ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ಪೂರ್ವ ಕರಾವಳಿಯಲ್ಲಿರುವ ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಚಾರ್‌ಧಾಮ ಕ್ಷೇತ್ರಗಳಲ್ಲೊಂದು. ಐತಿಹಾಸಿಕ ಹಿನ್ನೆಲೆಯಿರುವ ಈ ದೇವಸ್ಥಾನದಲ್ಲಿ ಇಂದಿಗೂ ನಡೆಯುವ ಅಚ್ಚರಿ ಸಂಗತಿಗಳು ವೈಜ್ಞಾನಿಕ ತಾರ್ಕಿಕತೆಗೂ ನಿಲುಕದ ಸಂಗತಿಗಳಾಗಿದೆ.
ಭಾರತವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳಿಂದ ಕೂಡಿದ್ದು, ಜನರನ್ನು ತನ್ನೆಡೆಗೆ ಸುಲಭವಾಗಿ ಸೆಳೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿದೆ. ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯವು ಒಂದು. ವಿಶಿಷ್ಟವಾದ ಹಿನ್ನೆಲೆ ಹಾಗೂ ದೈವ ಶಕ್ತಿಯನ್ನು ಹೊಂದಿರುವ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.
ಈ ಪುಣ್ಯ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಪುಣ್ಯ ಕ್ಷೇತ್ರದ ದರ್ಶನ ಪಡೆಯದಿದ್ದರೆ ತೀರ್ಥಯಾತ್ರೆಗಳು ಪೂರ್ಣಗೊಳ್ಳುವುದಿಲ್ಲ ಎಂಬ ಪ್ರತೀತಿ ಇದೆ. ಈ ದೇವಾಲಯದಲ್ಲಿ ವಿಷೇಶವಾಗಿ ಶ್ರೀ ಕೃಷ್ಣ ಮತ್ತು ವಿಷ್ಣುವನ್ನು ಆರಾಧಿಸಲಾಗುತ್ತದೆ. ಈ ದೇವಾಲಯಕ್ಕೆ ಮಧ್ವಾಚಾರ್ಯರು ಸೇರಿದಂತೆ ಹೆಸರಾಂತ ಆಚಾರ್ಯರೆಲ್ಲಾ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಪ್ರಸಿದ್ದ ದೇವಾಲಯಗಳಾದ ರಾಮೇಶ್ವರಂ, ಬದರಿನಾಥ, ಪುರಿ ಮತ್ತು ದ್ವಾರಕ ದೇವಾಲಯಗಳ ಪೈಕಿ ಈ ಜಗನ್ನಾಥ ದೇವಾಲಯ ಒಂದಾಗಿದೆ
ದೇವಾಲಯದ ಮೇಲಿರುವ ಧ್ವಜ
ಈ ಪವಿತ್ರ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಇರುವ ಧ್ವಜವಿದೆ. ಈ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ. ವೈಜ್ಞಾನಿಕ ಸಂಗತಿಗಳಿಗೆ ಸವಾಲನ್ನು ಒಡ್ಡುವ ಈ ಒಂದು ಸಂಗತಿಯು, ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿ ಇದೆ ಎನ್ನುವುದನ್ನು ತಿಳಿಸುತ್ತದೆ.
ಜಗನ್ನಾಥನ ಮೂರ್ತಿ ಪ್ರತಿಯೊಂದು ದೇವಾಲಯದ ದೇವತೆಗಳ ವಿಗ್ರಹವನ್ನು ಕಲ್ಲು ಅಥವಾ ಲೋಹಗಳಿಂದ ಮಾಡಲಾಗುವುದು ಸಾಮಾನ್ಯ ಆದರೆ ಈ ಜಗನ್ನಾಥನನ್ನು ಮರದಿಂದ ಮಾಡಿರುವುದಾಗಿದೆ.
