News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಜ್ಯೋತಿಷ್ಯ

ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

277

ಇಂದು ಮಂಗಳವಾರ, 20/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ನಿಮ್ಮ ಮನಸ್ಸಿಗೆ ಒಪ್ಪದ ಕೆಲಸಗಳ ಬಗ್ಗೆ ಚಿಂತಿಸುವುದು ತರವಲ್ಲ ಮತ್ತು ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸದಿರಿ. ನೆರೆಹೊರೆಯವರಲ್ಲಿ ನಿಮ್ಮ ಬಗೆಗಿನ ಗೌರವಾದರಗಳಿಗೆ ಹೆಚ್ಚಿನ ಪ್ರಾಧಾನ್ಯ ದೊರೆಯುವುದು. ಪರರಿಗೆ ಉಪಕಾರ ಮಾಡುವ ಬುದ್ಧಿಯು ನಿಮ್ಮಲ್ಲಿ ಸದಾ ಜಾಗೃತವಾಗಿರುವುದು. ಇದಕ್ಕೆ ಪೂರಕವಾಗಿ ಧನಕಾರಕ ಗುರುವು ನಿಮ್ಮ ಸಹಾಯಕ್ಕೆ ಇರುವರು.

ವೃಷಭ:-

ಸುಸ್ತು, ಮೈಕೈನೋವು, ಏನೋ ಚಿಕ್ಕದು ಎಂದು ಅಲಕ್ಷಿಸಬೇಡಿ. ಹಾಗಂತ ನೀವೇ ಸ್ವಯಂ ವೈದ್ಯಕೀಯವನ್ನು ಮಾಡಿಕೊಳ್ಳದೆ ಸೂಕ್ತ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳಿ. ನೀವು ನಿಮ್ಮ ಆತ್ಮ ಸಂತೋಷದಿಂದ ಮಾಡಿದ ಕಾಯಕಗಳು ಶುಭಫಲವನ್ನುಂಟು ಮಾಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಿರೀಕ್ಷಿತ ಮೂಲದಿಂದ ಧನಾದಾಯ. ತಂದೆಯಿಂದ ನಿಮಗೆ ನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಒಡಹುಟ್ಟಿದವರು ಹಾಗೂ ಬಂಧುಗಳ ನಡುವೆ ಸ್ವಲ್ಪ ಮುಸುಕಿನ ಗುದ್ದಾಟ. ಪಿತ್ರಾಜಿತ ಆಸ್ತಿಗಳು ಒದಗಿಬರುತ್ತವೆ. ಈ ರಾಶಿಯ ಮಕ್ಕಳ ಅಭಿವೃದ್ಧಿ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಸಿದ್ಧ ಉಡುಪು ತಯಾರಿಸುವವರಿಗೆ ವ್ಯಾಪಾರ ವೃದ್ಧಿ.

ಮಿಥುನ:

ಈ ವಾರ ಸಜ್ಜನರ ಸಹವಾಸ ದೊರೆಯುತ್ತದೆ. ನಿಮ್ಮ ಮನಸ್ಥಿತಿ ಸಾಕಷ್ಟು ಉಲ್ಲಾಸಿತವಾಗಿರುತ್ತದೆ. ಮೇಲಧಿಕಾರಿಗಳಿಂದ ನಿಮ್ಮೆ ಕೆಲಸಕ್ಕೆ ಹೊಗಳಿಕೆ ಸಿಗಲಿದೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಧನಾತ್ಮಕ ಚಿಂತನೆ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ. ಶತ್ರುಗಳು ನಿಮ್ಮನ್ನು ಹೊಗಳಲಿದ್ದಾರೆ. ಎಚ್ಚರಿಕೆವಹಿಸುವುದು ಒಳಿತು. ಮ್ಮ ಮೇಲೆ ಇಟ್ಟ ಭರವಸೆಗೆ ಧಕ್ಕೆ ಉಂಟಾಗುವುದು. ಹಾಗಾಗಿ ಆದಷ್ಟು ಸರಿಯಾದ ಮತ್ತು ದೃಢ ನಿರ್ಧಾರ ತಳೆಯುವತ್ತ ಚಿಂತಿಸುವುದು ಒಳ್ಳೆಯದು.

