ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ಗಳು ಮೊರೆ ಹೋಗಿದ್ದಾರೆ.
ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು.
ಬೆಳೆ ಮೊಳಕೆಯೊಡೆದು ಈಗ ನೆಲ ಬಿಟ್ಟು ಮೇಲೆದಿದ್ದೆ. ಆದರೆ ಈ ಸಂದರ್ಭದಲ್ಲಿ ಬೇಕಾಗಿರುವ ಮಳೆ ಈಗ ಕೈಕೊಟ್ಟಿದ್ದು ರಣ ಬಿಸಿಲು ಆವರಿಸಿದೆ. ಇದರಿಂದ ರೈತನ ಪರಿಸ್ಥಿತಿ ಚಿಂತಾಜನಕವಾಗಿದೆ. ಹೇಗಾದರೂ ಮಾಡಿ ನೆಲದಿಂದ ಮೇಲೆದ್ದಿರುವ ಹೆಸರು ಮತ್ತು ಬಿಟಿ ಹತ್ತಿ ಉಳಿಸಿಕೊಳ್ಳಬೇಕು ಎಂದು ಸಾಲ ಮಾಡಿ ಬಾಡಿಗೆ ಟ್ಯಾಂಕರ್ ಪಡೆದು ನೀರು ಹಾಕುತ್ತಿದ್ದಾರೆ.
ಟ್ಯಾಂಕ್ವೊಂದಕ್ಕೆ ದಿನಕ್ಕೆ 500 ರೂಪಾಯಿ ಬಾಡಿಗೆ ಕೊಡಬೇಕಾಗಿದೆ. ಒಂದು ಟ್ಯಾಂಕರ್ ನೀರಿಗೆ 150ರಿಂದ 200 ರೂಪಾಯಿ ಕೊಟ್ಟು ಎಲ್ಲೆಲ್ಲಿಂದಲೂ ನೀರು ತುಂಬಿಸಿಕೊಂಡು ಬರುತ್ತಿದ್ದಾರೆ. ಒಣ ಹವೆ ರಭಸವಾಗಿ ಬೀಸುತ್ತಿದ್ದರಿಂದ ತೇವಾಂಶದ ಕೊರತೆಯಿಂದ ಹೊಲದಲ್ಲಿದ್ದ ಬಿ.ಟಿ. ಹತ್ತಿ, ಹೆಸರು, ಒಣಗಿ ಹೋಗುವ ಆತಂಕ ಇರುವುದರಿಂದ ಟ್ಯಾಂಕರ್ಗಳು ಮೊರೆ ಹೋಗಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಜಾನುವಾರುಗಳ ದಾಹ ನೀಗಿಸಿದ ಜಲದಾತ-ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ ಅನ್ನದಾತ ಕಾಫಿನಾಡಿನ ವೀರಣ್ಣ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವಿಟ್ಲಾಪುರದ ನಿವಾಸಿಯಾಗಿರುವ 63 ವರ್ಷದ ವೀರಣ್ಣ ಗೋಕಟ್ಟೆ ನಿರ್ಮಿಸಿದ್ದಾರೆ. 9ನೇ ತರಗತಿವರೆಗೆ ಮಾತ್ರ ಓದಿರುವ ವೀರಣ್ಣ, ಕೃಷಿಯೊಂದಿಗೆ ಮತ್ತು ಮೂಕ ಪ್ರಾಣಿಗಳ ದಿನನಿತ್ಯ ಸೇವೆ ಮಾಡುತ್ತಿದ್ದಾರೆ. ಅರೆಮಲೆನಾಡಾಗಿರುವ ಚಿಕ್ಕಮಗಳೂರಲ್ಲಿ ಬೇಸಿಗೆ ವೇಳೆ ಜಾನುವಾರುಗಳಿಗೆ ನೀರು ಸಿಗೋದು ಕಷ್ಟ ಆಗಿತ್ತು. ಕುಡಿಯಲು ನೀರು ಸಿಗದೇ ದನಕರು ಪರದಾಡೋದನ್ನು ನೋಡಲಾಗದ ವೀರಣ್ಣ, ಮೂರು ವರ್ಷದ ಹಿಂದೆ ಅರಣ್ಯ ಇಲಾಖೆ ಅನುಮತಿ ಪಡೆದು…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಸುಡು ಕೆಂಡಗಳನ್ನು ಕಟ್ಟಿಕೊಂಡು ತಿರುಗಾಡುವ ಮೊದಲು ನಿಧಾನವಾಗಿ ನಿರ್ಣಯ ತೆಗೆದುಕೊಂಡು ಮುನ್ನುಗ್ಗುವುದು ಒಳ್ಳೆಯದು. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ಉತ್ತಮ ಸ್ಥಾನದಲ್ಲಿ ಸಂಚರಿಸದೆ ಅನೇಕ ತೊಂದರೆಗಳು ಉಂಟಾಗುವವು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ…
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್(70) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುರುವಾರ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು…
ಶ್ರೀಮಂತನಾಗುವುದು ಪ್ರತಿಯೊಬ್ಬನ ಬಯಕೆ. ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡ್ತಾರೆ ಅನೇಕರು. ಆದ್ರೆ ಶ್ರೀಮಂತರಾಗಲು ದುಡಿಮೆ ಜೊತೆ ಅದೃಷ್ಟ ಜೊತೆಗಿರಬೇಕು. ಅಡುಗೆ ಮನೆಯಲ್ಲಿರುವ ಉಪ್ಪು, ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಡುಗೆ ರುಚಿ ಹೆಚ್ಚಿಸುವ ಉಪ್ಪಿನಿಂದ ಅನೇಕ ಲಾಭಗಳಿವೆ. ಮನೆಯ ಮುಖ್ಯ ದ್ವಾರದ ಬಳಿ, ಕೆಂಪು ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ನೇತುಹಾಕಿ. ಇದು ನಿಮ್ಮ ಅದೃಷ್ಟ ಬದಲಿಸುತ್ತದೆ. ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಹಾಗೆ ಯಶಸ್ಸು ನಿಮ್ಮದಾಗುತ್ತದೆ. ವ್ಯಾಪಾರ ಸ್ಥಳದ ಮುಖ್ಯ ದ್ವಾರದ ಬಳಿ…
ನಾವು ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನೀರು ಕುಡಿಯಲು ಸರಿಯಾದ ಸಮಯ ಯಾವುದು? ಶರೀರದಲ್ಲಿ ನೀರಿನ ಪರಿಣಾಮವನ್ನು ಗರಿಷ್ಠವಾಗಿಸಲು ಅದನ್ನು ಸೇವಿಸಲು ಅತ್ಯುತ್ತಮ ಸಮಯ ಯಾವುದು ಮತ್ತು ಹಾನಿಕಾರಕ ಪರಿಣಾಮವನ್ನು ತಪ್ಪಿಸಲು ನೀರನ್ನು ಯಾವ ಸಮಯ ದಲ್ಲಿ ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.