ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಗವಾನ್ ಶಿವ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು, ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ. ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.
ಭಗವಾನ್ ಶಿವನಿಗೆ ದೇವತಗಳಾಗಲಿ, ಮನುಷ್ಯರಾಗಲಿ, ರಾಕ್ಷಸರಾಗಲಿ ಎಲ್ಲರೂ ಒಂದೇ ಎಂಬ ಭಾವವಿದ್ದು,ಯಾರಿಗೂ ಭೇದ ಭಾವ ಮಾಡುವುದಿಲ್ಲ. ಆದ್ದರಿಂದ ಶಿವನು ಅತ್ಯಂತ ಕರುಣಾಮುರ್ತಿಯಾಗಿದ್ದು, ನಿಜವಾದ ಭಕ್ತಿಗೆ ಬೇಗ ಒಲಿಯುತ್ತಾನೆ. ನಾವು ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜಿಸುತ್ತೇವೆ.ಮತ್ತು ಶಿವನನ್ನು ಪೂಜಿಸಲು ಅನೇಕ ವಿಧಾನಗಳಿವೆ. ಆದ್ರೆ ಶಿವನನ್ನು ಪೋಜಿಸುವಾಗ ಜನರು ತಮ್ಮ ಭಕ್ತಿಯ ಪರಾಕಾಷ್ಟೆಯಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ.
ಹಿಂದೂ ಪುರಾಣಗಳ ಪ್ರಕಾರ ದಂಭ ಎಂಬ ರಕ್ಕಸನಿದ್ದು, ಅವನಿಗೆ ಮಕ್ಕಳಿಲ್ಲದ ಕಾರಣ, ಭಗವಾನ್ ನಾರಾಯಣನನ್ನು ಪ್ರಾರ್ಥಿಸಲಾಗಿ, ಅವನಿಗೆ ಜಲಂಧರ್ ಎಂಬ ಪುತ್ರನು ಜನಿಸಿದನು. ಈ ಜಲಂಧರ್’ನು ತ್ರಿಲೋಕಾದಿಪತಿಯಾಗಬೇಕೆಂಬ ಆಸೆಯಿಂದ, ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದನು. ತಪಸ್ಸಿಗೆ ಒಲಿದ ಬ್ರಹ್ಮದೇವರು ಪ್ರತ್ಯಕ್ಷನಾಗಲು, ಯಾವ ದೇವತೆಗಳು ನನ್ನನ್ನು ಸೋಲಿಸಬಾರದೆಂಬ ವರವನ್ನು ಬೇಡಿದನು. ವರವನ್ನು ಕೊಟ್ಟ ಬ್ರಹ್ಮದೇವರು, ಈ ವರವು ಕೃಷ್ಣ ಕವಚವನ್ನು ಭೋದಿಸಿ, ಧರ್ಮಧ್ವಜನ ಮಗಳಾದ ತುಳಸಿಯನ್ನು ಮದುವೆಯಾಗಲು ತಿಳಿಸಿದನು. ನಿನ್ನ ಅಮರತ್ವವು ಶ್ರೀ ಕೃಷ್ಣ ಕವಚ ಮತ್ತು ತುಳಸಿ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದನು.
ಜಲಂಧರ್ ಯಾವುದೇ ದೇವತೆಗಳಿಂದ ಸೋಲಿಸಬಾರದು ಎಂಬ ವರವನ್ನು ಹೊಂದಿದ್ದರಿಂದ, ವಿಷ್ಣು ಜಲಂಧರ್ ಅವರ ಹೆಂಡತಿ ತುಳಸಿಯ ಪವಿತ್ರತೆಯನ್ನು ಉಲ್ಲಂಘಿಸಬೇಕಾಯಿತು. ಆಕೆಯ ಪತಿಯ ಮರಣದ ನಂತರ,ಈ ದ್ರೋಹದಿಂದ ಕೋಪಗೊಂಡ ತುಳಸಿಯು, ತನ್ನ ದೈವಿಕ ಎಲೆಗಳಿಂದ ಶಿವನನ್ನು ಆರಾಧಿಸದಂತೆ ಬಹಿಷ್ಕರಿಸಿದಳು.
ಒಮ್ಮೆ ಬ್ರಹ್ಮ ಮತ್ತು ವಿಷ್ಣು ದೇವತೆಗಳ ನಡುವೆ ಯಾರೂ ಸವ್ರೋತ್ತಮರೆಂದು ವಾದ ಏರ್ಪಡುತ್ತದೆ. ಇಬ್ಬರ ನಡುವೆ ಅತಿ ಘೋರವಾದ ವಾದ ಉಂಟಾಗಲು, ಆಗ ಇವರ ಮಧ್ಯ ಆದಿ ಅನ್ತ್ಯಗಳಲ್ಲಿದ ಬೃಹದಾಕಾರವಾದ ಅಗ್ನಿ ಸ್ಥಂಭ ಲಿಂಗವು ಏರ್ಪಡುತ್ತದೆ. ಭಗವಾನ್ ಶಿವನು ಲಿಂಗದ ರೂಪದಲ್ಲಿ ಕಾಣಿಸಿಕೊಂಡು, ಈ ಲಿಂಗದ ಆದಿ, ಅಂತ್ಯ ಕಂಡುಹಿಡಿದವರು ಸವ್ರೋತ್ತಮರೆಂದು ಘೋಷಿಸುತ್ತಾರೆ. ಆಗ ಬ್ರಹ್ಮ ಮತ್ತು ನಾರಾಯಣರು ಲಿಂಗದ ಆದಿ ಮತ್ತು ಅಂತ್ಯ ಹುಡುಕಲು ಹೊರಡುತ್ತಾರೆ. ನಾರಾಯಣನು ಲಿಂಗದ ತುದಿಯ ಕಡೆ, ಮತ್ತು ಬ್ರಹ್ಮನು ಲಿಂಗದ ಶಿರದ ಕಡೆ ಹುಡುಕಲು ಹೊರದುತ್ತಾರೆ. ಆದ್ರೆ ಭಗವಾನ್ ನಾರಾಯಣನಿಗೆ ಅಂತ್ಯ ಸಿಗದೇ, ಈ ಶಿವ ಲಿಂಗಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದು ನಿರ್ಧರಿಸಿ, ವಾಪಸ್ ಆಗುತ್ತಾರೆ.
ಸುಲಭವಾಗಿ ತನ್ನ ಸೋಲನ್ನು ಒಪ್ಪದ ಬ್ರಹ್ಮದೇವರು, ಆದಿಯನ್ನು ಕಂಡುಹಿಡಿಯಲು ಹೋಗುತ್ತಿರುವಾಗ ಲಿಂಗದಿಂದ ಜಾರುತ್ತಿದ್ದ ಕೇದಗೆ ಪುಷ್ಪವನ್ನು ಕಂಡ ಬ್ರಹ್ಮದೇವರು, ಕೆದಗೆಯೊಡನೆ ಸಂಧಾನ ಮಾಡಿಕೊಂಡು, ನಾನು ಲಿಂಗದ ಆಡಿಯನ್ನು ಕಂಡೆ ಎಂಬ ಸುಳ್ಳನ್ನು ಹೇಳಬೇಕೆಂದು, ಕೇದಗೆ ಪುಷ್ಪವನ್ನು ಸಾಕ್ಷಿಯಾಗಿ ಕರೆತಂದನು. ಶಿವನಿಗೆ ನಾನು ಈ ಲಿಂಗದ ಆದಿಯನ್ನು ಕಂಡೆ ಎಂದು, ಸಾಕ್ಷಿಯಾಗಿ ಕೇದಗೆ ಪುಷ್ಪವನ್ನು ಕೇಳಲಾಗಿ, ಕೇದಗೆ ಪುಷ್ಪವು ಕೂಡ ಬ್ರಹ್ಮನ ಮಾತಿಗೆ ಸಹಕರಿಸಿತು. ಆಗ ಬ್ರಹ್ಮದೇವರ ಸುಳ್ಳಿನಿಂದ ಕ್ರುದ್ದನಾದ ಶಿವನು, ಇನ್ನುಮುಂದೆ ಮೂರು ಜಗತ್ತುಗಳಲ್ಲಿ ಯಾರೊಬ್ಬರೂ ನಿನ್ನನ್ನು ಪೂಜಿಸದಂತೆ ಇರಲಿ ಎಂಬ ಶಾಪವನ್ನು ಕೊಟ್ಟನು. ಹೀಗಾಗಿ ಕೇದಗೆಯ ಸುಳ್ಳು ಸಾಕ್ಷಿಯನ್ನು ಹೇಳಿದ್ದರಿಂದ ಕೇದಗೆಯ ಭಗವಾನ್ ಶಿವನ ಪೂಜೆಗೆ ಅರ್ಹವಲ್ಲದ ಹೂವಾಗಿದೆ.
