ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಳ್ಳಗಿನ ಕೂದಲು ಇರುವ ವ್ಯಕ್ತಿಗಳನ್ನು ಕಂಡರೆ ನಾವು ಅಜ್ಜಿ-ತಾತ ಎಂದು ಸಂಭೋಧಿಸುತ್ತೇವೆ. ಅಂದರೆ ಈ ನರೆ (ಬೆಳ್ಳಗಿನ) ಕೂದಲು ಸಂಭವಿಸುವುದು 50ರ ಮೇಲೆ ಎಂದಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಈ ನರೆ ಕೂದಲು 12 ರಿಂದ 20ರ ವಯಸ್ಸಿನಲ್ಲೇ ಕಂಡುಬರುತ್ತಿರುವುದು ಆತಂಕಕಾರಿ ವಿಚಾರ. ಆದರೆ ನರೆ ಕೂದಲು ಇಷ್ಟು ಚಿಕ್ಕ ವಯಸ್ಸಿಗೆ ಕಾಣಿಸಿಕೊಳ್ಳಲು ಕಾರಣವೇನು? ಸಮಸ್ಯೆಗೆ ಪರಿಹಾರ ಅಥವಾ ಮನೆಮದ್ದು ಏನೆಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.
ಬಿಳಿ ಕೂದಲಿಗೆ ಕಾರಣವೇನು? : *ಆನುವಂಶಿಕತೆ, *ವಿಟಿಲಿಗೊ, ಟ್ಯೂಬೆರಸ್ ಸ್ಕ್ಲೆರೋಸಿಸ್, ವಾರ್ಡನ್ ಬರ್ಗ್ ಸಿಂಡ್ರೋಮ್, ನ್ಯೂರೋಫೈಬ್ರೊಮಾ ಟೋಸಿಸ್, ಗ್ರೇವ್ಸ್ ಅಥವಾ ಹಶಿಮೊಟೊ ಕಾಯಿಲೆಗಳಿದ್ದಾಗ., *ಪೌಷ್ಠಿಕಾಂಶದ ಕೊರತೆ, *ಹೆಚ್ಚು ಒತ್ತಡ, *ಸಿಂಥೆಟಿಕ್ ಶಾಂಪೂ ಮತ್ತು ಸಾಬೂನುಗಳ ಬಳಕೆ, *ಧೂಮಪಾನ *ಇನ್ನು ಅನೇಕ ಕಾರಣಗಳಿಗೆ ನರೆ ಕೂದಲು ಬರಬಹುದು. ಆದರೆ ಸಮಸ್ಯೆಯ ಮೂಲ ಕಾರಣ ಗೊತ್ತಾಗಬೇಕಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನೆಲ್ಲಿಕಾಯಿ :*ನಿಮಗೆ ಬೇಕಾಗಿರುವುದು 3-4 ನೆಲ್ಲಿಕಾಯಿ, 1 ಕಪ್ ನೀರು, *ಮೊದಲಿಗೆ ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, *ನಂತರ ಒಂದು ಲೋಟ ನೀರಿಗೆ ಸೇರಿಸಿ, ಕುದಿಯಲು ಬಿಡಿ, *ಚೆನ್ನಾಗಿ ಕುದಿಸಿದ ನಂತರ ಒಲೆಯಿಂದ ಕೆಳಗಿಳಿಸಿ, ತಣ್ಣಗಾಗಲು ಬಿಡಿ. ಆನಂತರ ಸೋಸಿ, *ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ವಾರಕ್ಕೆ 1-2 ಬಾರಿ ಹೀಗೆ ಮಾಡಿ
ಕೊಬ್ಬರಿ ಎಣ್ಣೆ: *1-2 ಟೇಬಲ್ ಸ್ಪೂನ್ ಶುದ್ಧವಾದ ತಾಜಾ ಕೊಬ್ಬರಿ ಎಣ್ಣೆ ತೆಗೆದಿಟ್ಟುಕೊಳ್ಳಿ, *ನಿಮ್ಮ ನೆತ್ತಿ ಮತ್ತು ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ, *ಒಂದು ಗಂಟೆ ಬಿಟ್ಟು ಮೈಲ್ಡ್ ಕ್ಲೆನ್ಸರ್‌ನಿಂದ ತೊಳೆಯಿರಿ, *ಗುಣಮಟ್ಟದ ಕಂಡಿಷನರ್ ಹಚ್ಚಿ. ವಾರಕ್ಕೆ 1-2 ಬಾರಿ ಹೀಗೆ ಮಾಡಿ
ಅಲೊವೆರಾ: *ಅಲೊವೆರಾ ಜ್ಯೂಸ್ ಒಂದು ಕಪ್ ತೆಗೆದಿಟ್ಟುಕೊಳ್ಳಿ, *ಗೋರಂಟಿ ಅಥವಾ ಕಾಫಿ ಜೊತೆಯಲ್ಲಿ ಇದನ್ನು ಸೇರಿಸಿ, *ಇದನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಡಿ, *ತಿಂಗಳಿಗೊಮ್ಮೆ ಹೀಗೆ ಮಾಡಬಹುದು. ಅಲೊವೆರಾ ಜ್ಯೂಸ್ ಅನ್ನು ವಾರಕ್ಕೊಮ್ಮೆ ಬಳಸಬಹುದು.
ಕರಿಬೇವಿನ ಎಲೆಗಳು: *15-20 ಕರಿಬೇವಿನ ಎಲೆಗಳು, ½ ಕಪ್ ಕೊಬ್ಬರಿ ಎಣ್ಣೆ ತೆಗೆದಿಟ್ಟುಕೊಳ್ಳಿ, *ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆಗೆ 15-20 ಕರಿಬೇವಿನ ಎಲೆ ಸೇರಿಸಿ ಕುದಿಸಿ. *ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದಾಗ, ಒಲೆ ಆಫ್ ಮಾಡಿ. ತಣ್ಣಗಾಗಲು ಬಿಡಿ. ಇದನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿ. ಕನಿಷ್ಠ ಒಂದು ಗಂಟೆ ಕಾಲ ಬಿಡಿ, *ಬೇಗ ಫಲಿತಾಂಶ ಬೇಕೆಂದರೆ ವಾರಕ್ಕೊಮ್ಮೆ ಮಾಡಬಹುದು
ಭೃಂಗರಾಜ ಎಣ್ಣೆ ಅಥವಾ ಪುಡಿ: *ನೆತ್ತಿಗೆ ಮತ್ತು ಕೂದಲಿಗೆ ಭೃಂಗರಾಜ ಎಣ್ಣೆ ಹಚ್ಚಿ. *ಒಂದು ಗಂಟೆ ಬಿಟ್ಟು ಮೈಲ್ಡ್ ಕ್ಲೆನ್ಸರ್‌ನಿಂದ ತೊಳೆಯಿರಿ. *ಎಣ್ಣೆಯಿಲ್ಲದಿದ್ದರೆ ಭೃಂಗರಾಜ ಪುಡಿಯನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. *ಇದನ್ನು ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ತೊಳೆಯಿರಿ. *ವಾರಕೊಮ್ಮೆ ಅಥವಾ ತಿಂಗಳಿಗೊಮ್ಮೆ ನೀವಿದನ್ನು ಮಾಡಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ನನ್ ಎಕ್ಕಡ’ ಡೈಲಾಗ್’ನಿಂದ್ಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್ ಶಿವಣ್ಣ ವಿರುದ್ದ ವೀಡಿಯೋ ಮೂಲಕ ತಿರುಗಿ ಬಿದ್ದಿದ್ದಾರೆ.
ಪ್ರತಿ ವರ್ಷದಂತೆ ಜನವರಿ ತಿಂಗಳಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಅಡಿಯಲ್ಲಿ ಅರ್ಜಿ ಆಹ್ವಾನಿಸಲಿದ್ದಾರೆ
ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ ‘ಅವಿಸ್ಮರಣೀಯರಾಗಿರುವುದು’ ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ – ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು ‘ಬಾಸೆಲ್ ಮಿಶನ್’ ನವರು ಪ್ರಕಟಿಸಿದರು.
ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಅಂತೆಯೇ ನೀವೂ ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಒಂದು ಕಡೆ ಬಿದ್ದಿರುವ ಕಲ್ಲು ತನ್ನಿಂದ ತಾನೇ ಚಲಿಸುತ್ತದೆ ಎಂದರೆ ಅದು ಕಲ್ಪನೆಯಾಗಿರಬೇಕಷ್ಟೆ. ಆದರೆ ಇಲ್ಲಿರುವ ಕಲ್ಲುಗಳು ಆಶ್ಚರ್ಯ ಎನ್ನುವಂತೆ ಚಲಿಸುತ್ತವೆ.
ಸೀತಾಫಲ… ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ವಿಟಮಿನ್ ಎ, ಮೆಗ್ನಿಷಿಯಮ್, ಪೊಟ್ಯಾಷಿಯಂ, ಫೈಬರ್, ವಿಟಮಿನ್ ಬಿ6, ಕ್ಯಾಲ್ಸಿಯಂ,ವಿಟಮಿನ್ ಸಿ, ಐರನ್ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಅದೆಷ್ಟೋ ಇವೆ.