ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವೊಮ್ಮೆ ಒಳ್ಳೆಯ ವಿಚಾರಗಳಿಂದ ಕೆಟ್ಟ ವಿಚಾರಗಳಿಗೆ ಹೆಚ್ಚಿನ ಮಾನ್ಯತೆ ಹಾಗೂ ಪಬ್ಲಿಸಿಟಿ ಸಿಗುತ್ತದೆ. ಇದೀಗ ಪ್ರಪಂಚದ ಏಳನೇ ಅದ್ಭುತ ಎನ್ನಿಸಿರುವ ದೆಹಲಿಯ ತಾಜ್ಮಹಲ್ ವಿಚಾರದಲ್ಲೂ ಹೀಗೆ ಆಗಿದೆ. ಹೌದು ತಾಜಮಹಲ್ಗಿಂತ ಮುಂಬೈನ ಧಾರವಿ ಸ್ಲಂಗೆ ಹೆಚ್ಚಿನ ಮಹತ್ವ ಸಿಗತೊಡಗಿದ್ದು, ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ

ಹಿಂದೆ ಮುಂಬೈನಲ್ಲಿರುವ ಧಾರವಿ ಸ್ಲಂಗೆ ಜನ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೀಗಾ ಇದೇ ಧಾರವಿ ಸ್ಲಂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೌದು ತಾಜ್ ಮಹಲ್ ನನ್ನೇ ಸೆಡ್ಡು ಹೊಡೆದು ಕೊಳಚೇರಿ ಧಾರವಿ ಭಾರತದ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿದೆ. ಎಂದು ವಿಶ್ವದ ಅತೀದೊಡ್ಡ ಟ್ರಾವೆಲ್ ಸೈಟ್ ಎಂದು ಕರೆಸಿಕೊಳ್ಳುವ ಟ್ರಿಪ್ ಅಡ್ವೈಸರ್ ಈ ವಿಚಾರವನ್ನು ಬಹಿರಂಗಪಡಿಸಿದೆ.

ಜೊತೆಗೆ ಭಾರತದ ಟ್ರಾವೆಲರ್ಸ್ ಚಾಯ್ಸ್ ಎಕ್ಸ್ಪೀರಿಯನ್ಸ್ 2019 ಸಾಲಿನಲ್ಲಿ ಇಂಡಿಯಾದ ಧಾರವಿ ಅಗ್ರಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ದೆಹಲಿಯ ಬೈಕ್ ಟೂರ್ ಆಫ್ ಓಲ್ಡ್ ಡೆಲ್ಲಿ ಇದೆ. ಹಾಗೂ ಮೂರನೇ ಸ್ಥಾನವನ್ನು ತಾಜ್ ಮಹಲ್ ಪಡೆದುಕೊಂಡಿದೆ. ಈ ಮೂಲಕ ಧಾರವಿ ಸ್ಥಳ ಭಾರತಕ್ಕೆ ಪ್ರವಾಸಕ್ಕೆಂದು ಬರುವ ಪ್ರವಾಸಿಗರ ಮೋಸ್ಟ್ ಫೇವರೀಟ್ ಸ್ಥಳವಾಗಿದೆ.

