ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉದ್ಯೋಗಿಗಳಿಗೆ ನಿವೃತ್ತಿ ನಂತರ ಅನುಕೂಲವಾಗಲೆಂದು ಬಹಳಷ್ಟು ಸಂಸ್ಥೆಗಳು ಪಿಎಫ್ ಸೌಲಭ್ಯವನ್ನು ತಮ್ಮ ಕಂಪನಿಯಲ್ಲಿ ನೀಡುತ್ತಿವೆ. ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಿಂದ ಪ್ರಾವಿಡೆಂಟ್ ಫಂಡ್‌ನ ಕಾರ್ಯಗಳು ನೆರವೇರುತ್ತಿದ್ದು, ಒಟ್ಟು ಮೊತ್ತಕ್ಕೆ ನಿಗದಿಪಡಿಸಿದ ಬಡ್ಡಿ ಸೇರಿಸಿ ಸರ್ಕಾರ ಹಣವನ್ನು ನೀಡುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಡಿ ಸ್ಥಾಪನೆಯಾದ ಇಪಿಎಫ್‌ಒ ಉದ್ಯೋಗಿಗಳಿಗೆ ಪಿಎಫ್ ಸೌಲಭ್ಯವನ್ನು ನೀಡುತ್ತಿದೆ. ಉದ್ಯೋಗಿ ತನಗೆ ಅಗತ್ಯವಿದ್ದಾಗ ಅಥವಾ ನಿವೃತ್ತಿಯ ನಂತರ ಪಿಎಫ್ ಹಣವನ್ನು ಪಡೆಯಬಹುದಾಗಿದೆ.

ಇನ್ನು, ಪಿಎಫ್ ಹಣವನ್ನು ಪಡೆಯುವುದು ಸಹ ಈಗ ಬಹಳಷ್ಟು ಸುಲಭ ಅಂದ್ರೆ ಸುಲಭದ ಮಾತಾಗಿದೆ. ಯುನಿಫೈಡ್ ಮೆಂಬರ್ ಪೋರ್ಟಾಲ್ ಮೂಲಕ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಪಿಎಫ್ ಹಣ ಬಂದು ಸೇರುತ್ತೆ. ಮೊದಲಿನ ರೀತಿ ಯಾವುದೇ ಕಚೇರಿಗೂ ಪಿಎಫ್‌ಗಾಗಿ ಅಲೆದಾಡಬೇಕಾದ ಪರಿಸ್ಥಿತಿಯಿಲ್ಲ.ಫಾರ್ಮ್ 19, ಫಾರ್ಮ್ 10C ಮತ್ತು ಫಾರ್ಮ್ 31ನ್ನು ಸೇರಿಸಿ ಒಂದೇ ಕ್ಲೇಮ್ ಫಾರ್ಮ್‌ನ್ನು ಇಪಿಎಫ್‌ಒ ರೂಪಿಸಿದೆ. ಹಾಗಾದ್ರೆ, ಪಿಎಫ್ ಹಣವನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪಡೆಯುವುದು ಹೇಗೆ ಅಂತಿರಾ..? ಮುಂದೆ ನೋಡಿ..

ಈ ಮಾಹಿತಿ ಇರಲಿ ಮೊದಲಿಗೆ ನಿಮ್ಮ ಯುಎಎನ್ ನಂಬರ್ ಮತ್ತು ಪಿಎಫ್ ಖಾತೆ ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಸಕ್ರಿಯವಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ವೆಬ್‌ಸೈಟ್‌ನಲ್ಲಿ ಕೇಳುವ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಬೇಕು. ನಂತರ ಬ್ಯಾಂಕ್ ವಿವರ, ಪ್ಯಾನ್, ಆಧಾರ್ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಬೇಕು.ವೆಬ್‌ಸೈಟ್‌ಗೆ ಭೇಟಿ ನೀಡಿ ಮೊದಲು ಯುನಿಫೈಡ್ ಮೆಂಬರ್ ಪೋರ್ಟಾಲ್ ವೆಬ್‌ಸೈಟ್‌ಗೆ ಭೇಟಿ ನೀಡಿ. https://unifiedportal-mem.epfindia.gov.in/memberinterface/ ನಿಮ್ಮ ಬ್ರೌಸರ್‌ನಲ್ಲಿ ಲಿಂಕ್ ಕ್ಲಿಕ್ ಮಾಡಿ.

ಲಾಗಿನ್ ಆಗಿ ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ. ಒಂದು ವೇಳೆ ನಿಮ್ಮ ಯುಎಎನ್ ಸಂಖ್ಯೆ ಆಕ್ಟಿವ್ ಆಗಿಲ್ಲವೆಂದರೆ ‘ಇಂಪಾರ್ಟಂಟ್ ಲಿಂಕ್’ ವಿಭಾಗದ ಕೆಳಗಿರುವ ‘ಆಕ್ಟಿವೇಟ್ ಯುಎಎನ್’ ಎಂಬ ಲಿಂಕ್ ಕ್ಲಿಕ್ ಮಾಡಿ ಆಕ್ಟಿವೇಟ್ ಮಾಡಿಕೊಳ್ಳಬಹುದು. ಯುಎಎನ್, ಪ್ಯಾನ್, ಹೆಸರು, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಮತ್ತಿತರ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ. ಎಲ್ಲಾ ವಿವರಗಳನ್ನು ನಮೂದಿಸಿದ 24 ಗಂಟೆಗಳೊಳಗೆ ಯುಎಎನ್ ಸಕ್ರಿಯವಾಗುತ್ತದೆ.

ವೆಬ್‌ಸೈಟ್‌ನಲ್ಲಿ ಮಾಹಿತಿ ಒಂದು ಸಲ ನೀವು ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ನಿಮಗೆ ಒಂದಿಷ್ಟು ಅಗತ್ಯ ಮಾಹಿತಿಗಳನ್ನು ವೆಬ್‌ಸೈಟ್ ನೀಡುತ್ತದೆ. ನಿಮ್ಮ ಹೆಸರು, ಯುಎಎನ್ ಸಂಖ್ಯೆ ಮತ್ತಿತರ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತದೆ. ವೆಬ್‌ಸೈಟ್‌ನಲ್ಲಿ ಪ್ರದರ್ಶಿತವಾದ ಮಾಹಿತಿಯನ್ನು ಒಂದು ಸಲ ಪರಿಶೀಲಿಸಿ.

ಆನ್‌ಲೈನ್ ಸೇವೆ ಕ್ಲಿಕ್ ಮಾಡಿ ನಂತರ ಮೇಲಿನ ಮೆನು ಬಾರ್‌ನಲ್ಲಿರುವ ‘ಆನ್‌ಲೈನ್ ಸರ್ವಿಸಸ್’ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕ್ಲೇಮ್ (ಫಾರ್ಮ್ 19, ಫಾರ್ಮ್ 10C ಮತ್ತು ಫಾರ್ಮ್ 31) ಆಯ್ಕೆಯನ್ನು ಆಯ್ದುಕೊಳ್ಳಿ.
ಬ್ಯಾಂಕ್ ಮಾಹಿತಿ ಪರಿಶೀಲಿಸಿ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ. ಬ್ಯಾಂಕ್ ಅಕೌಂಟ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನು ನಮೂದಿಸಿ, ಪರಿಶೀಲಿಸಿ ಬಟನ್ ಕ್ಲಿಕ್ ಮಾಡಿ.

ಆನ್‌ಲೈನ್ ಕ್ಲೇಮ್‌ಗೆ ಮುಂದುವರೆಯಿರಿ ಬ್ಯಾಂಕ್ ಅಕೌಂಟ್ ಪರಿಶೀಲನೆಯಾದ ನಂತರ, ಆನ್‌ಲೈನ್ ಕ್ಲೇಮ್‌ಗೆ ಮುಂದುವರೆಯಬೇಕು. ಇದಕ್ಕಾಗಿ ನೀವು ಸ್ಕ್ರಾಲ್ ಡೌನ್ ಮಾಡಿ ‘ಪ್ರೊಸೀಡ್ ಫಾರ್ ಆನ್‌ಲೈನ್ ಕ್ಲೇಮ್’ ಬಟನ್ ಕ್ಲಿಕ್ ಮಾಡಬೇಕು. ನಂತರ ‘ಒನ್ಲೀ ಪಿಎಫ್ ವಿತ್‌ಡ್ರಾ ಫಾರ್ಮ್’ ಆಯ್ಕೆಯನ್ನು ಆಯ್ದುಕೊಳ್ಳಬೇಕು.

ಆಧಾರ್ ಪರಿಶೀಲಿಸಿ ಎಲ್ಲಾ ಮಾಹಿತಿಯನ್ನು ದಾಖಲಿಸಿದ ಮೇಲೆ ಆಧಾರ್‌ನ್ನು ಪರಿಶೀಲಿಸಬೇಕು. ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ ಆಧಾರ್ ಒಟಿಪಿಯನ್ನು ನಮೂದಿಸಬೇಕು.
ಸ್ಟೇಟಸ್ ಚೆಕ್ ಮಾಡಿ ನಂತರ ನೀವು ನಿಮ್ಮ ಕ್ಲೇಮ್‌ನ ಸ್ಟೇಟಸ್ ಕೂಡ ನೋಡಬಹುದಾಗಿದ್ದು, ಆನ್‌ಲೈನ್ ಸರ್ವಿಸಸ್ ವಿಭಾಗದಲ್ಲಿ ಚೆಕ್ ಕ್ಲೇಮ್ ಸ್ಟೇಟಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಪಿಎಫ್ ಕ್ಲೇಮ್ ಸ್ಟೇಟಸ್ ಪರಿಶೀಲಿಸಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ `ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಸರ್ಕಾರ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಜನರ ಮುಂದಿಟ್ಟರು. ಪ್ರಣಾಳಿಕೆಯಲ್ಲಿ ಬಿಜೆಪಿ ಎಲ್ಲ ವರ್ಗದ ಜನರನ್ನು ಖುಷಿಗೊಳಿಸುವ ಪ್ರಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಂ ಸೇರಿದಂತೆ ಅನೇಕ…
ರಾಜ್ಯ ಸರ್ಕಾರ 3500 ಮಂದಿ ಪರಿಶಿಷ್ಟ ಜಾತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಶರ್ಮಾ ಇನ್ನೆರಡೇ ಸಿಕ್ಸ್ ಬಾರಿಸಿದರೂ ಏಕದಿನದಲ್ಲಿ ಭಾರತ ಪರ ಧೋನಿ ಮಾಡಿರುವ ಅತ್ಯಧಿಕ ಸಿಕ್ಸ್ ದಾಖಲೆ ಬದಿಗೆ ಸರಿಯಲಿದೆ.ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ರೋಹಿತ್ ಗೆ ಧೋನಿ ದಾಖಲೆ ಮುರಿಯಲು ಅವಕಾಶವಿತ್ತು. ಆದರೆ ಶರ್ಮಾ ಕೇವಲ 1 ರನ್ನಿಗೆ ಮುಜೀಬ್ ಉರ್ ರಹ್ಮಾನ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸುವ ಮೂಲಕ ಅವಕಾಶ ಕಳೆದುಕೊಂಡಿದ್ದರು. ಗುರುವಾರ (ಜೂನ್ 27) ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ…
ಪ್ಲಾಸ್ಟಿಕ್ ಬಾಟಲಿಗಳನ್ನು ಮರಳಿನಿಂದ ತುಂಬಿಸಿಲಾಗುತ್ತದೆ, ನಂತರ ಬಾಟಲಿಗಳನ್ನು ಮೇಲೆ ತೋರಿಸಿರುವ ಚಿತ್ರದಂತೆ ಸಾಲಲ್ಲಿ ಜೋಡಿಸಲಾಗುತ್ತದೆ, ಮರಳು ಮತ್ತು ಸಿಮೆಂಟ್ ಅನ್ನು ಬೆರೆಸಿ ನಿರ್ಮಾಣಗೊಂಡ ಬಾಟಲಿಯ ಗೋಡೆಯ ಮೇಲೆ ಹಾಕಲಾಗುತ್ತದೆ, ಇದು ಬಾಟಲಿಗಳನ್ನು ಹಿಡಿದಿಡಲು ಸಹಕಾರಿಯಾಗುರ್ತದೆ ಹಾಗು ಘನ ಗೋಡೆಯನ್ನು ಹೊಂದುತ್ತದೆ.
ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.
ಜಿಯೋ ಕಂಪನಿ ಫ್ರೀ ಫೋನ್ ಕೊಡುವುದಾಗಿ ಹೇಳಿದ ದಿನವೇ, ಎಲ್ಲರಲ್ಲೂ ಮೂಡಿದ ಪ್ರಶ್ನೆ ಏನಂದರೆ ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದೆಂದು? ಅಂದರೆ ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ.