News

ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಕೆಕೆಆರ್ ವಿರುದ್ದ ಗೆದ್ದ RCB – ಉಲ್ಟಾಪಲ್ಟಾ ಆದ ಲೆಕ್ಕಾಚಾರ
ಸಾರಿಗೆ ನೌಕರರಿಗೆ 12.50% ವೇತನ ಹೆಚ್ಚಳ: ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ನೌಕರ ಸಂಘಟನೆಗಳ ಅಸಮಾಧಾನ
ಇತ್ತ ದುಡ್ಡು ಹೋಯ್ತು ಅತ್ತ ಮನೆಯೂ ಇಲ್ಲ; ಸ್ಲಂ ಬೋಡ್೯ ನಂಬಿ ಬೀದಿಗೆ ಬಿದ್ದ ನಿರಾಶ್ರಿತರು
ಚೀನಾದಲ್ಲೇ ಚೀನಾವನ್ನು ಮಣಿಸಿ ಚಿನ್ನ ಗೆದ್ದ ದೀಪಿಕಾ-ಅಂಕಿತಾ-ಕುಂಕುಮ್!
ಸ್ಮಾರ್ಟ್‌ಫೋನ್‌ ಬಳಕೆಯಿಂದಾಗಿ ಗಂಡ-ಹೆಂಡತಿ ಮಧ್ಯೆ ಬಿರುಕು
TVK – 108 ಶಾಸಕರೂ ಸಾಮೂಹಿಕ ರಾಜೀನಾಮೆ ಎಚ್ಚರಿಕೆ..!
ಎಳನೀರು ಕತ್ತರಿಸಿದ ನಂತರ ಎಷ್ಟು ಕಾಲ ತಾಜಾ ಇರುತ್ತದೆ?
ಗೆಲುವಿನ ಖುಷಿಯಲ್ಲಿರುವ ವಿಜಯ್​​ಗೆ ಎದುರಾಯ್ತು ಬ್ಯಾಡ್ ನ್ಯೂಸ್! ಬರೋಬ್ಬರಿ ₹70 ಕೋಟಿ ನಷ್ಟ?
ಸುದ್ದಿ

ಜಗತ್ತಿನಲ್ಲೇ ಅತಿ ದುಬಾರಿ ಡೈವೋರ್ಸ್; ಪತ್ನಿಗೆ 2.4 ಲಕ್ಷ ಕೋಟಿ ರೂ ಪರಿಹಾರ ಕೊಟ್ಟಿದ್ದು ಯಾರು ಗೊತ್ತೇ.??

54

ವಿಶ್ವದ ಅತೀದೊಡ್ಡ  ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್​​​​ ಸಂಸ್ಥಾಪಕ ಹಾಗೂ ಸಿಇಒ ಜೆಫ್​​​ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್​​​ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್​​ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್​​​ ಸಹ ಸಂಸ್ಥಾಪಕ ಬಿಲ್​​ ಗೇಟ್ಸ್​ ಅಲಂಕರಿಸಿದ್ದಾರೆ.

ಫೋರ್ಬ್ಸ್​​​ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಈ ಬಾರಿ 105.7 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ. ಅಮೇಜಾನ್​​ ಷೇರು ಬೆಲೆ ಶೇ. 9 ಕುಸಿದು 1624 ಡಾಲರ್​ಗೆ ಅಂತ್ಯಗೊಂಡಿದೆ. ಹಾಗೆಯೇ ಬಿಲ್ ಗೇಟ್ಸ್ ಆಸ್ತಿ ಮೌಲ್ಯ 8800 ಕೋಟಿ ರೂ. ಆಗಿದ್ದು,  ಬೆಜೋಸ್​​ರನ್ನು ಹಿಂದಿಕ್ಕಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಜೆಫ್​​​ ಮತ್ತು ತನ್ನ ಹೆಂಡತಿ ಮೆಕೆಂಜಿ ಬೆಜೋಸ್​​ ದಾಪಂತ್ಯದಲ್ಲಿ ಬಿರುಕು ಮೂಡಿತ್ತು. ಈ ಬಗ್ಗೆ ಖುದ್ದು ಸ್ವತಃ ಜೆಫ್ ಮತ್ತು ಅವರ ಮಾಜಿ ಪತ್ನಿಯೇ ಜಂಟಿಯಾಗಿ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದು, ಡಿವೋರ್ಸ್​​ ಪಡೆದುಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದರು. ಅಲ್ಲದೇ ನಮ್ಮ ದಾಂಪತ್ಯ ಜೀವನದ ಬೆಳವಣಿಗೆ ಬಗ್ಗೆ ಜನರಿಗೆ ಮಾಹಿತಿ ಇರಲಿ. ನಾನು ಜೆಫ್​​​ ಕಳೆದ 25 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದೇವೆ. ಈಗ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಗೆಳೆಯರಾಗಿರಲು ನಿರ್ಧರಿಸಿದ್ದೇವೆ. ಇಷ್ಟು ದಿನ ದಂಪತಿಗಳಾಗಿ ನಾವಿಬ್ಬರೂ ವೈವಾಹಿಕ ಜೀವನ ಸಂತೋಷದಿಂದ ಕಳೆದಿದ್ದೇವೆ ಎಂದು ತಿಳಿಸಿದ್ದರು ಮೆಕೆಂಜಿ ಬೆಜೋಸ್.

