ಸುದ್ದಿ

ಚಳಿಗಾಲದಲ್ಲಿ ಚರ್ಮದ ಕಾಳಜಿಯನ್ನು ಎಂದಿಗೂ ನಿರ್ಲಕ್ಷಿಸಬಾರದು,ಯಾಕೆ ಗೊತ್ತಾ,?

39

ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ನಮ್ಮ  ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮಗಳಾಗಿವೆ. ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು. ಬನ್ನಿ, ಈ ಸ್ಥಿತಿ ಎದುರಾದರೆ ಯಾವ ಪರಿಹಾರ ಪಡೆಯಬಹುದು ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನೋಡೋಣ:

ಶೀತಾಘಾತದ ಲಕ್ಷಣಗಳು ಇವು ಸಾಮಾನ್ಯವಾಗಿ ಬಿಸಿಲಿನ ಆಘಾತಕ್ಕೆ ಒಳಗಾದ ತ್ವಚೆಯ ಪರಿಣಾಮದಂತೆಯೇ ಇರುತ್ತದೆ. ವಿಶೇಷವಾಗಿ ಮುಖದ ತ್ವಚೆ ಕೆಂಪಗಾಗಿ ಮುಟ್ಟಲೂ ಆಗದಷ್ಟು ಸೂಕ್ಷ್ಮ ಸಂವೇದಿಯಾಗುತ್ತದೆ. ಅಲ್ಲದೇ ಚರ್ಮ ಉರಿಯುತ್ತಿರುವಂತೆ ಭಾಸವಾಗಬಹುದು. ಕೆಂಪಗಾಗಿರುವುದು ಇಳಿಯುತ್ತಿದ್ದಂತೆಯೇ ಹೊರಚರ್ಮ ಒಣಗಿ ಪಕಳೆಯೇಳಲು ತೊಡಗಬಹುದು. ಈ ಲಕ್ಷಣಗಳು ಬಿಸಿಲಿನ ಆಘಾತದ ಲಕ್ಷಣಗಳನ್ನೇ ಹೋಲುತ್ತಿದ್ದರೂ ಅದಕ್ಕೂ ಹೆಚ್ಚು ಒಣಗುತ್ತದೆ ಮತ್ತು ಬಿಗಿಯಾಗಿರುತ್ತದೆ.

ಶೀತಾಘಾತಕ್ಕೆ ಪರಿಹಾರಗಳು ಶೀತಾಘಾತಕ್ಕೆ ಚಿಕಿತ್ಸೆಯು ನಿಮ್ಮ ಚರ್ಮದ ತೇವಾಂಶವನ್ನು ಪುನಃ ತುಂಬಿಸುವುದರ ಜೊತೆಗೆ ಈಗಾಗಲೇ ಇರುವ ಯಾವುದೇ ನೋವನ್ನೂ ಇಲ್ಲವಾಗಿಸುತ್ತದೆ.                           * ಐಬುಪ್ರೊಫೇನ್ ನಂತಹ ಅತಿಯಾದ ನೋವು ನಿವಾರಕವು ಸೌಮ್ಯ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. * ಉಗುರುಬೆಚ್ಚನೆಯ ನೀರು ಸಹ ಸುಡುವಿಕೆಯನ್ನು ಕಡಿಮೆ ಮಾಡುತ್ತದೆ. ನೀವು ಶೀತಾಘಾತದಿಂದ ಚೇತರಿಸಿಕೊಳ್ಳುತ್ತಿರುವಾಗ ಬಿಸಿನೀರನ್ನು ಬಳಸದಿರಿ. ಇದು ಚರ್ಮದಿಂದ ಇನ್ನಷ್ಟು ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಚೇತರಿಕೆಯ ಸಮಯವನ್ನು ಇನ್ನಷ್ಟು ವಿಸ್ತರಿಸುತ್ತದೆ. * ನಿಮ್ಮ ಚರ್ಮದ ತೇವಾಂಶವನ್ನು ಮರುತುಂಬಿಸುವುದು ನೋವು ನಿವಾರಣೆ ಮಾಡುವುದು ಮತ್ತು ಒಟ್ಟಾರೆ ಚೇತರಿಕೆ ಎರಡರಲ್ಲೂ ಮುಖ್ಯವಾಗಿದೆ. ಈಗಲೂ ನೀವು ನಿಮ್ಮ ಮುಖ ಮತ್ತು ದೇಹವನ್ನು ಸ್ವಚ್ಛಗೊಳಿಸಬಹುದು, ಆದರೆ ಕೆನೆಯಾಧಾರಿತ ಕ್ಲೆನ್ಸರ್ ಮೂಲಕ ಸ್ವಚ್ಛಗೊಳಿಸುತ್ತಿದ್ದರೆ ಮಾತ್ರ. ಜೆಲ್ ಮತ್ತು ನೀರು ಆಧಾರಿತ ಕ್ಲೆನ್ಸರ್ ಬಳಕೆಯಿಂದ ಶೀತಾಘಾತಕ್ಕೆ ಒಳಗಾದ ತ್ವಚೆ ಇನ್ನಷ್ಟು ಒಣಗಬಹುದು. * ನಿಮ್ಮ ಚರ್ಮವು ಚೇತರಿಸಿಕೊಳ್ಳುವಾಗ ಅಗತ್ಯಕ್ಕೆ ತಕ್ಕಂತೆ ದಿನವಿಡೀ ತೇವಕಾರಕ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ. ನೀವು ದಪ್ಪ ಲೋಷನ್ ಬಳಸುತ್ತಿದ್ದರೆ, ನೀವು ಇದನ್ನು ದಿನಕ್ಕೆ ನಾಲ್ಕು ಬಾರಿ ಬಳಸಬಹುದು. ನಿಮ್ಮ ಚರ್ಮವು ಸಂಪೂರ್ಣವಾಗಿ ಗುಣವಾಗುವವರೆಗೆ ಯಾವುದೇ ಹೊರಚರ್ಮ ನಿವಾರಕ (ಎಕ್ಸ್‌ಫೋಲಿಯಂಟ್), ಟೋನರ್ ಗಳು ಮತ್ತು ಸಂಕೋಚಕಗಳ ಬಳಕೆಯನ್ನು ತಪ್ಪಿಸಿ. * ಚೇತರಿಕೆಯ ಸಮಯದಲ್ಲಿ ಆದಷ್ಟೂ ಹೊರಾಂಗಣದಲ್ಲಿ ನಿಮ್ಮ ಸಮಯವನ್ನು ಮಿತಿಗೊಳಿಸಲು ಯತ್ನಿಸಿ. ನಿಮ್ಮ ಚರ್ಮವು ಇನ್ನಷ್ಟು ಒಣಗದಂತೆ ತಡೆಯಲು ನೀವು ಆರ್ದ್ರಕವನ್ನು ಬಳಸಿ. * ಅಂತಿಮವಾಗಿ, ನೀವು ಸಾಕಷ್ಟು ನೀರು ಕುಡಿಯುತ್ತೀರಾ ಎಂದು ಖಚಿತಪಡಿಸಿಕೊಳ್ಳಿ. ನಿಮಗೆ ಅತಿಯಾದ ಬಾಯಾರಿಕೆಯಿಲ್ಲದಿದ್ದರೂ, ಶೀತಾಘಾತ ನಿಮ್ಮ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ. ದೇಹದ ಒಳಗಿನಿಂದ ತೇವಾಂಶವನ್ನು ಮರುತುಂಬಿಸಲು ನೀರು ಕುಡಿಯುವುದು ಒಂದು ಉತ್ತಮ ಮಾರ್ಗವಾಗಿದೆ.

