ಆಧ್ಯಾತ್ಮ

ದೇವಸ್ಥಾನದಲ್ಲಿ ಪ್ರದಕ್ಷಿಣೆ ಯಾಕೆ ಮಾಡಬೇಕು ಗೊತ್ತಾ! ಈ ಕಾರಣಕ್ಕಾಗಿ ಮಾಡಬೇಕು!

144

ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆ ಅರ್ಥ. ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಪ್ರದಕ್ಷಿಣೆ ಹಾಕಬೇಕು? ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಮಾಡಿದರೆ ಏನು ಫಲ ಎಂಬುದನ್ನು ತಿಳಿಯೋಣ. ಹಿಂದೂ ಪುರಾಣಗಳ ಪ್ರಕಾರ ದೇವರಿಗೆ ಹಾಕುವ ಪ್ರದಕ್ಷಿಣೆ ಬಗ್ಗೆ ಹಲವಾರು ಕಥೆಗಳಿವೆ. ಇವುಗಳಲ್ಲಿ ಶಿವ, ಗಣಪತಿ ಮತ್ತು ಕಾರ್ತೀಕೇಯನ ಕಥೆಯು ನಮ್ಮೆಲ್ಲರಿಗೆ ತಿಳಿದಿರುವಂತಾಗಿದೆ. ಶಿವ ಒಮ್ಮೆ ತನ್ನ ಇಬ್ಬರು ಪುತ್ರರಾದ ಗಣಪತಿ ಮತ್ತು ಕಾರ್ತಿಕೇಯನನ್ನು ಕರೆದು ವಿಶ್ವಕ್ಕೆ ಪ್ರದಕ್ಷಿಣೆ ಬರುವಂತೆ ತಿಳಿಸುತ್ತಾನೆ. ಆಗ ಕಾರ್ತಿಕೇಯನು ತನ್ನ ವಾಹನ ನವಿಲನ್ನು ಏರಿಕೊಂಡು ವಿಶ್ವ ಪರ್ಯಟನೆಗೆ ಮುಂದಾಗುತ್ತಾನೆ. ಆದರೆ ಗಣಪತಿಯು ಅಲ್ಲೇ ಶಿವನಿಗೆ ಸುತ್ತು ಬರುತ್ತಾನೆ. ಇದು ಮೋಸವಲ್ಲವೇ ಎಂದು ಶಿವ ಕೇಳಿದಾಗ, ನಿಮ್ಮೊಳಗೆ ವಿಶ್ವವೇ ಇದೆ. ಹಾಗಾಗಿ ನಾನು ಹೀಗೆ ಮಾಡಿದೆ ಎನ್ನುತ್ತಾನೆ. ಇದು ಪ್ರದಕ್ಷಿಣೆಯ ಬಗ್ಗೆ ಪುರಾಣ ಹೇಳುವಂತಹದ್ದು.

ಪುರಾಣಗಳಲ್ಲಿ ಇರುವಂತೆ ನಾವು ಇಂದಿಗೂ ದೇವರಿಗೆ ಪ್ರದಕ್ಷಿಣೆ ಹಾಕುವುದು. ಕೆಲವರು ಕೈ ಮುಗಿದು ಕಣ್ಣು ಮುಚ್ಚಿಕೊಂಡು ಪ್ರದಕ್ಷಿಣೆ ಹಾಕಿದರೆ, ಮತ್ತೆ ಕೆಲವರು ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕುತ್ತಾರೆ. ಇದರಿಂದ ದೇವರು ನಮ್ಮ ಸನಿಹವೇ ಇದ್ದಾನೆ ಎನ್ನುವಂತಹ ಭಾವನೆ ಮೂಡುತ್ತದೆ. ಮಧ್ಯದಲ್ಲಿರುವ ದೇವರು ನಮ್ಮೆಲ್ಲರ ಜೀವನಕ್ಕೆ ಮಧ್ಯದಿಂದಲೇ ಗೆರೆ ಹಾಕಬೇಕೆಂದು ಇದರರ್ಥವಾಗಿದೆ. ದೇವರಿಗೆ ಬರುವಂತಹ ಪ್ರದಕ್ಷಿಣೆಯು ತುಂಬಾ ಪವಿತ್ರವಾಗಿರುವುದೆಂದು ಭಾವಿಸಲಾಗಿದೆ.   ದೇವಸ್ಥಾನಗಳ ಹಿ೦ದಿರುವ ವಿಸ್ಮಯಕರವಾದ ವೈಜ್ಞಾನಿಕ ವಿಚಾರಗಳೇನು? ಪ್ರದಕ್ಷಿಣೆಯ ಸಂಪೂರ್ಣ ಫಲವನ್ನು ಪಡೆಯಬೇಕಾದರೆ ಪ್ರದಕ್ಷಿಣೆ ಹಾಕುವಾಗ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು.

ತಮ್ಮ ಕೈಗಳನ್ನು ಎದೆಯ ಮೇಲೆ ಜೋಡಿಸಿಕೊಳ್ಳಬೇಕು. ಸಣ್ಣ ಸಣ್ಣ ಹೆಜ್ಜೆ ಹಾಕುತ್ತಾ ನಿಧಾನವಾಗಿ ಮುನ್ನಡೆಯಬೇಕು. ದೇವಸ್ಥಾನದಲ್ಲಿನ ದೇವರ ಮಂತ್ರವನ್ನು ಬಾಯಿಯಲ್ಲಿ ಪಠಿಸುತ್ತಾ, ಹೃದಯಲ್ಲಿ ದೇವರ ಚಿತ್ರವನ್ನು ಜ್ಞಾಪಿಸಿಕೊಳ್ಳಬೇಕು. ಇದರಿಂದ ಸಂಪೂರ್ಣ ಶಾಂತಿ ಮತ್ತು ಶರಣಾದ ಭಾವನೆ ಮೂಡುವುದು.ದೇವರ ಗರ್ಭಗುಡಿಗೆ ಸಂಪೂರ್ಣವಾಗಿ ಸುತ್ತು ಬರುವುದು ಪ್ರದಕ್ಷಿಣೆ. ಆದರೆ ಕೆಲವೊಂದು ಶಿವ ಮಂದಿರಗಳಲ್ಲಿ ಸ್ವಲ್ಪ ಮಟ್ಟದ ಬದಲಾವಣೆಯಿದೆ. ಶಿವ ಮಂದಿರಗಳಲ್ಲಿ ಶಿವನಿಗೆ ಅಭಿಷೇಕ ಮಾಡುವ ನೀರು ಹೊರಬರುವ ಗೋಮುಖಿ ತನಕ ಮಾತ್ರ ಸುತ್ತ ಬರಬಹುದು. ಇದನ್ನು ದಾಟಬಾರದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದನ್ನು ದಾಟಿದರೆ ದೇವರಿಗೆ ಅಗೌರವ ತೋರಿಸಿದಂತೆ. ಗೋಮುಖಿಯಿಂದ ತಿರುಗಿ ಮಂದಿರದ ಇನ್ನೊಂದು ಭಾಗದವರೆಗೆ ಸಾಗಿ ಗೋಮುಖಿಯ ಮತ್ತೊಂದು ಪಾರ್ಶ್ವದ ತನಕ ಸುತ್ತು ಬರಬೇಕು. ಯಾವುದೇ ಸಂದರ್ಭದಲ್ಲಿ ಗೋಮುಖಿಯನ್ನು ದಾಟುವಂತಿಲ್ಲ.

ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆಯಾಗುತ್ತದೆ. ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ. ಸಂಜೆ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರವಾಗುತ್ತದೆ. ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ದಿಯಾಗುತ್ತದೆ.

ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಮಾಡಿದರೆ ಏನು ಫಲ :
ಗಣಪತಿ-1, ಶಿವ-2, ವಿಷ್ಣು-3, ಅಯ್ಯಪ್ಪ-4, ಕಾರ್ತಿಕೇಯ-5, ದುರ್ಗಾ-6, ಅಶ್ವತ್ಥ ಮರ-7 ವ್ಯಕ್ತಿಯು ಭೂತ ಹಾಗೂ ವರ್ತಮಾನದಲ್ಲಿ ಮಾಡಿರುವಂತಹ ಪಾಪಗಳನ್ನು ಪ್ರದಕ್ಷಿಣೆಯು ತೊಡೆದುಹಾಕುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಕೇವಲ ದೇವಸ್ಥಾನಗಳಲ್ಲಿ ಮಾತ್ರ ಪ್ರದಕ್ಷಿಣೆ ಹಾಕಬೇಕೆಂದಿಲ್ಲ. ಇನ್ನೂ ಹಲವಾರು ರೀತಿಯ ಪ್ರದಕ್ಷಿಣೆಗಳಿವೆ.

ಶ್ರೀ ಶಕ್ತಿ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಶಾಸ್ತ್ರಂ 

ಜ್ಯೋತಿಷ್ಯ ವಿದ್ವಾನ್ :: ಆದಿತ್ಯನಾಥ್ ಭಟ್ 

ಪರಿಹಾರದಲ್ಲಿ ಓಪನ್ ಚಾಲೆಂಜ್ 

ಇಷ್ಟಪಟ್ಟರು ನಿಮ್ಮಂತ ಯಾವಾಗಲೂ

ಪ್ರೀತಿಯಲ್ಲಿ ನಂಬಿ ಮೋಸ 

ಅತ್ತೆಸೊಸೆ ಕಲಹ ಲೈಂಗಿಕ ಸಮಸ್ಯೆ

ಮದುವೆಯಲ್ಲಿ ಅಡಚಣೆ

ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ

ಸಂಪರ್ಕಿಸಿ 9036367905

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ನೆರೆಹೊರೆಯ ಜಗಳದಲ್ಲಿ ಜೈಲು ಪಾರಾದ ನಾಯಿ..!ತಿಳಿಯಲು ಈ ಲೇಖನ ಓದಿ…

    ಈ ಸುದ್ದಿಯ ಶೀರ್ಷಿಕೆ ಓದುವಾಗಲೇ ಓದುಗರಿಗೆ ಗೊಂದಲವಾಗಿರಬಹುದು. ಹೌದು ಇಂತಹದ್ದೊಂದು ಘಟನೆಯು ಉತ್ತರಪ್ರದೇಶ ರಾಜ್ಯದ ಬದೌನ್ ಎಂಬ ನಗರದಲ್ಲಿ ನಡೆದಿದೆ. ಆದರೆ ನೆರೆಮನೆಯ ವ್ಯಕ್ತಿಗಳು ಜಗಳವಾಡಿದರೆ ನಾಯಿ ಹೇಗೆ ಜೈಲು ಸೇರುತ್ತದೆ ಎಂಬುವುದರ ಕುರಿತು ಕುತೂಹಲವಿರಬಹುದು.

  • ಸುದ್ದಿ

    ಕರೋನ ಸಮಸ್ಯೆ ಹೀಗೆ ಇದ್ದರೆ ಚಿನ್ನದ ಬೆಲೆ ಎಷ್ಟಾಗಲಿದೆ. ಮಾರ್ಕೆಟ್ ತಜ್ಞರು ಹೇಳಿದ್ದೇನು ನೋಡಿ.!

    ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ, ಭಾರತದಲ್ಲಿ ಕೊರೋನಾ ಈಗ ಸ್ಟೇಜ್ 2 ಹಂತದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸ್ಟೇಜ್ 4 ಗೆ ಕೊರೋನಾ ಆಕ್ರಮಿಸಿದರೆ ಖಂಡಿತ ದುರಂತ ಸಂಭವಿಸಲಿದೆ ಎಂದು ಹಲವಾರು ಮಂದಿ ಅಭಿಪ್ರಾಯ ಪಟ್ಟಿದ್ದಾರೆ, ಚೀನಾ ಈಗಾಗಲೇ ಈ ಸಂಕಷ್ಟದಿಂದ ಪಾರಾಗಿದೆ ಮತ್ತು ಭಾರತ ಈಗಾಗಲೇ ಹಲವಾರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ಇಷ್ಟೇ ಅಲ್ಲದೆ ಕೊರೋನಾ ಅಬ್ಬರಕ್ಕೆ ಈಗಾಗಲೇ ಆರ್ಥಿಕ ವಹಿವಾಟು ಕುಸಿದು ಬಿದ್ದಿದೆ, ಕೇವಲ ಏಳು ದಿನಗಳಲ್ಲಿ ಅಂತರದಲ್ಲಿ…

