ಕ್ರೀಡೆ

ಮದುವೆ ಆಗಲಿದ್ದಾಳೆ ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿಯಾದ ಕನ್ನಡತಿ..ಹುಡುಗ ಯಾರು ಗೊತ್ತಾ?

153

ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ.ಈ ವಿಚಾರವನ್ನು ಸ್ವತಃ ವೇದಾ ಅವರೇ ರಿವೀಲ್ ಮಾಡಿದ್ದಾರೆ.

ಕನ್ನಡ ನಾಡಿನ ವೇದಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರಿನವರಾಗಿದ್ದು ತಾವು ವಿವಾಹವಾಗುತ್ತಿರುವ ಲಲಿತ್ ಚೌಧರಿ ಎಂಬ ಯುವಕನ ಫೋಟೋವನ್ನು ಪೋಸ್ಟ್ ಮಾಡಿದ್ದರು. ವೇದಾ ಅವ್ರ ಪೋಸ್ಟ್ ಅನುಸಾರ ಅವರು ಲಲಿತ್ ಚೌಧರಿ ಎಂಬ ಯುವಕನನ್ನು ವರಿಸಲಿದ್ದಾರೆ. ಆದರೆ ಆ ಯುವಕನ ಕುರಿತಂತೆಯಾಗಲಿ, ವಿವಾಹದ ದಿನಾಂಕ ಸ್ಥಳದ ಮಾಹಿತಿಯಾಗಲಿ ಇನ್ನೂ ಲಭ್ಯವಾಗಿಲ್ಲ.

ಶೀಘ್ರವೇ ಈ ಕುರಿತ ಅಧಿಕೃತ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದರು. ವೇದಾ ಅವರ ಪೋಸ್ಟ್ ಕಂಡ ಹಲವು ಅಭಿಮಾನಿಗಳು ಶುಭಕೋರಿ ಕಾಮೆಂಟ್ ಮಾಡಿದ್ದಾರೆ.

26 ವರ್ಷದ ವೇದಾ ಕೃಷ್ಣಮೂರ್ತಿ ಟೀಂ ಇಂಡಿಯಾ ಪರ 48 ಏಕದಿನ ಪಂದ್ಯಗಳನ್ನು ಆಡಿದ್ದು, 8 ಅರ್ಧ ಶತಕಗಳೊಂದಿಗೆ 829 ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ 59 ಪಂದ್ಯಗಳನ್ನು ಆಡಿದ್ದು, ಅರ್ಧ ಶತಕದೊಂದಿಗೆ 686 ರನ್ ಗಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಚೊಚ್ಚಲ ಮಹಿಳಾ ಐಪಿಎಲ್ ತಂಡದಲ್ಲಿ ಭಾಗವಹಿಸುತ್ತಿರುವ ವೇದಾ ,ಮೇ6ರಿಂದ 11ರವರೆಗೆ ಜೈಪುರದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯಲ್ಲಿ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡದ ಪರ ಆಡಲಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