ಸುದ್ದಿ

Video Game; 4 ತಿಂಗಳಲ್ಲಿ 30 ಗೇಮ್‌ ರಚಿಸಿ ಅಚ್ಚರಿ ಮೂಡಿಸಿದ ಬಾಲಕ,.!!

66

ಮಕ್ಕಳು ಮೊಬೈಲ್‌ ಹಿಡಿದುಕೊಂಡರೆ, ಮೊದಲು ಹುಡುಕುವುದು ಗೇಮ್ಸ್ ಇದೆಯೇ ಎಂದು! ಅದಾದ ಬಳಿಕ ವಿಡಿಯೋ, ಕ್ಯಾಮರಾ ಎಂದೆಲ್ಲ ವಿವಿಧ ಆಯ್ಕೆಗಳನ್ನು ಹುಡುಕುತ್ತಾರೆ. ಅಲ್ಲದೆ ಮೊಬೈಲ್, ಕಂಪ್ಯೂಟರ್ ಮತ್ತು ಟ್ಯಾಬ್ ಬಳಕೆಯನ್ನು ಕೂಡ ಬಹಳ ಬೇಗನೆ ಕಲಿತುಕೊಂಡು ಬಿಡುತ್ತಾರೆ. ಹೀಗೆ ಸ್ಮಾರ್ಟ್ ಆಗಿರುವ ನೈಜೀರಿಯಾದ 9 ವರ್ಷದ ಬಾಲಕನೊಬ್ಬ ನಾಲ್ಕೇ ತಿಂಗಳಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್‌ಗಳಿಗಾಗಿ 30 ಗೇಮ್‌ಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ.

ಈ ಬಾಲಕನ ಹೆಸರು ಬೇಸಿಕ್‌ ಓಕ್ಪರಾ ಜ್ಯೂ. ಲಾಗೋಸ್‌ ನಿವಾಸಿಯಾಗಿರುವ ಈ ಬಾಲಕನ ತಂದೆ, ಈತನನ್ನು ಬೂಟ್‌ ಕ್ಯಾಂಪ್‌ಗೆ ಸೇರಿಸಿದ್ದರು. ಅಲ್ಲಿಆತ ಗೇಮ್‌ ಕೋಡಿಂಗ್‌ ಕಲಿತಿದ್ದ. ನಾಲ್ಕನೇ ವರ್ಷದಲ್ಲೇ ಬೇಸಿಕ್‌, ಟ್ಯಾಬ್‌ನಲ್ಲಿಸಾಕಷ್ಟು ಗೇಮ್‌ಗಳನ್ನು ಆಡುತ್ತಿದ್ದ.

7ನೇ ವರ್ಷವಿದ್ದಾಗ ಬೇಸಿಕ್‌ ಇಡೀ ದಿನ ಗೇಮಿಂಗ್‌ನಲ್ಲೇ ನಿರತನಾಗಿದ್ದ. ಇದನ್ನು ನೋಡಿದ ಆತನ ತಂದೆ, ”ನೀನು ಯಾಕೆ ನಿನ್ನದೇ ಆದ ಸ್ವಂತ ಗೇಮ್‌ ಮಾಡಬಾರದು. ಅದನ್ನು ಇತರರು ಆಡುವಂತಾಗಲಿ,” ಎಂದು ಬಿಟ್ಟರು. ಬಳಿಕ 9ನೇ ವರ್ಷವಿದ್ದಾಗ ಬೇಸಿಕ್‌, ಗೇಮ್‌ ಅಭಿವೃದ್ಧಿಪಡಿಸುವುದನ್ನು ತಿಳಿದುಕೊಂಡ ಬಾಲಕ, ನಾಲ್ಕು ತಿಂಗಳಲ್ಲೇ 30 ಗೇಮ್‌ಗಳನ್ನು ಸೃಷ್ಟಿಸಿದ್ದಾನೆ. ಬಿಜೆಆರ್‌ ಗೇಮ್ಸ್‌ ಟ್ಯಾಗ್‌ನಡಿ ಈ ಗೇಮ್‌ಗಳನ್ನು ನೀವು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿನೋಡಬಹುದು.

ಸ್ಮಾರ್ಟ್‌ಫೋನ್ ಆ್ಯಪ್‌ ಮತ್ತು ಗೇಮಿಂಗ್ ಬಹಳ ಬೇಡಿಕೆಯ ಕ್ಷೇತ್ರವಾಗಿದ್ದು, ಉದ್ಯೋಗ ಮತ್ತು ಹವ್ಯಾಸಕ್ಕೂ ದಾರಿಯಾಗಿದೆ. ಜತೆಗೆ ಹೊಸ ಅಯ್ಕೆಗಳ ಅನ್ವೇಷಣೆಗೂ ದಾರಿಮಾಡಿಕೊಡುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