ಎಲ್ಲಾ ಪೂಜೆಗಳಲ್ಲೂ ಹರಿಶಿಣವನ್ನು ಹೆಚ್ಚಾಗಿ ಬಳಸಲಾಗುತ್ತದೆ.ಶಿವಲಿಂಗಕ್ಕೆ ಎರಡು ಭಾಗಗಳಿವೆ, ಒಂದು ಶಿವನೊಂದಿಗೆ ಸಂಬಂಧ ಹೊಂದಿದ್ದರೆ ಮತ್ತೊಂದು ದೇವಿ ಪಾರ್ವತಿಯೊಂದಿಗೆ ಸಂಭಂದ ಹೊಂದಿದೆ.ಹಾಗೂ ಸ್ತ್ರೀತ್ವವನ್ನು ಪ್ರತಿನಿಧಿಸುತ್ತದೆ. ಹರಿಶಿಣವನ್ನು ಸೌಂದರ್ಯವರ್ಧಕವಾಗಿ, ಮಹಿಳೆಯರು ಬಳಸುವುದರಿಂದ, ಇದನ್ನು ಶಿವಲಿಂಗದಲ್ಲಿ ಬಳಸಲಾಗುವುದಿಲ್ಲ ಆದರೆ ನೀವು ಜಲಧಾರಿಯ ಮೇಲೆ ಬಳಸಬಹುದು.
ವಿವಾಹಿತ ಮಹಿಳೆಯರಿಗೆ ಕುಂಕುಮ್ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಮಹಿಳೆಯರು ತಮ್ಮ ಪತಿಯ ದೀರ್ಘಾವಧಿಯ ಆಶೀರ್ವಾದವನ್ನು ಪಡೆಯುತ್ತಾರೆ.
ಆದರೆ ಭಗವಾನ್ ಶಿವನು ಲಯಕರ್ತನಾಗಿರುವುದರಿಂದ, ಕುಂಕುಮದೊಂದಿಗೆ ಪೂಜಿಸುವುದು ಮಂಗಳಕರವಲ್ಲ.
ತೆಂಗಿನಕಾಯಿ ಕೂಡ ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಪ್ರತಿ ಹಿಂದೂ ಪೂಜಾದಲ್ಲಿ ತೆಂಗಿನಕಾಯಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ನಾವು ಅನೇಕ ಮಂಗಳಕರ ಕಾರ್ಯಕ್ರಮಗಳಲ್ಲಿ ದೇವರಿಗೆ ತೆಂಗಿನಕಾಯಿಯನ್ನು ಹೊಡೆಯುತ್ತೇವೆ. ಒಬ್ಬನು ಶಿವನಿಗೆ ತೆಂಗಿನಕಾಯಿ ನೀಡಬಹುದು, ಆದರೆ ಶಿವಲಿಂಗವನ್ನು ತೆಂಗಿನ ನೀರಿನೊಂದಿಗೆ ಪೂಜಿಸಬಾರದು.
ಶಿವಲಿಂಗಕ್ಕೆ ನೀಡುವ ಎಲ್ಲವನ್ನೂ ನಿರ್ಮಲಯಾ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ನದಿಗಳು, ಸರೋವರಗಳು ಮತ್ತು ಸಮುದ್ರದಲ್ಲಿ ಹೊರತುಪಡಿಸಿ ಎಲ್ಲಿ ಬೇಕಾದರೂ ಸೇವಿಸದಂತೆ ನಿಷೇಧಿಸಲಾಗಿದೆ. ಮತ್ತು ದೇವತೆಗಳ ಮೇಲೆ ಅರ್ಪಿಸಿದ ನಂತರ ತೆಂಗಿನ ನೀರು ಸೇವಿಸುವುದರಿಂದ ಅದನ್ನು ಕುಡಿಯಲು ಕಡ್ಡಾಯವಾಗಿ ಪರಿಗಣಿಸಲಾಗುತ್ತದೆ, ಹಾಗಾಗಿ ಅದನ್ನು ಶಿವಲಿಂಗ ಪೂಜೆಯಲ್ಲಿ ಬಳಸಲಾಗುವುದಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಶುರುವಾದಾಗಿನಿಂದ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಅಂದಿನಿಂದ ಯುವತಿಯರು ತಮ್ಮ ಊರಿಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು. ಈ ಯುವತಿಯ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು. ತಕ್ಷಣ ಯುವತಿಗೆ ಸಹಾಯ ಮಾಡಲು ಮುಂದಾಗಿದ್ದು, ನಂತರ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ…
ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು.ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ಮಾತ್ರವಲ್ಲ, ತಮಿಳುನಾಡಿನಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಿದ್ದರು. ತಮಿಳ್ನಾಡಿನಲ್ಲಿ ‘ಸೇವ್ ಅವರ್ ರೈಸ್’ ಅಭಿಯಾನದ ಸಾರಥಿಯಾಗಿದ್ದ ಜಯರಾಮನ್, ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.ಬೀಜಗಳ ಸಂರಕ್ಷಣೆ,…
ವಿಮಾನದಲ್ಲಿ ಪ್ರಯಾಣ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ ಆದರೆ ಕೆಲವರು ಆ ಕನಸನ್ನ ನನಸು ಮಾಡಿಕೊಂಡರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಹೌದು ವಿಮಾನದಲ್ಲಿ ಪ್ರಯಾಣ ಮಾಡಲು ನಮಗೆ ತುಂಬಾ ಹಣ ಬೇಕಾಗುತ್ತದೆ, ಶ್ರೀಮಂತರ ಬಳಿ ಹಣ ಇರುತ್ತದೆ ಆದ್ದರಿಂದ ಅವರು ವಿಮಾನದಲ್ಲಿ ಯಾವಾಗಲು ಪ್ರಯಾಣ ಮಾಡುತ್ತಾರೆ ಆದರೆ ಬಡವರ ಬಳಿ ಹಣ ಇರುವುದಿಲ್ಲ ಆದ್ದರಿಂದ ಅವರಿಗೆ ವಿಮಾನದ ಪ್ರಯಾಣದ ಕನಸನ್ನ ನನಸು ಮಾಡಿಕೊಳ್ಳಲು ಆಗುವುದಿಲ್ಲ. ಇನ್ನು ಭಾರತವನ್ನ ಹೊರತುಪಡಿಸಿ ಹೊರ ದೇಶಗಳಿಗೆ ವಿಮಾನದ…
ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಷಯರೋಗದಿಂದ ಬಳಲಿ ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು. ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ….
ದಿನಬೆಳಗಾದ್ರೆ ನಾವು ಕನ್ನಡಿಗರು ನಮ್ಮ ಕರ್ನಾಟಕ, ಭಾಷೆ ಕನ್ನಡದ ಬಗ್ಗೆ ಹಾಗೆ ಹೀಗೆ ಅಂತ ಮಾತನಾಡುತ್ತೇವೆ. ಆದ್ರೆ ಕನ್ನಡಿಗರಾಗಿ ನಮ್ಮ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ.
ಶನಿವಾರ ಬೆಳಗ್ಗೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಮಂದಿರಕ್ಕೆ ತೆರಳಿದರು. ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಮಂದಿರದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪ್ರಧಾನಿ ಪರಾಮರ್ಶಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡದ ಕೇದಾರನಾಥಕ್ಕೆ ಶನಿವಾರ ಆಗಮಿಸಿದರು. ಸಾರ್ವತ್ರಿಕ ಚುನಾವಣೆಯ ಪ್ರಚಾರ ಕೊನೆಗೊಂಡ ಮರುದಿನವೇ ಪ್ರಧಾನಿ…