ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮಗೆಲ್ಲರಿಗೂ ಗೊತ್ತಿರಬಹುದು, ಹಿಂದಿನ ಕಾಲದ ಮದುವೆಯ ನಿಯಮಗಳು ಸಂಪ್ರದಾಯಗಳು ಹೇಗಿತ್ತು ಎಂಬುದು. ಮದುವೆಯಾಗುವ ನವ ಜೋಡಿಗಳಲ್ಲಿ ವಧುಗಿಂತ ವರನು ದೊಡ್ಡವನಾಗಿರಬೇಕು, ಇಲ್ಲವಾದಲ್ಲಿ ಮದುವೆಗೆ ಒಪ್ಪಿಗೆಯನ್ನು ಕೊಡುತ್ತಲೇ ಇರುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ದಿನಗಳು ಉರುಳಿದಂತೆ ಸಂಪ್ರದಾಯಗಳು ಬದಲಾಗುತ್ತಿವೆ. ಜಾತಿ, ಧರ್ಮ, ವಯಸ್ಸು ಇವ್ಯಾವುದನ್ನು ಲೆಕ್ಕಿಸದೆ ತಾನು ಪ್ರೀತಿಸಿದ ವ್ಯಕ್ತಿಯನ್ನು ವಿವಾಹವಾಗಿ ಸುಖಕರ ಜೀವನ ನಡೆಸುತ್ತಿರುತ್ತಾರೆ. ಒಂದು ಕಡೆಯಿಂದ ಯೋಚಿಸುವುದಾದರೆ ಈ ನಿರ್ಧಾರ ಸರಿ ಅನಿಸುತ್ತದೆ ಅಲ್ಲವೇ? ಅಂತೆಯೇ ನಮ್ಮ ದಕ್ಷಿಣ ಭಾರತದ ಆಲ್ಮೋಸ್ಟ್ ಟಾಪ್ ನಟಿಯರು ತನಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ವಿವಾಹವಾಗಿದ್ದಾರೆ. ಅವರು ಯಾರ್ ಯಾರು ಎಂದು ತಿಳಿದುಕೊಳ್ಳಲು ಮುಂದೆ ಓದಿ.

ಕನ್ನಡದ ಮೋಸ್ಟ್ ಫೇವರಿಟ್ ಸೆಲೆಬ್ರಿಟಿ ಕಪಲ್ಸ್ ಎಂದರೆ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್.. ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆ ಅಪಾರ. ಸತತ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಡಿಸೆಂಬರ್ 9 2016 ರಂದು ಶಾಸ್ತ್ರೋಕ್ತವಾಗಿ ವಿವಾಹವಾಗಿ ಎರಡು ಮಕ್ಕಳಿಗೆ ಜನ್ಮ ನೀಡಿ ಸುಖಕರ ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಯಶ್ ಅವರಿಗಿಂತ ರಾಧಿಕಾ ಪಂಡಿತ್ ಎರಡು ವರ್ಷ ದೊಡ್ಡವರು.

ಕನ್ನಡದ ಅಭಿನೇತ್ರಿ ಜಯಂತಿ ಅವರ ಪುತ್ರನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನು ಪ್ರಭಾಕರ್ ಅವರು ಅವರಿಂದ ವಿಚ್ಛೇದನ ಪಡೆದುಕೊಂಡು, ತನಗಿಂತ ಒಂದು ವರ್ಷ ಚಿಕ್ಕವರಾದ ರಘು ಮುಖರ್ಜಿ ಅವರನ್ನು ಎರಡನೇ ವಿವಾಹವಾಗಿದ್ದಾರೆ.

ವಿಶ್ವ ಸುಂದರಿ, ತುಳುನಾಡಿನ ಬೆಡಗಿ ಐಶ್ವರ್ಯಾ ರೈ ಅವರು ಬಾಲಿವುಡ್ ನ ಹೆಸರಾಂತ ನಟ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಏಪ್ರಿಲ್ 20, 2007 ವಿವಾಹವಾಗುತ್ತಾರೆ. ಆದರೆ ಐಶ್ವರ್ಯ ಗಿಂತ ಅಭಿಷೇಕ್ ಅವರು ಎರಡು ವರ್ಷ ಚಿಕ್ಕವರು ಎಂಬುದು ವಿಶೇಷ.

ಮಂಗಳೂರಿನ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಅವರು ದಶಕಗಳ ಕಾಲ ಬಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿದ್ದರು. 22 ನವೆಂಬರ್ 2009 ರಂದು ಉದ್ಯಮಿ ರಾಜಕುಂದ್ರ ಅವರನ್ನು ವಿವಾಹವಾದ ಶಿಲ್ಪಾ ಶೆಟ್ಟಿ, ಅವರಿಗಿಂತ ಎರಡು ವರ್ಷ ಚಿಕ್ಕವರಾಗಿದ್ದಾರೆ.

ಕನ್ನಡದಲ್ಲಿ ರವಿಚಂದ್ರನ್ ಅವರೊಂದಿಗೆ ಜೋರ ಚಿತ್ತ ಚೋರ ಚಿತ್ರದಲ್ಲಿ ಅಭಿನಯಿಸಿದ ನಮ್ರತಾ ಶಿರೋಡ್ಕರ್, ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಈ ಜೋಡಿಯನ್ನು ತೆಲುಗಿನಲ್ಲಿ ಮೋಸ್ಟ್ ಫೇವರಿಟ್ ಜೋಡಿ ಎಂದು ಕರೆಯುತ್ತಾರೆ. ಆದರೆ ವಿಶೇಷವೇನೆಂದರೆ ನಮ್ರತಾ ಅವರಿಗಿಂತ ಮಹೇಶ್ ಬಾಬು ಎರಡು ವರ್ಷ ಚಿಕ್ಕವರು.

