ಉಪಯುಕ್ತ ಮಾಹಿತಿ

ಸಿಇಟಿ ಫಲಿತಾಂಶ ಪ್ರಕಟಣೆ: ಇಂಜಿನಿಯರಿಂಗ್‌ನಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ಸ್ತಾನ…!

20

ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಸಕ್ತ ಸಾಲಿನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದಲ್ಲಿಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ಬಾರಿ 1.90 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದು, ಶೇ 92ರಷ್ಟು ಮಂದಿ ಪರೀಕ್ಷೆ ಬರೆದಿದ್ದರು.

ಎಂಜಿನಿಯರಿಂಗ್ ವಿಭಾಗದಲ್ಲಿ ಜಫಿನ್ ಬಿಜು (ಪ್ರಥಮ) ಪಡೆದಿದ್ದಾರೆ. ಇವರು ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಚಿನ್ಮಯಿ ಅವರು ದ್ವಿತೀಯ, ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಸಾಯಿ ಸಾಕೇತಿಕ ಚೆಕೂರಿ ಅವರು ತೃತೀಯ ಸ್ಥಾನ ಪಡೆದಿದ್ದಾರೆ.ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿ ಮಹೇಶ್ ಆನಂದ್ ಅವರು ಪ್ರಥಮ, ಮೈಸೂರಿನ ಬೇಸ್‌ ಪಿಯು ಕಾಲೇಜಿನ ವಾಸುದೇವ್ ಅವರು ದ್ವಿತೀಯ ಹಾಗೂ ಬೆಂಗಳೂರಿನ ನಾರಾಯಣ ಇ ಟೆಕ್ನೋ ಸ್ಕೂಲ್‌ನ ಉದಿತ್ ಮೋಹನ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಬಿಎಸ್‌ಸಿ ಕೃಷಿ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಕೀರ್ತನಾ ಎಂ ಅರುಣ್ ಪ್ರಥಮ, ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಭುವನ್ ಬಿ ಅವರು ದ್ವಿತೀಯ ಹಾಗೂ ಹಾಸನದ ಮಾಸ್ಟರ್ಸ್‌ ಪಿಯು ಶ್ರೀಕಾಂತ್ ಎಂಲ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಬಿಎಸ್‌ಸಿ ಪಶುವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಪಿ ಮಹೇಶ್ ಆನಂದ್ ಅವರು ಪ್ರಥಮ, ಬೆಂಗಳೂರಿನ ಉದಿತ್ ಮೋಹನ್ ಅವರು ದ್ವಿತೀಯ ಹಾಗೂ ಬೆಂಗಳೂರಿನ ಸಾಯಿ ರಾಮ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಡಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಸಾಯಿ ಸಾಕೇತಿಕ ವಕುರಿ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಇದೇ ಕಾಲೇಜಿನ ಜಫಿನ್ ಬಿಜು, ತೃತೀಯ ಸ್ಥಾನವನ್ನು ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಪಿ ಚಿನ್ಮಯಿ ಪಡೆದಿದ್ದಾರೆ.ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ 10 ಸ್ಥಾನ ಬೆಂಗಳೂರು, 2 ಸ್ಥಾನ ಮಂಗಳೂರು ಹಾಗೂ 1 ಸ್ಥಾನ ಬಳ್ಳಾರಿಗೆ ಲಭಿಸಿದೆ.ಏಪ್ರಿಲ್ 29 ಹಾಗೂ 30ರಂದು ಸಿಇಟಿ ಪರೀಕ್ಷೆ ರಾಜ್ಯದ 431 ಕೇಂದ್ರಗಳಲ್ಲಿ ನಡೆದಿತ್ತು.
ಏಪ್ರಿಲ್ 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಅದರಲ್ಲಿ ಶೇ. 79ರಿಂದ ಶೇ. 92 ವಿದ್ಯಾರ್ಥಿಗಳು ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಕ್ಕೆ ಪರೀಕ್ಷೆ ಬರೆದಿದ್ದಾರೆ.
ಸಿಇಟಿ ಫಲಿತಾಂಶಕ್ಕಾಗಿ ಈ ಕೆಳಗಿನ ವೆಬ್ ಸೈಟ್‍ಗಳಿಗೆ ಭೇಟಿ ನೀಡಿ.
http://kea.kar.nic.in
http://CET.kar.nic in
http://karresults.nic.in.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