ಸುದ್ದಿ

ಡಿ.ಕೆ.ಶಿವಕುಮಾರ್ ಪುತ್ರಿಗೆ ಕೂಡಿಬಂದ ಕಂಕಣ ಭಾಗ್ಯ. ಎಸ್​.ಎಂ. ಕೃಷ್ಣ ಕುಟುಂಬದ ಜೊತೆ ಡಿಕೆಶಿ ನೆಂಟಸ್ತನ?

474

ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್​ ಮಗಳು ಐಶ್ವರ್ಯ ಹಾಗೂ ಸಿದ್ಧಾರ್ಥ ಹೆಗಡೆ ಅವರ ಮಗ ಅಮರ್ಥ್ಯ ಮದುವೆಯ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಬಹಳ ಹಿಂದೆಯೇ ಈ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಈ ಮೂಲಕ ತಮ್ಮ ರಾಜಕೀಯ ಗುರುವಾಗಿರುವ ಎಸ್​.ಎಂ. ಕೃಷ್ಣ ಅವರ ಕುಟುಂಬದ ಜೊತೆ ನೆಂಟಸ್ತನ ಬೆಳೆಸಲು ಡಿಕೆಶಿ ಮುಂದಾಗಿದ್ದಾರೆ. ಖ್ಯಾತ ಉದ್ಯಮಿ ದಿವಂಗತ ಸಿದ್ದಾರ್ಥ ಹೆಗ್ಡೆ ಮಗ ಅಮರ್ಥ್ಯ ಜೊತೆಗೆ ಮದುವೆ ಗೆ  ಸಿದ್ದತೆ ನಡೆಯುತ್ತಿದ್ದು , ಎರಡು ಕುಟುಂಬದವರು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ನೇತೃತ್ವದಲ್ಲಿ  ಮದುವೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೋನಾ ಲಾಕ್ ಡೌನ್ ಮುಗಿದ ನಂತರ ನಿಶ್ಚಿತಾರ್ಥ ಮಾತುಕತೆ ನಡೆಯಲಿದೆ. ಒಂದು ವರ್ಷದ ನಂತರ ಮದುವೆ ನಡೆಯುವ ಸಾಧ್ಯತೆಯಿದೆ. ಇನ್ನು ಡಿಕೆಶಿ ಮತ್ತು ಸಿದ್ದಾರ್ಥ ಇಬ್ಬರು ಬ್ಯುಸಿನೆಸ್ ಪಾರ್ಟನರ್ ಕೂಡ ಆಗಿದ್ದರು. ಸಿದ್ಧಾರ್ಥ ಹೆಗಡೆ ಆಘಾತಕಾರಿ ರೀತಿಯಲ್ಲಿ ಸಾವನ್ನಪ್ಪಿದಾಗ ಡಿ.ಕೆ. ಶಿವಕುಮಾರ್ ಕುಟುಂಬ ಸಿದ್ಧಾರ್ಥ ಹೆಗಡೆ ಕುಟುಂಬದ ಜೊತೆಗಿದ್ದು, ಧೈರ್ಯ ತುಂಬಿತ್ತು. ಈ ಹಿಂದೆಯೇ ಎರಡು ಕುಟುಂಬಗಳ‌ ನಡುವೆ ಮದುವೆ ಸಂಬಂಧ ಮಾತುಕತೆ ಆಗಿತ್ತು. ಆದರೆ, ಸಿದ್ಧಾರ್ಥ ಅವರ ಸಾವಿನ ನಂತರ ಮಾತುಕತೆ ನಿಂತುಹೋಗಿತ್ತು. ಈಗ ಮತ್ತೆ ಮದುವೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಸದ್ಯಕ್ಕೆ ಅಮರ್ಥ್ಯ ಅಮೇರಿಕಾದಲ್ಲಿ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯ ಅವರು ಇಂಜಿನಿಯರಿಂಗ್ ಮಾಡಿ, ಡಿಕೆಶಿಗೆ ಸೇರಿದ ಕಾಲೇಜು ನೋಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ಮತ್ತು ದಿವಂಗತ ಸಿದ್ದಾರ್ಥ ಇಬ್ಬರದು ಪ್ರತಿಷ್ಠಿತ ಕುಟುಂಬ. ಹಾಗಾಗಿ, ಈ ಮದುವೆಯ ಬಗ್ಗೆ ನಿರೀಕ್ಷೆಯೂ ಹೆಚ್ಚಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಭಾರತೀಯರಿಗೋಸ್ಕರವೇ ಮಾಡಿರುವ ಈ ಡಿಜಿಟಲ್ ಪಂಚಾಂಗದಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತಾ..!

    ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್‌ ಟೆಕ್ನಾಲಜೀಸ್‌ ಇಂಡಿಕ್‌ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್‌ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ ಭಾರತೀಯರಿಗೆಂದೇ ರೂಪಿಸಲಾಗಿದೆ.

  • ದೇಗುಲ ದರ್ಶನ, ದೇವರು

    ಮಕ್ಕಳಾಗದ ದಂಪತಿ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ. ನಿಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಿ.!

