿ ಅನ್ನಾ ಅಲೆಕ್ಸಾಂಡರ್​(43) ತನ್ನ ಕುದುರೆ ಅಲಿಯಾನ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದ್ದಕ್ಕಿಂದಂತೆ ರೋಗದಿಂದ ಬಳಲು ಆರಂಭಿಸಿದ ಬಳಿಕ ತನ್ನ ಅಲಿಯಾನ ಕುದುರೆ ಆಕೆಯ ತಲೆಯ ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು ಎಂದು…

  • ಜ್ಯೋತಿಷ್ಯ

    ಪ್ರೇಮಿಗಳ ದಿನದಂದು ಈ ರಾಶಿಗಳ ವ್ಯಕ್ತಿಗಳಿಗೆ ಸಿಗಲಿದೆ ಪ್ರೀತಿ..!

    ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೀತಿಯಲ್ಲಿ ಬಿದ್ದವರು ಪ್ರೇಮಿಗಳ ದಿನ ಆಚರಣೆಗೆ ತಯಾರಿ ನಡೆಸುತ್ತಿದ್ದರೆ ಇನ್ನು ಕೆಲವರು ಪ್ರೇಮ ಪರೀಕ್ಷೆಗೆ ಸಿದ್ಧವಾಗ್ತಿದ್ದಾರೆ. ತಮ್ಮ ಹೃದಯ ಕದ್ದವರ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ನಿಜವಾದ ಪ್ರೀತಿ ಸಿಗಬೇಕೆಂದ್ರೆ ಅದೃಷ್ಟ ಕೂಡ ಚೆನ್ನಾಗಿರಬೇಕು. ಈ ಬಾರಿ ಫೆಬ್ರವರಿ 14ರಂದು ಮೂರು ರಾಶಿಯವರ ಅದೃಷ್ಟ ಬದಲಾಗಲಿದೆ. ಅವ್ರಿಗೆ ನಿಜವಾದ ಪ್ರೀತಿ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಪ್ರೇಮಿಗಳ ದಿನ ವೃಷಭ ರಾಶಿಯವರಿಗೆ ಖುಷಿ ತರಲಿದೆಯಂತೆ. ವೃಷಭ ರಾಶಿಯವರು…

  • ಆರೋಗ್ಯ

    ‘ಮುಟ್ಟಿದರೆ ಮುನಿ’ ಗಿಡ ಈ ಔಷಧೀಯ ಗುಣಗಳನ್ನು ಹೊಂದಿದೆ!

    ನಾವು ಸಣ್ಣವರಿದ್ದಾಗ ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಮುಟ್ಟಿದರೆ ಮುನಿ ಗಿಡಗಳನ್ನು ಮುಟ್ಟಿ,ಮುಟ್ಟಿ ಅದು ಮುದುರಿಕೊಳ್ಳುವುದನ್ನು ನೋಡಿ ಭಯವೂ ಆಗ್ತಾಯಿತ್ತು, ಮತ್ತೆ ತುಂಬಾ ಮಜವು ಸಿಗ್ತಾ ಇತ್ತು. ಆ ಗಿಡದ ಬಗ್ಗೆ ಅಸ್ಟು ಬಿಟ್ಟರೆ ಬೇರೆ ನಮ್ಗೆ ಗೊತ್ತಿರಲಿಲ್ಲ.

  • Uncategorized

    ಮಾಲೂರಿನ ಯಶವಂತಪುರ ರಾಜ್ಯದ ಮೊದಲ ಡಿಜಿಟಲ್ ಹಳ್ಳಿ

    ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.