ಉಪಯುಕ್ತ ಮಾಹಿತಿ

1 ಕಿಲೋ ಮೀಟರ್ ರೈಲು ಹಳಿಯನ್ನ ಜೋಡಿಸಲು ಬೇಕಾಗುವ ಹಣ ಎಷ್ಟು. ನೋಡಿ ರೈಲು ಹಳಿಯ ಸೀಕ್ರೆಟ್.

63

ನಮ್ಮ ದೇಶದಲ್ಲಿ ತುಂಬಾ ಜನರು ರೈಲು ಪ್ರಯಾಣವನ್ನ ಮಾಡೇ ಇರುತ್ತಾರೆ, ರೈಲು ಪ್ರಯಾಣ ಕೆಲವರಿಗೆ ಕಡಿಮೆ ಖರ್ಚಿನದ್ದು ಆಗಿದ್ದರೆ ಇನ್ನು ಕೆಲವರಿಗೆ ಅದೂ ಅವಿಸ್ಮರಣೀಯ ಅನುಭವವನ್ನ ಕೊಡುತ್ತದೆ. ಇನ್ನು ಕೆಲವರು ರೈಲಿನಲ್ಲಿ ಪ್ರಯಾಣ ಮಾಡದೇ ಇದ್ದರೂ ಕೂಡ ರೈಲನ್ನಾದರೂ ನೋಡಿರುತ್ತಾರೆ. ಇನ್ನು ಜನರಿಗೆ ರೈಲುಗಳ ಬಗ್ಗೆ ಮತ್ತು ರೈಲು ಚಾಲಕರ ಬಗ್ಗೆ ಮಾಹಿತಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ರೈಲು ಹಳಿಗಳ ಬಗ್ಗೆ ಮತ್ತು ಅದನ್ನ ಮಾಡಲು ತಗುಲುವ ಖರ್ಚಿನ ಮತ್ತು ಒಂದು ಕಿಲೋ ಮೀಟರ್ ರೈಲು ಹಳಿಯನ್ನ ಜೋಡಿಸುವುದಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂದು ತುಂಬಾ ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಒಂದು ಕಿಲೋ ಮೀಟರ್ ರೈಲು ಹಳಿಯನ್ನ ಜೋಡಣೆ ಮಾಡುವುದಕ್ಕೆ ಎಷ್ಟು ಹಣ ಬೇಕಾಗುತ್ತದೆ ಅನ್ನುವುದರ ಬಗ್ಗೆ ತಿಳಿಯೋಣ.

ಹೌದು ಈ ರೈಲುಗಳು ಅಂದರೇನೇ ಹಾಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಅನ್ನುವ ಕೂತೂಹಲ ಎಲ್ಲರಿಗೂ ಇರುತ್ತದೆ, ಕಡಿಮೆ ಖರ್ಚಿನಲ್ಲಿ ಕೋಟ್ಯಾಂತರ ಭಾರತೀಯರಿಗೆ ಸೇವೆಯನ್ನ ಕೊಡುತ್ತಿರುವ ಈ ರೈಲುಗಳು ಸಂಚಾರವನ್ನ ಮಾಡಬೇಕು ಅಂದರೆ ಹಳಿಗಳು ತುಂಬಾ ಮುಖ್ಯ. ಇನ್ನು ಪ್ರಯಾಣಕ್ಕೆ ಹಳಿಗಳು ತುಂಬಾ ಮುಖ್ಯವಾದ ಕಾರಣದಿಂದ ಸರ್ವಕಾಲಕ್ಕೆ ಅನುಗುಣವಾಗುವ ಅತ್ಯಂತ ಸುರಕ್ಷಿತ ಹಾಗು ದಕ್ಷವಾದ ರೈಲು ಹಳಿಗಳನ್ನ ನಿರ್ಮಾಣ ಮಾಡುತ್ತದೆ ನಮ್ಮ ಭಾರತ ಸರ್ಕಾರದ ರೈಲ್ವೆ ಇಲಾಖೆ. ಇನ್ನು ನಮ್ಮ ಭಾರತದಲ್ಲಿ ಒಂದು ಕಿಲೋ ಮೀಟರ್ ರೈಲು ಹಳಿಯನ್ನ ನಿರ್ಮಾಣ ಮಾಡಬೇಕು ಅಂದರೆ ಕೋಟ್ಯಾಂತರ ರೂಪಾಯಿ ಹಣ ಬೇಕಾಗುತ್ತದೆ.

ಇನ್ನು ಡಬಲ್ ಟ್ರ್ಯಾಕ್ ಹೊಂದಿರುವ ಒಂದು ಕಿಲೋ ಮೀಟರ್ ರೈಲು ಹಳಿಯನ್ನ ಹಾಕಲು ತಗುಲುವ ವೆಚ್ಚ ಸುಮಾರು 2 ರಿಂದ 3 ಕೋಟಿ ಹಣ ಬೇಕಾಗುತ್ತದೆ ಎಂದು ಹೇಳುತ್ತದೆ ಭಾರತೀಯ ಸಿವಿಲ್ ಇಂಜಿನಿಯರಿಂಗ್ ಹಾಗು ಇತರೆ ರೈಲ್ವೆ ಇಲಾಖೆಯ ಕಂಪನಿಗಳು. ಇನ್ನು ಇದರಲ್ಲಿ ರೈಲ್ವೆ ಹಳಿಗಳು, ಮೆಕಾನಿಕಲ್ ಕೆಲಸಗಳು ಮತ್ತು ಕಾರ್ಮಿಕರ ವೆಚ್ಚ ಎಲ್ಲವೂ ಕೂಡ ಸೇರಿರುತ್ತದೆ. ಇನ್ನು ಕೆಲವು ಕಡೆ ಸೇತುವೆ ಮತ್ತು ಅಂಡರ್ ಪಾಸ್ ಗಳನ್ನ ನಿರ್ಮಾಣ ಮಾಡಬೇಕಾಗಿರುವುದರಿಂದ ಸರಾಸರಿಯಾಗಿ ಇಷ್ಟು ಹಣ ಬೇಕು ಎಂದು ಹೇಳಲಾಗಿದೆ.

ಇನ್ನು ಸಮತಟ್ಟಾದ ಪ್ರದೇಶಗಳಿಗೆ ಖರ್ಚು ಕಡಿಮೆ ಬರಬಹುದು ಮತ್ತು ಗುಡ್ಡಗಾಡು ಪ್ರದೇಶ, ಅಂಡರ್ ಪಾಸ್ ಮತ್ತು ಸೇತುವೆಯನ್ನ ಮಾಡುವ ವೇಳೆಯಲ್ಲಿ ಖರ್ಚುಗಳು ಸ್ವಲ್ಪ ಜಾಸ್ತಿ ಬರಬಹುದು ಬರಬಹುದು. ಇನ್ನು ಒಟ್ಟಾರೆಯಾಗಿ 2 ರಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಕಿಲೋ ಮೀಟರ್ ಡಬಲ್ ಟ್ರ್ಯಾಕ್ ರೈಲು ಹಳಿಗಳು ನಿರ್ಮಾಣ ಆಗುತ್ತದೆ. ನಮ್ಮ ಭಾರತೀಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ರೈಲು ಪ್ರಯಾಣದ ಸೇವೆಯನ್ನ ಒದಗಿಸುತ್ತಿರುವ ಸಾರಿಗೆ ಅಂದರೆ ನಮ್ಮ ಭಾರತೀಯ ರೈಲ್ವೆ ಮಾತ್ರ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