ಮೂಲತಃ ಮಹಾರಾಷ್ಟ್ರದವರಾದ ನಟಿ ಸ್ನೇಹಾ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಚಿತ್ರರಂಗದಲ್ಲಿ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ನಟ ಪ್ರಸನ್ನ ಅವರನ್ನು 2012 ರಲ್ಲಿ ವಿವಾಹವಾದ ಅವರು ಸುಖಕರ ಜೀವನ ನಡಸುತ್ತಿದ್ದು, ಪ್ರಸನ್ನ ಅವರು ಸ್ನೇಹಗಿಂತ ಒಂದು ವರುಷ ಚಿಕ್ಕವರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
2013 ಡಿಸೆಂಬರ್ 2 ರಂದು ಕಲರ್ಸ ಕನ್ನಡ ವಾಹಿನಿಯಲ್ಲಿ ತನ್ನ ಮೊದಲ ಎಪಿಸೋಡ್ ಆರಂಭಿಸಿದ ‘ಅಗ್ನಿಸಾಕ್ಷಿ’ ಪ್ರತಿರಾತ್ರಿ 8 ಗಂಟೆ ಆಗುತ್ತಿದ್ದಂತೆ ಮಹಿಳೆಯರು ಎಲ್ಲಾ ಕೆಲಸ ಮುಗಿಸಿ ಅಥವಾ ಇರುವ ಕೆಲಸ ಎಲ್ಲಾ ಬಿಟ್ಟು ‘ಅಗ್ನಿಸಾಕ್ಷಿ’ ಧಾರಾವಾಹಿ ನೋಡಲು ಕುಳಿತುಬಿಡುತ್ತಿದ್ದರು. ಆದರೆ ಇದೀಗ ಆ ಧಾರಾವಾಹಿ ಅಭಿಮಾನಿಗಳಿಗೆ ಏನೋ ಕಳೆದುಕೊಂಡಂತಾಗಿದೆ ಏಕೆಂದರೆ ಧಾರಾವಾಹಿ 6 ವರ್ಷಗಳ ಸುಧೀರ್ಘ ಪಯಣವನ್ನು ನಿಲ್ಲಿಸಿದೆ. ಅಂತೆಯೇ ಜನವರಿ 3 2020 ರಂದು ಕೊನೆಯ ಎಪಿಸೋಡ್ ಪ್ರಸಾರವಾಗಿದೆ. ಅರ್ಕ ಮೀಡಿಯಾ ಹೌಸ್ ನಿರ್ಮಾಣದ…
ತಮ್ಮನ್ನು ಸಾಕಿದವರನ್ನು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸಿದವರನ್ನು ಪ್ರಾಣಿಗಳು ಎಂದಿಗೂ ವು ರೆಯುವುದಿಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ, ಇದಕ್ಕೆ ಜೀವಂತ ನಿದರ್ಶನ ಬಳ್ಳಾರಿಯ ಜಿಂಕೆ ಮರಿ ಯಾಗಿದೆ.
ಜ್ಯೋತಿಷ್ಯಾಸ್ತ್ರ ಬಹು ಪುರಾತನವಾಗಿದ್ದರೂ ಕೆಲವರು ಇಂದಿಗೂ ನಂಬುವುದಿಲ್ಲ. ಆದರೆ ನಮ್ಮ ಹುಟ್ಟಿನ ಕೆಲವು ಅಂಶಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಜ್ಯೋತಿಷ್ಯಾಸ್ತ್ರದಲ್ಲಿ ಹೇಳದೇ ಇದ್ದರೂ ವಾಸ್ತವಾಂಶಗಳನ್ನು ಗಮನಿಸಿ ನಿಜ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್‍ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ…
ಒಬ್ಬ ತಂದೆ ಮಗಳಿಗೆ ಯಾವ ರೀತಿಯೂ ಕಷ್ಟ ಬರದಂತೆ ನೋಡಿಕೊಳ್ಳುತ್ತಾನೆ. ತಂದೆಗೆ ಮಗಳೇ ಜೀವನ ಸರ್ವಸ್ವ. ತನಗೆ ಎಷ್ಟೇ ಕಷ್ಟ ನೋವುಗಳಿದ್ದರೂ ಕೂಡ, ಅವುಗಳನ್ನು ತೋರಿಸಿಕೊಳ್ಳದೆ ಮನೆಯ ದೇವತೆಯ ರೂಪದಲ್ಲಿ ನೋಡುಕೊಳ್ಳುತ್ತಾನೆ. ಆಕೆಯ ಮದುವೆ ಮಾಡಿ ಒಳ್ಳೆಯ ಕುಟುಂಬಕ್ಕೆ ಸೇರಿಸಲು ದಿನನಿತ್ಯ ಹಗಲು- ರಾತ್ರಿ ಶ್ರಮಿಸುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ಮಗಳನ್ನು ಮದುವೆಯಾಗುವವನಿಗೆ 1200 ಕೋಟಿ ನೀಡುತ್ತೇನೆಂದು ಘೋಷಣೆ ಮಾಡಿದರು ಯಾರು ಸಹ ಮದುವೆಯಾಗಲು ಮುಂದೆ ಬರುತ್ತಿಲ್ಲ.! ಹಾಂಗ್ ಕಾಂಗ್ ನ ಸಿಸೀಲ್ ಚಾವ್ ಅವರು…
ಮೇಷ ರಾಶಿ ಭವಿಷ್ಯ (Monday, December 6, 2021) ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ. ಅವುಗಳನ್ನು ಶಾಶ್ವತವಾಗಿ ದೂರವಿಸಿರಿಸಲು ನಿಮ್ಮ ಜೀವನಶೈಲಿಯನ್ನು ಬದಲಿಸಲು ಇದು ಸರಿಯಾದ ಸಮಯ. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ನಿಮ್ಮ ಹವ್ಯಾಸಗಳನ್ನು ಮುಂದುವರಿಸುವ ಮತ್ತು ಕುಟುಂಬದ ಸದಸ್ಯರಿಗೆ ಸಹಾಯ ಮಾಡುವ ಮೂಲಕ ನೀವು ಸಮಯ ಕಳೆಯಬಹುದು. ಇಂದು ನಿಮ್ಮ ಪ್ರೇಮಿ ನಿಮ್ಮ ಮಾತುಗಳನ್ನು ಕೇಳುವುದಕ್ಕಿಂತ ತನ್ನ ಮಾತುಗಳನ್ನು ಹೇಳಲು ಇಷ್ಟಪಡುತ್ತಾನೆ. ಈ ಕಾರಣದಿಂದಾಗಿ ನೀವು ಸ್ವಲ್ಪ…