ಜ್ಯೋತಿಷ್ಯ

ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆ- ಕೇರಳ ಫಸ್ಟ್, ಉತ್ತರ ಪ್ರದೇಶ ಲಾಸ್ಟ್ – ಕರ್ನಾಟಕ 8ನೇ ಸ್ಥಾನದಲ್ಲಿ……

31

ದೇಶದಲ್ಲಿ ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ ಕರ್ನಾಟಕ 8 ನೇ ಸ್ಥಾನದಲ್ಲಿದೆ.ಮಂಗಳವಾರ ನೀತಿ ಆಯೋಗವು ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳ ಟಾಪರ್ ಆದರೆ ಕರ್ನಾಟಕ 8ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಸಿಕ್ಕಿದೆ.

23 ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಆಧಾರದ ಮೇಲೆ ತಯಾರು ಮಾಡಿದ್ದ ‘ಆರೋಗ್ಯಕರ ರಾಜ್ಯಗಳು ಮತ್ತು ಪ್ರಗತಿಶೀಲ ಭಾರತ’ “Healthy States, Progressive India” ಎಂಬ ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಬಿಡುಗಡೆ ಮಾಡಿದರು. ಈ ವರದಿಯ ಪ್ರಕಾರ ಆರೋಗ್ಯ ಸೂಚ್ಯಂಕದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶ ತೀರಾ ಹಿಂದುಳಿದಿದೆ ಎಂದು ಹೇಳಿದೆ.

ಕೇರಳದ ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಉತ್ತಮ ಆರೋಗ್ಯ ಮಟ್ಟವನ್ನು ಕಾಪಾಡಿಕೊಂಡು ಬಂದಿವೆ. ಇವುಗಳನ್ನು ಬಿಟ್ಟರೆ ಹರಿಯಾಣ, ರಾಜಸ್ಥಾನ ಮತ್ತು ಜಾರ್ಖಂಡ್ ಆರೋಗ್ಯ ಗುಣಮಟ್ಟದಲ್ಲಿ ಸುಧಾರಣೆ ಆಗಿದೆ. ಆದರೆ ಛತ್ತೀಸ್‍ಗಢ ಅತಿ ಕಡಿಮೆ ಗುಣಮಟ್ಟ ಸಾಧಿಸಿರುವ ರಾಜ್ಯವಾಗಿದೆ.

2018ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಮೊದಲ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2014-15 ರಿಂದ 2015-16ರ ಅವಧಿಯ ನಿರ್ವಹಣೆಯನ್ನು ಪರಿಗಣಿಸಲಾಗಿತ್ತು. ಎರಡನೇ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2015-16 ರಿಂದ 2017-18ರ ಅವಧಿಯ ನಿರ್ವಹಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಮೊದಲ ಹತ್ತು ಆರೋಗ್ಯಕರ ರಾಜ್ಯಗಳು

  1. ಕೇರಳ
  2. ಆಂಧ್ರ ಪ್ರದೇಶ
  3. ಮಹಾರಾಷ್ಟ್ರ
  4. ಗುಜರಾತ್
  5. ಪಂಜಾಬ್
  6. ಹಿಮಾಚಲ ಪ್ರದೇಶ
  7. ಜಮ್ಮು -ಕಾಶ್ಮೀರ
  8. ಕರ್ನಾಟಕ
  9. ತಮಿಳುನಾಡು
  10. ತೆಲಂಗಾಣ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಸರ್ಕಾರಿ ಯೋಜನೆಗಳು

    ಇಂದಿರಾ ಕ್ಯಾಂಟೀನ್ ಆಯ್ತು. ಈಗ “ಇಂದಿರಾ ಕ್ಲಿನಿಕ್” ಶುರು!ಇಲ್ಲಿ ಏನೆಲ್ಲಾ ಉಚಿತ ಸೇವೆ ಸಿಗಲಿದೆ ಗೂತ್ತಾ..?

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು, ಇಂದು ಜನಸಾಮಾನ್ಯರನ್ನು ಆಕರ್ಷಿಸುತ್ತಿವೆ. ಇಂದಿರಾ ಕ್ಯಾಂಟೀನ್ ಪ್ರಸಿದ್ದಿಯ ಬಳಿಕ, ಗಾರ್ಮೆಂಟ್ಸ್ ಮಹಿಳೆಯರಿಗೆ, ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಇಂದಿರಾ ಪಾಸ್ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಘೋಷಿಸಿದ್ದರು. ಈ ಬಳಿಕ ಇದೀಗ, ಇಂದಿರಾ ಕ್ಲಿನಿಕ್ ಆರಂಭಗೊಂಡಿದೆ. ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ, ಇಂದಿನಿಂದ ರಾಜ್ಯದ ರಾಜಧಾನಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿವೆ.

  • ಸಿನಿಮಾ

    ಅಬ್ಬಬ್ಬಾ “ರಾಜ್ ವಿಷ್ಣು” ಕನ್ನಡ ಚಿತ್ರದ ಟ್ರೇಲರ್ ಯೂಟ್ಯೂಬಲ್ಲಿ ಚಿಂದಿ! ಟ್ರೇಲರ್ ನೋಡಲು ಈ ಲೇಖನಿ ಓದಿ….

