ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಾಲಕರೊಬ್ಬರು ತನ್ನ ಆಟೋವನ್ನು ಮನೆಯಂತೆ ಮಾಡಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸತ್ಯವನ್ ಗೈಟ್ ಅವರು ಪ್ರಯಾಣಿಕರ ಪ್ರಯಾಣ ಸುಖಕರವಾಗಿರಲಿ ಎಂದು ತಮ್ಮ ಆಟೋದಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸತ್ಯವನ್ ಅವರ ಆಟೋದಲ್ಲಿ ವಾಶ್ ಬೇಸಿನ್, ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್, ಗಿಡಗಳು ಇನ್ನಿತರ ಸೌಲಭ್ಯಗಳು ಕಾಣಬಹುದು.
ವಿಶೇಷ ಏನಂದರೆ ಸತ್ಯವನ್ ಅವರು ಹಿರಿಯ ನಾಗರಿಕರಿಗೆ ಒಂದು ಕಿ.ಮೀವರೆಗೆ ಸವಾರಿ ಮಾಡಲು ಯಾವುದೇ ಹಣ ಪಡೆಯುವುದಿಲ್ಲ. ಅಲ್ಲದೆ ಸತ್ಯವನ್ ತಮ್ಮ ಆಟೋ ಹಿಂದೆ ‘ಮುಂಬೈನ ಮೊದಲ ಹೋಂ ಸಿಸ್ಟಮ್ ಆಟೋ ರಿಕ್ಷಾ’ ಎಂದು ಬರೆಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸತ್ಯವನ್, ನೀವು ನನ್ನ ಆಟೋದಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಹುದು. ಇಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತೆ. ವಾಶ್ ಬೇಸಿನ್ ಕೂಡ ಇದೆ. ಹಿರಿಯ ನಾಗರಿಕರಿಗೆ ಒಂದು ಕಿ.ಮೀವರೆಗೆ ಸವಾರಿ ಮಾಡಲು ನಾನು ಯಾವುದೇ ಹಣ ಪಡೆಯುವುದಿಲ್ಲ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಆಟೋವನ್ನು ಈ ರೀತಿ ಬದಲಾಯಿಸಿದೆ ಎಂದು ತಿಳಿಸಿದ್ದಾರೆ.
ಸತ್ಯವನ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಲವರು, ‘ಒಳ್ಳೆಯ ಕೆಲಸ’, ‘ಉತ್ತಮ ಕಾರ್ಯ ಮಾಡುತ್ತಿದ್ದಿರಿ’, ‘ಕೇವಲ ಮುಂಬೈಯವರು ಈ ರೀತಿ ಮಾಡಬಹುದು’ ಎಂದು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಂಪರ್ ಲಾಭ ಗಳಿಸಿದ್ದಾರೆ.ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮರಳುತ್ತಿರುವುದು ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದ್ದು, ಸೋಮವಾರ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಪ್ಟಿ ಮತ್ತೊಂದು ದಾಖಲೆಯ ಎತ್ತರವನ್ನು ತಲುಪಿದೆ. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ ಇ 871.9 ಅಂಕಗಳ ಜಿಗಿತವನ್ನು ದಾಖಲಿಸಿದ್ದು, ಸೋಮವಾರ…
ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ ತುಂಬು ಗರ್ಭಿಣಿಯಾಗಿದ್ದು, ಅವರು ಈಗ ಅಂಡರ್ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಮೀರಾರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.ಇತ್ತೀಚೆಗೆ ಸಮೀರಾ ಅಂಡರ್ವಾಟರ್ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟನ್ನು ಪ್ರೇರಣಾ ಬೇಯೋಸ್ ಅವರಿಂದ ಮಾಡಿಸಿದ್ದು, ಸಮೀರಾ ಅಂಡರ್ವಾಟರ್ ಫೋಟೋಶೂಟ್ನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಮೀರಾ, “ನಾನು ಈ ಫೋಟೋಶೂಟ್ ಮಾಡಿಸುವಾಗ ತುಂಬಾ ಆನಂದಿಸಿದ್ದೇನೆ. ನಾನು ನನ್ನ ಜೀವನ…
ವೃತ್ತಿಪರ ಕೋರ್ಸ್ಗಳ ಸರ್ಕಾರಿ ಕೋಟದ ಸೀಟುಗಳಿಗೆ ಆನ್ಲೈನ್ ನೋಂದಣಿ, ಆಪ್ಶನ್ ಎಂಟ್ರಿ, ಶುಲ್ಕಪಾವತಿ ಮಾಡುವ ಅಭ್ಯರ್ಥಿಗಳು ಮುಂದಿನ ಸಾಲಿನಿಂದ ಸೈಬರ್ ಕೆಫೆ ಸೇರಿದಂತೆ ಕಂಪ್ಯೂಟರ್ ಮೊರೆ ಹೋಗುವ ಅಗತ್ಯವಿಲ್ಲ. ಇದನ್ನೆಲ್ಲಾ ಬೆರಳ ತುದಿಯಲ್ಲೇ ಮಾಡಿ ಮುಗಿಸಬಹುದು.
ಸಾಮಾನ್ಯವಾಗಿ ವ್ಯಕ್ತಿ ಹೊಂದಿರುವ ಸೌಂದರ್ಯ ತನ್ನ ತಂದೆ ತಾಯಿ ಅಥವಾ ಅಘೋಷಿತವಾಗಿ ಬಂದಿರುವ ಸಂಪತ್ತು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹೊಂದಿರುವ ಮಾನಸಿಕ ಮತ್ತು ದೈಹಿಕ ಗುಣಗಳು ಅವನ ಜಾತಕ ಕುಂಡಲಿ ಹಾಗೂ ಅವನ ರಾಶಿ ಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎಂದು ಹೇಳಲಾಗುತ್ತದೆ. ವ್ಯಕ್ತಿ ಹುಟ್ಟುವ ಸಮಯದಲ್ಲಿ ಅವನ ಗ್ರಹಗತಿಗಳು ಯಾವ ಸ್ಥಾನದಲ್ಲಿ ಇದ್ದವು ಎನ್ನುವುದನ್ನು ಅನುಸರಿಸಿ ದೇಹ ಮತ್ತು ಮಾನಸಿಕ ಸ್ಥಿತಿಯ ರಚನೆಯಾಗುತ್ತದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ 12 ರಾಶಿ ಚಕ್ರಗಳಲ್ಲಿ…
ನಟ ರಾಕಿಂಗ್ ಸ್ಟಾರ್ ಯಶ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಯಶ್ ಅವರು ಹೊಂದಿರುವ ಕೊಠಡಿಯನ್ನು ಕೂಡ ಪರಿಶೀಲಿಸಿದ್ದಾರೆ. ಯಶ್ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದು, ಐಟಿ ದಾಳಿಯ ಮಾಹಿತಿ ತಿಳಿದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಯಶ್, ಅಲ್ಲಿಂದ ನೇರವಾಗಿ ಹೋಟೆಲ್ ಗೆ ತೆರಳಿದ್ದಾರೆ. ಯಶ್ ಅವರು…
ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಸೇರಿ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಎಚ್ ಸಚಿನ್, ಆತನ ಗೆಳೆಯರಾದ ಕಾಶಿನಾಥ್, ಗುರುನಾಥ್ ಮತ್ತು ರಘುವೀರ್ ಮೃತಪಟ್ಟವರು. ಇವರೆಲ್ಲರೂ ಸುಮಾರು 22 ವರ್ಷ ವಯಸ್ಸಿನವರಾಗಿದ್ದು, ಹುಮ್ನಾಬಾದ್ ತಾಲೂಕಿನ ಮಂಗಲಗಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರು ರಸ್ತೆಯಲ್ಲಿ…