ಶೀತಾಘಾತಕ್ಕೆ ಒಳಗಾದ ತುಟಿಗಳು ಬಾಯಿಯನ್ನು ತೆರೆಯುವಾಗ ಅತಿ ಹೆಚ್ಚು ವಿಸ್ತಾರಗೊಳ್ಳಬೇಕಾದ ಅವಶ್ಯಕತೆ ಇರುವ ಕಾರಣ ತುಟಿಯ ಹೊರಚರ್ಮ ಅತಿ ಹೆಚ್ಚು ವಿಸ್ತಾರ ಹೊಂದಿದ್ದು ಸಾಮಾನ್ಯ ಸ್ಥಿತಿಯಲ್ಲಿ ನೆರಿಗೆಯಾಗಿರುತ್ತದೆ ಹಾಗೂ ಅತಿ ತೆಳುವೂ ಆಗಿರುತ್ತದೆ. ಅಲ್ಲದೇ ತುಟಿಗಳನ್ನು ಮುಚ್ಚಿಕೊಳ್ಳುವುದು ಹೆಚ್ಚೂ ಕಡಿಮೆ ಅಸಾಧ್ಯವಾದುದರಿಂದ ಶೀತಾಘಾತದ ಪ್ರಭಾವಕ್ಕೆ ಅತಿ ಸುಲಭವಾಗಿ ಒಳಗಾಗುತ್ತದೆ. ಒಂದು ವೇಳೆ ತುಟಿಗಳಿಗೆ ಹೆಚ್ಚು ಆಘಾತ ಎದುರಾಗಿದ್ದರೆ ಹೀಗೆ ಮಾಡಿ: * ಅತಿ ಹೆಚ್ಚು ನೀರು ಕುಡಿಯಿರಿ * ಬಿಸಿ ಆಹಾರ/ ಪಾನೀಯಗಳನ್ನು ಸೇವಿಸದಿರಿ * ಖಾರದ ಆಹಾರಗಳನ್ನೂ ಸೇವಿಸದಿರಿ. * ಒಂದು ವೇಳೆ ತುಟಿಗಳ ಚರ್ಮ ಪಕಳೆಯೇಳುತ್ತಿದ್ದರೆ, ಇದನ್ನು ಸರ್ವಥಾ ಕೀಳಲು ಯತ್ನಿಸದಿರಿ. ಇವು ತಾವಾಗಿಯೇ ಉದುರಲಿ ತುಟಿಗೆ ಹಚ್ಚುವ ತೇವಕಾರಕವನ್ನು * ಸದಾ ಬಳಿಯೇ ಇರಿಸಿ ಆಗಾಗ ಹಚ್ಚಿಕೊಳ್ಳುತ್ತಾ ಇರಿ. ಹೆಚ್ಚಿನ ರಕ್ಷಣೆಗಾಗಿ ಎಮೋಲ್ಲಿಯೆಂಟ್ ಕ್ರೀಮ್ ಅಥವಾ ವ್ಯಾಸೆಲಿನ್ ಹಚ್ಚಿಕೊಳ್ಳಿ. * ನಿಮ್ಮ ಲಿಪ್ ಬಾಮ್ 15 ಎಸ್‌ಪಿಎಫ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಶೀತಾಘಾತದಿಂದ ತಡೆಯಲು ಅತ್ಯುತ್ತಮ ಮಾರ್ಗವೆಂದರೆ ಹೊರಗೆ ಹೋಗದೇ ಇರುವುದು, ಆದರೆ ಇದು ಸಾಧ್ಯವಲ್ಲದ ವಿಷಯ. ಹಾಗಾಗಿ, ಶೀತಲ ಮಾರುತದ ಸಮಯದಲ್ಲಿ ಹೊರಹೋಗಬೇಕಾದಾಗ ಈ ಕ್ರಮಗಳನ್ನು ಅನುಸರಿಸಿ: * ನಿಮ್ಮ ಮುಖವನ್ನು ಸ್ಕಾರ್ಫ್ ನಿಂದ ಮುಚ್ಚಿಕೊಳ್ಳಿ * ತಂಪು ಕನ್ನಡಕ ಧರಿಸಿ * ಟೋಪಿ ಮತ್ತು ಕೈಗವಸುಗಳನ್ನು ಬಳಸಿ * ಉದ್ದನೆಯ ತೋಳಿರುವ ಅಂಗಿ ಮತ್ತು ಪ್ಯಾಂಟ್ ಧರಿಸಿ * ಎರಡು ಅಥವಾ ಹೆಚ್ಚಿನ ಉಡುಪುಗಳನ್ನು ತೊಟ್ಟು ಬೆಚ್ಚಗಿರಿ * ಶೀತಾಘಾತ ಉಂಟಾಗುವ ಸ್ಥಿತಿಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ನೀವು ಯಾವಾಗಲೂ ಸನ್‌ಸ್ಕ್ರೀನ್ ಧರಿಸಬೇಕು. ಕನಿಷ್ಠ 30 ಎಸ್‌ಪಿಎಫ್ ಹೊಂದಿರುವ ವಿಶಾಲ-ಸ್ಪೆಕ್ಟ್ರಮ್ ಇರುವ ಉತ್ಪನ್ನವನ್ನೇ ಆಯ್ದುಕೊಳ್ಳಿ. ಶೀತಾಘಾತದ ಹಿಂದಿನ ವಿದ್ಯಮಾನಗಳು ಸುಮಾರು ಒಂದು ಶತಮಾನದಿಂದ ಚರ್ಮದ ತಜ್ಞರ ನಡುವೆ ಚರ್ಚೆಗೆ ಕಾರಣವಾಗಿವೆ, ಆದರೆ ಒಂದು ವಿಷಯ ಖಚಿತವಾಗಿದೆ: ಶೀತ ಮತ್ತು ಶುಷ್ಕ ದಿನದಂದು ಸಹ ಹೊರಗಡೆ ಇರುವುದು ನಿಮ್ಮ ಚರ್ಮವನ್ನು ಸುಡಲು ಕಾರಣವಾಗಬಹುದು. ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯ ಮತ್ತು ಇತರ ಅಂಶಗಳಿಂದ ರಕ್ಷಿಸುವುದು ಮುಖ್ಯ. ಕೆಲವು ದಿನಗಳ ನಂತರ ಶೀತಾಘಾತ ಅಥವಾ ಬಿಸಿಲಿನ ಲಕ್ಷಣಗಳು ಮುಂದುವರಿದರೆ ಅಥವಾ ಅವು ಉಲ್ಬಣಗೊಂಡರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ರಾಜ್ಯದಲ್ಲಿ ಯಾವ ಯಾವ ಪಕ್ಷ ಮುನ್ನಡೆ…?

    ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದ್ದರೆ ಯುಪಿಎ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಲ ಪಡೆದಿರುವ ರಾಜ್ಯಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ 54 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 27, ರಾಜಸ್ತಾನದಲ್ಲಿ 23 ಹಾಗೂ ಬಿಹಾರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ 40, ಗುಜರಾತಿನಲ್ಲಿ ಬಿಜೆಪಿ 26, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ…

  • ಉದ್ಯೋಗ

    ಶ್ರೀಮಂತರಾಗಲು ಭಾರತದಲ್ಲಿವೆ ಅತೀ ಹೆಚ್ಚು ಹಣ ಪಡೆಯುವ ಕೆಲಸಗಳು..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿ ಯಾಗ ಬಹುದು. ಅಮೂಲ್ಯವೆನಿಸುವ ಯಾವುದೇ ವಸ್ತು ಸುಲಭವಾಗಿ ದಕ್ಕುವುದಿಲ್ಲ. ಹಣವೂ ಅಷ್ಟೇ ! ಯಾರೇ ಆಗಲಿ, ಎಷ್ಟೇ ಹಣವಂತರಿರಲಿ, ಬಾಯಲ್ಲಿ ಬೆಳ್ಳಿ ಚಮಚವನ್ನಿರಿಸಿಕೊಂಡು ಹುಟ್ಟಿರುವುದಿಲ್ಲ.

  • ವಿಚಿತ್ರ ಆದರೂ ಸತ್ಯ

    27 ವರ್ಷದ ಈ ಯುವಕ ಐಶ್ವರ್ಯಾ ರೈ ಮಗನಂತೆ..!ತಿಳಿಯಲು ಇದನ್ನು ಓದಿ..

    ನಾನು ವಿಶ್ವ ಸುಂದರಿ , ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಮಗ ಪ್ಲೀಸ್ ಇದನ್ನು ನಂಬಿ ಎಂದು ಹೇಳಿಕೊಂಡು ಯುವಕನೋರ್ವ ಸಂಚಲನ ಮೂಡಿಸಿದ್ದಾನೆ .27 ವರ್ಷದ ಯುವಕನೊಬ್ಬ ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಮಗನೆಂದು ಹೇಳಿಕೊಂಡು ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿದ್ದಾನೆ.

  • ಶಿಕ್ಷಣ

    ಪಿಯುಸಿ ಬಳಿಕ ಡಿಪ್ಲೊಮಾ 2ನೇ ವರ್ಷಕ್ಕೆ ಸೇರಲು ಅವಕಾಶ…!

    ಬೆಂಗಳೂರು: ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ 2ನೇ ವರ್ಷಕ್ಕೆ ದಾಖಲಾಗಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಬ್ರಿಡ್ಜ್ ಕೋರ್ಸ್‌ ಕೂಡ ಸಿದ್ಧವಾಗುತ್ತಿದೆ. ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್‌ ಎಂಟ್ರಿ ಮೂಲಕ ಎಂಜಿನಿಯರಿಂಗ್‌ ಎರಡನೇ ವರ್ಷಕ್ಕೆ ಸೇರಿಕೊಳ್ಳಲು ಈ ವರೆಗೂ ಅವಕಾಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ದಾಖಲಾಗಲು ಅವಕಾಶ…

  • ಉಪಯುಕ್ತ ಮಾಹಿತಿ

    “ಸೊನ್ನೆ” (ಝೀರೋ) ಕಂಡುಹಿಡಿದದ್ದು ಭಾರತ.ಹಾಗಿದ್ರೆ ಉಳಿದ ನಂಬರಗಳನ್ನು ಕಂಡುಹಿಡಿದಿದ್ದು ಯಾರು ಗೊತ್ತೇ.?ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?

  • ಜ್ಯೋತಿಷ್ಯ

    ನಿಮ್ಮ ರಾಶಿ ಪ್ರಕಾರ ಈ ನಾಣ್ಯ ನಿಮ್ಮ ಪರ್ಸ್ ನಲ್ಲಿದ್ದರೆ ಏನಾಗುತ್ತೆ ಗೊತ್ತಾ?ನಿಮ್ಮ ರಾಶಿಗೆ ಯಾವ ನಾಣ್ಯ ನೋಡಿ…

    ಪ್ರತಿಯೊಬ್ಬರ ಪರ್ಸ್ ನಲ್ಲಿಯೂ ನಾಣ್ಯಗಳು ಇದ್ದೇ ಇರುತ್ವೆ. ಕೆಲವರ ಪರ್ಸ್ ನಲ್ಲಿ 10 ರೂಪಾಯಿ ನಾಣ್ಯವಿದ್ರೆ ಇನ್ನು ಕೆಲವರ ಪರ್ಸ್ ನಲ್ಲಿ 2 ರೂಪಾಯಿ, ಒಂದು ರೂಪಾಯಿ ನಾಣ್ಯವಿರುತ್ತದೆ. ಶಾಸ್ತ್ರದ ಪ್ರಕಾರ, ರಾಶಿಗನುಗುಣವಾಗಿ ನಾಣ್ಯವನ್ನು ಪರ್ಸಿನಲ್ಲಿಟ್ಟರೆ ಶುಭಕರ. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ. ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು. ವೃಷಭ : ಈ ರಾಶಿಯವರು…