    ಶರಣ್ ನಾಯಕ ನಟನಾಗಿ ನಟಿಸಿದ್ದು ಪ್ರಮುಖ ಪಾತ್ರಧಾರಿಗಳಾಗಿ ಚಿಕ್ಕಣ್ಣ, ಸಾಧು ಕೋಕಿಲ ನಟಿಸಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಹೆಸರುಗಳನ್ನು ಇಟ್ಟು ನಿರ್ಮಾಣವಾಗುತ್ತಿರುವ ಸಿನಿಮಾ ‘ರಾಜ್ ವಿಷ್ಣು’ ಸಿನಿಮಾದ ಟ್ರೇಲರ್ ಇದೀಗ ಯೂಟ್ಯೂಬಲ್ಲಿ

  • ಆಧ್ಯಾತ್ಮ

    ನೀವು ಇಷ್ಟಪಟ್ಟವರನ್ನು ಪಡೆಯಲು ಈ ರೀತಿ ಮಾಡಿ, ಕ್ಷಣಾರ್ಧದಲ್ಲಿ ನಿಮ್ಮವರಾಗುವರು.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ನೀವು ಇಷ್ಟಪಟ್ಟವರನ್ನು ನಿಮ್ಮಂತೆ…

  • ರಾಜಕೀಯ

    ಮೋದಿ ನೇತೃತ್ವದ: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 2 ದಿನದಲ್ಲಿ 3.86 ಲಕ್ಷ ಕೋಟಿ ರೂ. ಲಾಭ!

    ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಂಪರ್ ಲಾಭ ಗಳಿಸಿದ್ದಾರೆ.ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮರಳುತ್ತಿರುವುದು ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದ್ದು, ಸೋಮವಾರ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಪ್ಟಿ ಮತ್ತೊಂದು ದಾಖಲೆಯ ಎತ್ತರವನ್ನು ತಲುಪಿದೆ. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ ಇ 871.9 ಅಂಕಗಳ ಜಿಗಿತವನ್ನು ದಾಖಲಿಸಿದ್ದು, ಸೋಮವಾರ…

  • ಸುದ್ದಿ

    ಇದೇನಿದು ಶಾಕ್; ಬಿಗ್ ಬಾಸ್ ಮನೆಯಲ್ಲಿ ಎಂದು ನಡೆದಿಲ್ಲ,ಸ್ಪರ್ಧಿಗಳಿಬ್ಬರ ರೊಮ್ಯಾನ್ಸ್ ಯಾರು ಗೊತ್ತೇ?

     ಬಿಗ್ ಬಾಸ್ ಸೀಸನ್-13 ಹಿಂದಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಬ್ಬರು ಎಲ್ಲರ ಮುಂದೆಯೇ ರೊಮ್ಯಾನ್ಸ್ ಮಾಡಿದ್ದು, ಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ ಹಾಗೂ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಯಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಇವರ ರೊಮ್ಯಾನ್ಸ್ ದೃಶ್ಯವನ್ನು ಮತ್ತೊಬ್ಬ ಸ್ಪರ್ಧಿ ಶೆಹ್ನಾಜ್ ಗಿಲ್ ಮೊಬೈಲಿನಲ್ಲಿ ಚಿತ್ರಿಕರಿಸಿದ್ದು, ಇದು ಟಾಸ್ಕ್ ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಶೆಹ್ನಾಜ್ ನಿರ್ದೇಶಕರಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಅವರಿಗೆ ರೊಮ್ಯಾನ್ಸ್ ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದಾರೆ.ಪ್ರೋಮೋದಲ್ಲಿ ಧಾರವಾಹಿಗಾಗಿ ಕೆಲವು…

  • ಸ್ಪೂರ್ತಿ

    ಟೀ ಮಾಡಿಕೊಂಡೇ ಲಕ್ಷಾಂತರ ಹಣ ಮಾಡುತ್ತಿದ್ದಾನೆ ಈತ..!

    ಇಂಜಿನಿಯರಿಂಗ್, ವೈದ್ಯ ಸೇರಿದಂತೆ ತಿಂಗಳಿಗೆ ಸಂಬಳ ಸಿಗುವಂತಹ ಹುದ್ದೆಗಳನ್ನು ಮಾತ್ರ ಎಲ್ಲರೂ ಗೌರವದಿಂದ ನೋಡ್ತಾರೆ. ಸಣ್ಣ ಪುಟ್ಟ ವ್ಯಾಪಾರ, ಟೀ ವ್ಯಾಪಾರದ ಹೆಸರು ಕೇಳಿದ್ರೆ ಬಹುತೇಕರು ಮೂಗು ಮುರಿಯುತ್ತಾರೆ. ಆದ್ರೆ ಟೀ ಸಣ್ಣ ವ್ಯಾಪಾರವಲ್ಲ. ಟೀ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಪುಣೆ ಯುವಕ ತೋರಿಸಿಕೊಟ್ಟಿದ್ದಾನೆ. ಪುಣೆಯಲ್ಲಿ ಯೇವ್ಲೆ ಟೀ ಹೌಸ್ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿಯನ್ನು ಈ ಟೀ ಹೌಸ್ ಹೊಂದಿದೆ. ಪುಣೆಯಲ್ಲಿಯೇ ಮೂರು ಸ್ಟಾಲ್ ಗಳನ್ನು ಇದು…