ಅಲ್ಲದೆ 2019ರ ಏಷ್ಯಾದ ಟಾಪ್ ಟೆನ್ ಟ್ರಾವೆಲರ್ ಚಾಯ್ಸ್ ಆಫ್ ಎಕ್ಸ್ಪೀರಿಯನ್ಸ್ನಲ್ಲಿಯೂ ಧಾರವಿ 10ನೇ ಸ್ಥಾನ ಪಡೆದಿದ್ದು, ತಾಜ್ ಮಹಲ್ ಗೆ ಸ್ಥಾನವೇ ದೊರೆಯದಂತಾಗಿದೆ.ಧಾರವಿ ಕೊಳಗೇರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕಾರಣವೆನೆಂದರೆ ಅಲ್ಲಿ ವಾಸಿಸುವ ನಿವಾಸಿಗಳ ಜೀವನದ ಬಗ್ಗೆ ತಿಳಿದುಕೊಳ್ಳಲು ಹಾಗೂ ಕುಂಬಾರಿಕೆ, ಕುಶಲಕರ್ಮಿಗಳು ಪ್ರದರ್ಶಿಸುವ ವ್ಯಾಪಾರ ಕೇಂದ್ರ ಹಾಗೂ ಚರ್ಮದ ಅಂಗಡಿಗಳನ್ನು ನೋಡಲು ವಿದೇಶಿ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ದಿನ ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಈಗ ಗಗನಕ್ಕೇರಿದೆ.ಆದರೆ,1595 ರಲ್ಲಿ ಅವುಗಳ ಬೆಲೆ ಎಷ್ಟಿತ್ತೆಂದು ಹೇಳಿದರೆ ನಿಮಗೆ ಅಚ್ಚರಿಯಾಗುತ್ತದೆ.ಈಗ 50 ರೂಪಾಯಿ ಕೊಟ್ಟರೂ ಸಿಗದ ಅಕ್ಕಿಯ ಬೆಲೆ 1595 ನೇ ಇಸವಿಯಲ್ಲಿ ಒಂದು ಪೈಸೆ ಮಾತ್ರ.
ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ಚುನಾವಣೆ ಹತ್ತಿರ ಬರ್ತಿದ್ದಂತೆ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳ ಜೊತೆ ಮತದಾರರು ತಯಾರಿ ಶುರು ಮಾಡಿದ್ದಾರೆ. ಪ್ರತಿಯೊಬ್ಬ ನಾಗರೀಕನೂ ತನ್ನ ಹಕ್ಕು ಚಲಾಯಿಸಬೇಕಾಗುತ್ತದೆ. ಆದ್ರೆ ಅನೇಕರು ವೋಟರ್ ಐಡಿ ಇಲ್ಲ ಎನ್ನುವ ಕಾರಣಕ್ಕೆ ಮತದಾನ ಮಾಡಲು ಹೋಗುವುದಿಲ್ಲ. ಸಾಮಾನ್ಯವಾಗಿ ವೋಟರ್ ಐಡಿ ಹಾಗೂ ಸ್ಲಿಪ್ ಮತದಾನಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ನಿಮ್ಮ ಬಳಿ ವೋಟರ್ ಐಡಿ ಇಲ್ಲವೆಂದ್ರೆ ಚಿಂತೆ ಬೇಡ. ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಸಾಕು. ವೋಟರ್ ಲಿಸ್ಟ್ ನಲ್ಲಿ…
ಶಂಕರ್ ನಾಗ್ ನಟಿಸಿದ್ದ ಬಹುತೇಕ ಸಿನಿಮಾಗಳು ಕಮರ್ಷಿಯಲ್ ಮಾದರಿಯಲ್ಲೇ ಇದ್ದವು. ಆದರೆ, ಅವರು ನಿರ್ದೇಶನಕ್ಕೆ ಆಯ್ದುಕೊಳ್ಳುತ್ತಿದ್ದ ಕಥಾ ವಸ್ತುಗಳು ಮಾತ್ರ ಭಿನ್ನವಾಗಿರುತ್ತಿದ್ದವು. ಜತೆಗೆ ಆ ಸಿನಿಮಾಗಳಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದ್ದವು. ಶಂಕರ್ ನಾಗ್ ಬದುಕಿದ್ದರೆ, ಇಂದು ಅವರಿಗೆ 65 ವರ್ಷ ತುಂಬುತ್ತಿತ್ತು. 1954ರ ನವೆಂಬರ್ 9 ರಂದು ಹೊನ್ನಾವರದಲ್ಲಿ ಜನಿಸಿದ ಶಂಕರ್, ತಮ್ಮ 36ನೇ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣ ಹೊಂದಿದರು. ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಎರಡೇ ವರ್ಷಗಳಲ್ಲಿ ‘ಮಿಂಚಿನ ಓಟ’ ಸಿನಿಮಾ ಮೂಲಕ ನಿರ್ದೇಶಕರಾದರು. ಮೊದಲ…
ಈ ತರಕಾರಿ ವ್ಯಾಪಾರಿಯ ಸಮಯೋಚಿತ ನಿರ್ಧಾರದಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿದೆ. ಕಂಜೂರ್ ಮಾರ್ಗ್ ಮತ್ತು ಭಂದೂಪ್ ರೈಲು ನಿಲ್ದಾಣಗಳ ನಡುವೆ ಸುಮಾರು ಒಂದೂವರೆ ಅಡಿಗಳಷ್ಟು ರೈಲು ಹಳಿ ಕಾಣಿಸದಿರುವುದನ್ನು ಈ ವ್ಯಾಪಾರಿ ಗಮನಿಸಿದ್ದಾರೆ. ಅದೇ ವೇಳೆಗೆ ರೈಲೊಂದು ಬರುತ್ತಿರುವುದನ್ನೂ ನೋಡಿದ್ದಾರೆ. ರೈಲು ಇಲ್ಲಿಗೆ ಬಂದರೆ ಭಾರೀ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂಬುದನ್ನು ಅರಿತ ಆತ ತಡ ಮಾಡದೇ ತನ್ನ ಕೈಲಿದ್ದ ಛತ್ರಿಯನ್ನು ಓಪನ್ ಮಾಡಿ ರೈಲು ಹಳಿಗಳ ಮಧ್ಯೆ ನಿಂತು ರೈಲು ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನು…
ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.
ಮಧ್ಯ ಪ್ರದೇಶದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವುದು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಕ್ಕಳು ಚರಂಡಿ ನೀರಿನಲ್ಲಿ ತಮ್ಮ ತಟ್ಟೆಗಳನ್ನು ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ತಲೆ ತಗ್ಗಿಸುವಂತಹ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಮಾಕ್ರೋನಿಯಾ ಪ್ರದೇಶದಲ್ಲಿ ನಡೆದಿದೆ. ಮಕ್ಕಳಿಗೆ ಬಿಸಿಯೂಟವನ್ನು ಪೂರೈಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳೇ ಪಾತ್ರೆಗಳನ್ನು ತೊಳೆಯುವುದು ಸೇರಿದಂತೆ ಎಲ್ಲಾ ನೈರ್ಮಲ್ಯ ಕ್ರಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು….