ಸುದ್ದಿ

ಜೋಡೆತ್ತುಗಳ ಸದ್ದು, ಗೋಶಾಲೆಗೆ ಬೆಳಕಾದ ದರ್ಶನ್, ಯಶ್.

74

ಜಿಲ್ಲೆಯಲ್ಲಿ ಮತ್ತೆ ಜೋಡೆತ್ತು ಸದ್ದು ಮಾಡಿದ್ದು, ರಾಜಕೀಯವಾಗಿ ಅಲ್ಲದೆ ಜೋಡೆತ್ತುಗಳು ಮಾನವೀಯತೆ ಮೆರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಗೋಮಾತೆ ಸೇವೆಗೆ ಸಿದ್ಧರಾಗಿದ್ದಾರೆ.

ನಟ ದರ್ಶನ್ ಕಳೆದ ದಿನ ಚೈತ್ರ ಗೋಶಾಲೆಗೆ ಸುಮಾರು 15 ಟ್ರ್ಯಾಕ್ಟರ್ ಭತ್ತದ ಹುಲ್ಲನ್ನು ಅನುದಾನ ಮಾಡಿದ್ದರು. ಇದೀಗ ನಟ ಯಶ್ ಕೂಡ ಚೈತ್ರ ಗೋಶಾಲೆಗೆ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಮಂಡ್ಯದ ಚೈತ್ರ ಗೋಶಾಲೆಗೆ ದರ್ಶನ್ ಮತ್ತು ಯಶ್ ಬೆಳಕಾಗಿದ್ದಾರೆ.

ಯಶ್ ಪಾಂಡವಪುರದ ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿರುವ ಚೈತ್ರ ಗೋಶಾಲೆಯ ಕಟ್ಟಡ ನಿರ್ಮಾಣ ಕೆಲಸದ ಜವಾಬ್ದಾರಿ ಹೊಂದಿಕೊಂಡಿದ್ದರು. ಕೊಟ್ಟ ಮಾತಿನಂತೆ ಕಟ್ಟಡ ಮೇಲ್ಛಾವಣಿ ನಿರ್ಮಾಣದ ಕೆಲಸವನ್ನು ಯಶ್ ತಂಡ ಆರಂಭಿಸಿದೆ. ಯಶ್ ನಂತರ ಗೋಶಾಲೆಯ ಸಹಾಯಕ್ಕೆ ದರ್ಶನ್ ಮುಂದಾಗಿದ್ದು, ಗೋಶಾಲೆಗೆ ಭೇಟಿಕೊಟ್ಟು ಹಸುಗಳಿಗೆ ಹುಲ್ಲು ತರಿಸಿಕೊಟ್ಟಿದ್ದರು.

ಚೈತ್ರ ಗೋ ಶಾಲೆಗೆ 15 ಟ್ರಾಕ್ಟರ್ ಭತ್ತದ ಹುಲ್ಲನ್ನು ದರ್ಶನ್ ನೀಡಿದ್ದರು. ಈ ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ವಿಡಿಯೋ ಹರಿದಾಡುತ್ತಿದೆ.

ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗುವುದು ಸಹಜವಾಗಿದೆ. ಹೀಗಾಗಿ ಗೋ ಶಾಲೆಯಲ್ಲಿರುವ ಸುಮಾರು 50 ದನಗಳಿಗೆ ಯಾವುದೇ ರೀತಿಯ ಮೇವಿನ ಅಭಾವ ಉಂಟಾಗಬಾರದು ಎಂದು ದರ್ಶನ್ 15 ಟ್ರ್ಯಾಕ್ಟರ್ ಹುಲ್ಲನ್ನು ಖರೀದಿ ಮಾಡಿ, ಈ ಗೋ ಶಾಲೆಗೆ ನೀಡಿದ್ದಾರೆ. ಈ ಹಿಂದೆಯೂ ಸಹ ದರ್ಶನ್ ಸಾಕಷ್ಟು ಗೋಶಾಲೆಗಳಿಗೆ ಇದೇ ರೀತಿ ಮೇವು ಹಾಗೂ ಧನ ಸಹಾಯ ಎರಡನ್ನು ಮಾಡಿದ್ದರು.

ಸದ್ಯ ಮೂಕ ಪ್ರಾಣಿಗಳ ಸಹಾಯಕ್ಕೆ ನಿಂತಿರುವ ಮೂಲಕ ಜೋಡೆತ್ತುಗಳು ಸದ್ದು ಮಾಡಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿ ಸಾಕಷ್ಟು ಸುದ್ದಿಯಾಗಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    D K ಶಿವಕುಮಾರ್ ಕಾಕಿ ವಶಕ್ಕೆ:ಇತಿಹಾಸದಲ್ಲಿ ಇಂದು ಕಪ್ಪು ದಿನ….!

    ಬಿಜೆಪಿಯವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಡಿ.ಕೆ.ಶಿವಕುಮಾರ್ ಸೇರಿದಂತೆ ಮೂವರು ಶಾಸಕರನ್ನು ವಶಕ್ಕೆ ಪಡೆದಿರುವುದು ಬಹುಶಃ ಇತಿಹಾಸದಲ್ಲಿ ಇಂದು ಕಪ್ಪು ದಿನ ಅಂತ ಭಾವಿಸಿದ್ದೇನೆ ಎಂದು ಸುರೇಶ್ ಬೇಸರದಲ್ಲಿ ಹೇಳಿದ್ದಾರೆ.ಶಿವಕುಮಾರ್ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಭೇಟಿಯಾಗಲು ಹೋಗಿದ್ದರು. ಅವರು ಯಾರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿಲ್ಲ. ಕೆಲ ಶಾಸಕರು ಮಾತ್ರ ಜೊತೆಯಲ್ಲಿ ಹೋಗಿದ್ದರು. ಆದರೆ ಅನಾವಶ್ಯಕವಾಗಿ ಇಂದು ಮಹಾರಾಷ್ಟ್ರ ಬಿಜೆಪಿ ಸರ್ಕಾರ ಕರ್ನಾಟಕದ ಶಾಸಕರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದರೆ ಇದರ ಹಿಂದೆ ಸಂಪೂರ್ಣ ಬಿಜೆಪಿ…

  • ಸುದ್ದಿ

    ಪ್ರೇಯಸಿ ಕೊಕ್ಕರೆಯ ಕಾಲು ಮುರಿದ ಬೇಟೆಗಾರ, ನಂತರ ಗಂಡು ಕೊಕ್ಕರೆ ಮಾಡಿದ ಕೆಲಸ ನೋಡಿ.

    ಮನುಷ್ಯ ಪ್ರೀತಿಗಾಗಿ ಏನು ಮಾಡಲು ಕೂಡ ತಯಾರು ಇರುತ್ತಾನೆ, ಹಾಗೆ ಪ್ರಾಣಿ ಮತ್ತು ಪಕ್ಷಿಗಳು ಕೂಡ, ಬೇಟೆಗಾರನಿಂದ ಕಾಲು ಕಳೆದುಕೊಂಡ ಹೆಣ್ಣು ಕೊಕ್ಕರೆಗಾಗಿ ಈ ಗಂಡು ಕೊಕ್ಕರೆ ಮಾಡಿದ ಕೆಲಸವನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಜಿನುಗುತ್ತದೆ. ಹಾಗಾದರೆ ಈ ಗಂಡು ಕೊಕ್ಕರೆ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ಕೊಕ್ಕರೆಯ ಪ್ರೇಮ ಕಥೆ…

  • ಆರೋಗ್ಯ

    ಈ ನುಗ್ಗೆ ಎಲೆಗಳ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ…

    ನುಗ್ಗೆಯಲ್ಲಿ ಬಿಸುಡಲು ಏನಿಲ್ಲ. ಅದರ ಕಾಯಿ ಮಾತ್ರವಲ್ಲ; ಎಲೆ, ಬೇರು, ಹೂ, ತೊಗಟೆ ಎಲ್ಲವೂ ಬಳಕೆಯ ದೃಷ್ಟಿಯಿಂದ ಮಹತ್ವ ಪಡೆದಿವೆ. ಇದರ ಮರವನ್ನು ಕೆತ್ತಿದಾಗ ಒಸರುವ ಅಂಟನ್ನು ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ತಲೆಶೂಲೆ ಶೀಘ್ರ ಶಮನವಾಗುತ್ತದೆ ಎಂದಿದೆ ವೈದ್ಯಗ್ರಂಥ. ನುಗ್ಗೆ ಎಲೆಗಳನ್ನು  ಹಲವಾರು ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಎಲೆಗಳಲ್ಲಿ ಅಮೂಲ್ಯ ಖನಿಜಗಳು, ವಿಟಮಿನ್ನುಗಳು ಹಾಗೂ ಪ್ರೋಟೀನುಗಳೂ ಇವೆ. ಸಾಮಾನ್ಯವಾಗಿ ಈ ಎಲೆಗಳನ್ನು ದಾಲ್, ಸಾಂಬಾರ್ ಅಥವಾ ಕೆಲವು ಸೂಪ್‌ಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳ ಸೇವನೆಯಿಂದ…

  • ತಂತ್ರಜ್ಞಾನ

    ಸಮುದ್ರದಲ್ಲಿ ದುಬೈಯಿಂದ ಭಾರತಕ್ಕೆ ನಿರ್ಮಿಸುತ್ತಿರುವ ರೈಲುಮಾರ್ಗ! ಎಲ್ಲಿಂದ ಎಲ್ಲಿಗೆ ಗೊತ್ತಾ?