ದೇವಾಲಯದ ರಚನೆ
ಈ ದೇವಾಲಯದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನೆರಳು ಬೀಳದೆ ಇರುವುದು. ಈ ದೇವಾಲಯದ ಒಳಗೆ ಹಾಗೂ ಹೊರಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ. ಇದೊಂದು ಪ್ರಕೃತಿಯ ಪವಾಡ ಹಾಗೂ ದೈವ ಶಕ್ತಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ದೇವಾಲಯದ ಧ್ವಜ ಪುರಿ ಜಗನ್ನಾಥ ದೇವಾಲಯ ಗೋಪುರದ ಮೇಲೆ ಒಂದು ಧ್ವಜವಿದೆ. ಈ ಧ್ವಜವು ಯಾವಾಗಲೂ ದೇವಾಲಯದ ಹಿಂಭಾಗದಲ್ಲಿಯೇ ಹಾರಾಡುವುದು ಒಂದು ವಿಶೇಷ. ಈ ದೇಗುಲದ ಪೂಜಾರಿಗಳು ದಿನನಿತ್ಯ ಗೋಪುರದ ಮೇಲ್ಭಾಗದಲ್ಲಿರುವ ಧ್ವಜವನ್ನು ಬದಲಿಸುತ್ತಿರುತ್ತಾರೆ. ಆದರೂ ಕೂಡ ಈ ಧ್ವಜ ಎಂದಿಗೂ ತನ್ನ ದಿಕ್ಕನ್ನು ಬದಲಾಯಿಸಿಲ್ಲ.
ಸುದರ್ಶನ ಚಕ್ರ
ದೇವಸ್ಥಾನದಲ್ಲಿ ಇರುವ ಸುದರ್ಶನ ಚಕ್ರವು ೨೦ ಅಡಿ ಎತ್ತರ ಮತ್ತು ಒಂದು ಟನ್ ತೂಕವನ್ನು ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಎಂದರೆ, ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣುವುದು. ಅಲ್ಲದೆ ಈ ಚಕ್ರವನ್ನು ನೀವು ಎಲ್ಲಿ ನಿಂತು ನೋಡಿದರೂ ಅದರ ಮುಖ ನಿಮ್ಮೆಡೆಗೆ ಇರುವಂತೆ ತೋರುವುದು
ಗೋಪುರದ ನೆರಳು
ಈ ದೇವಾಲಯವನ್ನು ನಿರ್ಮಿಸಿದ ಇಂಜಿನಿಯರ್‍ಗಳು ದೇವಾಲಯದ ಗೋಪುರದ ನೆರಳು ಎಂದಿಗೂ ಕಾಣಿಸುವುದಿಲ್ಲ ಇದು ಆಶ್ಚರ್ಯವಾದರೂ ಸತ್ಯ.
ಹಾರಾಡುವುದಿಲ್ಲ
ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನು ಹೊಂದಿರುವ ಈ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು, ಕೀಟಗಳು ಹಾಗೂ ವಿಮಾನಗಳು ಹಾರುವುದಿಲ್ಲ. ಅದು ಚಕ್ರದ ಒಂದು ದೈವ ಶಕ್ತಿಯ ಪ್ರಭಾವ ಎಂದು ಪರಿಗಣಿಸಲಾಗಿದೆ. ಈ ನಿಗೂಢ ವಿದ್ಯಮಾನಗಳಿಗೆ ಕಾರಣ ಏನು ಎನ್ನುವುದನ್ನು ಇದುವರೆಗೂ ಕಂಡುಹಿಡಿಯಲಾಗಿಲ್ಲ
ಸಮುದ್ರ ರಹಸ್ಯ ಈ ದೇವಾಲಯದ ಸಮೀಪದಲ್ಲಿ ಒಂದು ಕಡಲ ತೀರವಿದೆ. ದೇವಾಲಯದ ಮುಖ್ಯ ದ್ವಾರಕ್ಕೆ ಬಂದಾಗ ಅಲ್ಲಿ ಸ್ಪಷ್ಟವಾಗಿ ಆ ನದಿಯ ಜುಳು ಜುಳು ಶಬ್ದವನ್ನು ಕೇಳಿಸಿಕೊಳ್ಳಬಹುದು. ಇವೆಲ್ಲವೂ ಜಗನ್ನಾಥನ ಮಹಿಮೆಯಲ್ಲದೇ ಮತ್ತೇನು?. ದೇವಾಲಯದ ಒಳಭಾಗದಲ್ಲಿ ಸ್ವಲ್ಪ ದೂರ ನಡೆದು ಮತ್ತೆ ಮರಳಿ ದೌರದ ಹತ್ತಿರ ಬಂದರೆ ಸಮುದ್ರದ ಶಬ್ದ ನಿಮಗೆ ಕೇಳಿಸುವುದಿಲ್ಲ. ಬದಲಾಗಿ ಮತ್ತೊಮ್ಮೆ ದೇವಾಲಯ ಹೊರಭಾಗದಿಂದ ಒಳಗೆ ಪ್ರವೇಶ ಮಾಡುವಾಗ ಮಾತ್ರ ಈ ಶಬ್ದ ನಿಮಗೆ ಕೇಳಿಸುತ್ತದೆ.
ದೇವಾಲಯದ ರಚನೆ
ಈಗ ಇರುವ ದೇವಾಲಯವು ಹಿಂದಿನ ಚೋಳಕಾಲದಲ್ಲಿ ಬೇರೆಯೇ ರೀತಿ ಇತ್ತು. ಪುರಿಯಲ್ಲಿ ಜಗನ್ನಾಥ ದೇವಾಲಯವನ್ನು ಮೊದಲು ಸ್ಥಾಪನೆ ಮಾಡಿದವರು ಚೋಳರ ಅರಸರು, ಮೇಘಾನಂದ ಪಚ್ಚೇರಿ, ಮುಖ ಸಳ, ನಟ ಮಂಟಪ ಇನ್ನು ಹಲವಾರು. ಇದು ಎರಡನೇ ಬಾರಿ ಪುನರ್ ನಿರ್ಮಾಣ ಮಾಡಿರುವುದಾಗಿದೆ
ಪ್ರವೇಶ ದ್ವಾರಗಳ ವಿಶೇಷ
ಈ ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಸಂಗೀತಗಳ ತರಂಗ ಕೇಳುವುದು. ಈ ದೇವಾಲಯದ ಒಳ ಪ್ರವೇಶಿಸಲು ನಾಲ್ಕು ಪ್ರಮುಖ ದ್ವಾರಗಳಿವೆ. ಇದರ ಮುಖ್ಯ ದ್ವಾರಕ್ಕೆ ಸಿಂಗದ್ವಾರ ಎಂದು ಕರೆಯುತ್ತಾರೆ. ಇಲ್ಲಿಂದ ಒಳಗೆ ದೇವರ ದರ್ಶನಕ್ಕೆ ತೆರಳುವಾಗ ಶಬ್ದಗಳ ತರಂಗಗಳು ಅಥವಾ ಧ್ವನಿಯು ಕೇಳುತ್ತವೆ. ಅದೇ ದ್ವಾರದ ಮೂಲಕ ನೀವು ಹಿಂತಿರುಗಿ ಬರುವಾಗ ಕೇಳುವುದಿಲ್ಲ. ಅಂತೆಯೇ ದೇವಸ್ಥಾನದ ಒಳಗೆ ಹೋದ ನಂತರ ದೀರ್ಘ ಸಮಯಗಳ ಕಾಲವೂ ಈ ಶಬ್ದಗಳು ಕೇಳುವುದಿಲ್ಲ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೆರಿನಾ ಗಾರ್ಡನ್ ದಕ್ಷಿಣ ಮುಂಬಯಿಯ ಶ್ರೀಮಂತರ ದುರಹಂಕಾರದ ವರ್ತನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರತಿಷ್ಠಿತ ಗಾರ್ಡನ್ಗೆ ಸ್ಲಮ್ ಮಕ್ಕಳು ಆಡಲು ಬರಬಾರದೆಂದು ಕಫ್ ಪರೇಡ್ ಪ್ರದೇಶದ ನಿವಾಸಿಗಳು ಪೊಲೀಸ್ ಕಂಪ್ಲೇಂಟ್ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ರೋಸ್ ವಾಟರ್ ತ್ವಚೆಯ ಆರೈಕೆ ಗೆ ಉತ್ತಮವಾದದ್ದು. ಇದನ್ನು ಮುಖಕ್ಕೆ ದಿನವೂ ಹಚ್ಚುವುದರಿಂದ ಕಲೆಗಳು ನಿವಾರಣೆಯಾಗುತ್ತವೆ. ಚರ್ಮದ ಕಾಂತಿ ಹೆಚ್ಚಾಗುತ್ತದೆ. ಸುಕ್ಕು ಗಟ್ಟುವುದು ನಿಲ್ಲುತ್ತದೆ. ಇದೂ ಕೇವಲ ಸೌಂದರ್ಯಕ್ಕೆ ಮಾತ್ರ ಒಳ್ಳೆಯದಲ್ಲ, ಇದರ ಪರಿಮಳ ನಮ್ಮ ಸ್ಟ್ರೆಸ್ ಅನ್ನು ದೂರವಾಗುತ್ತದೆ. ಮನಸ್ಸು ಇದರ ಸುವಾಸನೆಯಿಂದ ಹಗುರಾಗಿ ಹೊಸ ಚೈತನ್ಯ ದೊರಕುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ರೋಸ್ ವಾಟರ್ ದುಬಾರಿ ಮತ್ತು ಅದರಲ್ಲಿ ಕಲಬೇರಿಕೆಯೂ ಇರಬಹುದು. ಮನೆಯಲ್ಲೇ ತಯಾರಿಸಿದ ರೋಸ್ ವಾಟರ್ ಸುರಕ್ಷಿತವಾಗಿರುತ್ತದೆ ಮತ್ತು ನಾವು ಕಡಿಮೆ ಕರ್ಚಿನಲ್ಲಿ…
ಕಂಡಕ್ಟರ್ ಇಲ್ಲದ KSRTC ಒಡೆಯನಿಲ್ಲದ ಮನೆಯಂತಿತ್ತು.
ಮನುಷ್ಯ ಮರಣಿಸಿದ ನಂತರ ಆತನ ಶ್ರಾದ್ಧ ಕರ್ಮಗಳನ್ನು ಮಾಡುವವರೆಗೂ ಆತನ ಆತ್ಮ ಈ ಲೋಕದಲ್ಲೇ ತಿರುಗಾಡುತ್ತಿರುತ್ತದೆ ಎಂದು ಹಿಂದು ಪುರಾಣಗಳು ನಂಬುತ್ತವೆ.
ನಮ್ಮ ದೇಶದಲ್ಲಿ ತುಂಬಾ ಜನರು ರೈಲು ಪ್ರಯಾಣವನ್ನ ಮಾಡೇ ಇರುತ್ತಾರೆ, ರೈಲು ಪ್ರಯಾಣ ಕೆಲವರಿಗೆ ಕಡಿಮೆ ಖರ್ಚಿನದ್ದು ಆಗಿದ್ದರೆ ಇನ್ನು ಕೆಲವರಿಗೆ ಅದೂ ಅವಿಸ್ಮರಣೀಯ ಅನುಭವವನ್ನ ಕೊಡುತ್ತದೆ. ಇನ್ನು ಕೆಲವರು ರೈಲಿನಲ್ಲಿ ಪ್ರಯಾಣ ಮಾಡದೇ ಇದ್ದರೂ ಕೂಡ ರೈಲನ್ನಾದರೂ ನೋಡಿರುತ್ತಾರೆ. ಇನ್ನು ಜನರಿಗೆ ರೈಲುಗಳ ಬಗ್ಗೆ ಮತ್ತು ರೈಲು ಚಾಲಕರ ಬಗ್ಗೆ ಮಾಹಿತಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ರೈಲು ಹಳಿಗಳ ಬಗ್ಗೆ ಮತ್ತು ಅದನ್ನ ಮಾಡಲು ತಗುಲುವ ಖರ್ಚಿನ ಮತ್ತು ಒಂದು ಕಿಲೋ ಮೀಟರ್ ರೈಲು ಹಳಿಯನ್ನ…
ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೆ ಇರುವವರು ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹಿಂದಿನ ಕಾಲದಲಿ ಮೊಬೈಲ್ ಫೋನ್ ಗಳು ಇರಲಿಲ್ಲ ಮತ್ತು ಜನರು ಯಾರ ಬಳಿ ಆದರೂ ಮಾತನಾಡಬೇಕು ಅಂದರೆ ಲ್ಯಾಂಡ್ ಲೈನ್ ಅಥವಾ ಅಂಚೆ ಕಚೇರಿಯ ಮೊರೆ ಹೋಗುತ್ತಿದ್ದರು, ಆದರೆ ಈಗ ಒಬ್ಬ ವ್ಯಕ್ತಿ ಎಷ್ಟೇ ದೂರ ಇದ್ದರು ಆತನ ಜೊತೆ ಮೊಬೈಲ್ ಮೂಲಕ ಮಾತನಾಡಬಹುದಾಗಿದೆ. ಇನ್ನು ಕೆಲವು ಮೊಬೈಲ್…