ಕಟಕ :-

ಲಕ್ಷ್ಮೀನಾರಸಿಂಹ ದೇವರನ್ನು ಸ್ಮರಿಸಿ. ಸಾಧ್ಯವಾದರೆ ಲಕ್ಷ್ಮೀನಾರಸಿಂಹ ದೇವರ ದೇವಾಲಯಕ್ಕೆ ಭೇಟಿ ನೀಡಿ. ಸಂಜೆಯ ವೇಳೆಗೆ ನಿಮಗೆ ಬರಬೇಕಾಗಿದ್ದ ಹಣವು ಬರುವ ಸಾಧ್ಯತೆ ಇರುತ್ತದೆ. ಉನ್ನತ ವಿದ್ಯೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ. ಅವರ ವಿದ್ಯೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ನೌಕರಿ ದೊರೆಯಲಿದೆ. ಸಂಸಾರದಲ್ಲಿ ಸುಖಮಯ ವಾತಾವರಣ ಮೂಡಿ ಬರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಜನಗಳೊಡನೆ ಹೆಚ್ಚಾಗಿ ಬೆರೆತರೆ ಗೌರವ ಹೆಚ್ಚುತ್ತದೆ. ನೊರೆಹೊರೆಯವರ ಜೊತೆಗೆ ನಿಷ್ಠುರತೆ ಬೇಡ.

 ಸಿಂಹ:

ನೀವು ಆಲೋಚಿಸಿದ ಕಾರ್ಯಗಳಲ್ಲಿ ಜಯ ಲಭಿಸಲಿದೆ. ಮುಂದಿನ ಯೋಜನೆಗಳಲ್ಲಿ ಕ್ರಿಯಾಶೀಲರಾಗಲು ಸಹಕಾರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಡನೆ ನಿಷ್ಠೂರತೆ ಬೇಡ. ಈ ರಾಶಿಯ ಹಲವರಿಗೆ ನಾಯಕತ್ವದ ಗುಣ ಒಲಿದು ಜನಗಳ ನಡುವೆ ಗುರುತಿಸಲ್ಪಡುತ್ತಾರೆ. ಕಣ್ಣಲ್ಲಿ ನೋವು ಅಥವಾ ತಲೆನೋವು ಕಾಡಬಹುದು. ಪ್ರೀತಿ ದೇವರ ಪೂಜೆಗೆ ಪರ್ಯಾಯವಾಗಿದೆ; ಇದು ಅತ್ಯಂತ ಆಧ್ಯಾತ್ಮಿಕವೂ ಹಾಗೂ ಧಾರ್ಮಿಕವೂ ಆಗಿದೆ. ಸಮಸ್ಯೆಗಳ ಬಗ್ಗೆಯೂ ಅಮೂಲಾಗ್ರವಾಗಿ ಚಿಂತನೆಯನ್ನು ಮಾಡುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ನಿಮಗೆ ಅಷ್ಟೇನೂ ಉತ್ತಮವಲ್ಲ.  ಮಡದಿ ಮಕ್ಕಳ ಮೇಲೆ ವಿನಾಕಾರಣ ಕೋಪಗೊಳ್ಳದಿರಿ.

ಕನ್ಯಾ :-

ಧೀರ್ಘಕಾಲೀನ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು ಅವುಗಳು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಹಣಕಾಸಿನಲ್ಲಿ ಸುಧಾರಣೆ ನೀವು ಅಗತ್ಯ ವಸ್ತುಗಳನ್ನು ಖರೀದಿಸುವುದನ್ನು ಅನುಕೂಲಕರವಾಗಿಸುತ್ತದೆ. ಮನೆಯ ಸುತ್ತ ಸಣ್ಣ ಬದಲಾವಣೆಗಳು ಅದರ ನೋಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಧನದ ಒಳಹರಿವು ಹೆಚ್ಚಲಿದೆ. ಈ ವಾರ ಚುರುಕಾಗಿ ಕೆಲಸ ಮಾಡುವಿರಿ. ಈ ರಾಶಿಯ ಸ್ತ್ರೀಯರು ತಾಳ್ಮೆಯಿಂದ ಇರುವುದು ಉತ್ತಮ. ಇದರಿಂದ ನಿಮಗೆ ಬರಬೇಕಾಗಿದ್ದ ಆದಾಯ ಬರಲಿದೆ.

ತುಲಾ:

ಮಹತ್ತರ ಕೆಲಸಗಳ ಸಾಧ್ಯಸಾಧ್ಯತೆಯ ಬಗ್ಗೆ ಇತರರೊಡನೆ ಚರ್ಚಿಸದಿರಿ. ಬಿಸಿನೆಸ್‌ ಎಂದು ದಿನದ ಬಹುಪಾಲು ಮನೆಯ ಹೊರಗಡೆ ಸುತ್ತಾಡದಿರಿ. ಮನೆ ಮಂದಿಯ ಇಷ್ಟಾನಿಷ್ಟಗಳ ಬಗ್ಗೆ ಗಮನ ಕೊಡಿ. ಅದರಲ್ಲೂ ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಿ. ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು –ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ಸಂಬಂಧಿಗಳು ನಿಮಗೆ ಸಹಾಯ ಹಸ್ತ ನೀಡಲು ಒಪ್ಪಿಕೊಳ್ಳುತ್ತಾರೆ.

ವೃಶ್ಚಿಕ :-

 

ಶ್ರಮಪಟ್ಟು ಕೃಷಿ ಮಾಡುವಿರಿ. ಕುಟುಂಬದ ಹಿರಿಯರ ಸಂಪರ್ಕ ಸಾಧಿಸಿ ಎಲ್ಲರನ್ನೂ ಒಟ್ಟು ಮಾಡಿ ಸೈ ಎನ್ನಿಸಿಕೊಳ್ಳುವಿರಿ. ಸ್ವಲ್ಪ ಪರಾಕ್ರಮ ಪ್ರದರ್ಶಿಸಿ ನಿಮ್ಮವರ ಸಹಾಯಕ್ಕೆ ಹೋಗುವಿರಿ. ಆರ್ಥಿಕ ಸ್ಥಿತಿ ಭದ್ರಗೊಳಿಸಿಕೊಳ್ಳಲು ಒತ್ತು. ನಿಮ್ಮ ಮಾತಿನಿಂದ ಎಲ್ಲರನ್ನೂ ಗೆಲ್ಲುತ್ತೀರಿ. ಆದರೆ, ಅತಿಮಾತು ಸಮಸ್ಯೆಯನ್ನು ತರಬಹುದು. ನಿಮ್ಮ ಪ್ರೀತಿಪಾತ್ರರೊಡನೆ ಪ್ರಯಾಣಕ್ಕೆ ಹೋಗುವ ಮೂಲಕ ನಿಮ್ಮ ಅಮೂಲ್ಯ ಕ್ಷಣಗಳನ್ನು ಪುನಃ ಜೀವಿಸಿ. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತವೆ ಮತ್ತು ಒಳ್ಳೆಯ ಆದಾಯದ ಭರವಸೆ ಕಾಣಿಸುತ್ತದೆ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ.  ವಿವಿಧ ಮೂಲಗಳಿಂದ ಹಣ ಬರುವುದು.  ನಿಮ್ಮ ಕುಲದೇವರನ್ನು ಪ್ರಾರ್ಥಿಸುವುದು ಒಳ್ಳೆಯದು.

ಧನಸ್ಸು:

ನಿತ್ಯದ ಪಡಿಪಾಟಲುಗಳು ಇದ್ದದ್ದೇ. ಆದರೆ ಅವುಗಳ ಮಧ್ಯೆಯೇ ಜೀವಿಸಿ ಅವುಗಳನ್ನು ಮೆಟ್ಟಿ ನಿಲ್ಲುವುದೇ ಜೀವನದ ಆಟ. ನಿಮ್ಮ ಈ ಪ್ರಗತಿಗೆ ಗುರು ಹಿರಿಯರ ಆಶೀರ್ವಾದವೇ ಕಾರಣ. ಅದನ್ನು ನೀವು ಮರೆಯದೆ ಗುರು-ಹಿರಿಯರನ್ನು ನೆನೆಪಿಸಿಕೊಳ್ಳಿ. ನೀವು ಯಾವುದೇ ಹೊಸ ಯೋಜನೆಯನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಆಲೋಚಿಸಿ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಮತ್ತೊಂದು ಗಳಿಕೆಯತ್ತ ಆಲೋಚನೆ ಮಾಡುತ್ತಾ ಅಲ್ಪಕಾಲದ ಸಂಪಾದನೆಗೆ ತೊಡಗುವಿರಿ. ಅಗತ್ಯ ವಸ್ತುಗಳ ಖರೀದಿ.

ಮಕರ :-

ಯಾವುದೇ ಭಯ ಹಿಂಜರಿಕೆಗಳು ನಿಮ್ಮನ್ನು ಕಾಡುವವು. ‘ಚಿಂತ್ಯಾಕ ಮಾಡುತೀ ಚಿನ್ಮಯನಿದ್ದಾನೆ’ ಎನ್ನುವ ಹಾಗೆ ಭಗವಂತನು ನಿಮ್ಮ ಇಷ್ಟಾನಿಷ್ಟಗಳನ್ನು ಗಮನಿಸುತ್ತಿರುವನು. ಸೂಕ್ತ ಸಮಯದಲ್ಲಿ ನಿಮಗೆ ಸಹಾಯ ನೀಡುವನು. ಮಾನಸಿಕ ಕಿರಿಕಿರಿ ಆದರೂ ಮುಂದೆ ಉದ್ಯೋಗದಲ್ಲಿ ನೆಮ್ಮದಿ ದೊರೆಯವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವರು. ದೇವರ ಕೃಪೆಯಿಂದ ನಿಮ್ಮ ಕಾರ್ಯಗಳು ಸುಗಮವಾಗುತ್ತವೆ. ಈ ವಾರ ಹಣದ ಕೊರತೆ ಅಷ್ಟಾಗಿ ಬಾಧಿಸುವುದಿಲ್ಲ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹಿರಿಯರ ಸಹಾಯದಿಂದ ಅಧಿಕಾರದಲ್ಲಿ ಅಭಿವೃದ್ಧಿ. ಶಿಕ್ಷಕರಿಗೆ ಗೌರವ ದೊರೆಯುತ್ತದೆ.

ಕುಂಭ:-

ವ್ಯಾಪಾರದಲ್ಲಿ ಎಂದಿನಂತೆ ಲಾಭ ಬರುತ್ತವೆ. ಹಿರಿಯರಿಗೆ ನವಚೈತನ್ಯ ಬಂದು ಚುರುಕಾಗಿ ಕೆಲಸದಲ್ಲಿ ತೊಡಗುವರು. ಸಾಲ ತೆಗೆದುಕೊಂಡಿದ್ದವರಿಗೆ ಎಲ್ಲವನ್ನೂ ತೀರಿಸುವ ಅವಕಾಶ ಒದಗುತ್ತದೆ.  ನಿಮ್ಮ ಕೆಲಸದಲ್ಲಿನ ತಪ್ಪನ್ನು ಒಪ್ಪಿಕೊಳ್ಳುವುದು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಆದರೆ ನೀವು ಅದನ್ನು ಹೇಗೆ ಸುಧಾರಿಸಬಹುದೆಂದು ವಿಶ್ಲೇಷಿಸಬೇಕು. ತೊಂದರೆಗಳು ಜೀವನದ ಭಾಗವಾಗಿದೆ. ಗ್ರಹಸ್ಥಿತಿಯು ನಿಮ್ಮಲ್ಲಿ ಕೆಲವು ಅನುಮಾನ ವಿಷಯಗಳನ್ನು ಬಿತ್ತುವವು. ಹಾಗಾಗಿ ಹೆಚ್ಚಿಗೆ ತಲೆಕೆಡಿಸಿಕೊಳ್ಳದೆ ಭಗವಂತನ ಆರಾಧನೆ ಮಾಡಿ.

ಮೀನ:-

ನಿಮ್ಮ ಮನಸ್ಸಿಗೆ ಬೇಡವಾದ ಘಟನೆಗಳು ಜರುಗುವುದರಿಂದ ಮಾನಸಿಕ ತಲ್ಲಣ ಉಂಟಾಗುವುದು. ಜಗನ್ನಿಯಾಮಕಿ ದೇವಿ ಸ್ತೋತ್ರವನ್ನು ಪಠಿಸಿ. ದುರ್ಗಾ ಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ. ಮಾಡುವ ಕೆಲಸವನ್ನು ನಿಷ್ಟೆಯಿಂದ ಮಾಡಿ. ಭಗವಂತ ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ನೀಡುವನು.  ಕೌಟುಂಬಿಕ ಒತ್ತಡ ನಿಮ್ಮ ಗಮನ ಬೇರೆಡೆಗೆ ಸೆಳೆಯದಿರಲಿ.  ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಬೇಕು. ಬುದ್ಧಿವಂತಿಕೆಯಿಂದ ವ್ಯವಹಾರ ವಿಸ್ತರಣೆ. ಹೊಸ ವ್ಯವಹಾರಗಳು ನಿಮ್ಮ ವ್ಯಕ್ತಿತ್ವವನ್ನು ಎತ್ತರದ ಶ್ರೇಣಿಗೆ ಒಯ್ಯುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ನರುಲಿಗಳನ್ನು ನಿವಾರಿಸಲು ಇಲ್ಲಿವೆ ಸುಲಭದ ಉಪಾಯಗಳು..!ತಿಳಿಯಲು ಈ ಲೇಖನ ಓದಿ …

    ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ.

  • ಸುದ್ದಿ

    ಅಪ್ಪಿತಪ್ಪಿಯೂ ʼಆಪಲ್ʼ ಬೀಜಗಳನ್ನು ತಿನ್ನಬೇಡಿ..!ಅದರ ಪರಿಣಾಮವೇನು ಗೊತ್ತ?

    ಹಣ್ಣುಗಳ ಬೀಜಗಳಲ್ಲಿ ಪೋಷಕಗಳಿರುತ್ತವೆ ಎಂದು ಎಲ್ಲಾ ಹಣ್ಣಿನ ಬೀಜಗಳನ್ನು ತಿನ್ನುವುದು ಸರಿಯಲ್ಲ. ಏಕೆಂದರೆ ಕೆಲ ಹಣ್ಣಿನ ಬೀಜಗಳು ಪ್ರಯೋಜನಕ್ಕೆ ಬರುವುದಿಲ್ಲ. ಅದರಲ್ಲೂ ಸೇಬು ಹಣ್ಣಿನ ಬೀಜಗಳನ್ನು ಮರೆತೂ ತಿನ್ನಬಾರದು. ಒಂದು ವೇಳೆ ಹಲ್ಲಿಗೆ ಸಿಕ್ಕಿಹಾಕಿಕೊಂಡರೆ ಗಾಬರಿ ಪಡದೆ ತಕ್ಷಣವೇ ಬಿಸಾಡಬೇಕು. ಏಕೆಂದರೆ ಈ ಬೀಜಗಳಲ್ಲಿ ಅಮೈಡಾಲಿನ್ ಎಂಬ ಪದಾರ್ಥ ಇರುತ್ತದೆ. ಇದು ದೇಹಕ್ಕೆ ಒಳ್ಳೆಯದಲ್ಲ. ಹೀಗಾಗಿ ಈ ಬೀಜಗಳನ್ನು ತಿಂದರೆ ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ ತಲೆನೋವು, ವಾಂತಿ, ಬಲಹೀನತೆ, ತಲೆಸುತ್ತು ಇತ್ಯಾದಿ ಲಕ್ಷಣಗಳು ಉಂಟಾಗಬಹುದು….

  • ಸುದ್ದಿ

    ನಿಜಕ್ಕೂ ಅಚ್ಚರಿ ಗೋಡೆಯಲ್ಲಿ ಉದ್ಭವವಾದ ದೇವಿ..! ಅಷ್ಟಕ್ಕೂ ಅಚ್ಚರಿ ನಡೆದಿದ್ದು ಎಲ್ಲಿ ಗೊತ್ತಾ?

    ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರದ ರೈತ ಯಲ್ಲನಗೌಡ ಪಾಟೀಲ ಮನೆಯಲ್ಲಿ ದೀಪಾವಳಿ ಪಾಡ್ಯದ ದಿನದಂದು ದೇವಿಯ ಮೂರ್ತಿಯು ಪತ್ತೆಯಾಗಿದೆ. ಜನ ಮರಳೋ ಜಾತ್ರೆ ಮರಳೋ ಎನ್ನುವ ಹಾಗೆ, ಗೋಡೆಯಲ್ಲಿ ಉದ್ಭವವಾಗಿದೆ ಎನ್ನಲಾದ ದೇವಿಯನ್ನು ನೋಡಲು ಇಡೀ ಊರಿಗೆ ಊರೇ ಸೇರುತ್ತಿದೆ. ಧಾರವಾಡ ನಗರದ ಹೊಸ ಯಲ್ಲಾಪುರದ ದುಂಡಿ ಓಣಿಯಲ್ಲಿರುವ ಯಲ್ಲನ್ನಗೌಡ ಪಾಟೀಲ ಅವರ ಮನೆಯಲ್ಲಿ ದೇವಿ ಉದ್ಭವವಾಗಿದ್ದಾಳೆ ಎಂಬ ಸುದ್ದಿ ಹರಿದಾಡಿದ್ದು, ಈ ದೃಶ್ಯವನ್ನು ನೋಡಲು ಭಕ್ತ ಸಮೂಹವೇ ಹರಿದುಬರುತ್ತಿದೆ. ಯಲ್ಲನ್ನಗೌಡ ದಂಪತಿ ದೇವಿಯ ಆರಾಧಕರಾಗಿದ್ದು, ದೀಪಾವಳಿ…

  • ಸಿನಿಮಾ

    ಕೇವಲ 80 ದಿನಗಳ ಕಾಲ್ ಶೀಟ್ ಗೆ ನಟಿ ರಾಧಿಕಾ ಕುಮಾರಸ್ವಾಮಿ ಪಡೆದ ಸಂಭಾವನೆ ಎಷ್ಟು ಗೊತ್ತಾ..?

    ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…

  • ಸುದ್ದಿ

    ಆಹಾರಗಳನ್ನು ಫ್ರಿಜ್ಜಿನಲ್ಲಿ ಇಟ್ಟ ಮಾತ್ರಕ್ಕೆ ಅದು ಸುರಕ್ಷಿತವೇ…?

    ಆಹಾರಗಳನ್ನು ತಾಜಾರೂಪದಲ್ಲಿ ಸೇವಿಸಿದಷ್ಟೂಉತ್ತಮ. ಏಕೆಂದರೆ ಒಮ್ಮೆ ತಯಾರಿಸಿದ ಆಹಾರ ಕೊಂಚಹೊತ್ತಿನ ಬಳಿಕ ಹಳಸಲು ತೊಡಗುತ್ತದೆ. ಈ ಹಳಸುವಿಕೆಯನ್ನುತಡವಾಗಿಸಲು ಈಗ ನಮ್ಮೆಲ್ಲರ ಮನೆಗಳಲ್ಲಿ ಫ್ರಿಜ್ಜುಗಳಿವೆ. ಆದ್ದರಿಂದ ನಾವೆಲ್ಲಾ ಕೊಂಚ ಹೆಚ್ಚಿನ ಪ್ರಮಾಣವನ್ನುತಯಾರಿಸಿ ಫ್ರಿಜ್ಜಿನಲ್ಲಿಟ್ಟು ಮುಂದಿನ ಒಂದೆರಡು ದಿನಗಳವರೆಗೆ ಸೇವಿಸುತ್ತೇವೆ. ಆದರೆ ಫ್ರಿಜ್ಜಿನಲ್ಲಿಟ್ಟಆಹಾರವನ್ನೇ ಪ್ರತಿ ಬಾರಿ ಸೇವಿಸಲು ಮೂರು ಅಥವಾ ನಾಲ್ಕು ಬಾರಿ ಬಿಸಿ ಮಾಡಿ ಮತ್ತೆ ತಣಿಸಿ ಇಡುವುದುಖಂಡಿತಾ ಆರೋಗ್ಯಕರವಲ್ಲ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ! ಫ್ರಿಜ್ಜಿನಲ್ಲಿಟ್ಟರೂಪ್ರತಿ ಆಹಾರವಸ್ತು ತಾಜಾ ಇರುವ ಅವಧಿ ಬೇರೆಬೇರೆಯಾಗಿರುತ್ತದೆ. ಕೆಲವು ಒಂದೆರಡು…

  • ವಿಸ್ಮಯ ಜಗತ್ತು

    ಪೂರ್ವ ಜನ್ಮದಲ್ಲಿ ನೀವು ಏನು ಆಗಿದ್ದೀರಿ ಅಂತ ನಿಮಗೆ ಗೊತ್ತಾ ?ಈ ಲೇಖನಿ ಓದಿ…

    ನೀವು ಪೂರ್ವ ಜನ್ಮದಲ್ಲಿ ಏನ್ಮಾಡಿದಿರಾ ನಿಮಗೆ ಗೊತ್ತಿದಿಯ ? ಅದೇನಂದ್ರೆ ಯಾರಿಗಾದ್ರು ಪೂರ್ವ ಜನ್ಮದ ಜ್ಞಾನ ಇರುತ್ತಾ? ಎಂದು ಕೆಳುತ್ತಿದ್ದೀರಿ . ನಿಜವಾಗಿಯೂ ಇರುವುದಿಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ನಡೆದಿರುವ ಘಟನೆಗಳೇ ನೆನಪು ಇರುವುದಿಲ್ಲ.. ಇನ್ನು ಪೂರ್ವ ಜನ್ಮದ ವಿಷಯಗಳು ಹೇಗೆ ನೆನಪಿರುತ್ತವೆ ..