ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೂಪರ್ ಸ್ಟಾರ್ ರಜನಿಕಾಂತ್ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಅಂತವರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಮಾತಿನಂತೆ ತಮಿಳುನಾಡಿನ ನೆರೆ ಸಂತ್ರಸ್ತರಿಗೆ ಮನೆಯನ್ನು ನೀಡುವ ಮೂಲಕ ಸಹಾಯವನ್ನು ಮಾಡಿದ್ದಾರೆ

ಕಳೆದ ವರ್ಷ ತಮಿಳುನಾಡಿನಲ್ಲಿ ಸಂಭವಿಸಿದ ಸೈಕ್ಲೋನ್ ಬಗ್ಗೆ ನಿಮಗೆ ತಿಳಿದೇ ಇದೆ ಜನರು ತತ್ತರಿಸಿ ಹೋಗಿದ್ದು, ನೂರಾರು ಜನರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ವೇಳೆ ಅನೇಕ ನಟರು ಅವರಿಗಾಗಿ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದ್ದರು. ಆದರೆ ರಜನಿಕಾಂತ್ ಅವರು ನೆರೆ ಸಂತ್ರಸ್ತರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ರಜನಿಕಾಂತ್ ಅವರು ಇಂದು ತಮ್ಮ ಕಚೇರಿಯಲ್ಲಿ ನೆರೆ ಸಂತ್ರಸ್ತರಿಗೆ ಮನೆಯ ಹಕ್ಕು ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ರಜನಿಕಾಂತ್ ಸಂತ್ರಸ್ತರಿಗೆ ಮನೆಯ ಪತ್ರಗಳನ್ನು ನೀಡುತ್ತಿರುವ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಅವರ ಈ ಕೆಲಸ ನೋಡಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ತಮ್ಮನ್ನು ಹೀರೋ ಮಾಡಿದ ನಿರ್ಮಾಪಕರಿಗೆ ಒಂದು ಕೋಟಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದರು. ರಜನಿಕಾಂತ್ ಮೊದಲ ಬಾರಿಗೆ 1978ರಲ್ಲಿ `ಭೈರವಿ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾವೂ ಸೂಪರ್ ಹಿಟ್ ಆಗಿದ್ದು, ನಿರ್ಮಾಪಕ ಕಲೈಜ್ಞಾನಂ ಚಿತ್ರವನ್ನು ನಿರ್ಮಿಸಿದ್ದರು. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದರೂ ಕಲೈಜ್ಞಾನಂ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಹಾಗಾಗಿ ರಜನಿಕಾಂತ್ ನಿರ್ಮಾಪಕರಿಗೆ ಮನೆಯನ್ನು ಗಿಫ್ಟ್ ಆಗಿ ನೀಡಿದ್ದರು. ಇಷ್ಟೇ ಅಲ್ಲ ರಜನಿಕಾಂತ್ ಅವರು ಇನ್ನು ತುಂಬಾನೇ ಸಹಾಯವನ್ನು ಮಾಡುತ್ತಿದ್ದಾರೆ ಅಂತವರ ಬಗ್ಗೆ ಎಷ್ಟು ಮಾತಾಡಿದರು ಅದು ಚಿಕ್ಕದೇ ಎಂದು ಅನಿಸುತ್ತದೆ ಏಕೆಂದರೆ ಅವರ ಅಭಿಮಾನ ಬಳಗ ಅಂತದ್ದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಮಿಳುನಾಡು ರಾಜಕೀಯದಲ್ಲಿ ಭಾರೀ ಅನಿಶ್ಚಿತತೆ ನಿರ್ಮಾಣವಾಗಿದ್ದು, ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ದೊಡ್ಡ ರಾಜಕೀಯ ಎಚ್ಚರಿಕೆಯನ್ನು ನೀಡಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಕೈಜೋಡಿಸಿ ಸರ್ಕಾರ ರಚಿಸಲು ಪ್ರಯತ್ನಿಸಿದರೆ, ತಮ್ಮ ಪಕ್ಷದ ಎಲ್ಲಾ 108 ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂಬ ಸಂದೇಶ ಹೊರಬಿದ್ದಿದೆ. ತಮಿಳುನಾಡಿನ 2026 ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. 234 ಸದಸ್ಯರ ಸದನದಲ್ಲಿ ಬಹುಮತಕ್ಕೆ 118 ಸ್ಥಾನಗಳು ಅಗತ್ಯವಿದ್ದರೂ, TVK 108 ಸ್ಥಾನಗಳನ್ನು ಗೆದ್ದು…
