ಸುದ್ದಿ

ರೇಸಿಂಗ್ ಪ್ರಿಯರಿಗೆ ‘ಅಪಾಚಿ RR 310’ 2.27 ಲಕ್ಷ ರೂ. ಮೌಲ್ಯದ ಟಿವಿಎಸ್ ಬೈಕ್ ಬಿಡುಗಡೆ…!

173

ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ.

ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್‍ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು ಕಾಪಾಡುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹೊಸ ಟಿವಿಎಸ್ ಅಪಾಚಿ ಆರ್ ಆರ್ 310 ಆರ್ ಟಿ ಸ್ಲಿಪ್ಪರ್ ಕ್ಲಚ್ ಒಂದು ಶಕ್ತಿಯುತ ಹಾಗೂ ಅಧಿಕ ಉಪಯುಕ್ತತೆಯ ಸೌಲಭ್ಯವಾಗಿದ್ದು, ಇದು ನಗರ ಪ್ರದೇಶ, ಹೆದ್ದಾರಿಗಳ ಜೊತೆಗೆ ರೇಸಿಂಗ್ ಸ್ಪರ್ಧೆಗಳಿಗೂ ಉತ್ತಮವಾಗಿವೆ.

ಇದು ರೇಸಿಂಗ್ ಟ್ರ್ಯಾಕ್ ಗಳಲ್ಲಿ ವೇಗವಾಗಿ ಸಾಗುವಾಗ ಹಿಂಭಾಗದ ದೃಶ್ಯಗಳನ್ನು ಸ್ಪಷ್ಟವಾಗಿ ತೋರಿಸುವ ಡಿಒಎಚ್ ಸಿ (ಡಬ್ಬಲ್ ಓವರ್ ಹೆಡ್ ಕ್ಯಾಮೆರಾ), ಲಿಕ್ವಿಡ್ ಕೂಲ್ಡ್ ಇಂಜಿನ್ ಹಾಗೂ ಆಯಿಲ್ ಕೂಲಿಂಗ್ ತಂತ್ರಜ್ಞಾನ, 6-ವೇಗದ ಗೇರ್ ಬಾಕ್ಸ್, ಸ್ಪರ್ಧೆಗಳಿಗೆ ಅನುಕೂಲಕರವಾದ ವರ್ಟಿಕಲ್ ಸ್ಪೀಡೋ-ಕಮ್-ಟ್ಯಾಕೋಮೀಟರ್, ಮೈಕೆಲಿನ್ ಸ್ಟ್ರೀಟ್ ಸ್ಪೋರ್ಟ್ಸ್ ಚಕ್ರಗಳನ್ನು ಒಳಗೊಂಡಿದೆ. ಇದು ಕೆಂಪು ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಶ್ರೀ ಸಾಯಿಬಾಬಾನನ್ನ ನೆನೆಯುತ್ತ ನಿಮ್ಮ ದಿನದ ರಾಶಿ ಭವಿಷ್ಯವನ್ನು ತಿಳಿಯಿರಿ

    ಮೇಷ ರಾಶಿ ಭವಿಷ್ಯ (Saturday, December 11, 2021) ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಲು ಆಸಕ್ತಿದಾಯಕವಾದದ್ದನ್ನೇನಾದರೂ ಓದುವ ಮೂಲಕ ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ತಮ್ಮ ವ್ಯಾಪರಕ್ಕಾಗಿ ಮನೆಯಿಂದ ಹೊರಗೆ ಹೋಗಿರುವ ವ್ಯಾಪಾರಿಗಳು, ತನ್ನ ಹಣವನ್ನು ಜಾಗರೂಕವಾಗಿಡಿ, ಹಣದ ಕಳ್ಳತನವಾಗುವ ಸಾಧ್ಯತೆ ಇದೆ. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ತನ್ನ ಪ್ರೀತಿಪಾತ್ರರಿಂದ ದೂರವಿರುವ…