    ಪ್ರಪಂಚದಲ್ಲಿನ ದೇಶಗಳು ಈ ಮಾಡ್ರನ್ ಟ್ರಾನ್ಸ್ಪೋರ್ಟೆಷನ್ ಮೇಲೆ ಇಂಟರೆಸ್ಟನ್ನ ತೋರಿಸುತ್ತಾರೆ. ಇದರಲ್ಲಿ ಟೆಕ್ನಾಲಜಿ ಕೂಡ ಬೆಳೆಯುತ್ತಿರುವುದರಿಂದ ಟ್ರಾನ್ಸ್ಪೋರ್ಟೆಷನ್ ಎಲ್ಲಾ ದೇಶಗಳಲ್ಲಿ ಇಂಪ್ರೂವ್ ಆಗುತ್ತಿದೆ. ಇದರಿಂದ ಭಾರತ ಕೂಡ ಹೊಸ ಹೊಸ ಟ್ರಾನ್ಸ್ಪೋರ್ಟೆಷನ್ ಪದ್ಧತಿಯನ್ನು ಕಂಡುಹಿಡಿಯುತ್ತಲೇ ಇದೆ. ಆದರೆ ಯುನೈಟೆಡ್ ಎಮಿರೇಟ್ಸ್  ದುಬೈಯಿಂದ ಮುಂಬೈವರೆಗೂ ಒಂದು ಹೈ ಸ್ಪೀಡ್ ಅಂಡರ್ವಾಟರ್ ರೈಲ್ವೇ ನೆಟ್ವರ್ಕನ್ನ ಬಿಲ್ಡ್ ಮಾಡಬೇಕೆಂಬ ಆಲೋಚನೆಯಲ್ಲಿ ಇದೆ. ಅಂದರೆ ಸಮುದ್ರದಲ್ಲಿ ಪ್ರಯಾಣಿಸುವ ರೈಲನ್ನ ನಿರ್ಮಿಸಬೇಕೆಂಬ ಆಲೋಚನೆ ಇದೆ.ಇದರಿಂದ ಟ್ರೈನ್ UAE ನಲ್ಲಿನ ಫುಜಿ಼ರಾ ನಗರದಿಂದ ಭಾರತದಲ್ಲಿನ ಮುಂಬೈವರೆಗೆ…

  • ಸುದ್ದಿ

    ಈ ವರ್ಷ ಭಾರತೀಯರು ಗೂಗಲ್ ನಲ್ಲಿ ಅತೀ ಹೆಚ್ಚಾಗಿ ಸರ್ಚ್ ಮಾಡಿ ನೋಡಿದ್ದು ಏನ್ ಗೊತ್ತಾ..?

    ಗೂಗಲ್ ನಲ್ಲಿ ಏನು ಸಿಗಲ್ಲ ಹೇಳಿ? ಪ್ರತಿಯೊಂದು ವಿಷ್ಯದ ಬಗ್ಗೆಯೂ ಗೂಗಲ್ ನಲ್ಲಿ ಮಾಹಿತಿ ಸಿಗುತ್ತದೆ. ಸಣ್ಣಗೆ ಕಾಲು ನೋವು ಬಂದ್ರೂ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸ್ತಾರೆ. ಪ್ರತಿಯೊಂದು ರೋಗ, ಅದ್ರ ಲಕ್ಷಣ, ಚಿಕಿತ್ಸೆ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಲಭ್ಯವಿದೆ. 2018ರಲ್ಲಿ ಗೂಗಲ್ ನಲ್ಲಿ ಯಾವ ರೋಗದ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ ಎಂಬ ವರದಿ ಈಗ ಹೊರಬಿದ್ದಿದೆ. 2018ರಲ್ಲಿ ಗೂಗಲ್ ನಲ್ಲಿ ಭಾರತೀಯರು ಅತಿ ಹೆಚ್ಚು ಬಾರಿ ಕ್ಯಾನ್ಸರ್ ಬಗ್ಗೆ ಹುಡುಕಾಟ ನಡೆಸಿದ್ದಾರೆ….