    ಬೆಳ್ತಂಗಡಿಯಿಂದ ಆರು ಕಿ.ಮೀ. ಅಂತರದ ಕಾರ್ಕಳ ರಸ್ತೆಯಲ್ಲಿ ಬಂದರೆ ಬದ್ಯಾರ್ ಎಂಬಲ್ಲಿ ಇಳಿದು ಮತ್ತೆ ಒಂದು ಕಿ.ಮೀ. ಸಾಗಿದರೆ ಪುರಾತನವಾದ ಸಂತಾನ ಗೋಪಾಲಕೃಷ್ಣ ದೇವಸ್ಥಾನ ತಲುಪಬಹುದು. ಕರಾವಳಿಯಲ್ಲಿ ಇಂತಹ ದೇವಾಲಯವಿರುವುದು ಒಂದೆರಡು ಮಾತ್ರ. ಈ ಬಾರಿಯ ಜಾತ್ರೆ 2020ರ ಜನವರಿ ಇಂದ ನಡೆಯಲಿದೆ. ಮಕ್ಕಳಿಲ್ಲದ ದಂಪತಿ ಇಷ್ಟಾರ್ಥ ಪ್ರಾಪ್ತಿಯಾದಾಗ ನಿರ್ಮಾಣ ಮಾಡಿದ್ದ ಈ ದೇವಾಲಯಕ್ಕೆ ಆರುನೂರು ವರ್ಷಗಳ ಇತಿಹಾಸವಿದೆ. ಚಾಲುಕ್ಯ ಶಿಲ್ಪ ಶೈಲಿಯ ವೇಣುಗೋಪಾಲನ ವಿಗ್ರಹ ಇಲ್ಲಿದೆ. ಪ್ರತ್ಯೇಕವಾಗಿ ದುರ್ಗೆ ಮತ್ತು ದೈವಗಳಿಗೂ ಆರಾಧನೆ ನಡೆಯುತ್ತದೆ. 2012ರಲ್ಲಿ ದೇವಾಲಯ…

  • ವಿಸ್ಮಯ ಜಗತ್ತು

    7 ವರ್ಷದ ಈ ಪುಟ್ಟ ಪೋರ, ತನ್ನ ದೇಹವನ್ನು 8 ಪ್ಯಾಕ್ ಮಾಡಿದ್ದಾನೆ! ಇದು ತಮಾಷೆ ವಿಚಾರ ಅಲ್ಲ !!!

    ಈಗಂತೂ ಜಿಮ್’ಗೆ ಹೋಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸುವುದು ಸಾಮಾನ್ಯ. ಇದರಲ್ಲಿ 6 ಪ್ಯಾಕ್ ,8 ಪ್ಯಾಕ್ ಹೀಗೆ ಏನೇನೋ ಇದೆ. ಈ ವಿಷಯ ಯಾಕೆ ಈಗ ಅಂತೀರಾ! ವಿಷಯ ಇದೆ. ಏನು ಗೊತ್ತಾ? ಏಳು ವರ್ಷದ ಪುಟ್ಟ ಬಾಲಕನೊಬ್ಬ ತನನ ಚಿಕ್ಕ ವಯಸ್ಸಿನಲ್ಲೇ ತನ್ನ ದೇಹವನ್ನು 8 ಪ್ಯಾಕ್ ಮಾಡಿದ್ದಾನೆ. ಇದೇನಪ್ಪ ಏಳು ವರ್ಷದ ಪೋರ 8 ಪ್ಯಾಕ್ ಮಾಡೋದು ಅಂದ್ರೆ ಏನು ಸುಮ್ನೆ ತಮಾಷೆ ವಿಚಾರ ಅಲ್ಲ ಆದ್ರೂ ಈ ಪೋರ ಇಂತ ದಾಖಲೆ ಮಾಡಿ ವಿಶ್ವದ ಗಮನ ಸೆಳೆದ ಪುಟ್ಟ ಪೋರ ಯಾರು ಅಂತೀರಾ ಇಲ್ಲಿದೆ ನೋಡಿ.

  • ವಿಸ್ಮಯ ಜಗತ್ತು

    ನ್ಯಾಯಾಲಯದ ಈ ಪ್ರಕರಣಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ! ಮುಂದೆ ಸಿಗೋದು ಇಲ್ಲ!ಇನ್ನೂ ವಾದ ನಡೀತಾ ಇದೆ!ಯಾಕೆ ಗೊತ್ತಾ?ಈ ಲೇಖನಿ ಓದಿ…

    ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.

  • ಉಪಯುಕ್ತ ಮಾಹಿತಿ

    ನೆಲ್ಲಿ ಕಾಯಿ ಜ್ಯೂಸು ಕುಡಿಯೋದ್ರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಅಂತ ಗೊತ್ತಾದ್ರೆ ನೀವು ಕುಡಿಯದೇ ಸುಮ್ನೆ ಇರೋಲ್ಲ..!

    ಬಾಯಿ ಚಪ್ಪರಿಸುತ್ತ ತಿನ್ನುವ ನೆಲ್ಲಿಕಾಯಿ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ.ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ.ಎಲ್ಲ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದಕ್ಕಿದೆ. ಫೈಬರ್, ಪ್ರೋಟೀನ್ ಮತ್ತು ಜೀವಸತ್ವಗಳಿರುವ ನೆಲ್ಲಿಕಾಯಿ, ರಕ್ತವನ್ನು ಶುದ್ಧಗೊಳಿಸಲು ಸಹಕಾರಿ. *ಆಯುರ್ವೇದದ ಪ್ರಕಾರ ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ.ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ ಇಂದಿನ ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟ ಸಂಖ್ಯೆಯನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 call/ whatsapp/ mail raghavendrastrology@gmail.com ಮೇಷ:– ನೀವು ಸ್ವಲ್ಪ…