  • ಸುದ್ದಿ

    MP ಪ್ರತಾಪ್ ಸಿಂಹರವರನ್ನು ಕಸ್ಟಡಿಗೆ ತೆಗೆದುಕೊಂಡ ಪೊಲೀಸರು!ಈ ಸುದ್ದಿ ನೋಡಿ…

    ಬಹುಭಾಷ ನಟ ಪ್ರಕಾಶ್ ರೈ ಸಲ್ಲಿಸಿದ್ದ ಮಾನನಷ್ಟ ಕೇಸಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರತಾಪ್ ಸಿಂಹ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಆದೇಶದ ಮೇರೆಗೆ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಕಸ್ಟಡಿಗೆ ಪಡೆದು ಕೂರಿಸಿದ್ದಾರೆ. ಮತ್ತೆ ರೀ ಕಾಲ್ ಮಾಡುವವರೆಗೆ ಕಸ್ಟಡಿಗೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ….

  • ಸಿನಿಮಾ

    ಅಂತು ಇಂತೂ,ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಮನಮೆಚ್ಚಿದ ಸಿನಿಮಾ ರಿಲೀಸ್..!

    9 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯನ್ನ ಆಧರಿಸಿ, ವಿಕಾಸ್​ ಪುಷ್ಪಗಿರಿ ಕಟ್ಟಿಕೊಟ್ಟಿರೋ ಸಿನಿಮಾ ನ್ಯೂರಾನ್​. ಕೆಲವು ದಿನಗಳ ಹಿಂದೆಯಷ್ಟೆ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ​ ಈ ಚಿತ್ರದ ಟ್ರೈಲರ್​ ಮತ್ತು ಸಾಂಗ್ಸ್​ ರಿಲೀಸ್​ ಮಾಡಿದರು.ಈ ಚಿತ್ರದ ಮೂಲಕ ಉದಯೋನ್ಮುಖ ನಟ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ನೇಹಾ ಪಾಟೀಲ್​, ವೈಷ್ಣವಿ ಮತ್ತು ಶಿಲ್ಪಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಪಿಎಚ್‌ಡಿಗಾಗಿ ಸಂಶೋಧನೆ ನಡೆಸಲು ಹೊರಡುವ ಸ್ಟೂಡೆಂಟ್ಸ್‌ ಕಾಣೆಯಾಗುತ್ತಾರೆ. ಅವರು ಎಲ್ಲೋದ್ರು..? ಏನಾದ್ರು..? ಮುಂದೇನಾಗುತ್ತೆ ಅನ್ನೋ ರೋಚಕ…

  • ಉಪಯುಕ್ತ ಮಾಹಿತಿ

    “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಆದರೆ ಇದರ ಔಷಧೀಯ ಗುಣವನ್ನು ನೀವು ತಿಳಿದರೆ ಶಾಕ್ ಆಗ್ತೀರಾ..!

    ನೋಡಿದ ಕೂಡಲೇ ಮುಖ ಸಿಂಡರಿಸಿಕೊಂಡರೂ ರುಚಿ ನೋಡಿದ ಮೇಲೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹುಟ್ಟಿಸುವ “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಔಷಧೀಯ ಗುಣವನ್ನು ಕೂಡ ಹೊಂದಿರುವ ಪಪ್ಪಾಯಿ ಹಲವು ಖಾಯಿಲೆಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿದೆ

  • ಉಪಯುಕ್ತ ಮಾಹಿತಿ, ಸರ್ಕಾರದ ಯೋಜನೆಗಳು

    24 ಗಂಟೆ ಇನ್ಮುಂದೆ ವಿದ್ಯುತ್ ಪೂರೈಕೆ, ಪವರ್ ಕಟ್ ಮಾಡಿದರೆ ವಿತರಕರಿಗೆ ದಂಡ..!ತಿಳಿಯಲು ಈ ಲೇಖನ ಓದಿ..

    ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.

  • ಸುದ್ದಿ

    ಮಳೆಯಿಂದಾಗಿ ಈರುಳ್ಳಿ ಪೂರೈಕೆ ಕುಸಿತವಾದ ಕಾರಣ; ಗಗನಕ್ಕೇರಿದ ಈರುಳ್ಳಿ ದರ,.! ಇಲ್ಲಿದೆ ಮಾಹಿತಿ,…

    ನವದೆಹಲಿ, ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್‌, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ…