ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಜರ್ಮನಿಯಲ್ಲಿ ಕಂಡು ಬಂದಂತಹ ಒಂದು ಪ್ರಸಂಗ. ವ್ಯಕ್ತಿಯೊಬ್ಬ ಕೆಲಸದ ನಿಮಿತ್ತ ಹೊರ ಹೊರಟಿದ್ದ. ಆದರೆ ಅವನಿಗೆ ಸೆಕೆ ತಡೆಯಲಾಗಲಿಲ್ಲ. ಹೀಗಾಗಿ ಉಟ್ಟ ಬಟ್ಟೆ ಕಿತ್ತೆಸೆದು ಹೆಲ್ಮೆಟ್ ಮತ್ತು ಚಪ್ಪಲಿಯನ್ನು ಧರಿಸಿ ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ರಸ್ತೆಗಿಳಿದ.
ಇದೇನು ನಡೆಯುತ್ತಿದೆ ಎಂದು ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ, ಆತನ ಮುಂದೆ ಪೊಲೀಸರು ಪ್ರತ್ಯಕ್ಷರಾದರು. ನನಗೆ ಸೆಕೆ ತಡೆಯಲಾಗಲಿಲ್ಲ, ಹೀಗಾಗಿ ಬಟ್ಟೆ ಕಿತ್ತೆಸೆದು ಬಂದೆ ಎಂದಾತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಪೊಲೀಸರು ಸಹ ಆತನನ್ನು ತಡೆಯದಾದರು. ಬಳಿಕ ಆತ ಮತ್ತೆ ಅದೇ ರೂಪದಲ್ಲಿ ಸ್ಕೂಟಿ ಚಲಾಯಿಸಿಕೊಂಡು ಹೋದ.
ರಸ್ತೆಯಲ್ಲಿ ಎಲ್ಲರೂ ಅವನನ್ನು ತುಂಬಾ ಆಶ್ಚರ್ಯವಾಗಿ ನೋಡುತ್ತಿದ್ದರು ಸಹ ಅವನು ತಲೆ ಕೆಡಿಸಿಕೊಳ್ಳದೆ ಸ್ಕೂಟಿ ಯನ್ನು ನಡೆಸಿಕೊಂಡು ಹೋಗುತ್ತಲೇ ಇದ್ದ .
ಜರ್ಮನಿಯಲ್ಲಿ ಉಷ್ಣಾಂಶ ತಾರಕಕ್ಕೇರಿದ್ದು 40 ಡಿಗ್ರಿ ಸೆಲ್ಸಿಯಸ್‌ಗೆ ದಾಟಿದೆ. 1947ರ ಬಳಿಕ ಇದೇ ಮೊದಲ ಬಾರಿಗೆ ಅಲ್ಲಿ ಉಷ್ಣಾಂಶ ಇಷ್ಟೊಂದು ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್’ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.ಅಬಕಾರಿ ಸುಂಕದ ಏರಿಕೆಯ ಕಾರಂ ಈ ಬಜೆಟ್’ನಲ್ಲಿ ಆಮದುಗೊಂಡಿರುವ ಉತ್ಪನ್ನಗಳ ಮೇಲೆ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ಹಲವು ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಯಾಗಲಿದೆ.
ಎಲ್ಲರಿಗೂ ರಕ್ಷಣೆಯೊದಗಿಸುವುದು ಪೊಲೀಸರ ಕರ್ತವ್ಯ… ಅದನ್ನು ನಮ್ಮ ಪೊಲೀಸರು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ… ತಾವು ಕಷ್ಟ ಅನುಭವಿಸಿದರೂ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಪೊಲೀಸರು… ಇಲ್ಲಿ ಎಂದಲ್ಲ ವಿಶ್ವದ ಯಾವ ಮೂಲೆಗೆ ಹೋದರೂ ಪೊಲೀಸರ ಕರ್ತವ್ಯ ನಿರ್ವಹಣೆ, ದ್ಯೇಯ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಕರ್ತವ್ಯ ನಿರ್ವಹಣೆಯ ನಡುವೆ ಸಂಭವಿಸುವ ವಿದ್ಯಮಾನಗಳು ವಿಚಿತ್ರ ಮತ್ತು ವಿಶಿಷ್ಟವೆನಿಸುತ್ತವೆ. ಅಂತಹ ವಿಶಿಷ್ಟ ವಿದ್ಯಮಾನದಲ್ಲಿ ಇದೂ ಒಂದು. ಏವನ್ ಮತ್ತು ಸೋಮರ್‌ಸೆಟ್ ಕಾನ್‌ಸ್ಟಾಬ್ಯುಲರಿಯ ಅಧಿಕಾರಿಯೊಬ್ಬರು ಕೆಲಸ ನಿರ್ವಹಿಸಿ ಮನೆಗೆ ಹೋಗುವ…
ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ, ಭಾರತದಲ್ಲಿ ಕೊರೋನಾ ಈಗ ಸ್ಟೇಜ್ 2 ಹಂತದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸ್ಟೇಜ್ 4 ಗೆ ಕೊರೋನಾ ಆಕ್ರಮಿಸಿದರೆ ಖಂಡಿತ ದುರಂತ ಸಂಭವಿಸಲಿದೆ ಎಂದು ಹಲವಾರು ಮಂದಿ ಅಭಿಪ್ರಾಯ ಪಟ್ಟಿದ್ದಾರೆ, ಚೀನಾ ಈಗಾಗಲೇ ಈ ಸಂಕಷ್ಟದಿಂದ ಪಾರಾಗಿದೆ ಮತ್ತು ಭಾರತ ಈಗಾಗಲೇ ಹಲವಾರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ಇಷ್ಟೇ ಅಲ್ಲದೆ ಕೊರೋನಾ ಅಬ್ಬರಕ್ಕೆ ಈಗಾಗಲೇ ಆರ್ಥಿಕ ವಹಿವಾಟು ಕುಸಿದು ಬಿದ್ದಿದೆ, ಕೇವಲ ಏಳು ದಿನಗಳಲ್ಲಿ ಅಂತರದಲ್ಲಿ…
ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್‌ಮ್ಯಾನ್ ನಿರ್ಲಕ್ಷ್ಯ ತೋರಿದ ಸುರೇಶ್. ಪೋಸ್ಟ್‌ಮ್ಯಾನ್ ಸುರೇಶ್ ತಳವಾರ ಎನ್ನುವರು ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ನಿರ್ಲಕ್ಷ್ಯ ತೋರಿರುವ ಈ ಘಟನೆ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಂಡುಬಂದಿದೆ. ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಹಾಗೂ ಬ್ಯಾಂಕಿನಿಂದ ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ….
ಜಿಲ್ಲೆಯಾದ್ಯಂತ 15ರಿಂದ18ವರ್ಷದ 78,357 ಮಕ್ಕಳಿದ್ದು ಒಂದು ವಾರದೊಳಗೆ ಉಚಿತ ಲಸಿಕೆ ಹಾಕುವ ಮೂಲಕ ಅಭಿಯಾನ ಪೂರ್ಣ ಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಜ.3ರಿಂದ 15ರಿಂದ18 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಮೊದಲ ದಿನ 2600ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆ ಯಲ್ಲಿ 15ರಿಂದ18 ವರ್ಷದ ಮಕ್ಕಳ ಸಂಖ್ಯೆ ಕೋಲಾರ:- 23,381 ಬಂಗಾರಪೇಟೆ:-10,662 ಕೆಜಿಎಫ್:- 11,231 ಮಾಲೂರು:- 11,743…
ಈ ಬಾರಿಯ ವಿಶ್ವಕಪ್‍ನ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯಗಳಿಗೆ ಮಳೆರಾಯನೇ ವಿಲನ್ ಆಗುತ್ತಿದ್ದು, ಭಾನುವಾರವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶ್ವಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 6 ಪಂದ್ಯಗಳಲ್ಲಿ ಸೆಣಸಾಡಿದ್ದು, ಆರು ಬಾರಿಯೂ ಭಾರತವೇ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಭಾನುವಾರ 7ನೇ ಪಂದ್ಯ ನಡೆಯಲಿದ್ದು ವಿಜಯಲಕ್ಷ್ಮಿ ಯಾರ ಪರವಾಗಿದ್ದಾಳೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಂಗಳೂರಿನ…