ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆ ಅರ್ಥ. ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಪ್ರದಕ್ಷಿಣೆ ಹಾಕಬೇಕು? ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಮಾಡಿದರೆ ಏನು ಫಲ ಎಂಬುದನ್ನು ತಿಳಿಯೋಣ. ಹಿಂದೂ ಪುರಾಣಗಳ ಪ್ರಕಾರ ದೇವರಿಗೆ ಹಾಕುವ ಪ್ರದಕ್ಷಿಣೆ ಬಗ್ಗೆ ಹಲವಾರು ಕಥೆಗಳಿವೆ. ಇವುಗಳಲ್ಲಿ ಶಿವ, ಗಣಪತಿ ಮತ್ತು ಕಾರ್ತೀಕೇಯನ ಕಥೆಯು ನಮ್ಮೆಲ್ಲರಿಗೆ ತಿಳಿದಿರುವಂತಾಗಿದೆ. ಶಿವ ಒಮ್ಮೆ ತನ್ನ ಇಬ್ಬರು ಪುತ್ರರಾದ ಗಣಪತಿ ಮತ್ತು ಕಾರ್ತಿಕೇಯನನ್ನು ಕರೆದು ವಿಶ್ವಕ್ಕೆ ಪ್ರದಕ್ಷಿಣೆ ಬರುವಂತೆ ತಿಳಿಸುತ್ತಾನೆ. ಆಗ ಕಾರ್ತಿಕೇಯನು ತನ್ನ ವಾಹನ ನವಿಲನ್ನು ಏರಿಕೊಂಡು ವಿಶ್ವ ಪರ್ಯಟನೆಗೆ ಮುಂದಾಗುತ್ತಾನೆ. ಆದರೆ ಗಣಪತಿಯು ಅಲ್ಲೇ ಶಿವನಿಗೆ ಸುತ್ತು ಬರುತ್ತಾನೆ. ಇದು ಮೋಸವಲ್ಲವೇ ಎಂದು ಶಿವ ಕೇಳಿದಾಗ, ನಿಮ್ಮೊಳಗೆ ವಿಶ್ವವೇ ಇದೆ. ಹಾಗಾಗಿ ನಾನು ಹೀಗೆ ಮಾಡಿದೆ ಎನ್ನುತ್ತಾನೆ. ಇದು ಪ್ರದಕ್ಷಿಣೆಯ ಬಗ್ಗೆ ಪುರಾಣ ಹೇಳುವಂತಹದ್ದು.

ಪುರಾಣಗಳಲ್ಲಿ ಇರುವಂತೆ ನಾವು ಇಂದಿಗೂ ದೇವರಿಗೆ ಪ್ರದಕ್ಷಿಣೆ ಹಾಕುವುದು. ಕೆಲವರು ಕೈ ಮುಗಿದು ಕಣ್ಣು ಮುಚ್ಚಿಕೊಂಡು ಪ್ರದಕ್ಷಿಣೆ ಹಾಕಿದರೆ, ಮತ್ತೆ ಕೆಲವರು ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕುತ್ತಾರೆ. ಇದರಿಂದ ದೇವರು ನಮ್ಮ ಸನಿಹವೇ ಇದ್ದಾನೆ ಎನ್ನುವಂತಹ ಭಾವನೆ ಮೂಡುತ್ತದೆ. ಮಧ್ಯದಲ್ಲಿರುವ ದೇವರು ನಮ್ಮೆಲ್ಲರ ಜೀವನಕ್ಕೆ ಮಧ್ಯದಿಂದಲೇ ಗೆರೆ ಹಾಕಬೇಕೆಂದು ಇದರರ್ಥವಾಗಿದೆ. ದೇವರಿಗೆ ಬರುವಂತಹ ಪ್ರದಕ್ಷಿಣೆಯು ತುಂಬಾ ಪವಿತ್ರವಾಗಿರುವುದೆಂದು ಭಾವಿಸಲಾಗಿದೆ. ದೇವಸ್ಥಾನಗಳ ಹಿ೦ದಿರುವ ವಿಸ್ಮಯಕರವಾದ ವೈಜ್ಞಾನಿಕ ವಿಚಾರಗಳೇನು? ಪ್ರದಕ್ಷಿಣೆಯ ಸಂಪೂರ್ಣ ಫಲವನ್ನು ಪಡೆಯಬೇಕಾದರೆ ಪ್ರದಕ್ಷಿಣೆ ಹಾಕುವಾಗ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು.
ತಮ್ಮ ಕೈಗಳನ್ನು ಎದೆಯ ಮೇಲೆ ಜೋಡಿಸಿಕೊಳ್ಳಬೇಕು. ಸಣ್ಣ ಸಣ್ಣ ಹೆಜ್ಜೆ ಹಾಕುತ್ತಾ ನಿಧಾನವಾಗಿ ಮುನ್ನಡೆಯಬೇಕು. ದೇವಸ್ಥಾನದಲ್ಲಿನ ದೇವರ ಮಂತ್ರವನ್ನು ಬಾಯಿಯಲ್ಲಿ ಪಠಿಸುತ್ತಾ, ಹೃದಯಲ್ಲಿ ದೇವರ ಚಿತ್ರವನ್ನು ಜ್ಞಾಪಿಸಿಕೊಳ್ಳಬೇಕು. ಇದರಿಂದ ಸಂಪೂರ್ಣ ಶಾಂತಿ ಮತ್ತು ಶರಣಾದ ಭಾವನೆ ಮೂಡುವುದು.ದೇವರ ಗರ್ಭಗುಡಿಗೆ ಸಂಪೂರ್ಣವಾಗಿ ಸುತ್ತು ಬರುವುದು ಪ್ರದಕ್ಷಿಣೆ. ಆದರೆ ಕೆಲವೊಂದು ಶಿವ ಮಂದಿರಗಳಲ್ಲಿ ಸ್ವಲ್ಪ ಮಟ್ಟದ ಬದಲಾವಣೆಯಿದೆ. ಶಿವ ಮಂದಿರಗಳಲ್ಲಿ ಶಿವನಿಗೆ ಅಭಿಷೇಕ ಮಾಡುವ ನೀರು ಹೊರಬರುವ ಗೋಮುಖಿ ತನಕ ಮಾತ್ರ ಸುತ್ತ ಬರಬಹುದು. ಇದನ್ನು ದಾಟಬಾರದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದನ್ನು ದಾಟಿದರೆ ದೇವರಿಗೆ ಅಗೌರವ ತೋರಿಸಿದಂತೆ. ಗೋಮುಖಿಯಿಂದ ತಿರುಗಿ ಮಂದಿರದ ಇನ್ನೊಂದು ಭಾಗದವರೆಗೆ ಸಾಗಿ ಗೋಮುಖಿಯ ಮತ್ತೊಂದು ಪಾರ್ಶ್ವದ ತನಕ ಸುತ್ತು ಬರಬೇಕು. ಯಾವುದೇ ಸಂದರ್ಭದಲ್ಲಿ ಗೋಮುಖಿಯನ್ನು ದಾಟುವಂತಿಲ್ಲ.

ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆಯಾಗುತ್ತದೆ. ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ. ಸಂಜೆ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರವಾಗುತ್ತದೆ. ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ದಿಯಾಗುತ್ತದೆ.
ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಮಾಡಿದರೆ ಏನು ಫಲ :
ಗಣಪತಿ-1, ಶಿವ-2, ವಿಷ್ಣು-3, ಅಯ್ಯಪ್ಪ-4, ಕಾರ್ತಿಕೇಯ-5, ದುರ್ಗಾ-6, ಅಶ್ವತ್ಥ ಮರ-7 ವ್ಯಕ್ತಿಯು ಭೂತ ಹಾಗೂ ವರ್ತಮಾನದಲ್ಲಿ ಮಾಡಿರುವಂತಹ ಪಾಪಗಳನ್ನು ಪ್ರದಕ್ಷಿಣೆಯು ತೊಡೆದುಹಾಕುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಕೇವಲ ದೇವಸ್ಥಾನಗಳಲ್ಲಿ ಮಾತ್ರ ಪ್ರದಕ್ಷಿಣೆ ಹಾಕಬೇಕೆಂದಿಲ್ಲ. ಇನ್ನೂ ಹಲವಾರು ರೀತಿಯ ಪ್ರದಕ್ಷಿಣೆಗಳಿವೆ.