2018ರಲ್ಲಿ ಅಮೇಜಾನ್​​ ಕಂಪನಿಯ ಸಂಸ್ಥಾಪಕ ಜೆಫ್​​, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದರು. ಜೆಫ್ ಒಟ್ಟು 137 ಬಿಲಿಯನ್ ಡಾಲರ್ (9,67,289 ಕೋಟಿ ರೂ.) ಮೌಲ್ಯದ ಸಂಪತ್ತು ಹೊಂದಿದ್ದರು. ಆರಂಭದಲ್ಲಿ ಅಮೇಜಾನ್​​ ಕಂಪನಿಯಲ್ಲಿಯೇ ಮೆಕೆಂಜಿ ಬೆಜೋಸ್​​​ ಉದ್ಯೋಗಿಯಾಗಿದ್ದರು. ನಂತರ 2014ರಲ್ಲಿ ಬೈಸ್ಟಾಂಡರ್ ರಿವೊಲ್ಯೂಶನ್ ಎಂಬ ಸಂಸ್ಥೆ ಆರಂಭಿಸಿ ಶ್ರಮಿಸಿತ್ತು ಈ ದಂಪತಿ. ಜೆಫ್​​ ಈಗಾಗಲೇ ತಮ್ಮ ಪತ್ನಿ ಮೆಕೆಂಜಿ ಬೆಜೋಸ್ ಗೆ ವಿಚ್ಛೇದನ ನೀಡಿದ್ದಾರೆ. ಹಾಗೆಯೇ ಪತ್ನಿಗೆ ಜೆಫ್​ ಅವರು ನೀಡಿರುವ ಜೀವನಾಂಶ ಬರೋಬ್ಬರಿ 69 ಶತಕೋಟಿ ಡಾಲರ್​. ಜೆಫ್​ ಅವರು ತಮ್ಮ ಸ್ನೇಹಿತರ ಪತ್ನಿ ಜತೆ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿಯೇ ಮೆಕೆಂಜಿ ಜೆಫ್​​ಗೆ ವಿಚ್ಛೇದನ ನೀಡಲಾಗಿದೆ ಎನ್ನಲಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ತೆರೆದ ಗಾಯಕಿ….!

    ಸಾಮಾಜಿಕ ಜಾಲತಾಣಗಳಲ್ಲಿ ಹೊಸತೊಂದು ಚಾಲೆಂಜ್ ಬಂದಿದೆ; ಅದೇ ಬಾಟಲ್ ಕ್ಯಾಪ್ ಚ್ಯಾಲೆಂಜ್. ಇದರಲ್ಲಿ ಚಾಲೆಂಜ್ ತಗೊಂಡವರು ರೌಂಡ್‌ ಹೌಸ್ ಕಿಕ್ ಹೊಡೆದು ಬಾಟಲ್‌ಗೆ ಹಾಕಿದ ಮುಚ್ಚಳವನ್ನು ತೆಗೆಯಬೇಕು. ಜೇಸನ್ ಸ್ಟ್ಯಾಥಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್‌ರಂತಹ ನಟರು ಹಾಗೂ ಹಲವು ಫೈಟರ್‌ಗಳು ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲೊಬ್ಬ ಗಾಯಕಿ ಕೇವಲ ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ಎಗರಿಸಿರುವಂತೆ ಕಾಣುತ್ತದೆ. ಮರಿಯಾ ಕ್ಯಾರಿ ಎನ್ನುವ ಅಮೆರಿಕಾದ ಗಾಯಕಿ ಟ್ವೀಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೈ ಪಿಚ್‌ನಲ್ಲಿ ರಾಗ ಎಳೆಯುತ್ತಿದ್ದಂತೆ…

  • ಸುದ್ದಿ

    ಎಲ್ಲರಿಗೂ ಟಾರ್ಗೆಟ್ ಆದ ‘ರಾಧಾ ರಮಣ’ ಸೀರಿಯಲ್ ನಟಿ ಸುಜಾತ…!

    ‘ರಾಧಾರಮಣ’ ಧಾರಾವಾಹಿಯಲ್ಲಿ ಸಿತಾರಾ ದೇವಿ ಆಗಿ ಅಭಿನಯಿಸುತ್ತಿದ್ದ ಸುಜಾತ ನಿಜ ಜೀವನದಲ್ಲಿ ‘ವಿಲನ್’ಅಲ್ಲ. ಆಕೆ ಅನ್ನಪೂರ್ಣೇಶ್ವರಿ ಅಂತೆಲ್ಲಾ ‘ಅಗ್ನಿಸಾಕ್ಷಿ’ ಚಂದ್ರಿಕಾ ಖ್ಯಾತಿಯ ಪ್ರಿಯಾಂಕಾ ಹಾಡಿ ಹೊಗಳುತ್ತಿದ್ದರು. ಯಾಕಂದ್ರೆ, ಅಡುಗೆ ಮನೆಯ ನೇತೃತ್ವ ವಹಿಸಿಕೊಂಡಿದ್ದ ಸುಜಾತಾ ರುಚಿರುಚಿಯಾಗಿ ಮಾಡುತ್ತಿದ್ದ ಅಡುಗೆ ಪ್ರಿಯಾಂಕಾಗೆ ಇಷ್ಟ ಆಗಿತ್ತು. ಮೊದಲವಾರ ಸುಜಾತ ಜೊತೆ ಕ್ಲೋಸ್ ಆಗಿದ್ದವರು ಪ್ರಿಯಾಂಕಾ. ಇದೀಗ ಅದೇ ಪ್ರಿಯಾಂಕಾ ಎರಡನೇ ವಾರದ ನಾಮಿನೇಷನ್ ನಲ್ಲಿ ಸುಜಾತಾರನ್ನ ಟಾರ್ಗೆಟ್ ಮಾಡಿದ್ದಾರೆ.ಅವಶ್ಯಕತೆ ಇಲ್ಲದೇ ಇದ್ದರೂ ಸುಜಾತಾ ಕೂಗಾಡಿದ್ರಂತೆ. ಇದನ್ನೇ ನೆಪ ಮಾಡಿಕೊಂಡು ಸುಜಾತಾ…

  • ವಿಸ್ಮಯ ಜಗತ್ತು

    30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿರುವ ಮಹಿಳೆ..!

    ಚಳಿಗಾಲದಲ್ಲಿ ಒಂದು ಕಪ್ ಬಿಸಿ ಬಿಸಿ ಟೀ ಕುಡಿಯುವುದಕ್ಕಿಂತ ಯಾವುದು ಹೆಚ್ಚು ಸುಖ ಕೊಡುವುದಿಲ್ಲ, ಆದರೆ ಕೇವಲ ಟೀ ಕುಡಿದೇ ಬದುಕಿರಲು ಸಾಧ್ಯವೇ?ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ ಆದರೆ ಛತ್ತೀಸ್‍ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ. ಹೌದು, ಛತ್ತೀಸ್ ಗಡದ ಕೊರಿಯಾ ಜಿಲ್ಲೆಯ ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ,…

  • ಸಿನಿಮಾ

    ಪಾಕ್ ಧ್ವಜ ಹಿಡಿದು ಸುದ್ದಿಯಾದ ಬಾಲಿವುಡ್ ನಟಿ…

    ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾಳೆ. ರಾಖಿ ಸಾವಂತ್ ಫೋಟೋ ಒಂದು ವೈರಲ್ ಆಗಿದೆ. ಅದ್ರಲ್ಲಿ ರಾಖಿ ಸಾವಂತ್, ಪಾಕಿಸ್ತಾನದ ಧ್ವಜ ಹಿಡಿದು ನಿಂತಿದ್ದಾಳೆ. ಸುಂದರ ಸ್ಥಳದಲ್ಲಿ ಪಾಕಿಸ್ತಾನದ ಧ್ವಜ ಹಿಡಿದು ನಿಂತು ಫೋಟೋಕ್ಕೆ ಫೋಸ್ ನೀಡಿದ್ದಾಳೆ. ರಾಖಿ ಸಾವಂತ್ ಫೋಟೋ ನೋಡ್ತಿದ್ದಂತೆ ಕೋಪಗೊಂಡ ಅಭಿಮಾನಿಗಳು ಶೀರ್ಷಿಕೆ ನೋಡಿದ ಮೇಲೆ ತಣ್ಣಗಾಗಿದ್ದಾರೆ. ನನಗೆ ನನ್ನ ದೇಶ ಭಾರತ ತುಂಬಾ ಇಷ್ಟ. ಆದ್ರೆ ಇದು ಬರ್ತಿರುವ ನನ್ನ ಮುಂದಿನ ಚಿತ್ರದ ಒಂದು ದೃಶ್ಯವೆಂದು…