ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದುಗಳು ನಡೆದುಕೊಳ್ಳುವ ಪವಿತ್ರ ನಾಲ್ಕು ಧಾಮಗಳ ಯಾತ್ರೆಯಲ್ಲಿ ಕೇದಾರನಾಥವೂ ಸಹ ಒಂದು, ಅಲ್ಲದೆ, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ನೆಲೆಸಿರುವ ದೇವಾಲಯವೂ ಸಹ ಇದೆ. ಮೂಲತಃ ಈ ದೇವಾಲಯವು ಪಾಂಡವರಿಂದ ನಿರ್ಮಿಸಲಾಗಿದೆ ಎನ್ನುತ್ತಾರಾದರೂ ಪ್ರಸ್ತುತ ರಚನೆಯು ಆದಿ ಗುರು ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುತ್ತದೆ.

ಪ್ರಾಯಶ: ಕೇದಾರನಾಥ ತಲುಪುವುದು ಬಹುತೇಕರಿಗೆ ಬಲು ಕಷ್ಟಕರವಾಗಿದೆ. ಏಕೆಂದರೆ ಇಲ್ಲಿರುವ ವಿಪರೀತ ಹವಾಮಾನ. ಒಮ್ಮೊಮ್ಮೆ ಮೇಘಗಳ ಸ್ಫೋಟವಾಯಿತೆಂದರೆ ಸಾಕಷ್ಟಿ ನೀರು ಹಾಗೂ ಕಲ್ಲು ಬಂಡೆಗಳು ಕೇದಾರನಾಥಕ್ಕೆ ನುಗ್ಗುವುದು ಸಾಮಾನ್ಯ. ಕಳೆದ 2013 ರಲ್ಲಿ ಕೇದಾರನಾಥವು ಅತಿ ಭೀಕರವಾದ ನೆರೆಗೆ ಒಳಗಾಗಿತ್ತು.

ಕೇದಾರನಾಥ ಪಟ್ಟಣದ ಅನೇಕ ಕಟ್ಟಡಗಳು ಹಾಗೂ ಇತರೆ ರಚನೆಗಳಿಗೆ ಸಿಕ್ಕಾಪಟೆ ಹಾನಿ ಉಂಟಾದರೂ ಕೇದಾರನಾಥ ದೇವಾಲಯಕ್ಕೆ ಅಷ್ಟೊಂದು ಹೇಳಿಕೊಳ್ಳುವ ಹಾನಿಯಾಗಿರಲಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಎತ್ತರದ ಪರ್ವತದಿಂದ ಹರಿದು ಬರುತ್ತಿದ್ದ ರಭಸದ ಜಲಧಾರೆಗೆ ದೊಡ್ಡದಾದ ಬಂಡೆಯೊಂದು ಅಡ್ಡ ನಿಂತು ದೇವಾಲಯಕ್ಕೆ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕೆಲ ಪಂಡಿತರು ಹೇಳುವ ಪ್ರಕಾರ, ಸಾಕ್ಷಾತ್ ಶಿವನೆ ಇಲ್ಲಿ ಕೇದಾರ ಖಂಡದ ಅಧಿದೇವನಾಗಿ ನೆಲೆಸಿರುವುದರಿಂದ ಮುಂದೆಯೂ ಈ ದೇವಾಲಯಕ್ಕೆ ಯಾವ ರೀತಿಯ ಹಾನಿಯೂ ಉಂಟಾಗುವುದಿಲ್ಲವಂತೆ. 2013 ರಲ್ಲಿ ಇಲ್ಲಿ ಪ್ರವಾಹ ಜರುಗಿದ ನಂತರ ಸಾಕಷ್ಟು ಹಾನಿಯುಂಟಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಅಸು ನಿಗಿದ್ದರು. ಹೀಗಾಗಿ ದೇವಾಲಯ ಮರು ನಿರ್ಮಾಣದ ಕೂಗೆದ್ದಿತ್ತು.
ಆದರೆ ಶಸ್ತ್ರಜ್ಞರು, ಪಂಡಿತರು, ವಿದ್ವಾಂಸರು ಹೇಳುವಂತೆ ಇಲ್ಲಿ ಈಗಾಗಲೆ ಸಾಕಷ್ಟು ದೇಹಗಳು ಭೂಮಿಯಲ್ಲಿ ಹಾಗೆಯೆ ಹೂತು ಹೋಗಿರುವುದರಿಂದ ನಕಾರಾತ್ಮಕ ಶಕ್ತಿಯು ಸಾಕಷ್ಟಿದ್ದು ಮೊದಲು ಪ್ರತಿ ಕಳೆಬರವನ್ನು ತೆಗೆದು ನಂತರ ಸ್ಥಳವನ್ನು ಶುದ್ಧಗೊಳಿಸಿ ನಂತರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಈ ದೇವಾಲಯದ ಮರು ನಿರ್ಮಾಣದ ಕಾರ್ಯ ಕೈಗೊಳ್ಳಬೇಕೆನ್ನುವುದು ಅವರ ಅಭಿಪ್ರಾಯವಾಗಿದೆ. ಭಕ್ತರ ಭಕ್ತಿ ಪರೀಕ್ಷಿಸುವ ಅಮರನಾಥ ಇನ್ನು ಈ ಸ್ಥಳಕ್ಕೆ ಸಂಬಂಧಿಸಿದಂತೆ ಕಥೆ ಏನೆಂದರೆ, ಹಿಂದೆ ಪಾಂಡವರು ಕುರುಕ್ಷೇತ್ರದ ಯುದ್ಧದ ನಂತರ ಶಿವನನ್ನು ದರ್ಶಿಸಿ ತಮ್ಮ ಮೇಲೆ ಬಂದೊದಗಿರುವ ಹತ್ಯಾ ಪಾಪಗಳಿಂದ ಮುಕ್ತರಾಗಬೇಕೆಂದು ಬಯಸಿದ್ದರು ಹಾಗೂ ಆ ಕಾರ್ಯದ ನಿಮಿತ್ತ ಕಾಶಿಗೆ ತೆರಳಿದ್ದರು. ಇದನ್ನರಿತ ಶಿವ ಅವರಿಗೆ ಕಾಣದ ಎತ್ತಿನ ವೇಶದಲ್ಲಿ ಉತ್ತರಾಖಂಡದ ಸ್ಥಳಕ್ಕೆ ತೆರಳಿದ್ದ.

ಈ ವಿಷಯ ತಿಳಿದುಕೊಂಡ ಪಾಂಡವರು ತಮ್ಮ ಪ್ರಯತ್ನ ಬಿಡದೆ ಉತ್ತರಾಖಂದ ಆ ಸ್ಥಳಕ್ಕೆ ತೆರಳಿ ಕಾಶಿಯಿಂದ ಬಂದ ಮಾರು ವೇಶದ ಶಿವನನ್ನು ಎತ್ತಿನ ರುಪದಲ್ಲಿರುವುದನ್ನು ಗಮನಿಸಿದರು. ಹೀಗೆ ಈ ಎತ್ತು ಕಂಡ ಸ್ಥಳವು ಗುಪ್ತಕಾಶಿಯಾಯಿತು. ನಂತರ ಅವರು ಶಿವನನ್ನು ಮೆಚ್ಚಿಸಿ ಅವನ ಆಶೀರ್ವಾದ ಪಡೆದು ಮೋಕ್ಷ ಹೊಂದಿದರು. ಇದಕ್ಕೆ ಸಂಕೇತವಾಗಿಯೆ ಇಲ್ಲಿ ತ್ರಿಕೋನಾಕಾರದ ಶಿವಲಿಂಗನನ್ನು ಕೇದಾರನಾಥನಾಗಿ ಪೂಜಿಸಲಾಗುತ್ತದೆ. ಈ ಸ್ಥಳದ ಮಹಿಮೆಯೆಂದರೆ ಯಾರು ಈ ಶಿವನನ್ನು ಭಕ್ತಿಯಿಂದ ಪೂಜಿಸುವರೊ ಅವರ ಎಲ್ಲ ಕರ್ಮಗಳು ಬಿಳುಚಿಕೊಂಡು ನಂತರ ಅವರು ತೀರಿ ಹೋದ ಮೇಲೆ ಕೈಲಾಸವನ್ನು ಸೇರುತ್ತಾರೆಂಬ ಪ್ರತೀತಿಯಿದೆ.

ಕೇದಾರನಾಥಕ್ಕೆ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗಿನ ಸಮಯ ಅನುಕೂಲ ಎನ್ನಬಹುದು. ಆದರೂ ಮಳೆಯ ಮುನ್ಸೂಚನೆಗಳನ್ನು ಆಧರಿಸಿ ಪ್ರವಾಸ ಯೋಜಿಸಿದರೆ ಉತ್ತಮ. ಮಂದಾಕಿನಿ ತಟದಲ್ಲಿರುವ ಕೇದಾರನಾಥಿಗೆ ರಸ್ತೆ ಮಾರ್ಗದಿಂದ ಹೋಗಬಹುದಾದರೂ ಕೊನೆಯ 14 ಕಿ.ಮೀ ಚಾರಣದ ಮೂಲಕವೆ ಪ್ರವೇಶಿಸಬೇಕು. ಏಕೆಂದರೆ ಅಷ್ಟೊಂದು ಕಠೋರವಾಗಿದೆ ಇಲ್ಲಿನ ಭೂಪ್ರದೇಶಗಳು. ಉತ್ತರಾಖಂಡದ ಪ್ರಭಾವಶಾಲಿ ದೇವಾಲಯಗಳು ಮುಂದೆ ಚಳಿಗಾಲದ ಸಮಯದಲ್ಲಿ ಇಲ್ಲಿ ವಿಪರಿತವಾದ ಹವಾಮಾನವಿರುತ್ತದೆ. ಎಲ್ಲ ಸ್ಥಳಗಳು ಮಂಜುಗಟ್ಟಿರುತ್ತವೆ ಹಾಗೂ ಈ ಸಂದರ್ಭದಲ್ಲಿ ಯಾವುದೆ ರಸ್ತೆ ಮಾರ್ಗಗಳು ಗೋಚರಿಸುವುದಿಲ್ಲ. ಈ ಆರು ತಿಂಗಳುಗಳ ಕಾಲ ಕೇದಾರನಥ ದೇವಾಲಯದಲ್ಲಿರುವ ಎಲ್ಲ ವಿಗ್ರಹಗಳನ್ನು ಉಖಿಮಠದಲ್ಲಿ ತಂದಿರಿಸಿ ಪೂಜಿಸಲಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಹೊಸ 1,999 ರಲ್ಲಿನ Jio-Fi ಹಾಟ್ಸ್ಪಾಟ್ ಸಾಧನವನ್ನು ಖರೀದಿಸಿದ ನಂತರ ಗ್ರಾಹಕರನ್ನು ಮೂರು ಮೊದಲ ರೀಚಾರ್ಜ್ ಆಯ್ಕೆಗಳ ನಡುವೆ ಆಯ್ಕೆ ಮಾಡಲು ಕೇಳಲಾಗುತ್ತದೆ. ಈ ಆಯ್ಕೆಯನ್ನು ಜಿಯೋ ಎಂಟು ರೀಚಾರ್ಜ್ಗಳಿಗಾಗಿ (ಕಡಿಮೆ ಎಂಟು ತಿಂಗಳಲ್ಲಿ) ದಿನಕ್ಕೆ 1.5GBಗೆ 4G ಡೇಟಾವನ್ನು ಒದಗಿಸುತ್ತಿದೆ. ರಿಲಾಯನ್ಸ್ ಜಿಯೋ ಭಾರತದಲ್ಲಿ ಮತ್ತೊಂದು ಡಿವೈಸ್ ಬಿಡುಗಡೆ ಮಾಡಿದೆ. ಇದೊಂದು ಹಾಟ್ಸ್ಪಾಟ್ ಸಾಧನವಾಗಿದೆ. ಜಿಯೋದ ಈ JioFi JMR815 ಸಾಧನವನ್ನು ಆನ್ಲೈನ್ ಶಾಪಿಂಗ್ ವೆಬ್ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ. ಜಿಯೋ JioFi…
ಇನ್ನು ಮುಂದೆ ಮೇಘಾಲಯದಲ್ಲಿ ಒಂದು ದಿನಕ್ಕಿಂತ ಹೆಚ್ಚು ದಿನ ಉಳಿಯುವುದಾದರೆ ಮೇಘಾಲಯಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳಬೇಕು. ಅಲ್ಲಿನ ಬುಡಕಟ್ಟು ಜನಾಂಗದವರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶುಕ್ರವಾರ ನಡೆದ ಮೇಘಾಲಯ ಸಚಿವ ಸಂಪುಟ ಸಭೆಯಲ್ಲಿ ಅಮೆಂಡ್ಮೆಂಟ್ ಗೆ ಒಪ್ಪಿಗೆ ಸಿಕ್ಕಿದೆ. 2016ರ ಮೇಘಾಲಯ ರೆಸಿಡೆಂಟ್ ಕಾಯ್ದೆ ಪ್ರಕಾರ ಈ ವರದಿಯನ್ನು ಮನ್ನಿಸಲಾಗಿದೆ. ತಕ್ಷಣದಿಂದ ಕಾನೂನು ಜಾರಿಯಾಗುವಂತೆ ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ. ಒಂದೊಮ್ಮೆ 24 ಗಂಟೆಗಿಂತ ಹೆಚ್ಚು ಇರುವುದಾದರೆ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ತಕ್ಷಣದಿಂದ ಜಾರಿಗೆ…
ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಪನೆ ನಡೆಯಲಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್ನಲ್ಲಿ ಅಡಿಗಲ್ಲು ಹಾಕುವ ಮೂಲಕ ಯೋಜನೆಗೆ ಚಾಲನೆ ಸಿಗಲಿದೆ.ಇದರ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ಪ್ರತಿ ವರ್ಷವೂ ಮಾನ್ಸೂನ್ನ್ನು ಕಾಯಲಾಗುತ್ತದೆ. ಯಾಕೆಂದರೆ ಆಕಾಶದಿಂದ ಸುರಿಯು ಮಳೆಯಿಂದ ಹಸಿರು ಹರಡುತ್ತದೆ.ಆದರೆ ಜನರು ಆಕಾಶದಿಂದ ಮಳೆ ಸುರಿಯುವುದನ್ನು ಕಾಯದಂತಹ ಸ್ಥಳದ ಬಗ್ಗೆ ನಿಮಗೆ ಗೊತ್ತಿರಲಾರದು.
ಸುಟ್ಟಗಾಯಗಳೇ ಇಷ್ಟು, ಗಾಯ ವಾಸಿಯಾದರೂ ಕಲೆ ಹೋಗುವುದಿಲ್ಲ.. ಕಲೆಗಳಿಂದಾಗಿ ಚರ್ಮದ ಕಾಂತಿ ಕುಗ್ಗಿದಂತಾಗುತ್ತದೆ. ಈ ಕಲೆಗಳಿಂದಾಗಿ ನಮ್ಮ ಸೌಂದರ್ಯವೇ ಹಾಳಾಗುತ್ತದೆ. ಇಂತಹ ಮಾಸದ ಕಲೆಗಳನ್ನ ಸುಲಭವಾಗಿ ನಿವಾರಿಸಬಹುದು. ಸುಟ್ಟ ಕಲೆಗಳನ್ನ ಹೋಗಲಾಡಿಸಲು ಇಲ್ಲಿವೆ ಸಿಂಪಲ್ ಮನೆ ಮದ್ದುಗಳು. * ಲೋಳೆರಸ ಇದು ಎಲ್ಲಾ ರೀತಿಯ ಚರ್ಮ ರೋಗಗಳಿಗೂ ಪರಿಹಾರ ನೀಡುತ್ತೆ ಎಂದರೆ ತಪ್ಪಾಗಲಾರದು. ಆದ್ದರಿಂದ ಸುಟ್ಟ ಗಾಯದ ಮೇಲೆ ಲೋಳೆರಸ ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ. ಕಲೆಯು ಉಳಿಯದಂತೆ ಮಾಡುತ್ತದೆ. * ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ…
ಜಗತ್ತಿನಾದ್ಯಂತ ಅನೇಕ ಧರ್ಮಗಳಿಗೆ ಸೇರಿದವರು ತಮ್ಮ ಆಚಾರ ಸಂಪ್ರದಾಯ ಪಾಲಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾವುದೇ ಧರ್ಮವನ್ನು ತೆಗೆದುಕೊಂಡರೂ ಅದರಲ್ಲಿ ತಮ್ಮ ಧರ್ಮದವರು ತೀರಿಕೊಂಡರೆ ಹೂಳುವುದೋ, ಸುಡುವುದನ್ನೋ ಮಾಡುತ್ತಾರೆ.