  • ಸಿನಿಮಾ

    ಸ್ಯಾಂಡಲ್ ವುಡ್ ನಟ ಮತ್ತು ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ…

    ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

  • ಆಧ್ಯಾತ್ಮ, ದೇಗುಲ ದರ್ಶನ, ದೇವರು, ದೇವರು-ಧರ್ಮ

    ಮಂತ್ರಾಲಯ ಪುಣ್ಯಕ್ಷೇತ್ರ. ಓಂ ಶ್ರೀ ರಾಘವೇಂದ್ರ ನಮಃ

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what ಸಮಸ್ಯೆ ಏನೇ…

  • ಜ್ಯೋತಿಷ್ಯ

    ಈ ರಾಶಿಯ ಹುಡುಗಿಯರು ತನ್ನ ಗಂಡನಿಗೆ ಎಂದೂ ಮೋಸ ಮಾಡಲ್ಲ!ಯಾವ ರಾಶಿ ನೋಡಿ…

    ಜ್ಯೋತಿಷ್ಯಶಾಸ್ತ್ರ ಹಾಗೂ ರಾಶಿಫಲ ಪ್ರತಿಯೊಬ್ಬರ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ. ರಾಶಿ ನೋಡಿಯೇ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಬಹುದು. ಮದುವೆ ಮಾಡುವಾಗ ಕೂಡ ಜಾತಕ ನೋಡಿ ಮದುವೆ ಮಾಡಲಾಗುತ್ತದೆ. ಜಾತಕದಲ್ಲಿ ಹೊಂದಾಣಿಕೆಯಾದ್ರೆ ಮಾತ್ರ ಮದುವೆಗೆ ಒಪ್ಪಿಗೆ ನೀಡಲಾಗುತ್ತದೆ. ಯಾವ ರಾಶಿಯ ಹುಡುಗಿ ಬೆಸ್ಟ್ ಎಂದು ತಜ್ಞರು ಹೇಳುತ್ತಾರೆ. ಇಂದು ಮೀನ ರಾಶಿಯ ಹುಡುಗಿಯರ ಸ್ವಭಾವದ ಬಗ್ಗೆ ವಿವರ ಇಲ್ಲಿದೆ. ಮೀನ ರಾಶಿಯ ಹುಡುಗಿಯರು ಆಕರ್ಷಕ ನೋಟ ಹೊಂದಿರುವವರಾಗಿರುತ್ತಾರೆ. ತಮ್ಮದೇ ಆದರ್ಶವನ್ನು ಹುಡುಗಿಯರು ಹೊಂದಿರುತ್ತಾರೆ. ನಿಯಂತ್ರಣದಲ್ಲಿರುವ ಹುಡುಗಿಯರು ಸ್ನೇಹವನ್ನು…

  • ಸುದ್ದಿ

    ಸಾಧನೆಗೆ ವೈಖಲ್ಯಗಳು ಅಡ್ಡಿಯಲ್ಲ. ಸಾಧಿಸುವ ಛಲವೊಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ಸಾಕ್ಷಿ ನೀರಜ್ ಜಾರ್ಜ್‌ ಬೇಬಿ….

    ನೀರಜ್ ಜಾರ್ಜ್‌ ಬೇಬಿ. ಊರುಗೋಲಿನ ಸಹಾಯದಿಂದ ಅತ್ತಿಂದಿತ್ತ ಓಡಾಡುವ ಯುವಕ. ಸದ್ಯ ಇದೇ ಯುವಕ ವಿಶ್ವದ ಗಮನ ಸೆಳೆದಿದ್ದಾರೆ. ಅದು ತಮ್ಮ ಸಾಧನೆಯ ಮೂಲಕ ಕೇರಳದ ಅಲುವಾ ಮೂಲದ 32 ವರ್ಷದ ನೀರಜ್ ಜಾರ್ಜ್ ಸಂಪೂರ್ಣ ಹಿಮದಿಂದ ಆವೃತವಾದ ಆಫ್ರಿಕಾದ ಅತೀ ಎತ್ತರದ ಕಿಲಿಮಂಜಾರೋ ಪರ್ವತವನ್ನೇರಿದ್ದಾರೆ. ಈ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ಈ ಕನಸಿನ ಈಡೇರಿಕೆಗೆ ಅತ್ಯಂತ ನೋವಿನಿಂದ ನಾನು ಐದು ವರ್ಷದಿಂದ ಕಾಯುತ್ತಿದ್ದೇನೆ’ ಎಂದು ನೀರಜ್…