ಸಿನಿಮಾ

ಎಲ್ಲಾ ಕಾಲಕ್ಕೂ ಬ್ಲಾಕ್ ಬಸ್ಟರ್ ಚಿತ್ರವಾಗಿರುವ ‘ಓಂ’ನಲ್ಲಿ ಅವಕಾಶ ಕೊಟ್ಟಿದ್ದ ಉಪೇಂದ್ರರವರನ್ನೇ, ನಟಿ ಪ್ರೇಮಾ ದ್ವೇಷ ಮಾಡಿದ್ದು ಏಕೆ ಗೊತ್ತಾ.!?

342

‘ಓಂ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಚಿತ್ರವಾಗಿದೆ. ಶಿವರಾಜ್ ಕುಮಾರ್ ಅಭಿನಯದ ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮಾ ಅಭಿನಯಿಸಿದ್ದಾರೆ.

ಶಿವಣ್ಣ ಜೊತೆಗೆ ‘ಸವ್ಯಸಾಚಿ’ ಚಿತ್ರದಲ್ಲಿ ಅಭಿನಯಿಸಿದ್ದ ಪ್ರೇಮಾ ‘ಓಂ’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಆದರೆ, ಈ ಚಿತ್ರದ ಚಿತ್ರೀಕರಣದ ವೇಳೆ ಉಪೇಂದ್ರ ಮೇಲೆ ಅವರು ಕೋಪ ಮಾಡಿಕೊಂಡಿದ್ದರು.

‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಉಪೇಂದ್ರ ಮೇಲೆ ಮುನಿಸಿಕೊಂಡಿದ್ದ ಕಾರಣವನ್ನು ಪ್ರೇಮಾ ಹೇಳಿದ್ದಾರೆ. ಮೊದಲ ಸಿನಿಮಾ ಮುಗಿದ ಬಳಿಕ ‘ಓಂ’ ಚಿತ್ರಕ್ಕೆ ಆಯ್ಕೆಯಾದೆ. ಉಪೇಂದ್ರ ಅವರಿಗೆ ಹೆಣ್ಣು ಮಕ್ಕಳ ಮೇಲೆ ಕರುಣೆ ಇರಲಿಲ್ಲ. ಅವರು ಕ್ರೂರಿ ಎಂದು ಕೋಪ ಬರುತ್ತಿತ್ತು.

ಹುಡುಗಿಯರನ್ನು ಕಂಡರೆ ಉಪೇಂದ್ರ ಅವರಿಗೆ ಆಗುತ್ತಿರಲಿಲ್ಲ. ಶಿವಣ್ಣರೊಂದಿಗೆ ಮಾತ್ರ ಹಾಗೆ ಮಾಡೋಣ, ಹೀಗೆ ಮಾಡೋಣ ಎಂದು ಅವರು ಮಾತನಾಡುತ್ತಿದ್ದರು. ನಮಗೆ ಏನೂ ಹೇಳುತ್ತಿರಲಿಲ್ಲ, ಏನು ಹೇಳಿ ಕೊಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಉಪೇಂದ್ರ ಅವರ ಸಹಾಯಕರು ಸಹಾಯ ಮಾಡುತ್ತಿದ್ದರು. ಉಪೇಂದ್ರ ಮೇಲೆ ಕೋಪ ಇತ್ತು. ಸಿನಿಮಾ ನೋಡಿದ ಮೇಲೆ ಇಷ್ಟೊಂದೆಲ್ಲ ಇದೆಯಾ ಎಂದು ಅನಿಸಿತ್ತು. ಇದೇ ಮಾತನ್ನು ಉಪೇಂದ್ರ ಕೂಡ ಹೇಳಿದ್ದಾರೆ.

‘ಓಂ’ ಚಿತ್ರೀಕರಣ ಸಂದರ್ಭದಲ್ಲಿ ಪ್ರೇಮಾ ಅವರಿಗೆ ನನ್ನ ಮೇಲೆ ಜಾಸ್ತಿ ಕೋಪವಿತ್ತು. ಅದನ್ನು ಸಹಾಯಕರ ಬಳಿ ಹೇಳಿಕೊಂಡಿದ್ದರು. ಶೂಟಿಂಗ್ ವೇಳೆ ಕಷ್ಟ ಸಹಿಸಿಕೊಂಡಿದ್ದರು. ಸಿನಿಮಾ ದೊಡ್ಡ ಯಶಸ್ಸು ಕಂಡಿತು ಎಂದು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