ಸಿನಿಮಾ

ತನ್ನ ವಿಶೇಷ ಅಭಿಮಾನಿಯೋಬ್ಬರನ್ನ ಭೇಟಿ ಮಾಡಲು ಮುಂದಾಗಿರುವ ಕಿಚ್ಚಾ ಸುದೀಪ್!ಏಕೆ ಗೊತ್ತಾ..?

250

ಹಲವಾರು ನಟರು ತಮ್ಮನ್ನು ಇಷ್ಟಪಡುವ ಅಭಿಮಾನಿಗಳ ಕಷ್ಟಕ್ಕೂ ಕೂಡ ಸ್ಪಂದಿಸುತ್ತಾರೆ.ತಮ್ಮ ಕೈ ಲಾದ ಸಹಾಯವನ್ನು ಕೂಡ ಮಾಡುತ್ತಾರೆ.ಇಂತಹ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.
ನಟ ಕಿಚ್ಚ ಸುದೀಪ್ ಅವರು ಸಹಾಯ ಕೇಳಿದವರಿಗೆ ತಮ್ಮ ಕೈಲಾಗುವ ಸಹಾಯವನ್ನು ಮಾಡುತ್ತಾರೆ. ಈಗ ಸುದೀಪ್ ಅವರು ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಲು ಮುಂದಾಗಿದ್ದಾರೆ.

ಅರೆ ಇದೇನಿದು ಸುದೀಪ್ ಗೆ ಲಕ್ಷಾಂತರ ಅಭಿಮಾನಿಗಳಿದ್ದು, ಅದರಲ್ಲಿ ವಿಶೇಷ ಅಭಿಮಾನಿ ಎಂದರೆ ಏನು ಎಂದು ನೀವು ಕೇಳಬಹುದು. ಆದರೆ ಇಲ್ಲಿನ ವಿಶೇಷ ಕೇಳಿದರೆ ನಿಮ್ಮ ಭಾವನೆ ಬದಲಾಗಬಹುದು.

ರಾಹುಲ್ ಎಂಬ 12 ವರ್ಷದ ಬಾಲಕ ಹುಟ್ಟಿದಾಗಿನಿಂದಲೇ ಅಪರೂಪದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆ.ರಾಹುಲ್ ಹುಟ್ಟಿ 12 ವರ್ಷಗಳಾಗಿದೆ. ಆತ ತಾನು ಸಾಯುವುದರೊಳಗೆ ಒಂದೇ ಒಂದು ಸಾರಿ ತನ್ನನೆಚ್ಚಿನ ನಟ ಸುದೀಪ್ ರನ್ನು ಭೇಟಿ ಮಾಡಬೇಕು ಎಂದು ಆಸೆ ಪಟ್ಟಿದ್ದಾನೆ. ಈ ಕುರಿತು ಕೆಟೋ ಎಂಬ ಟ್ವಿಟರ್ ಖಾತೆ ನಟ ಸುದೀಪ್ ರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು, ಕೆಟೋ ಈ ಪುಟ್ಟ ಪೋರನ ಕುರಿತು ವರದಿ ಮಾಡಿದೆ.

ಕೆಟೋ ಮಾಡಿರುವ ಟ್ವೀಟ್ ಗಮನಿಸಿದ ಸುದೀಪ್ ಅವರು ಪ್ರತಿಕ್ರಿಯಿಸಿ ಭೇಟಿ ಮಾಡಲು ಒಪ್ಪಿದ್ದು, ಎಲ್ಲಿ, ಯಾವಾಗ ಎಂದು ರೀಟ್ವೀಟ್ ಮಾಡಿದ್ದಾರೆ.

ರಾಹುಲ್ ಬೆಂಗಳೂರು ಮೂಲದ ನಿವಾಸಿ ಜಲಿಂದರ್ ಅವರ ಪುತ್ರನಾಗಿದ್ದು, ಹುಟ್ಟಿದಾಗಿನಿಂದಲೇ ಈತ ಅಪರೂಪದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆ. ಈತನ ಚಿಕಿತ್ಸೆಗೆ ಈತನ ಪೋಷಕರು ಹರಸಾಹಸ ಪಡುತ್ತಿದ್ದು, ಈ ವರೆಗೂ ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಮಾರಿ ಸುಮಾರು 4 ಲಕ್ಷ ರೂ ಹೊಂದಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ ವೆಲ್ಜರ್ ಆದ ಜಲಿಂದರ್ ತಿಂಗಳಿಗೆ ಕೇವಲ 8 ಸಾವಿರ ರೂಮಾತ್ರ ದುಡಿಯುತ್ತಿದ್ದು, ಇದು ಆತನ ಕನಿಷ್ಠ ಚಿಕಿತ್ಸೆಗೂ ಸಾಲುತ್ತಿಲ್ಲ. ಇನ್ನು ಜೀವನ ನಿರ್ವಹಣೆ ದುರ್ಬರವಾಗಿದ್ದು, ಇದೇ ಕಾರಣಕ್ಕೆ ಕೆಟೋ ಎಂಬ ಸಂಘಟನೆ ಈ ಕುಟುಂಬದ ಬೆನ್ನಿಗೆ ನಿಂತಿದೆ. ಆದರೆ ಆತನ ಚಿಕಿತ್ಸೆಗೆ ಇನ್ನೂ ಸುಮಾರು ಲಕ್ಷ ರೂಗಳಷ್ಟು ಹಣ ಅವಶ್ಯಕತೆ ಇದ್ದು, ಕುಟುಂಬ ಇದೀಗ ದಾನಿಗಳತ್ತ ಮುಖ ಮಾಡಿದೆ.

ವೈದ್ಯರು ಹೇಳಿದ ಬಳಿಕ ಪೋಷಕರು ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಮಾರಿ ಸುಮಾರು 4 ಲಕ್ಷ ರೂ ಹೊಂದಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇನ್ನೂ 3 ಲಕ್ಷಕ್ಕೆ ಪೋಷಕರು ಹರಸಾಹಸ ಪಟ್ಟಿದ್ದಾರೆ. ಆದರೆ ಎಲ್ಲೂ ಹಣ ಸಿಗಲಿಲ್ಲ. ಕೊನೆಗೆ ಹಣ ಸಹಾಯಕ್ಕಾಗಿ ದಾನಿಗಳ ಮೊರೆ ಹೋಗಿದ್ದಾರೆ.

ರಾಹುಲ್ ಸುದೀಪ್ ನ ಕಟ್ಟಾ ಅಭಿಮಾನಿಯಾಗಿದ್ದು, ಈಗ ಸುದೀಪ್ ಬಳಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.ಇದೇ ವಿಚಾರವನ್ನು ಕೆಟೋ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದು, ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ನಟ ಸುದೀಪ್ ಭೇಟಿಯಾಗಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಲ್ಲದೆ ಎಲ್ಲಿ ಮತ್ತು ಯಾವಾಗ ಭೇಟಿಯಾಗಬೇಕು ಎಂಬುದನ್ನು ತಿಳಿಸಿ ಎಂದು ಮನವಿ ಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