ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮದ ವಿಲಾಸ್ರಾವ್ ಹೂಗಾರ್ ಇವತ್ತಿನ ನಮ್ಮ ಹೀರೋ. ಭೀಕರ ಬರಗಾಲದಿಂದ ನಲುಗಿ ಹೋಗಿರುವ ಜಿಲ್ಲೆಯಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ಆದರೆ 15 ವರ್ಷಗಳ ಹಿಂದೆ ವಿಲಾಸ್ರಾವ್ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಬಿಸಿಲ ನಾಡು ಬೀದರ್ ನ ಔರಾದ್ ತಾಲೂಕಿನ ವಿಲಾಸ್ರಾವ್ ಹೂಗಾರ್ ಅವರು ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದಿದ್ದಾರೆ. ಇದಕ್ಕಾಗಿ 15 ವರ್ಷಗಳಿಂದ ಹೆಗಲ ಮೇಲೆ ನೀರು ಹೊತ್ತಿದ್ದಾರೆ.
ಸಾಹಸಿ ಜೀವನ ನೋಡಿದ ಸ್ಥಳೀಯ ಅಧಿಕಾರಿಗಳು ಈಗ ಬೋರ್ವೆಲ್ ಕೊರೆಸಿಕೊಟ್ಟಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಹೆಂಡತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ, ಮಗ ವಿಕಲಚೇತನನಾಗಿದ್ದು ಜೊತೆಗೆ ಪುಟ್ಟ ಹೆಣ್ಣು ಮಗುವನ್ನು ಸಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಮಾನಸಿಕವಾಗಿ ಕುಗ್ಗದೇ ವಿಲಾಸ್ ರಾವ್ ಮುಂದೆ ಸಾಗುತ್ತಿದ್ದಾರೆ. ಗ್ರಾಮದಲ್ಲಿ ಬೀಳುವ ಸಗಣಿಯನ್ನು ಸಂಗ್ರಹಿಸಿ, ಬೆಳೆಗೆ ಹಾಕಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿಲಾಸ್ ಅವರ ವಿಲಾಸ್ ಹೂಗಾರ್ ಅವರ ಈ ಕಾರ್ಯ, ಆತ್ಮಹತ್ಯೆಗೆ ಶರಣಾಗುವ ರೈತರು, ಗುಳೆ ಹೋಗುವ ಜನರಿಗೆ ಸ್ಫೂರ್ತಿಯಾಗಲಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಫೆಬ್ರವರಿ 13ರಂದು ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ…
ಐಪಿಎಲ್ 12 ನೇ ಆವೃತ್ತಿಯ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಐಪಿಎಲ್ – 2019 ರ ಪಂದ್ಯಗಳು ಮಾರ್ಚ್ 23 ರಿಂದ ಶುರುವಾಗಲಿದೆ. ಉದ್ಘಾಟನೆ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವೀಟರ್ ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 17 ಪಂದ್ಯಗಳ ವೇಳಾಪಟ್ಟಿಯನ್ನು ಟ್ವಿಟ್ ಮಾಡಲಾಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೆ ಪಂದ್ಯಗಳು ನಡೆಯಲಿವೆ. ಕೊಲ್ಕತ್ತಾ, ಚೆನ್ನೈ,…
ದುಡ್ಡಿನ ಅಗತ್ಯ ಯಾವಾಗ ಹೇಗೆ ಬೀಳುತ್ತದೆ ಎಂದು ಹೇಳಲು ಅಸಾಧ್ಯ. ಬದುಕಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ದುಡ್ಡಿನ ಅನಿವಾರ್ಯತೆ ಎದುರಾಗಬಹುದು. ಅದನ್ನು ಇಷ್ಟೇ ಅಂತ ಹೇಳಲು ಬರುವುದಿಲ್ಲ. ಹೀಗಾಗಿ ಎಲ್ಲಾ ಉಳಿಕೆ, ಹೂಡಿಕೆಗಳ ಬಳಿಕವೂ ತುರ್ತು ಸಂದರ್ಭದಲ್ಲಿ ಅನುಕೂಲವಾಗಲು ನಿಮ್ಮಲ್ಲಿ ಹಣ ಇರಲೇ ಬೇಕಾಗುತ್ತದೆ. ಆರೋಗ್ಯ ವಿಮೆ, ವಾಹನ ವಿಮೆಗಳನ್ನೆಲ್ಲಾ ಅಂದುಕೊಂಡ ಕಾಲಕ್ಕೆ ಪಾವತಿಯಾಗುವುದಿಲ್ಲವಾದದ್ದರಿಂದ ಟರ್ನ್ ಓರ್ವ ಮಾಡಲು ಸಾಧ್ಯವಾಗುವಂತಹ ಪ್ಲಾನ್ ಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಉಳಿಕೆಯನ್ನು ನಿರ್ದಿಷ್ಟವಾಗಿ ಇಷ್ಟೇ ಎಂದು ಹೇಳಲು…
ಕನ್ನಡ ಬಿಗ್ಬಾಸ್ ಇನ್ನೇನು ಮೂರೂ ವಾರಗಳ ಕಾಲ ನಡೆಯಲ್ಲಿದ್ದು ಮುಕ್ತಾಯಗೊಳ್ಳಲಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಗಲಭೆ ಸೃಷ್ಟಿಯಾಗಿದೆ. ಹೌದು ಅಡುಗೆ ಮನೆಯಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ನಡುವೆ ಮಾತಿನ ಚಕಮುಕಿ ನಡೆದಿದೆ. ಅಡುಗೆ ಮನೆಯಲ್ಲಿ ಎಲ್ಲರೂ ಸೇರಿ ಅಡುಗೆ ಮಾಡುತ್ತಿದ್ದಾಗ, ದೀಪಿಕಾ ಮತ್ತು ಚಂದನ್ ನಡುವೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ಸೃಷ್ಠಿಯಾಗಿದೆ. ದೀಪಿಕಾ ದಾಸ್ ಅವರು ಚಂದನ್ ಗೆ ನಾಳೆ ನೀವು ಅಡುಗೆ ಮಾಡಿ, ನಾಳಿದ್ದು…
ಈಗಂತೂ ಚಳಿಗಾಲ. ಏನಾದರೂ ಸ್ಪೈಸಿ ಸ್ಪೈಸಿ ತಿನ್ನಲೇ ಬೇಕು ಅನ್ನಿಸದೆ ಇರೋದಿಲ್ಲ. ಅದರಲ್ಲೂ ನಾನ್ವೆಜ್ ತಿನ್ನುವವರು ಚಿಕನ್ ನಲ್ಲಿ ವಿಧ ವಿಧವಾದ ಸ್ಪೈಸಿಯಾದ ಕಬಾಬ್, ಚಿಕನ್ ಫ್ರೈ ಮಾಡಿ ತಿನ್ನುತ್ತಾರೆ. ಆದರೆ ಇನ್ನೂ ಏನಾದರೂ ಸ್ಪೆಷಲ್ ಮಾಡಬೇಕು ಎನ್ನಿಸಿದರೆ ಈ ಚಳಿಗಾಲದಲ್ಲಿ ಅದೂ ಹಳ್ಳಿ ಶೈಲಿಯಲ್ಲಿ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಆದರೆ ಮಾಡೋದು ಹೇಗೆ ಗೊತ್ತಿಲ್ಲ ಎಂದರೆ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ… ಚಿಕನ್ ಚಾಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ –…
ರಾಜ್ಯದ 12 ಕಿರುಬಂದರುಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಲೋಕೋಪಯೋಗಿ , ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು, ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು…