ಸಿನಿಮಾ

ಪಾಕ್ ಧ್ವಜ ಹಿಡಿದು ಸುದ್ದಿಯಾದ ಬಾಲಿವುಡ್ ನಟಿ…

101

ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾಳೆ. ರಾಖಿ ಸಾವಂತ್ ಫೋಟೋ ಒಂದು ವೈರಲ್ ಆಗಿದೆ. ಅದ್ರಲ್ಲಿ ರಾಖಿ ಸಾವಂತ್, ಪಾಕಿಸ್ತಾನದ ಧ್ವಜ ಹಿಡಿದು ನಿಂತಿದ್ದಾಳೆ. ಸುಂದರ ಸ್ಥಳದಲ್ಲಿ ಪಾಕಿಸ್ತಾನದ ಧ್ವಜ ಹಿಡಿದು ನಿಂತು ಫೋಟೋಕ್ಕೆ ಫೋಸ್ ನೀಡಿದ್ದಾಳೆ.

ರಾಖಿ ಸಾವಂತ್ ಫೋಟೋ ನೋಡ್ತಿದ್ದಂತೆ ಕೋಪಗೊಂಡ ಅಭಿಮಾನಿಗಳು ಶೀರ್ಷಿಕೆ ನೋಡಿದ ಮೇಲೆ ತಣ್ಣಗಾಗಿದ್ದಾರೆ. ನನಗೆ ನನ್ನ ದೇಶ ಭಾರತ ತುಂಬಾ ಇಷ್ಟ. ಆದ್ರೆ ಇದು ಬರ್ತಿರುವ ನನ್ನ ಮುಂದಿನ ಚಿತ್ರದ ಒಂದು ದೃಶ್ಯವೆಂದು ರಾಖಿ ಶೀರ್ಷಿಕೆ ಹಾಕಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಕೂಡ ಹಾಕಿದ್ದು, ಚಿತ್ರ ಧಾರಾ 370 ಕಾಶ್ಮೀರಿ ಪಂಡಿತರಿಗೆ ಸಂಬಂಧಿಸಿದ್ದಾಗಿದೆ ಎಂದು ರಾಖಿ ಹೇಳಿದ್ದಾಳೆ.

ರಾಖಿ ಈ ಚಿತ್ರದಲ್ಲಿ ಪಾಕಿಸ್ತಾನಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಸಣ್ಣ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ತಿರುವ ಭಯೋತ್ಪಾದನೆ ಸಂಘಟನೆ ವಿರುದ್ಧ ನನ್ನ ಹೋರಾಟವೆಂದು ರಾಖಿ ಹೇಳಿದ್ದಾಳೆ. ರಾಖಿ ಫೋಟೋಕ್ಕೆ ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ.

ಪಾಕಿಸ್ತಾನಿ ಪಾತ್ರದಲ್ಲಿ ನಿನ್ನನ್ನು ನೋಡಲು ಸಾಧ್ಯವಿಲ್ಲ. ಇಸ್ಲಾಂ ಒಂದು ಶಾಂತಿ ಸಾರುವ ಧರ್ಮವೆಂದು ಆತ ಹೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಖಿ, ಇದು ನನ್ನ ಚಿತ್ರ. ನಿನಗೆ ಇಷ್ಟವಾಗದೆ ಹೋದ್ರೆ ಇನ್ಸ್ಟ್ರಾಗ್ರಾಮ್ ನಿಂದ ಹೊರ ಹೋಗಬಹುದು ಎಂದು ರಾಖಿ ಕಮೆಂಟ್ ಮಾಡಿದ್ದಾಳೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