ಶ್ರೀ ಶಕ್ತಿ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಶಾಸ್ತ್ರಂ
ಜ್ಯೋತಿಷ್ಯ ವಿದ್ವಾನ್ :: ಆದಿತ್ಯನಾಥ್ ಭಟ್
ಪರಿಹಾರದಲ್ಲಿ ಓಪನ್ ಚಾಲೆಂಜ್
ಇಷ್ಟಪಟ್ಟರು ನಿಮ್ಮಂತ ಯಾವಾಗಲೂ
ಪ್ರೀತಿಯಲ್ಲಿ ನಂಬಿ ಮೋಸ
ಅತ್ತೆ–ಸೊಸೆ ಕಲಹ ಲೈಂಗಿಕ ಸಮಸ್ಯೆ
ಮದುವೆಯಲ್ಲಿ ಅಡಚಣೆ
ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ
ಸಂಪರ್ಕಿಸಿ 9036367905
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜನವರಿ 8 ಮತ್ತು 9 ಭಾರತ ಬಂದ್ ನಡೆಯಲಿದೆ. ಕೇಂದ್ರ ಸರ್ಕಾರದ ವಿರದ್ಧ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಕೇಂದ್ರ ಸರ್ಕಾರವು ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಕಾರ್ಮಿಕ ಸಂಘಟೆಗಳು ಅಪಾದಿಸಿವೆ. ಇದಕ್ಕೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಸಹ ಬೆಂಬಲ ನೀಡಿದೆ ಎಂದು ತಿಳಿದುಬಂದಿದೆ.ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಮತ್ತು ಬ್ಯಾಂಕ್ ಎಂಫ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಅಸೋಸಿಯೇಷನ್ (ಬಿಇಎಫ್ಐಎ) ಸಂಘಟನೆಗಳು ಬ್ಯಾಂಕ್ ಆಫ್ ಇಂಡಿಯಾ…
ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ. ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ. ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ…
ಸಾಮಾಜಿಕ ಜಾಲತಾಣಗಳಲ್ಲಿ ಹೊಸತೊಂದು ಚಾಲೆಂಜ್ ಬಂದಿದೆ; ಅದೇ ಬಾಟಲ್ ಕ್ಯಾಪ್ ಚ್ಯಾಲೆಂಜ್. ಇದರಲ್ಲಿ ಚಾಲೆಂಜ್ ತಗೊಂಡವರು ರೌಂಡ್ ಹೌಸ್ ಕಿಕ್ ಹೊಡೆದು ಬಾಟಲ್‌ಗೆ ಹಾಕಿದ ಮುಚ್ಚಳವನ್ನು ತೆಗೆಯಬೇಕು. ಜೇಸನ್ ಸ್ಟ್ಯಾಥಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್‌ರಂತಹ ನಟರು ಹಾಗೂ ಹಲವು ಫೈಟರ್‌ಗಳು ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲೊಬ್ಬ ಗಾಯಕಿ ಕೇವಲ ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ಎಗರಿಸಿರುವಂತೆ ಕಾಣುತ್ತದೆ. ಮರಿಯಾ ಕ್ಯಾರಿ ಎನ್ನುವ ಅಮೆರಿಕಾದ ಗಾಯಕಿ ಟ್ವೀಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೈ ಪಿಚ್‌ನಲ್ಲಿ ರಾಗ ಎಳೆಯುತ್ತಿದ್ದಂತೆ…
ಈಗಿನ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್,ಟ್ವಿಟ್ಟರ್, ಹಾಗೂ ಯೂ ಟೂಬ್’ಗಳಲ್ಲಿ ರಾತ್ರೋ ರಾತ್ರಿ ಫೇಮಸ್ ಆದವರಿದ್ದಾರೆ. ಅವರು ಹೇಗಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅವರಲ್ಲಿ ಏನು ಟ್ಯಾಲೆಂಟ್ ಇದೆ ಅನ್ನುವುದು ಮುಖ್ಯ. ಅಂತಹ ಟ್ಯಾಲೆಂಟ್ ಇದ್ದವರು ಸೋಶಿಯಲ್ ಮಿಡಿಯಾಗಳಿಂದ ಸೂಪರ್ ಸ್ಟಾರ್ ಆಗಬಹುದು.
ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ. ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು…
ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.