ರೈಲ್ವೆ ಇಲಾಖೆ ಕೇಂದ್ರ ಸರ್ಕಾರಕ್ಕೊಂದು ಪತ್ರ ಬರೆದಿದೆ. ರೈಲ್ವೆ ಇಲಾಖೆಯಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆಯಿದೆ. ಅದಕ್ಕೆ ಕೆಲವೊಂದು ನಿಯಮಗಳಿವೆ. ಆದ್ರೆ ಒಂದು ವರ್ಷದ ಹಿಂದೆ ರೈಲ್ವೆ ಸಿಬ್ಬಂದಿ ಪುತ್ರ ಈಗ ಪುತ್ರಿಯಾಗಿರುವ ವ್ಯಕ್ತಿ ಕುಟುಂಬ ಪಿಂಚಣಿಗಾಗಿ ಪತ್ರ ಬರೆದಿದ್ದಾನೆ. ಇದೇ ವಿಚಾರ ಸದ್ಯ ಕೇಂದ್ರದ ಮೆಟ್ಟಿಲೇರಿದೆ. 2017ರಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅವ್ರ 32 ವರ್ಷದ ಮಗ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಾಸ್ತವವಾಗಿ ಸಿಬ್ಬಂದಿ ಹಣವನ್ನೇ ಕುಟುಂಬ ಆಶ್ರಯಿಸಿಕೊಂಡಿದ್ದರೆ ಮಾತ್ರ ಪಿಂಚಣಿ ನೀಡಲಾಗುತ್ತದೆ. 25 ವರ್ಷದೊಳಗಿನ ಮದುವೆಯಾಗದ…
ಲಾಲ್ಬಾಗ್ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆಗಸ್ಟ್ 9ರಿಂದ ಆರಂಭವಾಗಲಿದೆ. ದೇಶ ಸ್ವಾತಂತ್ರ್ಯಗೊಂಡ ನಂತರ ರಾಜಸಂಸ್ಕೃತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲಾಗುತ್ತದೆ. ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ , ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆ ಅವರು ರಾಜ್ಯಕ್ಕೆ…
ಮೈಸೂರು ಅರಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಹಾರಾಣಿ ತ್ರಿಶಿಕಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಯದುವಂಶಕ್ಕೆ ವಾರಸುದಾರನನ್ನು ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಅರಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ.
ಗುಜರಾತ್ನ ಬನಸ್ಕಾಂತ ಜಿಲ್ಲೆಯ ಠಾಕೂರ್ ಸಮುದಾಯದಲ್ಲಿ ಯುವತಿಯರು ಮೊಬೈಲ್ ಪೋನ್ ಬಳಕೆ ಮಾಡದಂತೆ ನಿಷೇಧವೇರಿದೆ. ಇನ್ನು ಬೇರೆ ಜಾತಿ ಯುವಕರನ್ನು ಮದುವೆಯಾದರೇ ಭಾರಿ ಮೊತ್ತದ ದಂಡವನ್ನು ಪಾಲಕರಿಗೆ ವಿಧಿಸಲಾಗುವುದು ಜಿಲ್ಲೆಯ 12 ಗ್ರಾಮಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದು ಸಮುದಾಯದ ನಾಯಕರು ಹಾಗೂ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಮದುವೆಗೂ ಮುನ್ನ ಯುವತಿಯರು ಮೊಬೈಲ್ ಬಳಸಬಾರದು. ಒಂದೆ ವೇಳೆ ಬಳಸಿದರೆ, ಅದಕ್ಕೆ ಹೆತ್ತವರೇ ಜವಾಬ್ದಾರಿಯಾಗಲಿದ್ದಾರೆ. ಇನ್ನು ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ,…
ಇನ್ನೇನು ಚುನಾವಣಾ ಹತ್ತಿರ ಸಮೀಪಿಸುತ್ತಿದೆ.ಈಗಂತೂ ಎಲ್ಲಿ ನೋಡಿದರೂ ಚುನಾವಣಾ ಬಗ್ಗೆಯೇ ಮಾತುಗಳು.ಯಾರು ಗೆಲ್ತಾರೆ,ಯಾರು ಸೋಲ್ತಾರೆ ಎಂಬುದೇ ಚರ್ಚೆ ಒಂದು ಕಡೆ ಆಗಿದ್ದರೆ, ಮತ್ತೊಂದು ಕಡೆ ವೋಟರ್ IDಗೆ ಸಂಬಂದಪಟ್ಟ ಕೆಲಸಗಳು ಭರದಿಂದಲೇ ನಡೆಯುತ್ತಿದೆ.